ಡಬ್ಬಲ್ ಧಮಾಕ: ಇಬ್ಬರನ್ನು ಒಟ್ಟಿಗೆ ಮದುವೆಯಾದ ಯುವಕ

ಯುವಕನೋರ್ವ ಇಬ್ಬರನ್ನು ಒಟ್ಟಿಗೆ ಮದುವೆಯಾಗಿದ್ದಾನೆ. ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕುಸುಮ್ ಲಕ್ರಾ ಹಾಗೂ ಸ್ವಾತಿ ಕುಮಾರಿ ಎಂಬ ಇಬ್ಬರೂ ಮಹಿಳೆಯರು ಒಬ್ಬನನ್ನೇ ಪ್ರೀತಿಸುತ್ತಿದ್ದು, ಒಂದೇ ಕಡೆ ಇವರಿಬ್ಬರು ಯುವಕನನ್ನು ಮದುವೆಯಾಗಿದ್ದಾರೆ. 

Jharkhand groom marries 2 women in 1 ceremony akb

ಮದುವೆ ಯಾವಾಗ ಹೇಗೆ ಎಲ್ಲಿ ಸಂಬಂವಿಸುತ್ತದೆ ಎಂದು ಹೇಳಲಾಗದು. ಕೆಲವು ಕಡೆ ಕುಟುಂಬಸ್ಥರು ಬಂಧುಗಳು ಗುರುಹಿರಿಯರು ಎಲ್ಲರೂ ಜೊತೆಯಾಗಿ ಸೇರಿ ನಿಶ್ಚಯಿಸಿದ ಮದುವೆ ಅಚಾನಕ್ ಆಗಿ ಕ್ಷುಲ್ಲಕ ಕಾರಣಕ್ಕೆ ನಿಂತರೆ, ಕೆಲವೊಂದೆಡೆ ಇದಕ್ಕಿದ್ದಂತೆ ಯಾವುದೇ ಯೋಜನೆಗಳಿಲ್ಲದೇ ವಿವಾಹ ನಡೆದಿರುವ ಘಟನೆಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಈಗ ಜಾರ್ಖಂಡ್‌ನಲ್ಲಿ ಒಂದು ವಿಚಿತ್ರ ಮದುವೆ ನಡೆದಿದೆ. ದ್ವಿ ಪತ್ನಿತ್ವ ಭಾರತದಲ್ಲಿ ನಿಷಿದ್ಧ. ಆದಾಗ್ಯೂ ಅನೇಕ ಕಡೆ ಇಬ್ಬಿಬ್ಬರನ್ನು ಮದುವೆಯಾಗಿ ವಾಸಿಸುವ ಜನರಿದ್ದಾರೆ. ಕೆಲವೆಡೆ ಅಕ್ಕ ತಂಗಿ ಇಬ್ಬರನ್ನು ಒಬ್ಬನೇ ಮದುವೆಯಾಗಿದ್ದು ಇದೆ. 

ಆದರೆ ಇಲ್ಲಿ ಯುವಕನೋರ್ವ ಇಬ್ಬರನ್ನು ಒಟ್ಟಿಗೆ ಮದುವೆಯಾಗಿದ್ದಾನೆ. ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕುಸುಮ್ ಲಕ್ರಾ ಹಾಗೂ ಸ್ವಾತಿ ಕುಮಾರಿ ಎಂಬ ಇಬ್ಬರೂ ಮಹಿಳೆಯರು ಒಬ್ಬನನ್ನೇ ಪ್ರೀತಿಸುತ್ತಿದ್ದು, ಒಂದೇ ಕಡೆ ಇವರಿಬ್ಬರು ಯುವಕನನ್ನು ಮದುವೆಯಾಗಿದ್ದಾರೆ. ಜಾರ್ಖಂಡ್‌ನ (Jharkhand) ಲೋಹರ್ದಾಗ (Lohardaga) ಜಿಲ್ಲೆಯ ಬಂದಾ ಗ್ರಾಮದ (Banda village) ಭಂದ್ರಾ ಬ್ಲಾಕ್‌ನಲ್ಲಿ (Bhandra block) ಈ ಘಟನೆ ನಡೆದಿದೆ. 

ಎರಡು ಮದುವೆ ಮಾಡಿಕೊಂಡ ಸೈಫ್‌ಗೆ ಈಗಲೇ ನಾಲ್ಕು ಮಕ್ಕಳ ಚಿಂತೆ ಏಕೆ?

ಸಂದೀಪ್ ಹಾಗೂ ಕುಸುಮ್‌ (Kusum) ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗದಿದ್ದರೂ ಜೊತೆಯಾಗಿಯೇ ಜೀವನ ಮಾಡುತ್ತಿದ್ದರು. ಅಲ್ಲದೇ ಇವರಿಬ್ಬರ ಸಹ ಜೀವನದಿಂದ ಇವರಿಗೊಂದು ಮಗು ಕೂಡ ಆಗಿತ್ತು. ಆದರೆ ವರ್ಷಗಳಿಗೂ ಹಿಂದೆ ಸಂದೀಪ್‌ ಪಶ್ಚಿಮ ಬಂಗಾಳದ (West Bengal) ಇಟ್ಟಿಗೆ ಗೂಡಿಗೆ ಕೆಲಸಕ್ಕಾಗಿ ತೆರಳಿದ. 

ಅಲ್ಲಿ ಸಂದೀಪ್‌ಗೆ ಸ್ವಾತಿ ಕುಮಾರಿ ಎಂಬ ಯುವತಿಯ ಪರಿಚಯವಾಗಿದೆ. ಈ ಸ್ವಾತಿ ಕುಮಾರಿಯೂ (Swati Kumari) ಕೂಡ ಇಟ್ಟಿಗೆ ಗೂಡಿಗೆ ಕೆಲಸಕ್ಕೆ ಬರುತ್ತಿದ್ದಳು. ಇವರಿಬ್ಬರಿಗೆ ಅಲ್ಲಿ ಪ್ರೀತಿಯಾಗಿದ್ದು, ಕೆಲಸ ಮುಗಿದ ನಂತರವೂ ಈ ಜೋಡಿ ಪರಸ್ಪರ ಭೇಟಿಯಾಗುತ್ತಿದ್ದರು. ಇದು ಇವರ ಮನೆಯವರಿಗೆ ತಿಳಿದಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಲು ಶುರು ಮಾಡಿದರು.

ಗಡ್ಡ ಬಿಟ್ಟ ಹುಡುಗರಿಗೆ ಈ ಗ್ರಾಮದಲ್ಲಿ ಹುಡುಗಿ ಕೊಡಲ್ಲ, ಕ್ಲೀನ್ ಶೇವ್ ಮಾಡಿದ್ರೆ ಮಾತ್ರ ಮದ್ವೆ !
 

ಇದಾಗಿ ಹಲವು ಬಾರಿ ಜಗಳಗಳಾಗಿದ್ದು, ನಂತರ ಕೊನೆಯದಾಗಿ ಗ್ರಾಮಸ್ಥರು ಪಂಚಾಯತ್ (panchayat) ಕರೆದು ಸಂದೀಪ್ ಈ ಇಬ್ಬರನ್ನೂ ಕೂಡ ವಿವಾಹವಾಗಬೇಕು ಎಂದು ನಿರ್ಧರಿಸಿದರು. ಇದಕ್ಕೆ ಮಹಿಳೆಯರಾಗಲಿ ಅವರ ಕುಟುಂಬದವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಹೀಗಾಗಿ ಈತ ಒಂದೇ ಸ್ಥಳದಲ್ಲಿ ತನ್ನ ಕಂದನ ಸಮ್ಮುಖದಲ್ಲಿ ತಾನು ಪ್ರೀತಿಸಿದ ಇಬ್ಬರನ್ನು ಮದುವೆಯಾಗಿದ್ದಾನೆ. 

ಮದುವೆಯಾದ ಬಳಿಕ ಮಾಧ್ಯಮಗಳು ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಸಂದೀಪ್ (Sandeep), ಎರಡು ಮದುವೆಯಾಗಿರುವುದು ಕಾನೂನು ಪ್ರಕಾರ ತೊಡಕಾಗಿರಬಹುದು. ಆದರೆ ನಾನು ಅವರಿಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರಿಬ್ಬರಲ್ಲಿ ಒಬ್ಬರನ್ನು ಕೂಡ ನಾನು ಬಿಡಲು ಸಿದ್ಧನಿಲ್ಲ ಎಂದು ಆತ ಹೇಳಿದ್ದಾನೆ.
 

Latest Videos
Follow Us:
Download App:
  • android
  • ios