ಸಂಬಂಧದಲ್ಲಿ ಗಂಡ ಅಥವಾ ಹೆಂಡತಿ, ಯಾರು ಹೆಚ್ಚು ಮೋಸ ಮಾಡ್ತಾರೆ?
ದಾಂಪತ್ಯ ಜೀವನದಲ್ಲಿ ಮೋಸ ಮಾಡುವವರು ಬಹಳ ಮಂದಿ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಸಂಬಂಧಗಳು ಹೆಚ್ಚಾಗಿವೆ ಎನ್ನುತ್ತಾರೆ ತಜ್ಞರು. ಆದರೆ ಮದುವೆಯೆಂಬ ಸಂಬಂಧದಲ್ಲಿ ಸಂಗಾತಿಗೆ ಹೆಚ್ಚು ಮೋಸ ಮಾಡುವವರು ಯಾರು? ಪುರುಷರಾ ಅಥವಾ ಮಹಿಳೆಯರಾ?
ವೈವಾಹಿಕ ಜೀವನದಲ್ಲಿ ವಂಚನೆ ಎಂಬುದು ಇತ್ತೀಚಿಗೆ ತುಂಬಾ ಸಾಮಾನ್ಯವಾಗಿ ಹೋಗಿದೆ. ಗಂಡಸರು, ಇನ್ನೊಬ್ಬ ಮಹಿಳೆಯರ ಜೊತೆ, ಮಹಿಳೆಯರು ಪರಪುರುಷರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಮದುವೆಯೆಂಬ ಸಂಬಂಧದಲ್ಲಿ ಸಂಗಾತಿಗೆ ಹೆಚ್ಚು ಮೋಸ ಮಾಡುವವರು ಮಹಿಳೆಯರೇ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಪುರುಷರು ಎನ್ನುತ್ತಾರೆ.
ವಂಚನೆ ಎಂದರೆ ವಿವಾಹಿತ ಸಂಗಾತಿಯ ಹೊರತಾಗಿ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಳ್ಳುವುದಾಗಿದೆ. ಅಂದರೆ ಇದು ನಿಮ್ಮ ಸಂಗಾತಿಗೆ ಮೋಸ ಮಾಡಿದಂತೆ. ವೈವಾಹಿಕ ಸಂಬಂಧದ ಹೊರತಾಗಿ ಬೇರೆ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಇರುವುದು ವಂಚನೆಯ ಅಡಿಯಲ್ಲಿ ಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ತಜ್ಞರ ಪ್ರಕಾರ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇಂತಹ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ. ಮೊದಲಿಗಿಂತ ಈಗ ಅಕ್ರಮ ಸಂಬಂಧಗಳು ಹೆಚ್ಚಾಗಿವೆ ಎನ್ನುತ್ತಾರೆ ತಜ್ಞರು.
ಆದರೆ ಪುರುಷರು ಅಥವಾ ಮಹಿಳೆಯರು ಯಾರು ಹೆಚ್ಚು ಮೋಸ ಮಾಡುತ್ತಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಇನ್‌ಸ್ಟಿಟ್ಯೂಟ್ ಫಾರ್ ಫ್ಯಾಮಿಲಿ (ಐಎಫ್‌ಎಸ್) ಅಧ್ಯಯನದ ಪ್ರಕಾರ, ಮಹಿಳೆಯರಿಗಿಂತ ಪುರುಷರು ಹೆಚ್ಚು ಮೋಸ ಮಾಡುತ್ತಾರೆ ಎಂದು ತಿಳಿದುಬಂದಿದೆ.
20% ಪುರುಷರು ಮತ್ತು 13% ವಿವಾಹಿತ ಮಹಿಳೆಯರು ತಮ್ಮ ಪಾಲುದಾರರನ್ನು ಹೊರತುಪಡಿಸಿ ಬೇರೆಯವರೊಂದಿಗೆ ಅನ್ಯೋನ್ಯವಾಗಿರುವುದನ್ನು ವರದಿ ಮಾಡಿದ್ದಾರೆ. ಆದರೆ ಈ ಅನುಪಾತವು ಲಿಂಗಕ್ಕೆ ತಕ್ಕಂತೆ ಬದಲಾಗುತ್ತದೆ. 18 ರಿಂದ 29 ವರ್ಷ ವಯಸ್ಸಿನ ಮಹಿಳೆಯರು ಪುರುಷರಿಗಿಂತ ಹೆಚ್ಚು ಮೋಸ ಮಾಡುತ್ತಿದ್ದಾರೆ ಎಂದು ಒಪ್ಪಿಕೊಳ್ಳುತ್ತಾರೆ.
ಪುರುಷರು ಮತ್ತು ಮಹಿಳೆಯರು ಇಬ್ಬರೂ ವಯಸ್ಸಾದಂತೆ ಹೆಚ್ಚು ಮೋಸ ಮಾಡುತ್ತಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಅಂಕಿಅಂಶಗಳು ವಂಚನೆ ಮಾಡುವ ಪುರುಷರ ಸಂಖ್ಯೆ ಶೇಕಡಾವಾರು ಹೆಚ್ಚು ಎಂದು ಸೂಚಿಸಿದರೂ, ವಿವಾಹಿತ ಮಹಿಳೆಯರು ಪುರುಷರಂತೆ ಹೆಚ್ಚಾಗಿ ಮೋಸ ಮಾಡಬಹುದು ಎಂದು ತಿಳಿದುಬಂದಿದೆ.
ವಿಚ್ಛೇದನ, ಆರ್ಥಿಕ ಸಮಸ್ಯೆಗಳು ಮತ್ತು ಮಾನಸಿಕವಾಗಿ ಸಾಥ್ ನೀಡದಿರುವ ಸಂಗಾತಿ, ಒಂಟಿ ಪೋಷಕತ್ವದಂತಹ ಒತ್ತಡಗಳು ಮಹಿಳೆಯರು ವಿವಾಹೇತರ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಕಾರಣವಾಗುತ್ತವೆ. ಹೆಣ್ಣು ಗಂಡನಿಂದ ಕೌಟುಂಬಿಕ ಹಿಂಸೆಯನ್ನು ಎದುರಿಸುವ ಸಾಧ್ಯತೆ ಹೆಚ್ಚು. ಹಾಗಾಗಿಯೇ ಅಕ್ರಮ ಸಂಬಂಧ ಬಚ್ಚಿಡುತ್ತಾರೆ ಎನ್ನಲಾಗಿದೆ.