ರಾಜ್ಯದಲ್ಲಿ ಅಪ್ರಾಪ್ತರಿಗೆ ಕಾಂಡೋಮ್ ಮಾರಾಟದ ಮೇಲೆ ಯಾವುದೇ ನಿಷೇಧವಿಲ್ಲ, ಸರ್ಕಾರದಿಂದ ಸ್ಪಷ್ಟನೆ
ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಾಲಾ ಶಿಕ್ಷಕರಿಗೆ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿತ್ತು. ಹೀಗಾಗಿ ಔಷಧ ನಿಯಂತ್ರಣ ಇಲಾಖೆ ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ವಿಚಾರದ ಬಗ್ಗೆ ಕರ್ನಾಟಕದ ಡ್ರಗ್ಸ್ ಕಂಟ್ರೋಲ್ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಬೆಂಗಳೂರು: ಅಪ್ರಾಪ್ತ ವಯಸ್ಕರು ಕಾಂಡೋಮ್‌ಗಳು ಮತ್ತು ಮೌಖಿಕ ಗರ್ಭನಿರೋಧಕಗಳನ್ನು ಖರೀದಿಸುವುದನ್ನು ತಡೆಯಲು ಸಲಹೆ ನೀಡುವಂತೆ ಫಾರ್ಮಾಸಿಸ್ಟ್‌ಗಳಿಗೆ ಜನವರಿ 19 ರ ಗುರುವಾರದಂದು ಕರ್ನಾಟಕದ ಡ್ರಗ್ಸ್ ಕಂಟ್ರೋಲ್ ಇಲಾಖೆ ತಿಳಿಸಿದೆ. ಆದಾಗ್ಯೂ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಾಂಡೋಮ್ ಮತ್ತು ಮೌಖಿಕ ಗರ್ಭನಿರೋಧಕಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಯಾವುದೇ ಸುತ್ತೋಲೆಯನ್ನು ಫಾರ್ಮಾಸಿಸ್ಟ್‌ಗಳಿಗೆ ನೀಡುವುದನ್ನು ಇಲಾಖೆ ನಿರಾಕರಿಸಿದೆ.
ಅಪ್ರಾಪ್ತ ವಯಸ್ಕರಿಗೆ ಕಾಂಡೋಮ್‌ಗಳು ಮತ್ತು ಗರ್ಭನಿರೋಧಕಗಳ (Birth control pills) ಮಾರಾಟವನ್ನು ನಿಷೇಧಿಸಲಾಗಿದೆ ಎಂಬ ಸುದ್ದಿ ಹೊರಬಂದ ನಂತರ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಿಗೆ ಕಾಂಡೋಮ್ ಮಾರಾಟ ಅಥವಾ ಯಾವುದೇ ಗರ್ಭನಿರೋಧಕಗಳ ಮಾರಾಟಕ್ಕೆ (Sale) ಯಾವುದೇ ನಿಷೇಧವಿಲ್ಲ ಎಂದು ಸ್ಪಷ್ಟಪಡಿಸುವ ಸೂಚನೆಯನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಿದೆ.
ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್ ಫ್ರೀ
ನಾವು ಅಂತಹ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಯಾವುದೇ ವಯಸ್ಸಿನ ಜನರಿಗೆ ಕಾಂಡೋಮ್ ಅಥವಾ ಇತರ ಗರ್ಭನಿರೋಧಕಗಳ ಮಾರಾಟದ ಮೇಲೆ ಯಾವುದೇ ನಿಷೇಧವಿಲ್ಲ (Ban) ಎಂದು ಕರ್ನಾಟಕದ ಡ್ರಗ್ಸ್ ಕಂಟ್ರೋಲರ್ ಭಾಗೋಜಿ ಟಿ ಖಾನಾಪುರೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಬೆಂಗಳೂರಿನ ಕೆಲವು ಶಾಲೆಗಳಲ್ಲಿ (School) ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು, ಸಿಗರೇಟ್ ಮತ್ತು ಲೈಟರ್‌ಗಳು ಪತ್ತೆಯಾಗಿತ್ತು. ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ಬಗ್ಗೆ ಆಡಳಿತ ಮಂಡಳಿಗೆ (Management) ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಲೆಗಳ ಬ್ಯಾಗ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿದಾಗ ಈ ವಸ್ತುಗಳು ಪತ್ತೆಯಾಗಿದ್ದವು. 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಸೆಲ್ ಫೋನ್‌ಗಳು ಮತ್ತು ಹೆಚ್ಚುವರಿ ಹಣ ದೊರಕಿತ್ತು. ಶಾಲೆಗಳು ನಂತರ ಪೋಷಕರಿಗೆ ಪತ್ರಗಳನ್ನು ಕಳುಹಿಸಿದವು, ಮಕ್ಕಳನ್ನು(School) ಅಮಾನತುಗೊಳಿಸುವ ಬದಲು ಕೌನ್ಸೆಲಿಂಗ್ ಶಿಫಾರಸು ಮಾಡಲಾಯಿತು.
ಕಾಂಡೋಮ್ ಹೇಗೇಗೋ ಇದ್ರೆ ಸಂಭೋಗ ಖುಷಿ ಕೊಡಲ್ಲ, ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ
ಅಪ್ರಾಪ್ತ ವಯಸ್ಕರ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭನಿರೋಧಕಗಳು ದೊರಕಿರುವುದು ಅಚ್ಚರಿಯ ವಿಷಯವಾದರೂ, ಯಾವುದೇ ಉತ್ಪನ್ನವನ್ನು ನಿಷೇಧಿಸುವ ಬದಲು, ರಾಜ್ಯ ಇಲಾಖೆಗಳು ಲೈಂಗಿಕ ಶಿಕ್ಷಣದ (Sexual education) ಬಗ್ಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ಭಾರತವು ಶಾಲೆಗಳಲ್ಲಿ ಮೂಲಭೂತ ಲೈಂಗಿಕ ಶಿಕ್ಷಣದಿಂದ ದೂರ ಸರಿದಿದೆ ಮತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನೀತಿಯನ್ನು ಬದಲಾಯಿಸಬೇಕಾಗಿದೆ. ಗರ್ಭನಿರೋಧಕಗಳ ಬಳಕೆಯನ್ನು ಆಶ್ರಯಿಸುತ್ತಿರುವ ವಿದ್ಯಾರ್ಥಿಗಳು ಅಸುರಕ್ಷಿತ ಲೈಂಗಿಕತೆಯ ಅನೇಕ ಪರಿಣಾಮಗಳ ಬಗ್ಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು ಶಾಲೆಗಳು ಲೈಂಗಿಕ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್ ಬಳಕೆ: Asaduddin Owaisi