Asianet Suvarna News Asianet Suvarna News

ಮಕ್ಕಳ 'ಬ್ಯಾಕ್ ಟು ಸ್ಕೂಲ್ ಆತಂಕ'ವನ್ನು ಪೋಷಕರು ಕಡಿಮೆ ಮಾಡುವುದು ಹೇಗೆ ?

ಅದೆಷ್ಟೋ ಮಕ್ಕಳು ಕೊರೋನಾ (Corona) ಕಾಲದ ನಂತರ ಶಾಲೆಯನ್ನೇ ನೋಡಿಲ್ಲ. ಅದೆಷ್ಟೋ ಮಕ್ಕಳ (Children) ಪಾಲಿಗೆ ಆನ್‌ಲೈನ್ ಕ್ಲಾಸ್ (Online Class) ಎಂಬುದೆ ತರಗತಿಯಾಗಿಬಿಟ್ಟಿದೆ. ಅದರಾಚೆಗಿನ ಭೌತಿಕ ತರಗತಿಗಳ ಬಗ್ಗೆ ಏನೂ ಗೊತ್ತಿಲ್ಲ. ಇನ್ನು ಕೆಲ ಮಕ್ಕಳು ಭೌತಿಕ ತರಗತಿಗಳಿಗಿಂತ ಆನ್‌ಲೈನ್‌ ಕ್ಲಾಸೇ ಮೇಲೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಶಾಲೆಗೆ ಹಿಂತಿರುಗುವುದು ಅನೇಕ ಮಕ್ಕಳ ಪಾಲಿಗೆ ಖುಷಿಯ ವಿಚಾರವಲ್ಲ. ಶಾಲೆ ಆರಂಭವಾದ ನಂತರ ಮಕ್ಕಳಲ್ಲಿ ಸಾಮಾಜಿಕ ಆತಂಕ (Social Anxiety0 ಕಾಣಿಸಿಕೊಳ್ಳುತ್ತಿದೆ. ಇದನ್ನು ಕಡಿಮೆ ಮಾಡಲು ಪೋಷಕರೇನು (Parents) ಮಾಡ್ಬಹುದು 

Is Your Child Having A Hard Time Post School Reopening, Expert Tips On What Parents Can Do Vin
Author
Bengaluru, First Published Apr 17, 2022, 3:22 PM IST

ಕೋವಿಡ್‌ ಕಾಲಘಟ್ಟದಲ್ಲಿ ಎಲ್ಲವೂ ಬದಲಾಯಿತು. ಕಣ್ಣಿಗೆ ಕಾಣದ ವೈರಸ್‌ನಿಂದ ಕರ್ಫ್ಯೂ, ಲಾಕ್‌ಡೌನ್‌ ಮೊದಲಾದವುಗಳಿಂದ ಜನರ ಜೀವನಶೈಲಿ ಸಂಪೂರ್ಣವಾಗಿ ಬದಲಾಯಿತು. ನಿರಂತರವಾಗಿ ಕಾಣಿಸಿಕೊಂಡ ಕೊರೋನಾ ಅಲೆಗಳು ಜನರನ್ನು ಕಂಗೆಡಿಸಿದವು. ಜನರು ಮನೆ, ರೂಮುಗಳಿಗಷ್ಟೇ ಸೀಮಿತವಾಗಿ ಹೋದರು. ಆನ್‌ಲೈನ್ ಕ್ಲಾಸ್, ವರ್ಕ್‌ ಫ್ರಂ ಹೋಮ್‌ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಗಳು ಕಂಡು ಬಂದವು. ಸದ್ಯ ನಾಲ್ಕನೇ ಅಲೆಯ ಭೀತಿಯಿದ್ದರೂ ಎಲ್ಲಾ ಬ್ಯಾಕ್‌ ಟು ಮೊದಲಿನ ದಿನಗಳಿಗೆ ಮರಳುತ್ತಿವೆ. ಮಾಲ್, ಥಿಯೇಟರ್‌ಗಳು ಓಪನ್‌ ಆಗಿವೆ. ಸಂಸ್ಥೆಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್ ಅವಕಾಶ ನಿಲ್ಲಿಸಿ, ವರ್ಕ್ ಫ್ರಂ ಆಫೀಸ್‌ಗೆ ಕರೆಯುತ್ತಿವೆ. ಈ ಎಲ್ಲಾ ಬದಲಾವಣೆಗಳ ಜತೆಗೆ ಸತತ ಎರಡು ವರ್ಷಗಳ ಕಾಲ ಆನ್‌ಲೈನ್‌ ಕ್ಲಾಸ್‌ಗೆ ಒಗ್ಗಿ ಹೋಗಿದ್ದ ಮಕ್ಕಳು ಶಾಲೆಗೆ ಮರಳಬೇಕಾಗಿದೆ.

ಅದೆಷ್ಟೋ ಮಕ್ಕಳ ಪಾಲಿಗೆ ಆನ್‌ಲೈನ್ ಕ್ಲಾಸ್ ಎಂಬುದೆ ತರಗತಿಯಾಗಿಬಿಟ್ಟಿದೆ. ಶಾಲೆಗೆ ಹಿಂತಿರುಗುವುದು ಅನೇಕ ಮಕ್ಕಳ ಪಾಲಿಗೆ ಖುಷಿಯ ವಿಚಾರವಲ್ಲ. ಪೋಷಕರಿಂದ ದೂರವಿರಬೇಕು ಎಂಬ ನೋವಿನಿಂದ ಹಿಡಿದು, ಗೆಳೆಯರು ಮತ್ತು ಶಿಕ್ಷಕರೊಂದಿಗೆ ಬೆರೆಯುವುದು ಹೇಗೆಂಬ ಪ್ರಶ್ನೆಗಳು ಎದುರಾಗುತ್ತಿದೆ. ದೈಹಿಕ ತರಗತಿಗಳು ಪುನರಾರಂಭಗೊಳ್ಳುತ್ತಿದ್ದಂತೆ ಮಕ್ಕಳು ಸಾಮಾಜಿಕ ಆತಂಕವನ್ನು ಎದುರಿಸುತ್ತಿದ್ದಾರೆ.

Parenting Tips : ಫೋನ್‌ನಿಂದ ಮಕ್ಕಳನ್ನು ದೂರವಿಡಲು ಇಲ್ಲಿದೆ ಉಪಾಯ

ಶಾಲೆ ಪುನರಾರಂಭಗೊಳ್ಳುತ್ತಿದ್ದಂತೆ ಮಕ್ಕಳಲ್ಲಿ ಸಾಮಾಜಿಕ ಆತಂಕ
ಸುಮಾರು ಎರಡು ವರ್ಷಗಳ ದೂರದ ಕಲಿಕೆಯ ನಂತರ ತಮ್ಮ ಶಾಲೆಗಳು ಪುನರಾರಂಭವಾಗುತ್ತಿದ್ದಂತೆ ದೇಶಾದ್ಯಂತ ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಆನ್‌ಲೈನ್‌ ಕ್ಲಾಸ್‌ಗೆ ಒಗ್ಗಿಹೋದ ನಂತರ ಮಕ್ಕಳಿಗೆ ಶಾಲೆಗೆ ಹೋಗಿ ಮರು ಹೊಂದಿಕೊಳ್ಳುವುದು ಸುಗಮವೆನಿಸುತ್ತಿಲ್ಲ. ಏಕೆಂದರೆ ಅವರಲ್ಲಿ ಹೆಚ್ಚಿನವರು, ವಿಶೇಷವಾಗಿ ಚಿಕ್ಕ ಮಕ್ಕಳು ಸಾಮಾಜಿಕ ಆತಂಕವನ್ನು ಬೆಳೆಸಿಕೊಂಡಿದ್ದಾರೆ. ಹೆತ್ತವರೊಂದಿಗೆ ಒಗ್ಗಿಹೋಗಿರುವ ಮಕ್ಕಳು, ಶಿಕ್ಷಕರು ಮತ್ತು ಗೆಳೆಯರೊಂದಿಗೆ ಸಂವಹನ ನಡೆಸಲು ಹಿಂಜರಿಯುತ್ತಾರೆ. ಅನೇಕ ಮಕ್ಕಳು ಹೆಚ್ಚು ಜನರನ್ನು ಎದುರಿಸಲು ಆರಾಮದಾಯಕವಲ್ಲ ಎಂಬ ಭೀತಿಯಲ್ಲಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ.

ಮಕ್ಕಳು ಆತಂಕದ ಸಮಸ್ಯೆಗಳನ್ನು ಎದುರಿಸಬಹುದು. ಇತರ ಜನರಿಂದ ದೂರವಿರಲು ಯತ್ನಿಸಬಹುದು. ಸಾಂಕ್ರಾಮಿಕ ರೋಗದ ಮೊದಲು ಕೆಲವು ಸಾಮಾಜಿಕ ಆತಂಕವನ್ನು ಹೊಂದಿದ್ದ ಮಕ್ಕಳಿಗೆ ತೊಂದರೆ ಮಟ್ಟವು ಹೆಚ್ಚಾಗುತ್ತದೆ ಎಂದು ನೋಯ್ಡಾದ ಮದರ್‌ಹುಡ್ ಆಸ್ಪತ್ರೆಯ ಹಿರಿಯ ಸಲಹೆಗಾರ ಶಿಶುವೈದ್ಯ ಮತ್ತು ನಿಯೋನಾಟಾಲಜಿಸ್ಟ್ ಡಾ.ಅಮಿತ್ ಗುಪ್ತಾ ಹೇಳುತ್ತಾರೆ. ಪ್ಲೇಸ್ಕೂಲ್‌ಗಳೊಂದಿಗೆ ತಮ್ಮ ಕಲಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಕಾಶವನ್ನು ಪಡೆಯದ ಮತ್ತು ಔಪಚಾರಿಕ ಶಾಲೆಗಳಿಗೆ ನೇರವಾಗಿ ಕಳುಹಿಸಲ್ಪಟ್ಟ ಮಕ್ಕಳಿಗೆ ವಿಷಯಗಳು ಇನ್ನೂ ಕಠಿಣವಾಗಿವೆ. ಇದಲ್ಲದೆ, ಪೋಷಕರು ಸಹ ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ, ಇದು ಅಜಾಗರೂಕತೆಯಿಂದ ಚಿಕ್ಕ ಮಕ್ಕಳಿಗೆ ಅವರ ಆತಂಕವನ್ನು ವರ್ಗಾಯಿಸುತ್ತದೆ ಎಂದು ತಿಳಿಸಲಾಗಿದೆ.

Children Health: ಹಗಲಿನಲ್ಲಿ ಮಕ್ಕಳಿಗೆ ನಿದ್ರೆ ಮಾಡೋಕೆ ಬಿಡಿ

ಪೋಷಕರು ಚಿಕ್ಕ ಮಕ್ಕಳಿಂದ ತಮ್ಮ ನಿರೀಕ್ಷೆಗಳನ್ನು ಕಡಿಮೆಗೊಳಿಸಬೇಕು ಮತ್ತು ಇದು ಅವರಿಗೆ ಕಷ್ಟಕರವಾಗಿರುತ್ತದೆ ಎಂದು ಅರಿತುಕೊಳ್ಳಬೇಕು ಎಂದು ಡಾ.ಗುಪ್ತಾ ಹೇಳುತ್ತಾರೆ. ಹೆಚ್ಚುವರಿಯಾಗಿ, ಇತರ ಕೌಶಲ್ಯಗಳಂತೆ ಸಾಮಾಜಿಕ ಕೌಶಲ್ಯಗಳು ನಾವು ಅವುಗಳನ್ನು ಅಭ್ಯಾಸ ಮಾಡದಿದ್ದರೆ ಮಕ್ಕಳಿಗೆ ಸಾಮಾಜಿಕವಾಗಿ ಬೆರೆಯಲು ಕಷ್ಟವಾಗುತ್ತದೆ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.

ಮಕ್ಕಳ 'ಬ್ಯಾಕ್-ಟು-ಸ್ಕೂಲ್ ಆತಂಕ' ಸರಾಗಗೊಳಿಸುವ ಸಲಹೆಗಳು
ಕೋವಿಡ್‌ ಕಾಲಾನಂತರ ಬಹಳ ಸಮಯಗಳ ಬಳಿಕ ಮಕ್ಕಳು ಮರಳಿ ಶಾಲೆಗೆ ತೆರಳುತ್ತಿದ್ದಾರೆ. ಹೀಗಾಗಿ ಸಾಮಾನ್ಯವಾಗಿ ಆತಂಕವಾಗುವುದು ಸಹಜ. ನಿಮ್ಮ ಮಗುವಿಗೆ ಸಾಮಾಜಿಕ ಜೀವನಕ್ಕೆ ಮರುಹೊಂದಿಸಲು ಸಹಾಯ ಮಾಡುವ ಕೆಲವು ಹಂತಗಳು ಇಲ್ಲಿವೆ.

* ಮಗುವಿಗೆ ಹೆಚ್ಚು ಮಾತನಾಡಲು, ಮನೆಮಂದಿಯೊಂದಿಗೆ ಹೆಚ್ಚು ಬೆರೆಯಲು ಅವಕಾಶ ಮಾಡಿ ಕೊಡಿ. ನಿಮ್ಮ ಮಗುವಿನ ಆರಾಮ ಮಟ್ಟವನ್ನು ಕ್ರಮೇಣ ಹೆಚ್ಚಿಸಲು ಪ್ರಯತ್ನಿಸಿ

* ಪ್ರತ್ಯೇಕತೆಯ ಸಣ್ಣ ಅವಧಿಗಳನ್ನು ಅಭ್ಯಾಸ ಮಾಡುವ ಮೂಲಕ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿ, ವಿಶೇಷವಾಗಿ ಪೋಷಕರಿಂದ ಬೇರ್ಪಡಿಸಲು ತೊಂದರೆ ಹೊಂದಿರುವ ಮಕ್ಕಳನ್ನು ಹೆಚ್ಚು ಒಂಟಿಯಾಗಿ ಬಿಟ್ಟು ಅಭ್ಯಾಸ ಮಾಡಿ.

* ಸಾಮಾಜಿಕ ಆತಂಕವನ್ನು ಅನುಭವಿಸುವ ಬಗ್ಗೆ ನಿಮ್ಮ ಮಗುವಿನೊಂದಿಗೆ ಹೆಚ್ಚು ಸಂವಾದ ಮಾಡಿ. ಅಂತಹ ಭಾವನೆಗಳು ಸಹಜ ಎಂದು ಅವರಿಗೆ ತಿಳಿಸಿ

* ನಿಮ್ಮ ಮಗು ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ಯಾವಾಗಲೂ ಹೊಗಳಲು ಮರೆಯದಿರಿ ಇದರಿಂದ ನೀವು ಎಷ್ಟು ಹೆಮ್ಮೆಪಡುತ್ತೀರಿ ಎಂದು ಅವರಿಗೆ ತಿಳಿಯುತ್ತದೆ.

* ಸಮಯ, ತಾಳ್ಮೆ ಮತ್ತು ಬೆಂಬಲದೊಂದಿಗೆ ಹೆಚ್ಚಿನ ಮಕ್ಕಳು ಸಾಂಕ್ರಾಮಿಕ ನಂತರದ ಸಾಮಾನ್ಯ ಸ್ಥಿತಿಗೆ ಯಶಸ್ವಿಯಾಗಿ ನ್ಯಾವಿಗೇಟ್ ಮಾಡುತ್ತಾರೆ. ಆದರೆ ಪೋಷಕರು ತಮ್ಮ ಮಕ್ಕಳಿಗೆ ಯಾವಾಗ ಸಹಾಯ ಪಡೆಯಬೇಕೆಂದು ತಿಳಿಯುವುದು ಸಹ ಮುಖ್ಯವಾಗಿದೆ.

Follow Us:
Download App:
  • android
  • ios