ತಾಯಿಯಾಗ್ತಿದ್ದಾರೆ ಹದಿ ವಯಸ್ಸಿನ ಹೆಣ್ಮಕ್ಕಳು: Sex Education ಅನಿವಾರ್ಯ

ಭಾರತದಲ್ಲಿ ಮಕ್ಕಳಿಗೆ ಸೆಕ್ಸ್ ಶಿಕ್ಷಣದ ಕೊರತೆಯಿದೆ. ಬೇರೆ ಬೇರೆ ಕಾರಣಕ್ಕೆ ಪಾಲಕರು ಚಿಕ್ಕ ಮಕ್ಕಳನ್ನು ಮದುವೆ ಮಾಡ್ತಿದ್ದಾರೆ. ಇದ್ರಿಂದಾಗಿ ಹುಡುಗಿಯರು ಹದಿಹರೆಯದಲ್ಲೇ ಗರ್ಭ ಧರಿಸುವ ಜೊತೆಗೆ ಲೈಂಗಿಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
 

Girls Getting Pregnant At Young Age needs sex education avoid risk

ಭಾರತದಲ್ಲಿ ಸೆಕ್ಸ್ ಬಗ್ಗೆ ಈಗ್ಲೂ ಮಡಿವಂತಿಕೆಯಿದೆ. ಪಾಲಕರಾದವರು ಮಕ್ಕಳಿಗೆ ಅದ್ರ ಬಗ್ಗೆ ಅರಿವು ಮೂಡಿಸ್ತಿಲ್ಲ. ಮಕ್ಕಳಿಂದ ಅನೇಕ ವಿಷ್ಯವನ್ನು ಮುಚ್ಚಿಡುತ್ತಾರೆ. ಇದು ಮಕ್ಕಳ ಕುತೂಹಲವನ್ನು ಹೆಚ್ಚಿಸುತ್ತದೆ. ಸದ್ಯ ಭಾರತದಲ್ಲಿ ಹದಿಹರೆಯದವರ ಗರ್ಭಧಾರಣೆ ಅತ್ಯಂತ ಕಳವಳಕಾರಿ ವಿಷಯವಾಗಿದೆ. ಹದಿಹರೆಯದವರ ಲೈಂಗಿಕ ಆರೋಗ್ಯದ ಬಗ್ಗೆ ಚರ್ಚೆಯಾಗಬೇಕು, ಹದಿಹರೆಯದವರಿಗೆ ಸೆಕ್ಸ್ ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ  ತಿಳಿಸಬೇಕೆಂದು  ಸರ್ಕಾರ ಕರೆ ನೀಡಿದೆ. ಕುಟುಂಬ ಯೋಜನೆ ವಿಷನ್ ಡಾಕ್ಯುಮೆಂಟ್ 2030 ರ ಪ್ರಕಾರ, ಭಾರತದಲ್ಲಿ ಹದಿಹರೆಯದ ಹುಡುಗಿಯರು ಬೇಗನೆ ತಾಯಿಯಾಗ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವವರ ಸಂಖ್ಯೆ ಹೆಚ್ಚಿದೆ. 

ಹದಿಹರೆಯದವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯ : ಸರಿಯಾದ ಮಾರ್ಗದರ್ಶನದ ಮೂಲಕ ಹದಿಹರೆಯದವರಿಗೆ ಅನಗತ್ಯ ಗರ್ಭಧಾರಣೆ (Pregnancy), ಅಸುರಕ್ಷಿತ ಲೈಂಗಿಕತೆ, ರಕ್ತಹೀನತೆ, ಅಪೌಷ್ಟಿಕತೆ, ಮದ್ಯಪಾನ, ಮಾದಕ ದ್ರವ್ಯ ಸೇವನೆ, ತಂಬಾಕು, ಬೊಜ್ಜು, ಹಿಂಸೆ ಮತ್ತು ಮಾನಸಿಕ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಬೇಕೆಂದು ಸರ್ಕಾರ ಹೇಳಿದೆ. ಮಕ್ಕಳನ್ನು ಪಡೆಯಲು ಹೆಣ್ಣುಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಮತ್ತು ಜೈವಿಕವಾಗಿ ಬೆಳವಣಿಗೆ ಹೊಂದುವುದು ಅಗತ್ಯ. ಬಹುಶಃ ಇದೇ ಕಾರಣಕ್ಕೆ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಲಾಗಿದೆ. ಗರ್ಭಧಾರಣೆಗೆ  ಸರಿಯಾದ ಸಮಯ 20 ರಿಂದ 35 ವರ್ಷಗಳು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗರ್ಭನಿರೋಧಕ (Contraception) ದ ಅಗತ್ಯತೆ : ಹದಿಹರೆಯದ ಹುಡುಗಿಯರು ಮತ್ತು ವಿವಾಹಿತರಿಗೆ ಹೆಚ್ಚಿನ ಗರ್ಭನಿರೋಧಕ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕುಟುಂಬ ಯೋಜನಾ ಕಾರ್ಯಕ್ರಮದಲ್ಲಿ ಪುರುಷರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕೆಂದು ವರದಿಯಲ್ಲಿ ಹೇಳಲಾಗಿದೆ. 

ಕಾಂಡೋಮ್ (Condom) ಗೆ ಸೀಮಿತವಾದ ಪುರುಷರು : ವರದಿಯ ಪ್ರಕಾರ, ಆಧುನಿಕ ಗರ್ಭನಿರೋಧಕದ ಪ್ರಚಲಿತ ದರವು ಬಿಹಾರದಲ್ಲಿ ಶೇಕಡಾ 35ರಷ್ಟು ಮತ್ತು ಯುಪಿಯ ವಲಸಿಗ ಮಹಿಳೆಯರಲ್ಲಿ ಶೇಕಡಾ 24ರಷ್ಟಿದೆ. ಪುರುಷರು ಹೆಚ್ಚಾಗಿ ಕಾಂಡೋಮ್‌ಗಳಿಗೆ ಸೀಮಿತರಾಗಿದ್ದಾರೆ. ಖಾಸಗಿ ವಲಯವು ಶೇಕಡಾ 45 ರಷ್ಟು ಗರ್ಭನಿರೋಧಕ ಮಾತ್ರೆ ಮತ್ತು ಶೇಕಡಾ 40 ಕಾಂಡೋಮ್‌ ಮಾರುಕಟ್ಟೆಯನ್ನು ಹೊಂದಿದೆ. ಆದ್ರೆ  ಭಾರತದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಸೇವೆಯನ್ನು ಹೆಚ್ಚಾಗಿ ಸರ್ಕಾರ ಒದಗಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಮಹಿಳೆಯರು ಒಳಉಡುಪು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು ?

ಹೆಚ್ಚಾಗಿದೆ ಹದಿಹರೆಯದವರ ಮದುವೆ : ವರದಿಯ ಪ್ರಕಾರ, ದೇಶದ ಹಲವು ಜಿಲ್ಲೆಗಳಲ್ಲಿ ಶೇಕಡಾ 20ಕ್ಕಿಂತ ಹೆಚ್ಚು ಹುಡುಗಿಯರು 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗುತ್ತಿದ್ದಾರೆ. ಇವುಗಳಲ್ಲಿ ಬಿಹಾರದ 17 ಜಿಲ್ಲೆ, ಪಶ್ಚಿಮ ಬಂಗಾಳದ 8 ಜಿಲ್ಲೆ, ಜಾರ್ಖಂಡದ 7 ಜಿಲ್ಲೆ, ಅಸ್ಸಾಂ ನ 4 ಜಿಲ್ಲೆ ಮತ್ತು ಯುಪಿ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ತಲಾ ಎರಡು ಜಿಲ್ಲೆಗಳು ಸೇರಿವೆ. ಅದೇ ಜಿಲ್ಲೆಗಳಲ್ಲಿ ಆಧುನಿಕ ಗರ್ಭನಿರೋಧಕಗಳ ಬಳಕೆ ಕಡಿಮೆಯಾಗಿದೆ. 
118 ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಹದಿಹರೆಯದಲ್ಲೇ ಗರ್ಭ ಧರಿಸುವವರು ಹೆಚ್ಚಾಗಿದ್ದಾರೆ. ಗರ್ಭಧರಿಸುವ ಹದಿಹರೆಯದವರ ಸಂಖ್ಯೆ ಶೇಕಡಾ 10 ಕ್ಕಿಂತ ಹೆಚ್ಚಿದೆ. ಬಿಹಾರದ 19 ಜಿಲ್ಲೆ, ಪಶ್ಚಿಮ ಬಂಗಾಳದ  15 ಜಿಲ್ಲೆ, ಅಸ್ಸಾಂನ 13 ಜಿಲ್ಲೆ, ಮಹಾರಾಷ್ಟ್ರದ  13 ಜಿಲ್ಲೆ, ಜಾರ್ಖಂಡ್ನ 10 ಜಿಲ್ಲೆ, ಆಂಧ್ರಪ್ರದೇಶದ 7 ಜಿಲ್ಲೆ ಮತ್ತು ತ್ರಿಪುರಾದ 4 ಜಿಲ್ಲೆ ಇದರಲ್ಲಿ ಸೇರಿದೆ.

ಉದ್ದ ಕೂದಲು ಬೇಕೆಂದು ಹೇರ್‌ ಎಕ್ಸ್‌ಟೆನ್ಶನ್‌ ಮಾಡ್ಕೊಳ್ಳೋ ಮುನ್ನ ಇವಿಷ್ಟು ಗೊತ್ತಿರ್ಲಿ

ಮಕ್ಕಳ ಕುಂಠಿತ ಬೆಳವಣಿಗೆ :  ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (ಐಎಫ್‌ಪಿಆರ್‌ಐ) ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ವಯಸ್ಕ ತಾಯಂದಿರಿಗೆ ಜನಿಸಿದ ಮಕ್ಕಳಿಗಿಂತ ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ.  ಪ್ರಪಂಚದಲ್ಲಿ ಅತಿ ಹೆಚ್ಚು ಕುಂಠಿತ ಮಕ್ಕಳನ್ನು ಹೊಂದಿರುವ ದೇಶ ಭಾರತ. ಹದಿಹರೆಯದ ಗರ್ಭಧಾರಣೆಯ ದೊಡ್ಡ ಹೊರೆ ಹೊಂದಿರುವ 10 ದೇಶಗಳಲ್ಲಿ ಭಾರತವೂ ಒಂದಾಗಿದೆ. ವಯಸ್ಕ ತಾಯಂದಿರಿಗೆ ಹೋಲಿಸಿದರೆ ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ಕಡಿಮೆ ತೂಕದ ಸಮಸ್ಯೆ ಶೇಕಡಾ 10ರಷ್ಟು ಹೆಚ್ಚಾಗಿದೆ.  ಕುಂಠಿತ ಬೆಳವಣಿಗೆ ಮಕ್ಕಳಿಗೆ ಹಾನಿಯುಂಟು ಮಾಡುತ್ತದೆ.      

Latest Videos
Follow Us:
Download App:
  • android
  • ios