ಇಂದು ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್​ ಕುಂದ್ರಾ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಅವರ ಇಂಟರೆಸ್ಟಿಂಗ್​ ಲವ್​ ಸ್ಟೋರಿ ವಿಷ್ಯ ಬಯಲು  

ಬಾಲಿವುಡ್​ ಎವರ್​ಗ್ರೀನ್​ ಬ್ಯೂಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್​ ಕುಂದ್ರಾ ಅವರಿಗೆ ಇಂದು (ನವೆಂಬರ್​ 22) 14ನೇ ವಿವಾಹ ವಾರ್ಷಿಕೋತ್ಸವ. 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದಾಗಲೇ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಅದರಲ್ಲಿಯೂ ರಾಜ್​ ಕುಂದ್ರಾ ಬ್ಲೂ ಫಿಲ್ಮ್​ನಲ್ಲಿ ಸಿಲುಕಿ ಜೈಲಿಗೆ ಸೇರಿದ್ದ ಸಂದರ್ಭದಲ್ಲಿ ಜೋಡಿ ಸಾಕಷ್ಟು ಸಂಕಷ್ಟ ಅನುಭವಿಸಿದೆ. ಸದ್ಯ ರಾಜ್​ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಈ ಕೇಸ್​ನಲ್ಲಿ ನಟಿ ಶಿಲ್ಪಾ ಸೇರಿದಂತೆ ಇನ್ನೂ ಕೆಲವು ಸೆಲೆಬ್ರಿಟಿಗಳ ಮೇಲೆ ತೂಗುಕತ್ತಿ ನೇತಾಡುತ್ತಲೇ ಇದೆ. ಇದೇ ವೇಳೆ ಇವರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇವರಿಬ್ಬರ ಪ್ರೀತಿ, ಮದುವೆಯ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳು ಬೆಳಕಿಗೆ ಬಂದಿವೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ನಡುವೆ ಹೇಗೆ ಪ್ರೀತಿ ಬೆಳೆಯಿತು ಎಂಬುದೇ ಹಲವರ ಅಚ್ಚರಿಯ ಪ್ರಶ್ನೆ. ಏಕೆಂದರೆ, ಶಿಲ್ಪಾ ಬಾಲಿವುಡ್​ನಲ್ಲಿ ಮಿಂಚುತ್ತಿದ್ದ ಸಂದರ್ಭದಲ್ಲಿ, ಅದಾಗಲೇ ಮದ್ವೆಯಾಗಿದ್ದ ರಾಜ್​ ಕುಂದ್ರಾ ಬಲೆಗೆ ಹೇಗೆ ಬಿದ್ದರು ಎಂದು ಹಲವರು ತಲೆ ಕೆಡಿಸಿಕೊಂಡಿರುವುದು ಇದೆ. ಹಳೆಯ ಸಂದರ್ಶನವೊಂದರಲ್ಲಿ ನಟಿ ಶಿಲ್ಪಾ ಈ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿದ್ದರು. ಅವರು ವಿವಾಹಿತ ರಾಜ್ ಕುಂದ್ರಾ ಅವರನ್ನು ಏಕೆ ಮದುವೆಯಾದರು ಎಂಬುದನ್ನೂ ಬಹಿರಂಗಪಡಿಸಿದ್ದರು. 

ಮೈಸೂರಲ್ಲಿ ಶಿಲ್ಪಾ ಶೆಟ್ಟಿ ವೆರೈಟಿ ವೆರೈಟಿ ಮೈಸೂರ್ ಪಾಕ್​ ಸವಿತಿದ್ರೆ ನೋಡೋರ ಬಾಯಲ್ಲಿ ನೀರೋ ನೀರು!

ರಾಜ್ ಕುಂದ್ರಾ ಅವರನ್ನು ಪ್ರೀತಿಸುವ ಮೊದಲು ಶಿಲ್ಪಾ ಬಿಗ್ ಬ್ರದರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ರಾಜ್​ ಕುಂದ್ರಾ ಅವರು ಇವರ ಫ್ಯಾನ್​ ಆಗಿದ್ದರು. ಈ ಮಾತುಕತೆ ಸ್ನೇಹಕ್ಕೆ ತಿರುಗಿತ್ತು. ಅದಾದ ಬಳಿಕ ತಮ್ಮ ಬ್ರ್ಯಾಂಡ್​ವೊಂದರ ಪ್ರಮೋಷನ್​ಗಾಗಿ ಶಿಲ್ಪಾ ಅವರು ರಾಜ್ ಕುಂದ್ರಾ ಜೊತೆ ಬ್ಯುಸಿನೆಸ್​ನಲ್ಲಿ ಕೈ ಜೋಡಿಸಿದ್ದರು. ಆಗಲೇ ಅವರಿಬ್ಬರಿಗೂ ಪರಿಚಯ ಬೆಳೆಯಿತು. ರಾಜ್​ ಅವರು ವಿವಾಹಿತರಾಗಿರುವುದು ಗೊತ್ತಿದ್ದರೂ ಶಿಲ್ಪಾ ಅವರ ಒಲವು ರಾಜ್​ ಕಡೆ ನೆಟ್ಟಿತು. ಈ ತಮ್ಮ ಮೊದಲ ಭೇಟಿ ಕಾಮಭರಿತವಾಗಿತ್ತು ಎಂದಿದ್ದಾರೆ ಶಿಲ್ಪಾ. ಇವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆಯುತ್ತಲೇ ತಮ್ಮ ಹೆಂಡತಿಗೆ ರಾಜ್​ ವಿಚ್ಛೇದನ ನೀಡುವ ನಿರ್ಧಾರಕ್ಕೆ ಬಂದಿದ್ದರು. 

ಆ ಸಂದರ್ಭದಲ್ಲಿ ರಾಜ್​ ಬ್ರಿಟನ್​ನಲ್ಲಿ ನೆಲೆಸಿದ್ದರು. ಅಲ್ಲಿಯೂ ರಾಜ್​ ಭಾರತೀಯನಾಗಿ ಹೆಮ್ಮೆಪಡುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ ಅಲ್ಲಿಯೇ ವಾಸಿಸುತ್ತಿರಬಹುದು, ಆದರೆ ಅವರು ಹೃದಯದಿಂದ ಭಾರತೀಯರಾಗಿದ್ದರು. ಭಾರತಕ್ಕೆ ಬಂದು ನೆಲೆಸುವ ಮನಸ್ಸು ಮಾಡಿದ್ದರು. ಅದು ನನಗೆ ತುಂಬಾ ಹಿಡಿಸಿತು. ಅವರಲ್ಲಿ ಏನೋ ಆಕರ್ಷಕ ವ್ಯಕ್ತಿತ್ವ ಕಂಡುಕೊಂಡೆ. ಅದು ಪ್ರೀತಿಯಾಗಿ ಅರಳಿ, ಕಾಮಪ್ರಚೋದಕವಾಯಿತು ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಇಬ್ಬರೂ ಪರಸ್ಪರ ಪ್ರೀತಿ ಹಂಚಿಕೊಂಡ ಮೇಲೆ ಡೇಟಿಂಗ್​ ಶುರು ಮಾಡಿದರು. ಇದೇ ವೇಳೆಗೆ ಶಿಲ್ಪಾಗೆ ದುಬಾರಿ ಗಿಫ್ಟ್​ಗಳನ್ನು ನೀಡುವ ಮೂಲಕ ರಾಜ್ ಇಂಪ್ರೆಸ್​ ಮಾಡುತ್ತಿದ್ದರು. ಸೆಲೆಬ್ರಿಟಿಗಳ ಇಂಥ ಸುದ್ದಿಗಳು ಬಹುಬೇಗನೆ ಸದ್ದು ಮಾಡುತ್ತವೆ. ಅದರಂತೆಯೇ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರ ಬಗ್ಗೆಯೂ ಸಾಕಷ್ಟು ಸುದ್ದಿಯಾದರೂ ಅದನ್ನು ಆ ಕ್ಷಣದಲ್ಲಿ ಅವರು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ರಾಜ್​ ಕುಂದ್ರಾ ಆಗ ವಿವಾಹಿತರಾಗಿದ್ದರು!

 ಇಂಗ್ಲೆಂಡ್​ನ ರೆಸ್ಟೋರೆಂಟ್​ವೊಂದರಲ್ಲಿ ರಾಜ್​ ತುಂಬ ರೊಮ್ಯಾಂಟಿಕ್​ ಆಗಿ ಪ್ರಪೋಸ್​ ಮಾಡಿದರು. ಡೈಮಂಡ್​ ರಿಂಗ್​ ನೀಡಿ ಪ್ರೇಮ ನಿವೇದನೆ ಮಾಡಿಕೊಂಡರು. ಶಿಲ್ಪಾ ಒಪ್ಪಿಗೆ ಸೂಚಿಸಿದರು. ಆದರೆ ನಂತರದ ದಿನಗಳಲ್ಲಿ ರಾಜ್​ ಮೊದಲ ಪತ್ನಿ ಕವಿತಾ ಕುಂದ್ರಾ ಕೆಲವು ಆರೋಪಗಳನ್ನು ಮಾಡಿದರು. ತಮ್ಮ ಮದುವೆ ಮುರಿದು ಬೀಳಲು ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಹೇಳಿದರು. ಆದರೆ ಆ ಆರೋಪಗಳನ್ನೆಲ್ಲ ರಾಜ್​ ತಳ್ಳಿ ಹಾಕಿದರು. ಅಂತೂ ಇದೀಗ ಇಬ್ಬರು ಮಕ್ಕಳ ಪಾಲಕರಾಗಿದ್ದಾರೆ ಶಿಲ್ಪಾ-ರಾಜ್​ ಜೋಡಿ. 

ಬಿಗ್​ಬಾಸ್​ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್​ ಖಾನ್​ ಎಂಟ್ರಿ? ನಟಿ ಹೇಳಿದ್ದೇನು ನೋಡಿ...