ಮುಖೇಶ್ ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಎಲ್ಲರಿಗೂ ತಿಳಿದಿದೆ. ಆದರೆ, ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರ ಸರಳತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅತ್ತೆ-ಸೊಸೆಯ ಜೀವನಶೈಲಿಯ ವ್ಯತ್ಯಾಸದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಭಾರತದ ಅತ್ಯಂತ ಶ್ರೀಮಂತ ಕುಟುಂಬ ಎನಿಸಿರುವ ಮುಖೇಶ್ ಅಂಬಾನಿ ಕುಟುಂಬದ ಜೀವನಶೈಲಿಯ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲವಿದೆ. ಅವರು ತಿನ್ನುವ ಆಹಾರ ಕುಡಿಯುವ ನೀರು ಧರಿಸುವ ಬಟ್ಟೆ ಹೀಗೆ ಪ್ರತಿಯೊಂದು ವಿಚಾರವೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅದಕ್ಕೆ ಕಾರಣ ಅವುಗಳೆಲ್ಲವೂ ಜನಸಾಮಾನ್ಯರ ಕೈಗೆಟುಕ ದುಬಾರಿ ವಸ್ತುಗಳಾಗಿರುವುದು. ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಒಂದೊಂದು ಸಂದರ್ಭದಲ್ಲಿ ಒಂದೊಂದು ವಿಭಿನ್ನ ಐಷಾರಾಮಿ ಆಭರಣಗಳು, ನೆಕ್ಲೇಸ್, ಸೀರೆಯನ್ನು ಧರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತಾರೆ. ಅವರು ಧರಿಸುವ ಪ್ರತಿ ಆಭರಣ ಬಟ್ಟೆಗಳ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ನೀತಾ ಅಂಬಾನಿ ಕುಡಿಯುವ ನೀರಿನಿಂದ ಹಿಡಿದು ತಿನ್ನುವ ಆಹಾರದವರೆಗೆ ಎಲ್ಲವೂ ಬಹಳ ದುಬಾರಿ ಬ್ರಾಂಡೆಂಡ್ ಎಂಬ ಮಾತಿದೆ. ಅವರು ಕುಡಿಯುವ ನೀರಿನ ಬೆಲೆ ಒಂದು ಬಾಟಲ್‌ಗೆ 50 ಲಕ್ಷ ರೂಪಾಯಿಗಳು ಎಂದು ವರದಿಯಾಗಿದ್ದವು.

ಅದರೆ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್‌ ಅತ್ತೆಗಿಂತ ತೀರಾ ವಿಭಿನ್ನ. ಸದಾ ನಗುಮುಖದಿಂದಲೇ ಎಲ್ಲರ ಸೆಳೆಯುವ ಈ ಬುದ್ಧಿವಂತೆ ಚೆಲುವೆ, ಶ್ರೀಮಂತ ಮನೆಯ ಸೊಸೆಯಾದರು ಸರಳತೆಯ ಕಾರಣಕ್ಕೆ ಸಾಕಷ್ಟು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅತ್ತೆ ಐಷಾರಾಮಿ ಲೈಫ್‌ಸ್ಟೈಲ್‌ಗೆ ಸುದ್ದಿಯಾದರೆ ಸೊಸೆ ಸರಳತೆಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಹಾಗೆಯೇ ಈಗ ರಾಧಿಕಾ ಮರ್ಚೆಂಟ್ ಅವರು ಜನಸಾಮಾನ್ಯರಂತೆ ಸಿಂಪಲ್ ಬಾಟಲ್‌ವೊಂದರಲ್ಲಿ ನೀರು ಕುಡಿಯುತ್ತಿರುವ ವಿಚಾರ ಈಗ ಸಾಕಷ್ಟು ಸುದ್ದಿಯಾಗಿದೆ.

ಅಂದರೆ ನೀತಾ ಅಂಬಾನಿ ಕುಡಿಯೋದು 500 ಡಾಲರ್ ಪರ್ ಬಾಟಲ್ ನೀರು. ನೀತಾ ಅವರು ದುಬಾರಿ ನೀರು ಕುಡೀತಾರೋ ಅಥವಾ ಕುಡಿವಯುವ ಬಾಟಲ್ ದುಬಾರಿಯಾಗಿರುತ್ತೋ ಗೊತ್ತಿಲ್ಲ. ಆದರೆ, ಸೊಸೆ ಮಾತ್ರ ಸಾಮಾನ್ಯ ಮಧ್ಯಮ ವರ್ಗದ ಜನರು ಕುಡಿಯುವಂಥ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುತ್ತಿರುವ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಂಬಾನಿ ಎರಡನೇ ಸೊಸೆಯ ಸರಳತೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ನೆರವಾದ ಬಾಲಕನಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ 2026

ಸೋಶಿಯಲ್ ಮೀಡಿಯಾ ಖಾತೆ ಥ್ರೆಡ್‌ನಲ್ಲಿ wwe_raw_smackdown_0 ಎಂಬ ಖಾತೆಯಿಂದ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಮುಖೇಶ್ ಮತ್ತು ನೀತಾ ಅಂಬಾನಿಯವರ ಸೊಸೆ ರಾಧಿಕಾ ಮರ್ಚೆಂಟ್ ತಮ್ಮ ಸರಳ ಜೀವನಶೈಲಿಗಾಗಿ ಕೊಂಡಾಡಲಾಗಿದೆ. ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ನಾನು ನಲ್ಲಿ ನೀರು ಕುಡಿಯುತ್ತೇನೆ ಹಾಗಿದ್ರೆ ನಾನು ಆಕೆಗಿಂತ ತುಂಬಾ ಸರಳ ಅಂತ ಅನಿಸೋಲ್ವೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಒಬ್ಬರು ಈ ಪೋಸ್ಟ್‌ ತಪ್ಪು ಮಾಹಿತಿ ನೀಡುತ್ತಿದೆ. ಇವರು ನೀರು ಕುಡಿಯುವ ಬಾಟಲ್‌ ಬಗ್ಗೆ ಹೇಳಲು ಹೋಗಿ ಅಷ್ಟು ಬೆಲೆಯ ನೀರು ಕುಡಿಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಿಜವಾಗಿ ಅವರು ಕುಡಿಯುವ ನೀರಿನ ಬಾಟಲ್‌ನ ದರ ಇದಾಗಿದೆ. ರಾಧಿಕಾ ಮರ್ಚೆಂಟ್ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿದರೆ ನೀತಾ ಅಂಬಾನಿ ಲೋಹದ ಬಾಟಲ್‌ನಿಂದ ನೀರು ಕುಡಿದಿದ್ದಾರೆ. ಇದು ದುಬಾರಿ ಆಗಿರಬಹುದು. ಇಲ್ಲಿ ಬಾಟಲ್ ದುಬಾರಿಯಾಗಿರಬಹುದು ನೀರು ಅಲ್ಲ ಎಂದು ಒಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತರ ಆರೈಕೆಗಾಗಿ ಜೀವಮಾನದ ಉಳಿಕೆಯನ್ನೆಲ್ಲಾ ಎಮ್ಸ್‌ಗೆ ದಾನ ನೀಡಿದ ಶತಾಯುಷಿ ಸ್ತ್ರೀರೋಗ ತಜ್ಞೆ