Sex Life: ಪೈಲ್ಸ್ ಇರುವಾಗ ಸಂಭೋಗ ಎಷ್ಟು ಸೂಕ್ತ?
ಒಂದ್ಕಡೆ ಪೈಲ್ಸ್ ನೋವು, ಇನ್ನೊಂದು ಕಡೆ ಮುಜುಗರ.. ಈ ಮಧ್ಯೆ ಸಂಭೋಗ ಬೆಳೆಸಬೇಕಾ ಬೇಡ್ವಾ ಎನ್ನುವ ಗೊಂದಲ. ಜನರು ಯಾರ ಮುಂದೆಯೂ ಈ ಪ್ರಶ್ನೆ ಇಡದೆ ಒದ್ದಾಡುತ್ತಾರೆ. ಅಂಥವರಿಗೆ ಸೂಕ್ತ ಉತ್ತರ ಇಲ್ಲಿದೆ.
ಪೈಲ್ಸ್ ಅಥವಾ ಹೆಮೊರೊಯಿಡ್ಸ್ ಖಾಸಗಿ ಭಾಗದಲ್ಲಿ ಕಾಣಿಸಿಕೊಳ್ಳುವ ಗಂಭೀರ ಸಮಸ್ಯೆ. ಈಗಿನ ದಿನಗಳಲ್ಲಿ ಪೈಲ್ಸ್ ಸಮಸ್ಯೆ ಹೆಚ್ಚಾಗ್ತಿದೆ. ಹೇಳಿಕೊಳ್ಳಲೂ ಆಗದ, ಅನುಭವಿಸಲೂ ಸಾಧ್ಯವಿಲ್ಲದ ಖಾಯಿಲೆಗಳಲ್ಲಿ ಪೈಲ್ಸ್ ಒಂದು. ನಾಲ್ಕು ಮಂದಿ ವಯಸ್ಕರಲ್ಲಿ ಮೂರು ಜನರಿಗೆ ಈ ಸಮಸ್ಯೆ ಕಂಡುಬರುತ್ತದೆ. ಪೈಲ್ಸ್ (Piles) ನಲ್ಲಿ ಅನೇಕ ವಿಧಗಳಿವೆ. ಗುದದ್ವಾರ (Anus) ಮತ್ತು ಗುದನಾಳದ ಸಿರೆಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕೆಲವೊಮ್ಮೆ ರಕ್ತ (Blood) ಮತ್ತು ಮಾಂಸದ ತುಂಡುಗಳು ಹೊರಬರುತ್ತವೆ. ಮಲ ವಿಸರ್ಜನೆ ಮಾಡುವಾಗ ಮಾತ್ರವಲ್ಲದೆ ಕುಳಿತುಕೊಳ್ಳುವಾಗ, ನಡೆಯುವಾಗ ಕೂಡ ವಿಪರೀತ ನೋವನ್ನು ತಿನ್ನಬೇಕಾಗುತ್ತದೆ. ಪೈಲ್ಸ್ ಇದೆ ಎಂದು ಎಲ್ಲರ ಮುಂದೆ ಹೇಳಲು ಜನರು ನಾಚಿಕೆಪಟ್ಟುಕೊಳ್ತಾರೆ. ಇದೇ ಕಾರಣಕ್ಕೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದಿಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಹೋದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಪೈಲ್ಸ್ ಸಮಸ್ಯೆಯಿಂದ ಬಳಲುವ ಜನರು ಲೈಂಗಿಕ ಜೀವನದ ಬಗ್ಗೆ ತುಂಬಾ ಚಿಂತಿತರಾಗಿರುತ್ತಾರೆ. ಸಂಭೋಗದಿಂದ ಸಮಸ್ಯೆ ಹೆಚ್ಚಾಗಬಹುದಾ? ಗುದ ಸಂಭೋಗ ಈ ಸಮಯದಲ್ಲಿ ಸೂಕ್ತವೇ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಪೈಲ್ಸ್ ಇರೋರು ಸಂಭೋಗ ಬೆಳೆಸಬಹುದಾ?: ಪೈಲ್ಸ್ ನಿಂದ ಬಳಲುವ ವ್ಯಕ್ತಿ ಆರಾಮವಾಗಿದ್ದರೆ, ಯಾವುದೇ ನೋವಿಲ್ಲದೆ ಹೋದಲ್ಲಿ ಸಂಭೋಗ ಬೆಳೆಸಲು ಯಾವುದೇ ಸಮಸ್ಯೆಯಿಲ್ಲ. ಆದ್ರೆ ಸಂಭೋಗದ ನಂತ್ರ ರಕ್ತಸ್ರಾವವಾಗ್ತಿದ್ದರೆ ಇದ್ರಿಂದ ದೂರವಿರುವುದು ಒಳ್ಳೆಯದು. ಮಹಿಳಾ ಸಂಗಾತಿಗೆ ಪೈಲ್ಸ್ ಇದ್ದು, ಸಂಭೋಗ ಬೆಳೆಸಿದಾಗ ವಿಪರೀತ ನೋವಾಗ್ತಿದ್ದರೆ ಲೈಂಗಿಕ ಸಂಪರ್ಕ ಬೆಳೆಸಬಾರದು. ಮಹಿಳಾ ಸಂಗಾತಿ ಯಾವುದೇ ಕಾರಣಕ್ಕೂ ಗುದ ಸಂಭೋಗ ಬೆಳೆಸಬಾರದು. ಮಹಿಳಾ ಸಂಗಾತಿಗೆ ಪೈಲ್ಸ್ ಇರುವ ಸಮಯದಲ್ಲಿ, ಸಂಭೋಗ ಬೆಳೆಸುವ ವೇಳೆ ಪುರುಷ ಸಂಗಾತಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಪುರುಷ ಸಂಗಾತಿಗೆ ಸಣ್ಣ ಪ್ರಮಾಣದಲ್ಲಿ ನೋವು ಕಾಣಿಸಿಕೊಂಡಲ್ಲಿ ಅದ್ರಿಂದ ತೊಂದರೆಯಿಲ್ಲ.
ಗಂಡನಿಲ್ಲದ ಹೆಂಡತಿಗಿಂತ, ಹೆಂಡತಿ ಇಲ್ಲದ ಗಂಡನಿಗೇ ವೃದ್ಧಾಪ್ಯ ಕಷ್ಟವಾಗುತ್ತಾ?
ಪೈಲ್ಸ್ ಸಂದರ್ಭದಲ್ಲಿ ಗುದ ಸಂಭೋಗ ಬೇಡ ಎನ್ನುತ್ತಾರೆ ವೈದ್ಯರು. ಪೈಲ್ಸ್ ಸಂಪೂರ್ಣ ಗುಣಮುಖವಾದ್ಮೇಲೆ ಗುದ ಸಂಭೋಗ ಬೆಳೆಸಬಹುದು. ಪೈಲ್ಸ್ ವೇಳೆ ಸಂಭೋಗ ಬೆಳೆಸಿದ್ರೆ ನೋವು ಕಾಣಿಸಿಕೊಳ್ಳುವುದಲ್ಲದೆ ಪೈಲ್ಸ್ ಸಮಸ್ಯೆ ಹೆಚ್ಚಾಗುತ್ತದೆ. ಪೈಲ್ಸ್ ಗೆ ಚಿಕಿತ್ಸೆ ಪಡೆಯುತ್ತಿರುವವರು ನೀವಾಗಿದ್ದರೆ ವೈದ್ಯರ ಬಳಿ ಸಂಭೋಗ ಬೆಳೆಸುವ ಬಗ್ಗೆ ಮಾಹಿತಿ ಪಡೆಯಬೇಕು. ವಾರದಲ್ಲಿ ಒಂದು ಬಾರಿ ಮಾತ್ರ ಸಂಭೋಗ ಬೆಳೆಸಬಹುದು. ವೈದ್ಯರು, ದೈಹಿಕ ಕ್ರಿಯೆಗೆ ಒಪ್ಪಿಗೆ ನೀಡಿದಲ್ಲಿ ಮಾತ್ರ ಸಂಬಂಧ ಬೆಳೆಸಬೇಕು. ಆಗ್ಲೂ ಸಾಧಾರಣ ಭಂಗಿಯನ್ನು ಮಾತ್ರ ಬಳಸಬೇಕು ಎಂದು ವೈದ್ಯರು ಹೇಳ್ತಾರೆ.
ಸಂಭೋಗದಿಂದ ಪೈಲ್ಸ್ ಹರಡುತ್ತಾ? : ಪೈಲ್ಸ್ ಒಂದು ಸಾಂಕ್ರಾಮಿಕ ರೋಗವಲ್ಲ. ಹಾಗಾಗಿ ಸಂಭೋಗದ ನಂತ್ರ ಈ ರೋಗ ಇನ್ನೊಬ್ಬ ಸಂಗಾತಿಗೆ ಹರಡುವುದಿಲ್ಲ.
ಪೈಲ್ಸ್ ಗೆ ಕಾರಣ : ಪೈಲ್ಸ್ ಸಮಸ್ಯೆಯು ಅಸಮತೋಲಿತ ಜೀವನಶೈಲಿಯ ಪರಿಣಾಮವಾಗಿದೆ. ನೀವು ಹೆಚ್ಚು ಎಣ್ಣೆಯುಕ್ತ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಅಥವಾ ಮದ್ಯ ಮತ್ತು ಧೂಮಪಾನವನ್ನು ಮಾಡಿದ್ರೆ ಈ ರೋಗ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ದೀರ್ಘ ಸಮಯ ಒಂದೇ ಕಡೆ ಕುಳಿತುಕೊಳ್ಳುವುದ್ರಿಂದಲೂ ಪೈಲ್ಸ್ ಕಾಣಿಸಿಕೊಳ್ಳುತ್ತದೆ.
ಮನೆಯ ಸೋ ಕಾಲ್ಡ್ ಒಳ್ಳೆ ಹುಡುಗ ಕಾಂಡೋಮ್ ಆರ್ಡರ್ ಮಾಡ್ದಾಗ ಏನಾಯ್ತು... ಸ್ವಾರಸ್ಯಕರ ವೈರಲ್ ಪೋಸ್ಟ್
ಪೈಲ್ಸ್ ಎಷ್ಟು ದಿನಗಳಲ್ಲಿ ಗುಣವಾಗುತ್ತದೆ? : ಸಾಮಾನ್ಯವಾಗಿ ಈ ಸಮಸ್ಯೆ 2-3 ದಿನಗಳಲ್ಲಿ ಗುಣವಾಗುತ್ತದೆ. ಅದಕ್ಕೆ ನೀವು ಸೇವಿಸುವ ಆಹಾರ ಮುಖ್ಯವಾಗುತ್ತದೆ. ಆದರೆ ಇದಕ್ಕಿಂತ ಹೆಚ್ಚು ಕಾಲ ಈ ಸಮಸ್ಯೆ ಮುಂದುವರಿದರೆ ಕೂಡಲೇ ವೈದ್ಯರನ್ನು ಕಾಣಬೇಕು. ಹಸಿರು ತರಕಾರಿ, ಹಣ್ಣು ಹಾಗೂ ಸಾಕಷ್ಟು ನೀರು ಸೇವನೆ ಮಾಡುವುದು ಮುಖ್ಯವಾಗುತ್ತದೆ.