ಜಪಾನ್‌ನ ಒಟ್ಟೊ ಕಟಯಾಮಾ ಎಂಬ ವ್ಯಕ್ತಿ, ತನ್ನ ಪತ್ನಿ ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾಳೆ ಎಂಬ ಅಸೂಯೆಯಿಂದಾಗಿ ಬರೋಬ್ಬರಿ 20 ವರ್ಷಗಳ ಕಾಲ ಆಕೆಯೊಂದಿಗೆ ಮಾತನಾಡಲಿಲ್ಲ. ಒಟ್ಟಿಗೆ ವಾಸಿಸುತ್ತಿದ್ದರೂ, ಮೂವರು ಮಕ್ಕಳನ್ನು ಬೆಳೆಸಿದ್ದರೂ ಈ ಮೌನ ಮುಂದುವರೆದಿತ್ತು, ಕೊನೆಗೆ ಅವರ ಮಗ ಟಿವಿ ಶೋ ಒಂದಕ್ಕೆ ಪತ್ರ ಬರೆದಾಗ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ದಾಂಪತ್ಯ ಜೀವನದಲ್ಲಿ ವಿರಸ, ಮುನಿಸು ಎಲ್ಲವೂ ಸಹಜವೇ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋದಾಗ ಕೆಲವರು ಡಿವೋರ್ಸ್ ಪಡೆದುಕೊಂಡರೆ, ಮತ್ತೆ ಕೆಲವರು ಎಲ್ಲವನ್ನೂ ಸಹಿಸಿಕೊಂಡು ಬಾಳುತ್ತಾರೆ. ಎಷ್ಟೋ ಡಿವೋರ್ಸ್ ಪ್ರಕರಣಗಳ ಕಾರಣ ಕೇಳಿದಾಗ ನಗು ಬರುವಂತೆಯೂ ಇರುತ್ತದೆ. ದೇವ್ರೇ ಇಂಥದ್ದಕ್ಕೆಲ್ಲಾ ಇಂಥ ನಿರ್ಧಾರನಾ ಎನ್ನಿಸುವುದು ಉಂಟು. ಇಲ್ಲೊಂದು ಘಟನೆಯಲ್ಲಿ ದಂಪತಿ ಡಿವೋರ್ಸ್ ಪಡೆದಿಲ್ಲ ಎನ್ನೋದು ಬಿಟ್ಟರೆ, ಒಟ್ಟಿಗೇ ಇದ್ದರೂ, ಮೂವರು ಮಕ್ಕಳಾದರೂ 20 ವರ್ಷ ಗಂಡ ಪತ್ನಿಯ ಬಳಿ ಮಾತು ಬಿಟ್ಟಿದ್ದಾನೆ. ಇದರ ಕಾರಣ ಕೇಳಿದ್ರೆ ಮಾತ್ರ ಎಲ್ಲರೂ ಉಫ್ ಎನ್ನೋದು ಗ್ಯಾರೆಂಟಿ
ಅಂದಹಾಗೆ ಈ ವಿಚಿತ್ರ ಘಟನೆ ನಡೆದಿರುವುದು ಜಪಾನ್‌ನ ನಾರಾದಲ್ಲಿ. ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ಈ ಪತಿ ಮಹಾಶಯನ ಹೆಸರು ಒಟ್ಟೊ ಕಟಯಾಮಾ. ಇವರು ಬರೋಬ್ಬರಿ 20 ವರ್ಷ ತನ್ನ ಪತ್ನಿ ಜೊತೆ ಮಾತನಾಡಲಿಲ್ಲ. ಇದಕ್ಕೆ ಕಾರಣ, ಆಕೆಗೆ ತನಗಿಂತ ಹೆಚ್ಚು ಮಕ್ಕಳ ಮೇಲೆ ಪ್ರೀತಿ ಎಂದು! ನಿಜ ನಿಜ. ಹೀಗೂ ಇರ್ತಾರೆ ಜನ. ತನ್ನದೇ ಮಕ್ಕಳ ಮೇಲೆ ಅಮ್ಮನಿಗೆ ತನಗಿಂತ ಹೆಚ್ಚು ಪ್ರೀತಿ ಎನ್ನುವ ಕಾರಣಕ್ಕೆ ಈತ 20 ವರ್ಷ ಪತ್ನಿ ಬಳಿ ಮಾತು ಬಿಟ್ಟಿದ್ದು, ಅವನು ಈಗ ಅದರ ಬಗ್ಗೆ ಬಾಯ್ಬಿಟ್ಟಿದ್ದರಿಂದ ವಿಷಯ ಹೊರಕ್ಕೆ ಬಂದಿದೆ!
1997 ರಲ್ಲಿ ಈ ದಂಪತಿಯ ವಿಚಿತ್ರ ಸಂಬಂಧ ಆರಮಭವಾಯಿತು. ಅವರ 18 ವರ್ಷದ ಕಿರಿಯ ಮಗ ಯೋಶಿಕಿ ರಿಯಾಲಿಟಿ ಟೆಲಿವಿಷನ್ ಶೋ "ಟಿವಿ ಹೊಕ್ಕೈಡೊ" ಗೆ ಸಹಾಯ ಕೋರಿ ಪತ್ರ ಬರೆದಾಗ ಘಟನೆ ಬೆಳಕಿಗೆ ಬಂದಿದೆ. ತನ್ನ ತಂದೆ ಒಟ್ಟೊ ಅಮ್ಮನ ಜೊತೆ ಮಾತು ಬಿಟ್ಟು 20 ವರ್ಷವಾಗಿದೆ. ಈಗ ಆತ ಕೆಲಸದಿಂದ ನಿವೃತ್ತನಾಗಿದ್ದು, ಮನೆಯಲ್ಲಿಯೇ 24 ಗಂಟೆ ಇರುತ್ತಾನೆ. ಆದರೆ ಅಪ್ಪ-ಅಮ್ಮನ ನಡುವೆ 24 ಗಂಟೆ ಮೌನವೇ ಇರುವ ಕಾರಣದಿಂದ ಮನೆಯಲ್ಲಿ ತುಂಬಾ ಹಿಂಸೆಯಾಗುತ್ತಿದೆ ಎಂದು ಹೇಳಿದ್ದ. ಆಗಲೇ ವಿಷಯ ಬೆಳಕಿಗೆ ಬಂದದ್ದು.
ಒಟ್ಟಿಗೇ ಇದ್ದರೂ ಮೌನ
ಎರಡು ದಶಕಗಳ ಈ ಬಿಕ್ಕಟ್ಟಿನ ಸಮಯದಲ್ಲಿ, ಇಬ್ಬರೂ ಒಂದೇ ಸೂರಿನಡಿ ವಾಸಿಸುತ್ತಿದ್ದರು, ಮೂರು ಮಕ್ಕಳನ್ನು ಬೆಳೆಸಿದರು ಮತ್ತು ಪ್ರತಿದಿನ ಒಟ್ಟಿಗೆ ಊಟ ಕೂಡ ಮಾಡುತ್ತಿದ್ದರು. ಅವರ ಮೂರನೇ ಮಗು ಕೂಡ ಈ ಮೌನದ ನಡುವೆ ಜನಿಸಲಿಲ್ಲ. ಆದರೆ ಒಟ್ಟೊ ತನ್ನ ಹೆಂಡತಿಯ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರಿಸುತ್ತಿರಲಿಲ್ಲ. ಅವನು ತಲೆಯಾಡಿಸುತ್ತಿದ್ದನು ಅಥವಾ ಹೂಂ, ಉಹೂಂ ಅಷ್ಟೇ ಹೇಳುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಆದರೆ, ತಮ್ಮ ಮಕ್ಕಳೊಂದಿಗೆ ಸಂಪೂರ್ಣವಾಗಿ ಸಾಮಾನ್ಯ ಮತ್ತು ಹರ್ಷಚಿತ್ತದಿಂದ ಮಾತನಾಡುತ್ತಿದ್ದ.
ಮಗ ಸಹಾಯ ಕೇಳಿದ ಬಳಿಕ ಈ ಷೋನಲ್ಲಿ ಈ ಪತಿರಾಯನನ್ನು ಕರೆದು ಮಾತನಾಡಿಸಲಾಯಿತು. 2017ರಲ್ಲಿ, ತಾನು ತನ್ನ ಪತ್ನಿಯ ಜೊತೆ ಕೊನೆಯದಾಗಿ ಮಾತನಾಡಿದ್ದು ಎಂದು ಆತ ಒಪ್ಪಿಕೊಂಡ. "ನಾವು ಕೊನೆಯದಾಗಿ ಮಾತನಾಡಿ ಹಲವು ವರ್ಷಗಳಾಗಿವೆ. ನನ್ನ ಹೆಂಡತಿಯ ಗಮನ ಮಕ್ಕಳ ಮೇಲೆ ಕೇಂದ್ರೀಕೃತವಾಗಿರುವುದರಿಂದ ನಾನು ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಭಾವಿಸಿದೆ, ಇದರಿಂದ ನನಗೆ ಸಿಟ್ಟುಬಂತು ಎಂದು ಒಪ್ಪಿಕೊಂಡಿದ್ದಾನೆ.
ಮೌನ ಚಿಕಿತ್ಸೆಯು ಸಂಗಾತಿಯನ್ನು ಶಿಕ್ಷಿಸಿದಂತೆ...
ಜಪಾನ್‌ನಲ್ಲಿನ ಈ ವೈರಲ್ ಪ್ರಕರಣವು ನಿವೃತ್ತ ಗಂಡ ಸಿಂಡ್ರೋಮ್ ಮತ್ತು ಸಂಬಂಧಗಳಲ್ಲಿ ಮೌನ ಚಿಕಿತ್ಸೆಯ ಮಾನಸಿಕ ಅಡ್ಡಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ತನ್ನ ಸಂಗಾತಿಯನ್ನು ಶಿಕ್ಷಿಸಲು ವರ್ಷಗಳ ಕಾಲ ಮೌನವಾಗಿರುವುದಕ್ಕಿಂತ ಮತ್ತೊಂದು ಶಿಕ್ಷೆ ಇಲ್ಲ ಎನ್ನುತ್ತಾರೆ ತಜ್ಞರು. ಈ ಕಥೆಯು ಜಪಾನ್‌ನಲ್ಲಿ ಬದಲಾಗುತ್ತಿರುವ ಸಂಬಂಧದ ಪ್ರವೃತ್ತಿಗಳತ್ತ ಗಮನ ಸೆಳೆಯುತ್ತಿದೆ. ಅದೇ ಸಮಯದಲ್ಲಿ, ಕೆಲವು ಜನರು ಸಾಂಪ್ರದಾಯಿಕ ಪ್ರಣಯ ಸಂಬಂಧಗಳ ಬದಲಿಗೆ ಆಪ್ತ ಸ್ನೇಹಿತರನ್ನು ಮದುವೆಯಾಗಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. 2017 ರಲ್ಲಿ ಬಿಡುಗಡೆಯಾದ ಸರ್ಕಾರಿ ಸಮೀಕ್ಷೆಯು ಜಪಾನಿನ ಪುರುಷರಲ್ಲಿ 69 ಪ್ರತಿಶತ ಮತ್ತು ಜಪಾನಿನ ಮಹಿಳೆಯರಲ್ಲಿ 59 ಪ್ರತಿಶತ ಸಂಗಾತಿಯನ್ನು ಹೊಂದಿಲ್ಲ ಎಂದು ಕಂಡುಹಿಡಿದಿದೆ.


