Asianet Suvarna News Asianet Suvarna News

ನೋಡೋಕೆ ಅಮ್ಮ - ಮಗನಂತೆ ಕಾಣೋ ಇವರ ಸಂಬಂಧ ಬೇರೆನೆ ಇದೆ..

ಈಗಿನ ದಿನಗಳಲ್ಲಿ ಮುಖ ನೋಡಿ ಸಂಬಂಧ ಹೇಳೋದು ಕಷ್ಟ. ಇಬ್ಬರು ಒಟ್ಟಿಗೆ ವಾಸವಾಗಿದ್ದಾರೆ ಎನ್ನುವ ಕಾರಣಕ್ಕೆ ಅವರು ದಂಪತಿ ಆಗ್ಬೇಕಾಗಿಲ್ಲ. ಇಬ್ಬರು ಒಟ್ಟಿಗೆ ವಿಡಿಯೋ ಮಾಡ್ತಿದ್ರೆ ಅವರನ್ನು ಸ್ನೇಹಿತರೆನ್ನಲು ಸಾಧ್ಯವಿಲ್ಲ. ಈಗ ನಾವು ಹೇಳ್ತಿರುವ ಜೋಡಿ ಕೂಡ ಕೆಲವರಿಗೆ ಕನ್ಫ್ಯೂಜ್ ಮಾಡ್ತಾರೆ.    

Kerala Couple Look Like Mother Son But Their Relationship Is Something Else Shocked To Know Spoke Age Difference Marriage roo
Author
First Published May 23, 2024, 5:37 PM IST

ಹುಡುಗ – ಹುಡುಗಿ ಒಟ್ಟಿಗೆ ಕಾಣಿಸಿಕೊಂಡಾಗ ಅವರನ್ನು ಪ್ರೇಮಿಗಳು ಎಂದು ಭಾವಿಸುವ ಕಾಲ ಇದು. ವಯಸ್ಸಿನಲ್ಲಿ ಸ್ವಲ್ಪ ಅಂತರ ಕಂಡು ಬಂದ್ರೂ ಅವರನ್ನು ಅಮ್ಮ- ಮಗ, ಅಪ್ಪ – ಮಗಳು ಅಂತಾ ಜನರು ಭಾವಿಸ್ತಾರೆ. ಕೆಲವೊಮ್ಮೆ ನೀವಿಬ್ಬರು ಅಪ್ಪ – ಮಗಳ ಇಲ್ಲ ಅಮ್ಮ – ಮಗನ ಅಂತಾ ಕೇಳೋದು ಇದೆ. ವಾಸ್ತವದಲ್ಲಿ ಅವರಿಬ್ಬರ ಸಂಬಂಧ ಅಪ್ಪ – ಮಗಳು, ಅಮ್ಮ – ಮಗನಿಗಿಂತ ಬೇರೆಯಾಗಿರುತ್ತದೆ. ಅವರಿಬ್ಬರು ದಂಪತಿ ಆಗಿರ್ತಾರೆ. ಈ ಸಮಯದಲ್ಲಿ ಕೇಳಿದವರು, ಕೇಳಿಸಿಕೊಂಡವರು ಇಬ್ಬರೂ ಮುಜುಗರಕ್ಕೊಳಗಾಗ್ತಾರೆ. ದಂಪತಿ ಒಟ್ಟಿಗೆ ಹೋಗುವಾಗ ಮೊದಲ ಬಾರಿ ಜನರು ಇಂಥ ಪ್ರಶ್ನೆ ಕೇಳಿದ್ರೆ ಬೇಸರವಾಗೋದು ಸಹಜ. ಜನರು ಪದೇ ಪದೇ ಇದೇ ಪ್ರಶ್ನೆ ಕೇಳ್ತಾ, ಗೇಲಿ ಮಾಡ್ತಿದ್ದರೆ ಅದು ಅಭ್ಯಾಸವಾಗುತ್ತದೆ. ಜನರ ಮಾತನ್ನು ನಿರ್ಲಕ್ಷ್ಯ ಮಾಡಿ, ಇವರು ಸಂತೋಷವಾಗಿ ಜೀವನ ನಡೆಸಲು ಮುಂದಾಗ್ತಾರೆ. ಅದಕ್ಕೆ ಈ ದಂಪತಿ ಉತ್ತಮ ನಿದರ್ಶನ.

ಕೇರಳ (Kerala) ದ ಈ ಜೋಡಿ ನೋಡಿದ್ರೂ ಜನ ಅಮ್ಮ- ಮಗನಾ ಎಂದು ಪ್ರಶ್ನೆ ಮಾಡ್ತಿದ್ದರು. ಆರಂಭದಲ್ಲಿ ಕಷ್ಟವಾದ್ರೂ ಈಗ ಇಬ್ಬರು ಅದಕ್ಕೆ ಹೊಂದಿಕೊಂಡಿದ್ದಾರೆ. ಖುಷಿಯಿಂದ ಜೀವನ ನಡೆಸ್ತಿದ್ದಾರೆ. ಸಾಮಾಜಿಕ ಜಾಲತಾಣ (Social Media) ದಲ್ಲಿ ಈ ಜೋಡಿ ವೈರಲ್ (viral) ಆಗಿದ್ದಾರೆ. ದಂಪತಿ ಹೆಸರು ಶೆಮಿ ಮತ್ತು ಶೆಫಿ. ಶೆಫಿ ಅವರ ಪತ್ನಿ ಶೆಮಿ ಅವರಿಗಿಂತ ಸುಮಾರು 10 ವರ್ಷ ಹಿರಿಯರು. ಹಾಗಾಗಿಯೇ ಅವರನ್ನು ನೋಡಿದ ಜನರು ಅಮ್ಮ – ಮಗ ಎನ್ನುತ್ತಾರೆ. 

ಒಲಿಯದ ಗಂಡನಿಗೆ ಅಂಡರ್‌ವೇರ್‌ ಸೊಲ್ಯುಷನ್; ವೈರಲ್‌ ಆಗೋಯ್ತು ಬ್ಯೂಟಿ ಕ್ವೀನ್‌ ನೀಡಿದ ಪರಿಹಾರ!

ಶೆಮಿಗೆ ಇದು ಎರಡನೇ ಮದುವೆ. ಮೊದಲ ಪತಿಯಿಂದ ಶೆಮಿ ಎರಡು ಮಕ್ಕಳನ್ನು ಪಡೆದಿದ್ದಾರೆ. ಶೆಮಿಗೆ ಇಬ್ಬರು ಹೆಣ್ಣು ಮಕ್ಕಳು. ವಿಚ್ಛೇದನದ ನಂತ್ರ ಶೆಮಿ ಒಂಟಿಯಾಗಿ ವಾಸಿಸಲು ಶುರು ಮಾಡಿದ್ದರು. ಈ ವೇಳೆ ಶೆಫಿ ಭೇಟಿಯಾಯ್ತು. ಇಬ್ಬರ ಮಧ್ಯೆ ಪ್ರೀತಿ ಚಿಗುರಿತು. ಈಗ ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಪ್ರಸಿದ್ಧಿ ಪಡೆದಿದ್ದಾರೆ. ಯುಟ್ಯೂಬ್ ನಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಇಬ್ಬರು ಸೇರಿ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಇರುವ ಕಾರಣ ಅವರನ್ನು ನೋಡಿದ ಜನರು ಅಮ್ಮ – ಮಗ ಅಂತ ತಪ್ಪು ತಿಳಿಯುತ್ತಾರೆ. ಕೆಲವರು ಈ ಜೋಡಿ ನೋಡಿ ಕೆಟ್ಟ ಕಮೆಂಟ್ ಮಾಡೋದಿದೆ.

ಇಬ್ಬರು ಪತಿ – ಪತ್ನಿಯಲ್ಲ, ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಹೀಗೆ ನಾಟಕವಾಡ್ತಿದ್ದಾರೆ ಎಂದು ಬಳಕೆದಾರರು ಕಮೆಂಟ್ ಮಾಡ್ತಿರುತ್ತಾರೆ. ಆರಂಭದಲ್ಲಿ ಈ ಟೀಕೆಗಳು ಬೇಸರತರಿಸುತ್ತಿತ್ತು. ಅನೇಕ ಬಾರಿ ಕಣ್ಣೀರಿಟ್ಟಿದ್ದೇನೆ. ಈಗ ಇದೆಲ್ಲ ಅಭ್ಯಾಸವಾಗಿದೆ. ಜನರ ಕೆಟ್ಟ ಕಮೆಂಟ್ ಗೆ ತಲೆಕೆಡಿಸಿಕೊಳ್ಳೋದಿಲ್ಲ ಎನ್ನುತ್ತಾರೆ ಶೆಮಿ. 

ಶೆಫಿ, ಶೆಮಿ ಬಳಿ ಇರುವ ಹಣ ನೋಡಿ ಮದುವೆ ಆಗಿದ್ದಾರೆ ಎಂದು ಅನೇಕರು ಹೇಳ್ತಾರಂತೆ. ಹಣಕಾಸಿನ ಈ ವಿಷ್ಯವನ್ನು ನಾನು ನಿರ್ಲಕ್ಷ್ಯಿಸುತ್ತೇನೆ. ಶೆಫಿ ನನ್ನ ಹಣ ನೋಡಿ ಮದುವೆ ಆಗಲು ಸಾಧ್ಯವಿಲ್ಲ. ನನ್ನ ಬಳಿ ಬರೀ ಒಂದು ಮನೆ ಇದೆ ಅಷ್ಟೆ ಎಂದು ಶೆಮಿ ಹೇಳಿದ್ದಾರೆ. ಶೆಫಿ ವ್ಯಕ್ತಿತ್ವ ನನಗೆ ಇಷ್ಟವಾಗಿದೆ ಎಂದು ಶೆಮಿ ಪತಿಯನ್ನು ಹೊಗಳಿದ್ದಾರೆ. 

'ನನ್ ಜೊತೆ ಇರ್ತೀಯೋ ಇಲ್ಲಾ ಆತ್ಮಹತ್ಯೆ ಮಾಡಿಕೊಳ್ಳಲೋ?' 16 ವರ್ಷದ ಹುಡುಗನಿಗೆ ಮಹಿಳೆಯ ಬೆದರಿಕೆ!

ಶೆಮಿ ಎರಡನೇ ಮದುವೆ ಆಗೋದನ್ನು ಅವರ ಕುಟುಂಬಸ್ಥರು ವಿರೋಧಿಸಲಿಲ್ಲ. ಅವರ ಬೆಂಬಲವಿದ್ದ ಕಾರಣ ಶೆಮಿಗೆ ಎರಡನೇ ಮದುವೆ ಕಷ್ಟವಾಗ್ಲಿಲ್ಲ. ತನಗಿಂತ ಚಿಕ್ಕ ವ್ಯಕ್ತಿ ಜೊತೆ ಜೀವನ ನಡೆಸೋದು ಹೇಗೆ ಎಂಬ ಚಿಂತೆ ಕಾಡಿತ್ತು. ಆದ್ರೆ ಅದೂ ಕಷ್ಟವಾಗ್ಲಿಲ್ಲ, ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದೇವೆ ಎಂದು ಶೆಮಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios