Asianet Suvarna News Asianet Suvarna News

ಇನ್ಮುಂದೆ ಮದುವೆಯಾದ ಒಂದೇ ವರ್ಷದೊಳಗೆ ಡಿವೋರ್ಸ್ ಕೊಡಬಹುದು; ಹೈಕೋರ್ಟ್‌

ದಂಪತಿ ಮದುವೆಯಾದ ಒಂದು ವರ್ಷದೊಳಗೆ ಡಿವೋರ್ಸ್ ಪಡೆಯಲು ಬಯಸಿದರೆ ಆ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Karnataka High Court waives cooling off period for techie couple seeking divorce Vin
Author
First Published Sep 8, 2023, 5:05 PM IST

ಬೆಂಗಳೂರು: ದಂಪತಿ ಮದುವೆಯಾದ ಒಂದು ವರ್ಷದೊಳಗೆ ಡಿವೋರ್ಸ್ ಪಡೆಯಲು ಬಯಸಿದರೆ ಆ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಪರಸ್ಪರ ಒಪ್ಪಿಗೆ ವಿಚ್ಛೇದನಕ್ಕಾಗಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಉಲ್ಲೇಖಿಸಲಾದ ಒಂದು ವರ್ಷದ ಕೂಲಿಂಗ್ ಆಫ್ ಅವಧಿಯು ಕಡ್ಡಾಯವಲ್ಲ ಎಂದು ಹೇಳಿದೆ. ಪತಿ-ಪತ್ನಿ ದೂರವಾಗಲು ಪ್ರಜ್ಞಾಪೂರ್ವಕ ನಿರ್ಧಾರದ ಹೊರತಾಗಿಯೂ ದಂಪತಿಗಳು ಅನಗತ್ಯವಾಗಿ ಕಾಯುವಂತೆ ಮಾಡುವುದು ಅವರ ಸಂಕಟವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

ಮನವಿಯನ್ನು ಸಲ್ಲಿಸಲು ಸಮಯವಾಕಾಶ ಮತ್ತು ಅರ್ಜಿಯನ್ನು ಸಲ್ಲಿಸುವ ದಿನಾಂಕದಿಂದ ಆರು ತಿಂಗಳ ಅವಧಿಯನ್ನು ಒದಗಿಸುವ ಉದ್ದೇಶವೆಂದರೆ, ಆರು ಅವಧಿಯ ನಂತರ ಇಬ್ಬರೂ ತಮ್ಮ ಮನಸ್ಸನ್ನು ಬದಲಾಯಿಸಬಹುದು ಮತ್ತು ಅವರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬಹುದು ಎಂಬುದಾಗಿದೆ. ಆದರೆ ತಿಂಗಳುಗಳು ಕಳೆದ ಮೇಲೂ ಕಕ್ಷಿದಾರರು ವಿಚ್ಛೇದನ (Divorce)ದೊಂದಿಗೆ ಮುಂದುವರಿಯಲು ನಿರ್ಧರಿಸುತ್ತಾರೆ. ಹೀಗಾಗಿ ಇನ್ಮುಂದೆ ಮದುವೆ (Marriage)ಯಾದ ಒಂದೇ ವರ್ಷದೊಳಗೆ ಡಿವೋರ್ಸ್ ಕೊಡಬಹುದು ಎಂದು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ ಪಾಟೀಲ್ ಅವರ ವಿಭಾಗೀಯ ಪೀಠ ಹೇಳಿದೆ.

ಸಂಬಂಧದಲ್ಲಿ ಗಂಡ ಅಥವಾ ಹೆಂಡತಿ, ಯಾರು ಹೆಚ್ಚು ಮೋಸ ಮಾಡ್ತಾರೆ?

ಮದ್ವೆಯಾಗಿ ಮೂರೇ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ
ವಿಶೇಷ ವಿವಾಹ ಕಾಯ್ದೆಯಡಿ ನವೆಂಬರ್‌ 2022ರಲ್ಲಿ ಮದುವೆಯಾಗಿದ್ದ ಜೋಡಿ ಮೂರೇ ತಿಂಗಳಲ್ಲಿ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ 'ಕೂಲಿಂಗ್ ಆಫ್‌' ಅವಧಿಯಲ್ಲಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕಾರಣ ನೀಡಿ ಕೌಟುಂಬಿಕ ನ್ಯಾಯಾಲಯ (Family court) ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಜೋಡಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಜಿ ನರೇಂದ್ರ ಮತ್ತು ನ್ಯಾ.ವಿಜಯಕುಮಾರ್ ಎ ಪಾಟೀಲ್ ಅವರ ವಿಭಾಗೀಯ ಪೀಠ ವಿವಾಹವಾದ ಒಂದು ವರ್ಷದೊಳಗೆ ವಿಚ್ಛೇದನ ಅರ್ಜಿ ಸಲ್ಲಿಸುವಂತಿಲ್ಲ ಎಂಬ ನಿಯಮ (Rules) ಕಡ್ಡಾಯವಲ್ಲ. ದಂಪತಿ ಹೊಂದಾಣಿಕೆ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಈ 'ಕೂಲಿಂಗ್ ಆಫ್ ಅವಧಿ' ನೀಡಲಾಗಿದೆ. ಆದರೆ ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಎದುರಾದರೆ ವಿಚ್ಛೇದನ ಪರಿಗಣಿಸಬಹುದು ಎಂದು ತಿಳಿಸಿದ್ದರು. 

ಹೆಂಡ್ತಿ ಜೊತೆ ಖುಷಿ ಖುಷಿಯಾಗಿರಲು ಈ ರೂಲ್ಸ್ ಫಾಲೋ ಮಾಡಿ

ಮಾತ್ರವಲ್ಲ, 'ಇಬ್ಬರೂ ಪದವೀಧರರಾಗಿದ್ದು ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದೆ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೃತ್ತಿಯ (Job) ಕಡೆಗೆ ಗಮನ ಹರಿಸಲು ನಿರ್ಧರಿಸಿದ್ದಾರೆ. ವಿವಾಹವಾದ ಒಂದು ವರ್ಷದಲ್ಲಿ ಹೊಂದಾಣಿಕೆಯಾಗಬಹುದು ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಬಂಧವಿದೆ. ಇದು ಎಲ್ಲಾ ಪ್ರಕರಣಗಳಿಗೂ ಅನ್ವಯಿಸಲ್ಲ' ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಹಾಗೆಯೇ ವಿಚ್ಛೇದನ ಅರ್ಜಿಯನ್ನು ಮರುಪರಿಶೀಲಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಲಾಗಿದೆ. 

Follow Us:
Download App:
  • android
  • ios