Sushant Singh Death Anniversary; ಸುಶಾಂತ್ ಇಲ್ಲದೇ 2 ವರ್ಷ, ಸಹೋದರಿಯ ಭಾವುಕ ಪತ್ರ
ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ಇಹಲೋಕ ತ್ಯಾಜಿಸಿ 2 ವರ್ಷಗಳೇ ಕಳೆಯಿತು. ಇಂದಿಗೆ ಸರಿಯಾಗಿ (ಜೂನ್ 14, 2020) ಸುಶಾಂತ್ ಸಿಂಗ್ ಇನ್ನಿಲ್ಲ ಎನ್ನುವ ಸುದ್ದಿ ಬಾಲಿವುಡ್‌ಗೆ ಬರಸಿಡಿಲಿನಂತೆ ಬಂದು ಬಡಿದಿತ್ತು. ಬಾಂದ್ರದ ತನ್ನ ಅಪಾರ್ಟ್ನೆಂಟ್‌ನಲ್ಲಿ ಸುಶಾಂತ್ ಸಿಂಗ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅಸಹಜ ಸಾವು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಮಾಡಿತ್ತು.
ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ಇಹಲೋಕ ತ್ಯಾಜಿಸಿ 2 ವರ್ಷಗಳೇ ಕಳೆಯಿತು. ಇಂದಿಗೆ ಸರಿಯಾಗಿ (ಜೂನ್ 14, 2020) ಸುಶಾಂತ್ ಸಿಂಗ್ ಇನ್ನಿಲ್ಲ ಎನ್ನುವ ಸುದ್ದಿ ಬಾಲಿವುಡ್‌ಗೆ ಬರಸಿಡಿಲಿನಂತೆ ಬಂದು ಬಡಿದಿತ್ತು. ಬಾಂದ್ರದ ತನ್ನ ಅಪಾರ್ಟ್ನೆಂಟ್‌ನಲ್ಲಿ ಸುಶಾಂತ್ ಸಿಂಗ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅಸಹಜ ಸಾವು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಮಾಡಿತ್ತು. ಸಾವಿನ ಬಳಿಕ ನಡೆದ ಅನೇಕ ಬೆಳವಣಿಗಳು ಬಾಲಿವುಡ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಸುಶಾಂತ್ ನಿಧನಹೊಂದಿ ಎರಡು ವರ್ಷ ಕಳೆದರು ಸಾವಿನ ತನಿಖೆ ಇನ್ನು ಸಂಪೂರ್ಣವಾಗಿಲ್ಲ. ಇನ್ನು ಸಿಬಿಐ ಅಂಗಳದಲ್ಲಿರುವ ಸುಶಾಂತ್ ಪ್ರಕರಣದ ಅಂತಿಮ ತೀರ್ಪು ಇನ್ನು ಹೊರಬಿದ್ದಿಲ್ಲ.
ಎರಡನೇ ವರ್ಷದ ಪುಣ್ಯತಿಥಿ(Death Anniversary) ಮಾಡುತ್ತಿರುವ ಈ ಸಮಯದಲ್ಲಿ ಸುಶಾಂತ್ ಸಿಂಗ್ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಪತ್ರ ಬರೆದಿದ್ದಾರೆ. ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಪ್ರೀತಿಯ ಸಹೋದರನ ಸುಂದರ ಫೋಟೋ ಶೇರ್ ಮಾಡಿ, 'ನೀನು ನಮ್ಮನ್ನು ಅಗಲಿ ಎರಡು ವರ್ಷಗಳು ಕಳೆದಿವೆ. ಆದರೆ ನೀನ ನಿಂತಿರುವ ಮೌಲ್ಯಗಳಿಂದ ನೀನು ಅಮರ. ಎಲ್ಲರಿಗೂ ದಯೆ, ಸಹಾನುಭೂತಿ ಮತ್ತು ಪ್ರೀತಿ ತೋರಿತ್ತಿದ್ದೆ. ನಿನ್ನ ಗೌರವಾರ್ಥವಾಗಿ ನಿನ್ನ ಅದ್ಭುತ ಸದ್ಗುಣಗಳನ್ನು ಮತ್ತು ಆದರ್ಶವನ್ನು ನಾವು ಮುಂದುವರೆಸುತ್ತೇವೆ. ಸಹೋದರ ನೀನು ಜಗತ್ತನ್ನು ಉತ್ತಮವಾಗಿ ಬದಲಾಯಿಸಿದ್ದೀಯಾ, ನಿನ್ನ ಅನುಪಸ್ಥಿತಿಯಲ್ಲೂ ಇದನ್ನು ಮುಂದುವರೆಸುತ್ತೇವೆ. ನಾವೆಲ್ಲರೂ ದೀಪ ಬೆಳಗಿಸೋಣ ಮತ್ತು ಇನ್ನೊಬ್ಬರ ಮುಖದಲ್ಲಿ ನಗು ತರಲು ನಿಸ್ವಾರ್ಥ ಕೆಲಸ ಮಾಡೋಣ' ಎಂದು ಹೇಳಿದ್ದಾರೆ.
ಸುಶಾಂತ್ ಬದುಕು ಸ್ಫೂರ್ತಿದಾಯಕ. ವಿದ್ಯಾರ್ಥಿಯಾಗಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಹತ್ತಾರು ಆಯಾಮಗಳಲ್ಲಿ ಚಿಂತಿಸಬಲ್ಲ ವ್ಯಕ್ತಿಯಾಗಿ, ಅದ್ಭುತ ನಟನಾಗಿ, ಸಾಮಾಜಿಕ ಕಾರ್ಯಗಳ ಮೂಲಕ ಸುಶಾಂತ್ ಜನರಿಗೆ ಹತ್ತಿರವಾಗಿದ್ದರು. ಪ್ರತಿಭಾವಂತ ನಟ ಸುಶಾಂತ್ ಸಿಂಗ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಪವಿತ್ರ ರಿಸ್ತಾ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಪ್ರಸಿದ್ಧ ಪಡೆದ ಸುಶಾಂತ್ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2013ರಲ್ಲಿ ರಿಲೀಸ್ ಆದ ಕೈ ಪೋ ಛೇ ಸಿನಿಮಾ ಮೂಲಕ ಸುಶಾಂತ್ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಏಳು ವರ್ಷಗಳ ವೃತ್ತಿ ಜೀವನದಲ್ಲಿ ಸುಶಾಂತ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಆದರೆ ಪ್ರತಿಭಾವಂತ ನಟನ ಪಯಣ ಅಲ್ಪಕಾಲಿಕವಾಗಿತ್ತು ಎನ್ನುವುದೆ ದುರಂತ.
Sushant Singh Rajput: ಅಪಘಾತದಲ್ಲಿ ನಟನ ಐವರು ಸಂಬಂಧಿ ಸಾವು
ಸುಶಾಂತ್ ಸಿಂಗ್ ನಿಧನ ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸುಶಾಂತ್ ಇನ್ನಿಲ್ಲ ಎಂದು ನೆನೆದು ಕಾಣ್ಣೀರಾಕಿದ್ದರು. ಇಂದು ಎರಡನೇ ಪುಣ್ಯತಿತಿ ದಿನ ಸುಶಾಂತ್ ಸಿಂಗ್ ಅವರ ಫೋಟೋ ಮತ್ತು ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಸ್ಮಿರಿಸುತ್ತಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಸುಶಾಂತ್ ನಿಧನದ ಬಳಿಕ ಮೊದಲು ಮುಂಬೈ ಪೊಲೀಸರು ಆತ್ಮಹತ್ಯೆ ಎಂದು ವರದಿ ನೀಡಿತ್ತು. ಬಳಿಕ ಸುಶಾಂತ್ ಸಾವಿನ ಪ್ರಕರಣ ದೇಶಮಟ್ಟದಲ್ಲಿ ಸಂಚಲನ ಮೂಡಿಸಿತು. ಸುಶಾಂತ್ ಸಾವು ಸಹಜವಲ್ಲ ಎಂದು ಕುಟುಂಬದವರು ಆರೋಪ ಮಾಡಿ ದೂರು ನೀಡಿದರು. ಬಳಿಕ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು. ಇದುವರೆಗೂ ಸಹ ಸುಶಾಂತ್ ಸಿಂಗ್ ಪ್ರಕರಣದ ಅಂತಿಮ ವರದಿ ಸಲ್ಲಿಕೆಯಾಗಿಲ್ಲ.
ಸುಶಾಂತ್ ಸಿಂಗ್ ಜೊತೆ ಅಂಕಿತಾರ ಮೊದಲ ಭೇಟಿ ಹೇಗಿತ್ತು ನೋಡಿ!
ಸುಶಾಂತ್ ಸಿಂಗ್ ಕಾಯ್ ಪೋ ಛೆ, ಡಿಟೆಕ್ಟಿವ್ ಬ್ಯೂಮ್ಕೇಶ್ ಬಕ್ಷಿ, ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ, ಛಿಛೋರೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಸ್ ದೇಶ್ ಮೇ ಹೇ ಮೇರಾ ದಿಲ್, ಪವಿತ್ರಾ ರಿಸ್ತಾ ಸೀರಿಯಲ್ ಗಳು, ಝರಾ ನಚ್ಕೆ ದಿಖಾ, ಝಲಕ್ ದಿಖ್ ಲಾಜಾ 4ರಲ್ಲಿ ನಲ್ಲಿ ಮಿಂಚಿದ್ದರು. ನಿಧನದ ಬಳಿಕ ಛಿಛೋರೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.