ಗಂಡ ಅಥವಾ ಸಂಗಾತಿ ಎಲ್ಲೋ ಬೇರೆ ಕಡೆ ಕಣ್ಣು ಹಾಕ್ತಾ ಇದಾನೆ ಅಂತ ಹೆಂಡತಿಗೆ ಅನಿಸಬಹುದು; ಅವನ ಪ್ರೀತಿಯನ್ನು ಸದಾ ತನ್ನಲ್ಲಿಯೇ ಇರುವಂತೆ ಮಾಡೋದು ಹೇಗೆ? ಇವಳೊಬ್ಬಳು ಬ್ಯೂಟಿ ಕ್ವೀನ್‌ ನೀಡಿದ ಪರಿಹಾರ ಸಕತ್‌ ಆಗಿದೆ.

ಗಂಡ ಅಥವಾ ಸಂಗಾತಿ ಎಲ್ಲೋ ಬೇರೆ ಕಡೆ ಕಣ್ಣು ಹಾಕ್ತಾ ಇದಾನೆ ಅಂತ ಹೆಂಡತಿಗೆ ಅನಿಸಬಹುದು; ತನ್ನಲ್ಲಿ ಅವನಿಟ್ಟ ಪ್ರೀತಿ ನಿಧಾನವಾಗಿ ಕಡಿಮೆಯಾಗ್ತಾ ಇದೆ ಅಂತ ಗೆಳತಿಗೆ ಅನಿಸುತ್ತಿರಬಹುದು. ಹಾಗೆಲ್ಲ ಆದಾಗ ಏನು ಮಾಡೋದು? ಅವನ ಪ್ರೀತಿಯನ್ನು ಸದಾ ತನ್ನಲ್ಲಿಯೇ ಇರುವಂತೆ ಮಾಡೋದು ಹೇಗೆ? ಇವಳೊಬ್ಬಳು ಬ್ಯೂಟಿ ಕ್ವೀನ್‌ ನೀಡಿದ ಪರಿಹಾರ ಸಕತ್‌ ಆಗಿದೆ. ಸಾಕಷ್ಟು ಇಂಟರೆಸ್ಟಿಂಗ್‌ ಆಗಿದೆ; ಜೊತೆಗೆ ʼಯಕ್‌ʼ ಅನ್ನಿಸುವ ಹಾಗೆಯೂ ಇದೆ!

ಅಂದ ಹಾಗೆ ಯಾರೀಕೆ? ಇವಳ ಹೆಸರು ಅಮೈರಾ ಯಾದವ್.‌ ಇವಳ ಪರಿಚಯ ಆಮೇಲೆ ಮಾಡಿಕೊಳ್ಳೋಣ. ಸದ್ಯ ಇವಳು ʼಬಿಟ್ಟುಹೋಗುವ ಗಂಡಸರ ಚಾಳಿʼ ನಿಲ್ಲಿಸೋದರ ಬಗ್ಗೆ ಏನು ಹೇಳಿದ್ದಾಳೆ, ಕೇಳೋಣ.

ಇವಳು ಹೇಳುವ ಪ್ರಕಾರ, ಗಂಡನ ಅಂಡರ್‌ವೇರ್‌ ಹಾಗೂ ಹೆಂಡತಿಯ ಅಂಡರ್‌ವೇರ್‌ ಎರಡನ್ನೂ ಜೋಡಿಸಿ ಬಿಗಿಯಾಗಿ ಕಟ್ಟಬೇಕು. ನಂತರ ಅದನ್ನು ಮನೆಯ ನೈರುತ್ಯ ಮೂಲೆಯೊಂದರಲ್ಲಿ ಬಚ್ಚಿಡಬೇಕು. ಆ ಮೇಲೆ ಆ ಗಂಡಸು ಎಂದು ಪತ್ನಿಯನ್ನು ಬಿಟ್ಟು ಹೋಗುವುದಿಲ್ಲವಂತೆ! ಹೇಗಿದೆ ಐಡಿಯಾ! ಕಾಚಕ್ಕೂ ಹೊರಚಾಳಿಗೂ ಸಂಬಂಧ ಇರಬಹುದು ಬಿಡಿ. ಯಾಕೆಂದರೆ ಹೊರಚಾಳಿಯ ತೀಟೆಯ ಕೇಂದ್ರವೇ ಕಾಮ ಅಲ್ವೇ! ಮೊದಲೆಲ್ಲಾ ಗಂಡ ಹೆಂಡತಿ 'ಕಾಯೇನ ವಾಚಾ ಮನಸಾ' ಅನುಸರಿಸಬೇಕು ಅಂತಿದ್ರು. ಈಕೆಯ ಮಾತು ಕೇಳಿದ್ರೆ 'ಕಾಚೇನ ವಾಚಾ ಮನಸಾ' ಅನುಸರಿಸಬೇಕು ಅನ್ನಬೇಕೇನೋ!

View post on Instagram

ಅಂದ ಹಾಗೆ ಈಕೆ ಅಮೈರಾ ಯಾದವ್‌. ಇವಳು ಹಿಂದೊಮ್ಮೆ ʼಮಿಸೆಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಕ್ವೀನ್ʼ ಬ್ಯೂಟಿ ಸ್ಪರ್ಧೆಯ ಫೈನಲಿಸ್ಟ್‌ ಆಗಿದ್ದಳು. ತನ್ನನ್ನು ತಾನು ಹೋಲಿಸ್ಟಿಕ್‌ ಹೀಲಿಂಗ್‌ ಪ್ರಾಕ್ಟಿಷನರ್‌ ಎಂದು ಕರೆದುಕೊಳ್ಳುತ್ತಾಳೆ. ಈಕೆ ಈಗ ಟಿವಿ ಚಾನೆಲ್‌ಗಳಲ್ಲಿ, ಯುಟ್ಯೂಬ್‌ ಚಾನೆಲ್‌ಗಳಲ್ಲಿ ಕುಳಿತುಕೊಂಡು ಆರೋಗ್ಯ- ವಾಸ್ತು- ಜ್ಯೋತಿಷ್ಯ ಹೀಗೆ ಏನೇನು ಬೇಕೋ ಅದೆಲ್ಲವನ್ನೂ ಮಿಕ್ಸ್‌ ಮಾಡಿ ಕೇಳುಗರಿಗೆ ಉಣಬಡಿಸುತ್ತಾ ಇರುತ್ತಾಳೆ.

ಈಕೆ ನೀಡುವ ಇನ್ನೊಂದು ಐಡಿಯಾ ಕೇಳಿ- ಇದು ಹಣ ಬರುವುದಕ್ಕಂತೆ. ಒಂದು ಪಲಾವ್‌ ಮಸಾಲೆ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ನಿಮಗೆ ಎಷ್ಟು ಹಣ ಬೇಕೋ ಅಷ್ಟು ಅಂಕಿಯನ್ನು ಕೆಂಪು ಇಂಕ್‌ನಲ್ಲಿ ಬರೆಯಬೇಕು. ನಂತರ ಅದನ್ನು ಎಂಟು ಲವಂಗದಿಂದ ಮುಚ್ಚಬೇಕು. ನಂತರ ಅದನ್ನು ಬೀಡಾದ ಹಾಗೆ ಮಡಿಸಿ ವಿಶ್ವದೇವತೆಗಳಿಗೆ ಅರ್ಪಿಸಬೇಕಂತೆ. ನೀವು ಎಣಿಸಿದ ಹಣಕಾಸು ಶೀಘ್ರವೇ ಕೈಗೂಡುತ್ತದೆ ಅನ್ನುತ್ತಾಳೆ.

ಇದೇನು ಹುಚ್ಚುಚ್ಚಾಟ ಅನ್ನಬೇಡಿ. ಈಕೆಯ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳಿದ್ದಾರೆ. ಈಕೆಯ ಮಾತು ಬಾಯಿಬಿಟ್ಟು ಕೇಳುವ ಸಾವಿರಾರು ಮಂದಿಯಿದ್ದಾರೆ. ಹಲವು ಚಾನೆಲ್‌ಗಳು ಈಕೆಯನ್ನು ಕರೆಸಿ ನಮ್ಮ ಬ್ರಹ್ಮಾಂಡ ಸ್ವಾಮಿಯಂತೆ ಮಾತನಾಡಿಸುತ್ತವೆ. ಪುಗಸಟ್ಟೆ ಮನರಂಜನೆ.

ಈಕೆ ಫೈನಾನ್ಸ್ ಕಂಪನಿಯೊಂದರಲ್ಲಿ ESG ಲೀಡ್ ಆಗಿಯೂ ಕೆಲಸ ಮಾಡುತ್ತಾಳೆ. ಈಕೆ ಪ್ರಮಾಣೀಕೃತ ಟ್ಯಾರೋ/ಏಂಜಲ್ ಕಾರ್ಡ್ ರೀಡರ್, ರೇಖಿ ಮಾಸ್ಟರ್ ಟೀಚರ್, ಮಾಸ್ಟರ್ ಟೀಚರ್ ಲಾಮಾ ಫೆರಾ, ವಾಸ್ತು ಸಲಹೆಗಾರ್ತಿ ಮತ್ತು ಸಂಖ್ಯಾಶಾಸ್ತ್ರಜ್ಞೆ. ಅಕ್ಷತ್ ಎಂಬ 13 ವರ್ಷದ ಮಗನ ತಾಯಿ. ಇವಳು ದೇವತೆಗಳೊಂದಿಗೆ ಸಂವಹನ ನಡೆಸುತ್ತಾಳಂತೆ. ದೈನಂದಿನ ಜೀವನದಲ್ಲಿ ಪವಾಡಗಳನ್ನು ಕಾಣುತ್ತೇನೆ ಅನ್ನುತ್ತಾಳೆ. ತನ್ನ ಏಂಜೆಲ್ ಅಥವಾ ಟ್ಯಾರೋ ಕಾರ್ಡ್ ರೀಡಿಂಗ್‌ಗಳಲ್ಲಿ ತಾನು ಪ್ರತಿಬಿಂಬಿಸುವ ದೇವತೆಗಳು ಮತ್ತು ದೇವದೂತರೊಂದಿಗೆ ತಾನು ಅದ್ಭುತವಾದ ಬಂಧವನ್ನು ಹಂಚಿಕೊಳ್ಳುತ್ತೇನೆ ಎನ್ನುತ್ತಾಳೆ.

ಪತಿಗೆ ಮೋಸ ಮಾಡುವ ಪತ್ನಿಗೆ ಚೀನಾದಲ್ಲಿ ಈ ಘೋರ ಶಿಕ್ಷೆ ಕೊಡ್ತಿದ್ರು!

ಈಕೆ ತರಬೇತಿ ಪಡೆದ ಸಂಖ್ಯಾಶಾಸ್ತ್ರಜ್ಞೆ. ಸಂಖ್ಯೆಗಳೊಂದಿಗೆ ಮ್ಯಾಜಿಕ್ ಮಾಡುತ್ತಾಳೆ. ಜೀವನದಲ್ಲಿ ಸಕಾರಾತ್ಮಕತೆಯನ್ನು ಪುನಃಸ್ಥಾಪಿಸಲು ಮತ್ತು ಅದ್ಭುತ ಫಲಿತಾಂಶಗಳನ್ನು ನೀಡಲು ಸಂಖ್ಯೆಗಳು ಅಪಾರ ಶಕ್ತಿಯನ್ನು ಹೊಂದಿವೆ ಎಂದು ಹೇಳುತ್ತಾಳೆ. ಜನರೊಂದಿಗೆ ಸಂವಹನ ನಡೆಸಲು, ಜನರಿಗೆ ಸಹಾಯ ಮಾಡಲು, ಅವರ ಜೀವನದಲ್ಲಿ ಮೂಲಭೂತ ಬದಲಾವಣೆ ತರಲು ಉತ್ಸುಕಳಾಗಿದ್ದಾಳಂತೆ.

ಈಕೆ ಹೋಲಿಸ್ಟಿಕ್ ಹೀಲಿಂಗ್ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2016ರಲ್ಲಿ ಔರಾ (ಪ್ರಭಾವಳಿ) ಮತ್ತು ಸ್ಕ್ಯಾನಿಂಗ್ ಕಾರ್ಯಾಗಾರದಲ್ಲಿ ಗೌರವ ಅತಿಥಿಯಾಗಿ ಗೌರವಿಸಲ್ಪಟ್ಟಿದ್ದಾರೆ. 2017ರಲ್ಲಿ ಮೀಟ್ ಆಂಡ್ ಗ್ರೇಟ್ ವಿತ್ ಏಂಜೆಲ್ಸ್ ಹೋಲಿಸ್ಟಿಕ್ ಈವೆಂಟ್‌ನಲ್ಲಿ ಪ್ರೇರಕ ಭಾಷಣಕಾರರಾಗಿ ಈಕೆಯನ್ನು ಆಹ್ವಾನಿಸಲಾಗಿದೆ. ಅಲ್ಲದೆ ಈಕೆ ಆಧ್ಯಾತ್ಮಿಕ ಚಿಕಿತ್ಸೆಗಾಗಿ 2018ರಲ್ಲಿ "ಹೋಲಿಸ್ಟಿಕ್ ದಿವಾ" ಪ್ರಶಸ್ತಿಯನ್ನು ಮತ್ತು "ವುಮನ್ ವಿತ್ ಸ್ಪಿರಿಟ್" ಪ್ರಶಸ್ತಿಯನ್ನು ಪಡೆದಿದ್ದಾಳೆ.

ಹಣ ನೋಡಿಯೇ ಬಿದ್ದಿದ್ದು, ಮುದುಕನನ್ನು ಪ್ರೀತಿಸಿದ ಮಾಡೆಲ್ ಧೈರ್ಯವಾಗಿ ಬಿಚ್ಚಿಟ್ಟ ಸತ್ಯ!