ನಿಮ್ಮ ಬ್ಲಡ್ ಗ್ರೂಪ್‌ನ ಮೂಲಕ ನಿಮ್ಮ ಸ್ವಭಾವವನ್ನೂ ತಿಳಿದುಕೊಳ್ಳಬಹುದು! ಹಾಗೇ ನಿಮ್ಮ ಸ್ವಭಾವಗಳು ನಿಮ್ಮ ಸಂಗಾತಿಯ ಸ್ವಭಾವದ ಜತೆಗೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನೂ ನೋಡಬಹುದು! ಜಪಾನಿನಲ್ಲಿ ಜನಿಸಿದ ಈ ರೂಡಿಯನ್ನು ಲಕ್ಷಾಂತರ ಮಂದಿ ಜಪಾನೀಯರು, ಪೂರ್ವ ಏಷ್ಯನ್ನರು ನಂಬುತ್ತಾರೆ.

ನಿಮ್ಮ ರಕ್ತದ ಗುಂಪು (blood group) ಯಾವುದು? ನಿಮಗೆ ಗೊತ್ತೇ ಇರುತ್ತದೆ. ಮೊದಲು ಮದುವೆಯಾಗುವ ಮುನ್ನ ಗಂಡು ಹೆಣ್ಣಿನ ಜಾತಕ ಪರೀಕ್ಷಿಸುತ್ತಿದ್ದರು. ಈಗ ಬಹಳ ಮಂದಿ ಮದುವೆಯಾಗುವ ಮುನ್ನ, ಬ್ಲಡ್ ಗ್ರೂಪ್ ನೋಡುತ್ತಾರೆ. ಕಾಯಿಲೆ ಇರಬಹುದೆಂದಲ್ಲ, ಒಂದೇ ಗ್ರೂಪ್‌ನ ಹೆಣ್ಣು- ಗಂಡು ಮದುವೆಯಾದರೆ ಹುಟ್ಟುವ ಮಗುವಿಗೆ ಬುದ್ಧಿಮಾಂದ್ಯದಂಥ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಹೀಗಾಗಿ ಭಿನ್ನ ರಕ್ತದ ಗುಂಪಿಗೆ ಆದ್ಯತೆ. 

ಆದರೆ ಇದೂ ನಿಮಗೆ ಗೊತ್ತಿರಲಿ, ನಿಮ್ಮ ಬ್ಲಡ್ ಗ್ರೂಪ್‌ನ ಮೂಲಕ ನಿಮ್ಮ ಸ್ವಭಾವವನ್ನೂ ತಿಳಿದುಕೊಳ್ಳಬಹುದು! ಹಾಗೇ ನಿಮ್ಮ ಸ್ವಭಾವಗಳು ನಿಮ್ಮ ಸಂಗಾತಿಯ ಸ್ವಭಾವದ ಜತೆಗೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನೂ ನೋಡಬಹುದು! ಇದು ವೈಜ್ಞಾನಿಕವಾಗಿ ಸಾಬೀತಾದ ಸಂಗತಿ ಅಲ್ಲ. ಆದರೆ ಜಪಾನಿನಲ್ಲಿ ಜನಿಸಿದ ಈ ರೂಡಿಯನ್ನು ಲಕ್ಷಾಂತರ ಮಂದಿ ಜಪಾನೀಯರು, ಪೂರ್ವ ಏಷ್ಯನ್ನರು ನಂಬುತ್ತಾರೆ. ಅನೇಕ ಸಮೀಕ್ಷೆಗಳನ್ನು ನಡೆಸಲಾಗಿ, ಇದರಲ್ಲಿ ಬಹ್ವಂಶ ನಿಜವಿರುವುದು ಕೂಡ ಗೊತ್ತಾಗಿದೆ.

ಕೆಟ್ಸುಕಿ ಗಾಟಾ ಇತಿಹಾಸ
ಈ ವಿದ್ಯೆಯನ್ನು ಕೆಟ್ಸುಕಿ ಗಾಟಾ (Ketsueki-gata) ಎನ್ನುತ್ತಾರೆ. 1930ರಲ್ಲಿ, ಜಪಾನಿನ ಸಮಾಜವಿಜ್ಞಾನ ಪ್ರಾಧ್ಯಾಪಕ ಟೋಕೆಜಿ ಫುರುಕಾವಾ ಎಂಬವರು ಸಾಮಾಜಿಕ ಮನೋವಿಜ್ಞಾನದ ನಿಯತಕಾಲಿಕೆ "ಎ ಸ್ಟಡಿ ಆಫ್ ಟೆಂಪರಮೆಂಟ್ ಮತ್ತು ಬ್ಲಡ್-ಗ್ರೂಪ್ಸ್" ಎಂಬ ಅಧ್ಯಯನ ವರದಿಯನ್ನು ಪ್ರಕಟಿಸಿದರು. ಈ ಲೇಖನದಲ್ಲಿ, ವ್ಯಕ್ತಿತ್ವ ಮತ್ತು ರಕ್ತದ ಗುಂಪಿನ ನಡುವಿನ ಸಂಪರ್ಕವಿದೆ, ರಕ್ತಗುಂಪಿಗೂ (Blood Group) ವ್ಯಕ್ತಿಯ ಮನೋಧರ್ಮಕ್ಕೂ (Psychology) ನಂಟು ಇದೆ, ಇದನ್ನು ಸಾಬೀತುಪಡಿಸಬಹುದು ಎಂದು ವಾದಿಸಿದರು.

ಅವರು ಈ ಪ್ರಯತ್ನವನ್ನು ಪ್ರಾಚೀನ ಗ್ರೀಕ್ ವೈದ್ಯ (Greek Doctor) ಹಿಪ್ಪೊರ್ಕ್ರೇಟ್ಸ್‌ನ ಸಾಂಗುಯಿನ್, ಫ್ಲೆಗ್ಮ್ಯಾಟಿಕ್, ಕೋಲೆರಿಕ್ ಮತ್ತು ಮೆಲಾಂಕೋಲಿಕ್ ಎಂಬ ವ್ಯಕ್ತಿಗಳ ವರ್ಗೀಕರಣಕ್ಕೆ ಹೋಲಿಸಿದರು, ಈ ಪರಿಕಲ್ಪನೆಯ ಪ್ರಕಾರ, ನಾಲ್ಕು ದೈಹಿಕ ದ್ರವಗಳು ವ್ಯಕ್ತಿತ್ವ ಮತ್ತು ನಡವಳಿಕೆಯ ಮೇಲೆ ಪ್ರಭಾವ ಬೀರುತ್ತವೆ, ಆದರೆ ಆಧುನಿಕ ವರ್ಗೀಕರಣಗಳು ಸಾಮಾನ್ಯವಾಗಿ ಶಾರೀರಿಕ ಮತ್ತು ಮಾನಸಿಕ ಎಂದು ಎರಡು ವಿಧ. ರಕ್ತದ ವರ್ಗವು ವ್ಯಕ್ತಿತ್ವದ ಎರಡು ಮುಖಗಳನ್ನು ಒಟ್ಟಿಗೆ ಸಂಯೋಜಿಸುತ್ತದೆ. ದೇಹ ಮತ್ತು ಮನಸ್ಸನ್ನು ವಿವರಿಸಲು ಶರೀರಶಾಸ್ತ್ರವನ್ನು ಬಳಸುತ್ತದೆ.

ಯಾವ ರಕ್ತದ ಗುಂಪಿನವರಿಗೆ ಯಾವ ಗುಣ? 
ಕೆಟ್ಸುಕಿ-ಗಾಟಾವನ್ನು ನಂಬುವವರು ವ್ಯಕ್ತಿತ್ವದ ಬಗ್ಗೆ ಏನು ಯೋಚಿಸುತ್ತಾರೆ? Ketsueki-gata ನಂಬಿಕೆಯುಳ್ಳವರ ಪ್ರಕಾರ ನಾಲ್ಕು ರಕ್ತ ಪ್ರಕಾರಗಳಲ್ಲಿ ಪ್ರತಿಯೊಂದೂ ವಿಭಿನ್ನ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ನಿರ್ದಿಷ್ಟ ರಕ್ತ ಇರುವವರು ಇತರರಿಗಿಂತ ಕೆಲವು ಗುಣಗಳನ್ನು ಹೆಚ್ಚು ಹೊಂದಿರುತ್ತಾರೆ. 

ರಕ್ತದ ಗುಂಪುಗಳು ಸಾಮಾನ್ಯವಾಗಿ ನಾಲ್ಕು- A, B, O ಹಾಗೂ AB. ಇದರಲ್ಲಿ ಪಾಸಿಟಿವ್ (Positive) ಹಾಗೂ ನೆಗೆಟಿವ್ (Negative) ಎಂದು ಒಟ್ಟು ಎಂಟು ವಿಧ. 

ಕೆಟ್ಸುಕಿ ಗಾಟಾ ಪ್ರಕಾರ, A ರಕ್ತ ಪ್ರಕಾರವನ್ನು ಹೊಂದಿರುವ ಜನರು ಸೃಜನಶೀಲತೆ (Creative), ಬುದ್ಧಿವಂತಿಕೆ (Intelligent) ಮತ್ತು ಸಹಕಾರದಂತಹ (Co-operation) ಸಕಾರಾತ್ಮಕ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಜತೆಗೆ ಮೊಂಡುತನ ಮತ್ತು ಬಿಗಿತತದಂಥ ನಕಾರಾತ್ಮಕ ಗುಣಲಕ್ಷಣಗಳನ್ನೂ ಹೊಂದಿರುತ್ತಾರೆ. ಇತರ ರಕ್ತ ಪ್ರಕಾರಗಳನ್ನು ಹೊಂದಿರುವ ಜನರಿಗಿಂತ ಟೈಪ್ A ವ್ಯಕ್ತಿಗಳು ಜಪಾನ್‌ನಲ್ಲಿ ಹೆಚ್ಚು ಸಾಮಾನ್ಯವೆಂದು ವರದಿಯಾಗಿದೆ.

ಟೈಪ್ B ರಕ್ತ ಹೊಂದಿರುವ ವ್ಯಕ್ತಿಗಳು ಬಲವಾದವರು, ಭಾವೋದ್ರಿಕ್ತರು, ಸಹಾನುಭೂತಿ(Kind) ಮತ್ತು ನಿರ್ಣಾಯಕ ಸ್ವಭಾವದವರು ಎಂದು ಭಾವಿಸಲಾಗಿದೆ, ಆದರೆ ಋಣಾತ್ಮಕವಾಗಿ ಇವರು ಸ್ವಾರ್ಥ ಮತ್ತು ಅನಿಯಮಿತ ನಡವಳಿಕೆಯನ್ನೂ ಹೊಂದಿದ್ದಾರೆ. ಈ ರಕ್ತದ ಗುಂಪನ್ನು ಹೊಂದಿರುವ ಜನರು A ರಕ್ತವನ್ನು ಹೊಂದಿರುವವರೊಂದಿಗೆ ಘರ್ಷಣೆ ಹೊಂದಬಹುದು ಎಂದು ಹೇಳಲಾಗುತ್ತದೆ.

ಏಳನೇ ಕ್ಲಾಸಿನಲ್ಲಿ ಆರಂಭವಾದ ಪ್ರೀತಿ, 80ರ ವಯಸ್ಸಿನಲ್ಲೂ ಅನುರೂಪ ಜೋಡಿ

AB ರಕ್ತ ಪ್ರಕಾರದವರ ಸಾಮರ್ಥ್ಯಗಳು ಸಾಮಾನ್ಯವಾಗಿ ತರ್ಕಬದ್ಧತೆ ಮತ್ತು ಹೊಂದಾಣಿಕೆ. ಆದರೆ ನಿರ್ಣಯಿಸಲು ಹಿಂಜರಿಯುವುದು, ಅತಿ ವಿಮರ್ಶಾತ್ಮಕತೆ ಮತ್ತು ಮರೆವು ಅವರ ದೌರ್ಬಲ್ಯಗಳು ಎಂದು ಹೇಳಲಾಗುತ್ತದೆ. ಈ ರಕ್ತದ ಪ್ರಕಾರವನ್ನು ಹೆಚ್ಚಾಗಿ A ಮತ್ತು B ಎರಡರ ಗುಣಲಕ್ಷಣಗಳನ್ನು ಹೊಂದಿರುವಂತೆ ನೋಡಲಾಗುತ್ತದೆ. ಈ ರಕ್ತದ ಗುಂಪು ಅಪರೂಪದ ಕಾರಣ, ಇದನ್ನು ಹೊಂದಿರುವ ಜನರು ಜಪಾನ್‌ನಲ್ಲಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ.

O ಪ್ರಕಾರದ ಜನರು ಆತ್ಮವಿಶ್ವಾಸ, ದೃಢನಿರ್ಣಯ, ಸ್ಥಿತಿಸ್ಥಾಪಕತ್ವ ಮತ್ತು ಅಂತಃಕರಣದಂತಹ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಆದರೆ ಇವರ ಋಣಾತ್ಮಕ ಗುಣಗಳೆಂದರೆ ಸ್ವಯಂ-ಕೇಂದ್ರಿತ ವ್ಯಕ್ತಿತ್ವ, ಅಸ್ಥಿರತೆ. ಟೈಪ್ ಎ ರಕ್ತ ಹೊಂದಿರುವ ವ್ಯಕ್ತಿಗಳಿಗೆ ಇವರು ವಿಶೇಷವಾಗಿ ಸ್ವಾರ್ಥಿಗಳಂತೆ ಕಾಣಿಸಿಕೊಳ್ಳುತ್ತಾರೆ.

ಯಾವ ರಕ್ತದ ಗುಂಪುಗಳಿಗೆ ಹೊಂದಾಣಿಕೆಯಾಗುತ್ತದೆ? 
ಮೇಲೆ ಹೇಳಿದ ಗುಂಪುಗಳ ಗುಣಲಕ್ಷಣಗಳ ಆಧಾರದ ಮೇಲೆ, ಯಾವ ರಕ್ತದ ಗುಂಪುಗಳು ಸೇರಿದರೆ ಸಂತೋಷದ ದಾಂಪತ್ಯಕ್ಕೆ ಕಾರಣವಾಗಬಹುದು ಎಂದು ಈ ಸಿದ್ಧಾಂತವು ಸೂಚಿಸುತ್ತದೆ. ಅದು ಈ ಕೆಳಗಿನಂತಿದೆ: 

ಅತ್ಯುತ್ತಮ ಜೋಡಿಗಳು : 
O ಗಂಡು- A ಹೆಣ್ಣು
A ಗಂಡು × A ಹೆಣ್ಣು
O ಗಂಡು × B ಹೆಣ್ಣು
O ಗಂಡು × O ಹೆಣ್ಣು

ಈ ವಿಂಗಡಣೆ ಹಾಗೂ ಹೊಂದಾಣಿಕೆಗೆ ಯಾವುದಾದರೂ ವೈಜ್ಞಾನಿಕ ಆಧಾರವಿದೆಯೇ ಎಂದು ವಿಜ್ಞಾನಿಗಳು ಹುಡುಕಾಡಿದ್ದಾರೆ. ಆದರೆ ಅಂಥ ಯಾವುದೂ ವಿಶೇಷವಾಗಿ ಕಂಡುಬಂದಿಲ್ಲ. ಆದರೆ ಇಂತದೊಂದು ರೂಢಿ ಬಹಳ ಮಂದಿ ಜಪಾನೀಯರಲ್ಲಿ ಬೆಳೆದುಬಂದಿದೆ. 

World Sexual Health Day: ಸೆಕ್ಸ್‌ ಲೈಫ್‌ ಬಗ್ಗೆ ಓಶೋ ಏನ್ ಹೇಳ್ತಾರೆ ?