Asianet Suvarna News Asianet Suvarna News

ಮಕ್ಕಳನ್ನು ಮಾಡ್ಕೊಂಡ್ರೆ ಸರ್ಕಾರದಿಂದ್ಲೇ ದುಡ್ಡು, ಪೋಷಕರಿಗೆ ಜಪಾನ್ ಆಫರ್ !

ಮಕ್ಕಳಿರಲವ್ವ ಮನೆ ತುಂಬಾ ಅನ್ನೋ ಮಾತೇ ಇದೆ. ಅದೆಲ್ಲಾ ಹಿಂದಿನ ಕಾಲಕ್ಕಾಯ್ತು, ಈಗೇನಿದ್ರೂ ಮನೆಗೊಂದೇ ಮಗು ಅನ್ನೋ ನಿಲುವಿನಲ್ಲಿದ್ದಾರೆ ಪೋಷಕರು. ಹೀಗಿರುವಾಗ ಜಪಾನ್ ಸರ್ಕಾರ ಪೋಷಕರಿಗೆ ಬಂಪರ್ ಆಫರ್ ನೀಡಿದೆ. ಮಗುವನ್ನು ಮಾಡಿಕೊಂಡವರಿಗೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ ಹೆಚ್ಚು ಹಣ ನೀಡುವುದಾಗಿ ಹೇಳಿಕೊಂಡಿದೆ. 

Japan To Pay People To Have Babies In An Attempt To Boost Declining Birth Rate Vin
Author
First Published Dec 15, 2022, 10:27 AM IST

ಟೋಕಿಯೋ: ಕುಸಿಯುತ್ತಿರುವ ಜನನ ಪ್ರಮಾಣ (Birth Rate)ವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮಕ್ಕಳನ್ನು ಹೊಂದಲು ಜನರಿಗೆ ಹೆಚ್ಚುವರಿ ಹಣವನ್ನು ಪಾವತಿಸಲು ಜಪಾನ್ ಮುಂದಾಗಿದೆ. ಜಪಾನ್‍ನಲ್ಲಿ ಜನನ ಪ್ರಮಾಣ ಗಣನೀಯವಾಗಿ ಇಳಿಮುಖ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಜನರು ಮಗುವನ್ನು (Baby) ಮಾಡಿಕೊಂಡರೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ 48 ಸಾವಿರ ರೂ. ಅಧಿಕ ನೀಡುವುದಾಗಿ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆಯಾಗುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸಲು ಜಪಾನ್ ಕ್ರಮ
ಜಪಾನ್ ತನ್ನ ದೇಶದಲ್ಲಿ ಕಡಿಮೆಯಾಗುತ್ತಿರುವ ಜನನ ಪ್ರಮಾಣವನ್ನು ಕೆಲವು ಸಮಯದಿಂದ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ನಿರಂತರವಾಗಿ ಹೊಸ ಹೊಸ ಯೋಜನೆ (Project)ಗಳನ್ನು ಪರಿಚಯಿಸುತ್ತಿದೆ. ಮಗು ಮಾಡಿಕೊಳ್ಳಲು ಮುಂದಾಗುವ ದಂಪತಿಗೆ (Couple) ಜಪಾನ್‌ನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಬ್ಯಾಂಕ್‌ನಲ್ಲಿ ಇನ್ನೂ ಕೆಲವು ಹಣವನ್ನು (Money) ನೀಡುವ ಭರವಸೆಯನ್ನು ಸರ್ಕಾರ ನೀಡುತ್ತಿದೆ.

ತಾಯಿಯಾಗ್ತಿದ್ದಾರೆ ಹದಿ ವಯಸ್ಸಿನ ಹೆಣ್ಮಕ್ಕಳು: Sex Education ಅನಿವಾರ್ಯ

ಜಪಾನ್ ಸರ್ಕಾರ ಪ್ರಸ್ತುತ, ಮಗುವಿನ ಜನನದ ನಂತರ ಹೊಸ ಪೋಷಕರಿಗೆ (Parents) ಹೆರಿಗೆ ಮತ್ತು ಶಿಶುಪಾಲನೆಗಾಗಿ ಒಟ್ಟು 2,52,338 ರೂ. ಅನುದಾನವನ್ನು ನೀಡುತ್ತಿದೆ. ಇದೀಗ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕ್ಯಾಟೊ ಕಟ್ಸುನೋಬು ಮಗು ಜನನದ ನಂತರ ನೀಡಲಾಗುವ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆ ಸಂಖ್ಯೆಯನ್ನು 3,00,402 ರೂ. ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಸಚಿವರು ಯೋಜನೆಯ ಕುರಿತು ಚರ್ಚಿಸಿದ್ದಾರೆ. ಸರ್ಕಾರ 2023ರ ಆರ್ಥಿಕ ವರ್ಷಕ್ಕೆ ಈ ಯೋಜನೆಯನ್ನು ಅಂಗೀಕರಿಸುವ ಸಾಧ್ಯತೆಯಿದೆ.

ಜಪಾನ್‍ನಲ್ಲಿ ಜನನದ ದರಕ್ಕಿಂತ ಸಾವಿನ ದರವೇ ಹೆಚ್ಚು
ಜಪಾನ್‍ನಲ್ಲಿ ಸಾರ್ವಜನಿಕ ವೈದ್ಯಕೀಯ ವಿಮಾ ವ್ಯವಸ್ಥೆ (Health policy)ಯಿದೆ. ಇದರಿಂದಾಗಿ ಸರ್ಕಾರವು ನೀಡುವ ಅನುದಾನವನ್ನು ಹೆಚ್ಚಿಸಿದರೆ ಆಸ್ಪತ್ರೆಯಿಂದ ಮನೆಗೆ ಬರುವಾಗ ಪೋಷಕರಿಗೆ ಹೆಚ್ಚಿನ ಪ್ರಮಾಣದ ದುಡ್ಡು ಉಳಿಯುತ್ತದೆ. 2021ರಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಜಪಾನ್‍ನಲ್ಲಿ ಜನನದ ದರಕ್ಕಿಂತ ಸಾವಿನ ದರವೇ ಹೆಚ್ಚಿದೆ. ದೇಶದಲ್ಲಿ ಕಳೆದ ವರ್ಷ 8,11,604 ಜನನವಾಗಿದ್ದರೆ, 14,39,809 ಸಾವು ದಾಖಲಾಗಿದೆ ಎಂದು ತಿಳಿದುಬಂದಿದೆ. ಅದೇನೆ ಇರ್ಲಿ ಜಪಾನ್ ಸರ್ಕಾರದ ಹೊಸ ಯೋಜನೆ ಎಲ್ಲರ ಹುಬ್ಬೇರುವಂತೆ ಮಾಡಿರೋದಂತೂ ನಿಜ.

ಫ್ಯಾಮಿಲಿ ಪ್ಲಾನಿಂಗ್ ಇನ್ನು ಕಿವಿಯೋಲೆ ಧರಿಸಿದಷ್ಟೇ ಸುಲಭ!

ಮಗುವಿಗೆ ಜನ್ಮ ನೀಡಿ 11 ಲಕ್ಷ ರೂ. ಗಳಿಸಿ, ಚೀನಾ ಕಂಪೆನಿಯ ಹೊಸ ಆಫರ್‌ !
ಹಲವು ವರ್ಷಗಳಿಂದ ಕಟ್ಟುನಿಟ್ಟಾದ ಒಂದೇ ಮಗು ನೀತಿಗೆ ಬದ್ಧವಾಗಿರುವ ಚೀನಾ ಈಗ ವಿವಿಧ ತೊಂದರೆಗಳನ್ನು ಎದುರಿಸುತ್ತಿದೆ. ಏಕ ಸಂತತಿ ವಿಧಾನವು ಲಿಂಗ (Gender) ಅನುಪಾತದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ. ಅದೇ ಸಮಯದಲ್ಲಿ, ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣವು ಏರಿದೆ. ಚೀನಾವು (China) ಅಪಾರ ಸಂಖ್ಯೆಯ ಸಮರ್ಥ ಜನರ ಹೊಸ ಸಂದಿಗ್ಧತೆಯನ್ನು ಎದುರಿಸುತ್ತಿದೆ. ಬಿಕ್ಕಟ್ಟಿನ ಬೆದರಿಕೆಯನ್ನು ಎದುರಿಸಲು, ಹೆಚ್ಚಿನ ಮಕ್ಕಳನ್ನು ಹೊಂದಲು ಚೀನಾ ಜನರನ್ನು ಒತ್ತಾಯಿಸುತ್ತಿದೆ.

ಚೀನಾ ದೇಶ ಕುಟುಂಬಕ್ಕೆ ಒಂದೇ ಮಗು ಅನ್ನೋ ತನ್ನ ನೀತಿಯನ್ನು  2016ರಲ್ಲಿ ಅಧಿಕೃತವಾಗಿ ಕೊನೆಗೊಳಿಸಿತು. ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು 1980ರಲ್ಲಿ ಈ ನೀತಿಯನ್ನು ಪ್ರಾರಂಭಿಸಲಾಗಿತ್ತು. ಈ ಮಧ್ಯೆ, ನೆರೆಯ ದೇಶವು ಮೇ 2021ರಲ್ಲಿ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತು. ಚೀನಾ ಸರ್ಕಾರವು ಈಗ ಹೆಚ್ಚಿನ ಮಕ್ಕಳನ್ನು ಹೊಂದಲು ತನ್ನ ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ. ಇತ್ತೀಚೆಗೆ, ಚೀನಾದ ಕಂಪನಿಯೊಂದು ಮೂರನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳಿಗೆ (Employees) ಪ್ರೋತ್ಸಾಹವನ್ನು ನೀಡುತ್ತಿದೆ. ಇದಕ್ಕೆ ವಿಶೇಷ ಆಫರ್, ಬಹುಮಾನಗಳನ್ನೂ ಘೋಷಿಸಿದೆ.

Follow Us:
Download App:
  • android
  • ios