Asianet Suvarna News Asianet Suvarna News

Children Health: ಹಗಲಿನಲ್ಲಿ ಮಕ್ಕಳಿಗೆ ನಿದ್ರೆ ಮಾಡೋಕೆ ಬಿಡಿ

Tips for children mental growth: ಹಗಲಿನಲ್ಲಿ ನಿದ್ರೆ ಮಾಡೋರನ್ನ ನಾವು ಸೋಮಾರಿ ಅಂತೀವಿ. ಆದ್ರೆ ಮಕ್ಕಳಿಗೆ ಹಗಲಿನ ನಿದ್ರೆ ಬೇಕು. ಮಾನಸಿಕ ಆರೋಗ್ಯ ಇನ್ನಷ್ಟು ಸುಧಾರಿಸ್ಬೇಕೆಂದ್ರೆ ಡೇ ಟೈಂನಲ್ಲಿ ಮಕ್ಕಳನ್ನು ಸ್ವಲ್ಪ ಹೊತ್ತು ಮಲಗಿಸಿ ಅಂತಾರೆ ಸಂಶೋಧಕರು. 
 

Daytime Naps Are Beneficial For Children Study
Author
Bangalore, First Published Apr 13, 2022, 5:10 PM IST

ಮಕ್ಕಳಿಂದ (Children) ಹಿಡಿದು ವೃದ್ಧರವರೆಗೆ ಎಲ್ಲರೂ ಈಗ ಬ್ಯುಸಿ (Busy)ಯಿರ್ತಾರೆ. ಶಾಲೆ (School), ಟ್ಯೂಷನ್ (Tuition) ಸೇರಿದಂತೆ ಬೇರೆ ಬೇರೆ ಕ್ಲಾಸ್ (Class )ಗಳಿಗೆ ಹೋಗುವುದ್ರಿಂದ ಹಗಲಿನಲ್ಲಿ ಮಕ್ಕಳಿಗೆ ಸಮಯ ಸಿಗುವುದಿಲ್ಲ. ಒಂದಾದ್ಮೇಲೆ ಒಂದು ಕ್ಲಾಸ್ ಗೆ ಹೋಗುವ ಮಕ್ಕಳಿಗೆ ರಾತ್ರಿ ಮಾತ್ರ ವಿಶ್ರಾಂತಿ ಸಿಗುತ್ತದೆ. ಮಕ್ಕಳ ವಯಸ್ಸು ಮೂರಾಗ್ತಿದ್ದಂತೆ ಅವರನ್ನು ಕ್ಲಾಸ್ ಗಳಿಗೆ ದಬ್ಬುವ ಕೆಲಸ ಪಾಲಕರಿಂದಾಗುತ್ತದೆ. ಇದೇ ಕಾರಣಕ್ಕೆ ಮಕ್ಕಳು ಹಗಲಿನಲ್ಲಿ ಮಲಗುವುದು ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳು ಮಧ್ಯಾಹ್ನ ಊಟದ ನಂತ್ರ ಮಲಗ್ತಿದ್ದರು. ಚಿಕ್ಕ ಮಕ್ಕಳನ್ನು ಹಗಲಿನಲ್ಲಿ ಮಲಗಿಸುವುದು ಬಹಳ ಒಳ್ಳೆಯದು. ಹಾಗಂತ ನಾವು ಹೇಳ್ತಿಲ್ಲ. ಈ ಹಿಂದೆ ನಡೆದ ಕೆಲ ಅಧ್ಯಯನಗಳು ಹೇಳಿದ್ದವು. ಈಗ ನಡೆದ ಹೊಸ ಅಧ್ಯಯನವೂ ಅದನ್ನೇ ಹೇಳ್ತಿದೆ. ನಿದ್ರೆ ಬಗ್ಗೆ ನಡೆದ ಅಧ್ಯಯನವೊಂದರಲ್ಲಿ ಹಗಲಿನಲ್ಲಿ ಮಲಗುವುದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. 

ಹೊಸ ಅಧ್ಯಯನದ ಪ್ರಕಾರ ಪ್ರಿ-ಸ್ಕೂಲ್ ಅಂದರೆ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಹಗಲಿನಲ್ಲಿ ನಿದ್ರೆ ಮಾಡಿದರೆ, ಅದು ಅವರ ಮಾನಸಿಕ ಬೆಳವಣಿಗೆಗೆ ಪ್ರಯೋಜನಕಾರಿ. ನಿದ್ರೆ ಹಾಗೂ ಸ್ಮರಣ ಶಕ್ತಿಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಬಹಳ ಕಡಿಮೆ ಸಂಶೋಧನೆಗಳು ನಡೆದಿವೆ. ಆದರೆ ಈಗ ಹೊಸ ಅಧ್ಯಯನವು ಶಾಲಾಪೂರ್ವ ಮಕ್ಕಳಲ್ಲಿ ಅಕ್ಷರ-ಧ್ವನಿ ಕೌಶಲ್ಯಗಳನ್ನು ಕಲಿಯಲು ಹಗಲಿನ ನಿದ್ರೆ ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಆರಂಭಿಕ ಪುರಾವೆ ಸಿಕ್ಕಿದೆ. 

ಅಧ್ಯಯನ ನಡೆಸಿದ್ದು ಯಾರು ? : ಮಕ್ಕಳಿಗೆ ಹಗಲಿನ ನಿದ್ರೆಯಿಂದ ಏನು ಪ್ರಯೋಜನ ಎನ್ನುವ ಬಗ್ಗೆ ಆಸ್ಟ್ರೇಲಿಯಾದ ಮ್ಯಾಕ್ವಾರಿ ವಿಶ್ವವಿದ್ಯಾನಿಲಯ ಮತ್ತು ಯುಕೆಯ ಆಕ್ಸ್ ಫರ್ಡ್, ಯಾರ್ಕ್ ಮತ್ತು ಶೆಫೀಲ್ಡ್ ವಿಶ್ವವಿದ್ಯಾಲಯಗಳ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.  

ಮಾವಿನ ಹಣ್ಣು ಮಾತ್ರವಲ್ಲ, ಆರೋಗ್ಯ ವೃದ್ಧಿಗಾಗಿ ಮಾವಿನ ಕಾಯಿಯನ್ನೂ ತಿನ್ನಿ

ಅಧ್ಯಯನ ನಡೆದಿದ್ದು ಹೇಗೆ? : ಅಧ್ಯಯನವನ್ನು ಸಿಡ್ನಿಯಲ್ಲಿ ನಡೆಸಲಾಗಿದೆ. ಸಿಡ್ನಿಯ ಎರಡು ಡೇಕೇರ್ ಕೇಂದ್ರಗಳಿಂದ 3-5 ವರ್ಷ ವಯಸ್ಸಿನ 32 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಮಕ್ಕಳಿಗೆ ಡೇಕೇರ್ ಸೆಂಟರ್‌ ನಲ್ಲಿ ಅಕ್ಷರದ ಹೆಸರುಗಳು ಅಥವಾ ಶಬ್ದಗಳ ಶಿಕ್ಷಣವನ್ನು ನೀಡಲಾಗಿರಲಿಲ್ಲ. ಪ್ರತಿ ಮಗು ಎರಡರಿಂದ ನಾಲ್ಕು ವಾರ ಅಧ್ಯಯನದಲ್ಲಿ ಪಾಲ್ಗೊಂಡಿತ್ತು. ಪ್ರತಿ ಮಕ್ಕಳು ಏಳು ಸೆಷನ್ ನಲ್ಲಿ ಪಾಲ್ಗೊಂಡಿದ್ದರು.  

ಅಧ್ಯಯನದ ವಿಷ್ಯ : ಅಧ್ಯಯನ ನಿದ್ರೆಯ ಮೊದಲು, ನಂತ್ರದ ಅವಧಿಯ ಕಲಿಕೆಯ ಮೌಲ್ಯಮಾಪನವನ್ನು ಒಳಗೊಂಡಿತ್ತು. ಚಿಕ್ಕನಿದ್ರೆ ಕಲಿಕೆಯ ಮೇಲೆ ಯಾವುದೇ ಪರಿಣಾಮ ಬೀರಿದೆ ಎಂಬುದನ್ನೂ ಪರೀಕ್ಷಿಸಲಾಯ್ತು.  ಒಂದು ದಿನದ ನಂತರ, ಮಕ್ಕಳ ಜ್ಞಾನವನ್ನು ಸಹ ಮರು ಮೌಲ್ಯಮಾಪನ ಮಾಡಲಾಯಿತು. ಪ್ರತಿ ಸೆಷನ್ ನಲ್ಲಿಯೂ ಅಕ್ಷರದ ಧ್ವನಿ ಮ್ಯಾಪಿಂಗ್ ಅನ್ನು ಮೌಲ್ಯಮಾಪನ ಮಾಡಲಾಗಿತ್ತು.  

ತಜ್ಞರು ಏನು ಹೇಳುತ್ತಾರೆ ? :  ಮ್ಯಾಕ್ವಾರಿ ವಿಶ್ವವಿದ್ಯಾನಿಲಯದ ಮನೋವೈಜ್ಞಾನಿಕ ಅಧ್ಯಯನಗಳ ಪ್ರಾಧ್ಯಾಪಕರಾದ ಅನ್ನಿ ಕ್ಯಾಸಲ್ಸ್, ಈ ಅಧ್ಯಯನದ ಫಲಿತಾಂಶಗಳು ಲೆಟರ್-ಸೌಂಡ್ ಮ್ಯಾಪಿಂಗ್‌ಗೆ  ಸಹಾಯ ಮಾಡುತ್ತದೆ ಎಂಬುದಕ್ಕೆ ಪ್ರಾಥಮಿಕ ಪುರಾವೆಗಳನ್ನು ಒದಗಿಸುತ್ತದೆ ಎಂದಿದ್ದಾರೆ. ಇದು ಆರಂಭಿಕ ಓದುವ ಬೆಳವಣಿಗೆ ಬಹಳ ಮುಖ್ಯವೆಂದು ಅವರು ಹೇಳಿದ್ದಾರೆ. ಈ ಫಲಿತಾಂಶಗಳು ಪ್ರಿಸ್ಕೂಲ್ ಮಕ್ಕಳಿಗೆ, ಮೂಲಭೂತ ಶಿಕ್ಷಣದ ಕೌಶಲ್ಯವನ್ನು ಪಡೆಯಲು ಉತ್ತಮ ಪರಿಸ್ಥಿತಿಗಳನ್ನು ಸೃಷ್ಟಿಸಲು ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

ಕ್ಯಾನ್ಸರ್ ಕುರಿತು BHU ಸಂಶೋಧನೆ, ವರದಿಯಿಂದ ರೋಗಿಗಳಿಗೆ ನೆಮ್ಮದಿ, ಹಿತ್ತಲ ಗಿಡವೇ ಮದ್ದು!

ಮ್ಯಾಕ್ವಾರಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಜುಕೇಶನ್‌ನ ಉಪನ್ಯಾಸಕ ಹುವಾ-ಚೆನ್ ವಾಂಗ್, ಕಲಿಕೆಯ ನಂತರ ನಿದ್ದೆ ಮಾಡುವುದರಿಂದ ಹೊಸದಾಗಿ ಕಲಿತ ಮಾಹಿತಿಯನ್ನು ಹೊಸ ಕಾರ್ಯದಲ್ಲಿ ಬಳಸುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ವಿವರಿಸಿದ್ದಾರೆ. ಈ ಅಧ್ಯಯನದ ಫಲಿತಾಂಶಗಳು  ಚೈಲ್ಡ್ ಡೆವಲಪ್‌ಮೆಂಟ್ ಜರ್ನಲ್‌ನಲ್ಲಿ ಪ್ರಕಟವಾಗಿವೆ.

Follow Us:
Download App:
  • android
  • ios