ಅಯ್ಯೋ ಗಂಡಸಾಗಿ ಅಳ್ತೀಯಾ? ಈ ಡೈಲಾಗ್‌ಗಿನ್ನು ಇಲ್ಲ ಬೆಲೆ, ಅತ್ತು ಹಗುರಾಗಿಬಿಡಿಯೊಮ್ಮೆ!

ಹೆಣ್ಮಕ್ಕಳಿಗೆ ಅಳು ಮುಂದೆ. ಅದೇ ಗಂಡು ಮಕ್ಕಳು ಅಳೋದು ಬಹಳ ಅಪರೂಪ. ದುಃಖ ಬಂದ್ರೂ ಎಲ್ಲರ ಮುಂದೆ ಅಳುವ ಸ್ವಾತಂತ್ರ್ಯ ಪುರುಷರಿಗಿಲ್ಲ. ನೀವೂ ಸಂಕಟದಲ್ಲಿದ್ದು, ನೋವು ತೋಡಿಕೊಳ್ಳಲು ಜಾಗ ಹುಡುಕ್ತಿದ್ದರೆ ಇಲ್ಲಿದೆ ಉಪಾಯ. 
 

Is It Okay For A Husband To Cry In Front Of His Wife roo

ಅವನು ಹುಡುಗ.. ಅಳ್ಬಾರದು ಎನ್ನುವ ಪಾಠ ಮನೆಯಲ್ಲಿ ಶುರುವಾಗುತ್ತೆ. ಮನೆಯಲ್ಲಿ ಹುಡುಗ – ಹುಡುಗಿ ಇದ್ರೆ ಹುಡುಗಿಗೆ ಮಾತ್ರ ಎಲ್ಲರ ಮುಂದೆ ಅಳುವ ಸ್ವಾತಂತ್ರ್ಯ ಸಿಗುತ್ತದೆ. ಹುಡುಗನಿಗೆ ಎಷ್ಟೇ ನೋವಾದ್ರೂ ಕಣ್ಣಲ್ಲಿ ನೀರು ಬರಬಾರದು. ಪುರುಷ ಗಟ್ಟಿ, ಆತನಿಗೆ ನೋವು ಕಾಡೋದಿಲ್ಲ. ಆತ ಅಳಬಾರದು, ಅಳೋದಿಲ್ಲ ಎನ್ನುವ ಭಾವನೆ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಕಾಣಸಿಗುತ್ತದೆ. ಪುರುಷ ಸದಾ ರಫ್ ಆಂಡ್ ಟಫ್ ಆಗಿರಬೇಕು ಎನ್ನುವುದು ನಮ್ಮವರ ಭಾವನೆ. ಪತಿ ಯಾವುದೇ ಸಂದರ್ಭದಲ್ಲೂ ತನ್ನನ್ನು ದುರ್ಬಲನಾಗಿ ತೋರಿಸಿಕೊಳ್ಳುವುದಿಲ್ಲ. ಎಷ್ಟೇ ದುಃಖವಿದ್ದರೂ ಅದನ್ನು ಒತ್ತಿ ಹಿಡಿದು ತಾನು ಬಲಿಷ್ಠ ಎನ್ನುವಂತೆ ನಾಟಕವಾಡ್ತಾನೆ. ಮನೆ ಯಜಮಾನನಾದವನು ಅತ್ತರೆ ಅದು ಅವನ ದುರ್ಬಲತೆಯನ್ನು ತೋರಿಸುತ್ತದೆ. 

ಪುರುಷ (Men) ಮೇಲಿಂದ ಎಷ್ಟೇ ಗಟ್ಟಿಯಾಗಿ ಕಾಣಿಸಿದ್ರೂ ಅವನಿಗೂ ಭಾವನೆಗಳಿವೆ. ನಗು, ಸಂತೋಷ (Happiness) ದ ಜೊತೆ ಅಳು, ದುಃಖವೂ ಅವನನ್ನು ಕಾಡುತ್ತದೆ. ಈ ವಿಷ್ಯ ಅನೇಕರಿಗೆ ಗೊತ್ತಿದ್ದರೂ ಅದನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇಂದು ನಾವು ಪುರುಷರು ಯಾರ ಮುಂದೆ ಹೆಚ್ಚು ಅಳ್ತಾರೆ ಮತ್ತೆ ಏಕೆ ಎಂಬುದನ್ನು ನಿಮಗೆ ತಿಳಿಸ್ತೇವೆ.

Wedding Anniversary: ವಿವಾಹಿತ ರಾಜ್​ ಕುಂದ್ರಾ ಮೇಲೆ ಶಿಲ್ಪಾಗೆ ಹುಟ್ಟಿತ್ತು ಮೋಹ: ಆ ಭೇಟಿ ಕಾಮಕ್ಕೆ ತಿರುಗಿತ್ತು ಎಂದ ನಟಿ!

ಪುರುಷರು ಸಂಗಾತಿ (Partner) ಮುಂದೆ ಕಣ್ಣೀರು ಹಾಕೋದು ಹೆಚ್ಚು : ನಿಮಗೆ ಅಚ್ಚರಿ ಎನ್ನಿಸಬಹುದು. ಸಂಗಾತಿ ಮುಂದೆ ಸ್ಟ್ರಾಂಗ್ ಎಂದು ತೋರಿಸಿಕೊಳ್ಳುವ ಪುರುಷ ಅಳಲು ಸಾಧ್ಯವೆ ಎನ್ನುವ ಪ್ರಶ್ನೆ ಕಾಡಬಹುದು. ಆದ್ರೆ ಇದ್ರ ಬಗ್ಗೆ ನಡೆದ ಸಂಶೋಧನೆಯೊಂದರಲ್ಲಿ ಪುರುಷ ಹೆಚ್ಚಾಗಿ ಅಳೋದು ಸಂಗಾತಿ ಮುಂದೆ ಎಂಬುದು ಬಹಿರಂಗವಾಗಿದೆ. ಅಧ್ಯಯನ ಒಂದರಲ್ಲಿ ಶೇಕಡಾ 73ರಷ್ಟು ಪುರುಷರು ಭಾವನಾತ್ಮಕವಾಗಿದ್ದಾಗ ತಮ್ಮ ಹೆಂಡತಿ ಅಥವಾ ಗೆಳತಿಯ ಮುಂದೆ ಅಳಲು ಹಿಂಜರಿಯುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಕೇವಲ ಶೇಕಡಾ 8 ಜನರು ಮಾತ್ರ ತಮ್ಮ ಸಂಗಾತಿಯ ಮುಂದೆ ಎಂದಿಗೂ ಅಳುವುದಿಲ್ಲ ಎಂದು  ಹೇಳಿದ್ದಾರೆ. 

ಅಮ್ಮನಾಗಿ ಮಗಳಿಗೆ ಲೈಂಗಿಕತೆ ಸೇರಿ ಈ ವಿಷ್ಯಗಳ ಬಗ್ಗೆ ಎಚ್ಚರಿಸಲೇ ಬೇಕು!

ಸಂಗಾತಿ ಮುಂದೆ ಅಳಲು ಕಾರಣವೇನು? : ಬಹುತೇಕ ಪುರುಷರು, ತಮ್ಮ ಸ್ನೇಹಿತರ ಮುಂದೆ ಅಥವಾ ಇನ್ನಾವುದೋ ಪುರುಷರ ಮುಂದೆ ಅಳೋದಿಲ್ಲ. ಅವರಿಗೆ ಪುರುಷತ್ವ ಅಡ್ಡ ಬರುತ್ತದೆ. ಪರಸ್ಪರರ ಮುಂದೆ ಪೌರುಷ ತೋರಿಸಲು ಅವರು ಮುಂದಾಗ್ತಾರೆ. ಬೇರೆ ಪುರುಷನ ಮುಂದೆ ಕಣ್ಣೀರಿಟ್ಟರೆ ನನ್ನನ್ನು ಕೆಳ ಮಟ್ಟದಲ್ಲಿ ನೋಡ್ತಾರೆ ಎನ್ನುವ ಭಯ ಅವರಿಗಿರುತ್ತದೆ. ಅದೇ ಸಂಗಾತಿ ಮುಂದೆ ಅವರು ಯಾವುದೇ ಸಂಕೋಚವಿಲ್ಲದೆ ಅಳ್ತಾರೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳೋದ್ರಲ್ಲಿ ಪುರುಷರಿಗಿಂತ ಮಹಿಳೆ ಮುಂದಿದ್ದಾಳೆ ಎಂಬ ಸತ್ಯ ಅವರಿಗೆ ತಿಳಿದಿರುವ ಕಾರಣ ಅವರು ತನ್ನ ಸಂಗಾತಿ ಅಥವಾ ಗೆಳತಿ ಮುಂದೆ ಅಳ್ತಾರೆ.

ಪತ್ನಿಯಾದವಳು ಏನು ಮಾಡ್ಬೇಕು? : ಪುರುಷ ತನ್ನ ಭಾವನೆಗಳನ್ನು ಹೊರ ಹಾಕುವುದು ಬಹಳ ಮುಖ್ಯ. ಸಂಗಾತಿ ಮುಂದೆ ಅಳ್ತಿರುವ ಪತಿಯನ್ನು ಪತ್ನಿ ಕಾಲೆಳೆಯಬಾರದು. ಕೀಳಾಗಿ ನೋಡಬಾರದು. ಆತನ ಭಾವನೆಗೆ ಬೆಲೆ ನೀಡಿ, ಭಾವನಾತ್ಮಕವಾಗಿ ಸ್ಪಂದಿಸಬೇಕು. ಆಗ ಆತನ ಮನಸ್ಸು ಹಗುರಾಗುವ ಜೊತೆಗೆ ಆತನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪುರುಷರು ನಕಾರಾತ್ಮಕ ಚಿಂತನೆಯಿಂದ ಹೊರಬರಲು ಇದು ನೆರವಾಗುವ ಜೊತೆಗೆ ಅವರನ್ನು ಅರ್ಥ ಮಾಡಿಕೊಳ್ಳಲು ಪತ್ನಿಗೆ ಸಹಾಯವಾಗುತ್ತದೆ.

ಸಣ್ಣ ವಿಷ್ಯಕ್ಕೆ ಪುರುಷರು ಅಳೋದಿಲ್ಲ. ಅವರು ದುಃಖಿತರಾಗಿದ್ದಾರೆಂದ್ರೆ ವಿಷ್ಯ ಗಂಭೀರವಾಗಿರುತ್ತದೆ ಎಂಬ ಸತ್ಯ ಪತ್ನಿಗೆ ಗೊತ್ತಿರುತ್ತದೆ. ಇನ್ಮುಂದೆ ನಿಮ್ಮ ಭಾವನೆ ಹಂಚಿಕೊಳ್ಳಲು ಅಥವಾ ನೋವು ತೋಡಿಕೊಳ್ಳಲು ನೀವು ಬೇರೆಯವರ ಹುಡುಕಾಟ ನಡೆಸಬೇಕಾಗಿಲ್ಲ. ನಿಮ್ಮ ಪತ್ನಿ ಮುಂದೆ ಅತ್ತು ದುಃಖ ಕಡಿಮೆ ಮಾಡಿಕೊಳ್ಳಿ. 

Latest Videos
Follow Us:
Download App:
  • android
  • ios