ಗಂಡನಿಲ್ಲದ ಹೆಂಡತಿಗಿಂತ, ಹೆಂಡತಿ ಇಲ್ಲದ ಗಂಡನಿಗೇ ವೃದ್ಧಾಪ್ಯ ಕಷ್ಟವಾಗುತ್ತಾ?

ಒಬ್ಬಂಟಿಯಾಗಿ ಜೀವನ ನಡೆಸಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತ ಅದೆಷ್ಟೇ ಜನರಿದ್ರೂ ನಮ್ಮವರು ನಮ್ಮ ಬಳಿ ಇಲ್ಲವೆಂದ್ರೆ ಆ ಕೊರತೆ ಸದಾ ನಮ್ಮನ್ನು ಕಾಡುತ್ತದೆ. ಜೀವನ ಸಂಗಾತಿ ಅವಶ್ಯಕತೆ ಯೌವನಕ್ಕಿಂತ ವೃದ್ಧಾಪ್ಯದಲ್ಲಿ ಹೆಚ್ಚು ಅಗತ್ಯ.
 

Why Do We Need A Life Partner At Old Age explained in srirastu shubhamast serial of zee kannada roo

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರೇಕ್ಷಕರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಜೀವನಕ್ಕೆ ಅಗತ್ಯವಿರುವ ಅನೇಕ ಪಾಠಗಳನ್ನು ಧಾರಾವಾಹಿ ಮೂಲಕ ಹೇಳಲಾಗ್ತಿದೆ. ಅಲ್ಲದೆ ಸಂಬಂಧಗಳು, ಅದ್ರ ಅಗತ್ಯವನ್ನು ತಿಳಿಸಲಾಗ್ತಿದೆ. ಧಾರವಾಹಿಯಲ್ಲಿ ಬರುವ ಮಾಧವನ ಪಾತ್ರ ಭಾವನಾತ್ಮಕವಾಗಿದೆ. ದತ್ತನ ಜೊತೆ ಮಾಧವ ಸಂಬಂಧದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದು, ಅವರ ಮಾತು ನೂರಕ್ಕೆ ನೂರು ಸತ್ಯ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಬಾಲ್ಯ, ಯೌವನ,ಗೃಹಸ್ಥ ಜೀವನ (Life) ಕಳೆದಿದ್ದು ತಿಳಿಯೋದಿಲ್ಲ. ಆ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಬ್ಯುಸಿಯಾಗಿರ್ತಾನೆ. ಆದರೆ ವೃದ್ಧಾಪ್ಯ (Oldage) ಕ್ಕೆ ಕಾಲಿಡ್ತಿದ್ದಂತೆ ಮನುಷ್ಯ ಅನೇಕ ಹೇಳಲಾಗದ ತೊಳಲಾಟದಲ್ಲಿ ಸಿಲುಕ್ತಾನೆ. ಜೀವನ ಪರ್ಯಂತ ಮನೆಗಾಗಿ ದುಡಿದ, ಒಂದು ನಿಮಿಷವೂ ಖಾಲಿ ಕುಳಿತಿರದ ವ್ಯಕ್ತಿಗೆ ನಿವೃತ್ತಿ (Retirement) ನಂತ್ರ ಸಮಯ ಕಳೆಯೋದು ಕಷ್ಟವಾಗುತ್ತೆ. ಕೊನೆಯವರೆಗೂ ಸಂಗಾತಿ ಜೊತೆಯಾಗಿ ನಿಂತ್ರೆ ಅದೊಂದು ಅಧ್ಬುತ ದಾಂಪತ್ಯ. ಆದ್ರೆ ಎಲ್ಲರ ಬಾಳಲ್ಲಿ ಇದು ಸಾಧ್ಯವಿಲ್ಲ. ವೃದ್ಧಾಪ್ಯಕ್ಕೆ ಕಾಲಿಡುವ ಮೊದಲೇ ಅನೇಕರು ಸಂಗಾತಿಯನ್ನು ಕಳೆದುಕೊಂಡಿರ್ತಾರೆ. ಸಂಗಾತಿಯಿಲ್ಲದ ವೃದ್ಧಾಪ್ಯ ಮತ್ತಷ್ಟು ಕಠಿಣ. ವೃದ್ಧಾಪ್ಯದಲ್ಲಿ ಸಂಗಾತಿ ಅಗತ್ಯ ಎಷ್ಟಿರುತ್ತದೆ ಎಂಬುದನ್ನು ಮಾಧವ, ದತ್ತನ ಮುಂದೆ ಹೇಳಿದ್ದಾನೆ.

INTERNATIONAL KISSING DAY 2023: ಚುಂಬನದ ದಿನ ಆರಂಭವಾಗಿದ್ದು ಯಾವಾಗ, ಈ ದಿನದ ಮಹತ್ವವೇನು?

ಎಲ್ಲರೂ ಇದ್ದೂ, ಒಂಟಿ ಎನ್ನಿಸುವ ವಯಸ್ಸು ವೃದ್ಧಾಪ್ಯ : ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆ ಯಾರೇ ಇರಲಿ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲ ಎನ್ನುವ ಭಾವನೆ ಬರುತ್ತದೆ. ಅದಕ್ಕೆ ಕಾರಣ, ಮಕ್ಕಳಿಂದ ಹಿಡಿದು ಮನೆಯಲ್ಲಿರುವವರೆಲ್ಲ ಅವರವರ ಜೀವನದಲ್ಲಿ ಬ್ಯುಸಿಯಾಗಿರ್ತಾರೆ. ಮಕ್ಕಳಿಗೆ ಅವರ ಮಕ್ಕಳು, ಕೆಲಸ, ಮನೆಯ ಜವಾಬ್ದಾರಿ ಚಿಂತೆಯಿದ್ರೆ ಮೊಮ್ಮಕ್ಕಳಿಗೆ ಓದು, ಸ್ನೇಹಿತರು, ಉದ್ಯೋಗದ ಸಮಸ್ಯೆ. ಇನ್ನು ಸೊಸೆಯಂದಿರಿಗೆ ಮಕ್ಕಳು, ಮನೆಯನ್ನು ನೋಡಿಕೊಳ್ಳೋದೇ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಅವರ ವಯಸ್ಸಿಗೆ ತಕ್ಕಂತೆ ಪ್ರಾಮುಖ್ಯತೆ ಬದಲಾಗ್ತಾ ಹೋಗುತ್ತದೆ. ಆ ಸಮಯದಲ್ಲಿ ಮನೆಯಲ್ಲಿರುವ ವೃದ್ಧರಿಗೆ ಒಂಟಿತನ ಕಾಡೋದು ಸಹಜ. 

ಮನೆ ತುಂಬಿ ತುಳುಕುತ್ತಿದ್ದರೂ ವೃದ್ಧಾಪ್ಯದಲ್ಲಿ ಸಂಗಾತಿ ಇಲ್ಲವೆಂದ್ರೆ ಜೀವನ ಕಷ್ಟ. ನಮ್ಮ ಭಾವನೆಗಳನ್ನು ಹೇಳಿಕೊಳ್ಳಲು, ನಮ್ಮ ನೋವನ್ನು ತೋಡಿಕೊಳ್ಳಲು ಒಂದು ಜೀವ ಬೇಕು. ನಮ್ಮಿಂದ ನಮ್ಮವರು ದೂರವಾದಾಗ ಆ ದುಃಖವನ್ನು ತೋಡಿಕೊಳ್ಳಲು ಒಬ್ಬರು ಬೇಕು. ಯಾರೂ ಇಲ್ಲ ಎಂದಾಗ ನೋವಾಗುವುದು ಸಹಜ. ನಮಗೆ ಅಂತಾ ಯಾರೂ ಇಲ್ವಾ ಎನ್ನುವ ಪ್ರಶ್ನೆ ಈ ವಯಸ್ಸಿನಲ್ಲಿ ಕಾಡುತ್ತೆ. ವಯಸ್ಸಾಗ್ತಿದ್ದಂತೆ ತಮ್ಮ ಸಮಯವನ್ನು ನಮಗೆ ಮೀಸಲಿಡಬಲ್ಲ ಜೀವವೊಂದು ಬೇಕೆನ್ನಿಸುತ್ತೆ. ನಮ್ಮ ಕಷ್ಟಕ್ಕೆ ಹೆಗಲಾಗುವವರು ಬೇಕು ಅನ್ನಿಸಲು ಶುರುವಾಗುತ್ತದೆ.  ಜೀವನದ ಕೊನೆ ಘಟ್ಟದಲ್ಲಿ ಮಕ್ಕಳು, ಸ್ನೇಹಿತರು, ಸಂಬಂಧಿಕರು ಯಾರೂ ನಮ್ಮೊಂದಿಗೆ ಇರಲು ಸಾಧ್ಯವಿಲ್ಲ. ತಮ್ಮ ಸಂಪೂರ್ಣ ಸಮಯವನ್ನು ನಮಗೆ ಮೀಸಲಿಟ್ಟು ನಮ್ಮ ಜೊತೆ ಇರಬಲ್ಲವರು ಸಂಗಾತಿ ಮಾತ್ರ.  

ಅವಳು ಜಗಳಗಂಟಿಯೋ, ರೊಮ್ಯಾಂಟಿಕೋ? ಹುಡುಗಿಯರ ಗುಣ ತಿಳಿಯೋದು ಹೇಗೆ?

ಇಲ್ಲಿ ಭಾವನೆಗೆ ಬೆಲೆ ಹೆಚ್ಚು : ವಯಸ್ಸಾದ್ಮೇಲೆ ಯಾವುದೇ ವ್ಯಕ್ತಿ ದೈಹಿಕ ಆಸರೆಯನ್ನು ಬಯಸುವುದಿಲ್ಲ. ಆತನಿಗೆ ಬೇಕಾಗುವುದು ಭಾವನಾತ್ಮಕ ಆಸರೆ (Emotional Support). ತನ್ನ ಮಾತನ್ನು ಕೇಳುವ, ತನ್ನ ನೋವನ್ನು ಅರ್ಥ ಮಾಡಿಕೊಳ್ಳು, ತನ್ನ ಜೊತೆ ಹೆಜ್ಜೆ ಹಾಕುವ, ದಣಿವಾದಾಗ ಬೆವರು ಒರೆಸಿ ನಾನಿದ್ದೇನೆಂದು ಸಂತೈಸುವ ಒಂದು ಜೀವ ಅಗತ್ಯವಿರುತ್ತದೆ.  

ಪತ್ನಿಗಿಂತ ಪತಿಗೆ ಕಾಡುತ್ತೆ ಹೆಚ್ಚು ನೋವು  : ಹೌದು, ಯೌವನದಲ್ಲಿ ಪತ್ನಿ ಇಲ್ಲದ ಕೊರತೆ ಹೆಚ್ಚಾಗಿ ಕಾಡಿಲ್ಲವೆಂದ್ರೂ ವೃದ್ಧಾಪ್ಯದಲ್ಲಿ ಪುರುಷನಿಗೆ ಈ ನೋವು ಹೆಚ್ಚಾಗಿ ಕಾಡುತ್ತದೆ. ಆತನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳ ಬಲ್ಲವಳು ಹೆಂಡತಿ ಮಾತ್ರ. ಪತಿಯಿಲ್ಲದ ಪತ್ನಿಗಿಂತ ಪತ್ನಿಯಿಲ್ಲದ ಪತಿ ಹೆಚ್ಚು ನೋವು ತಿನ್ನುತ್ತಾನೆ. ವಿಶೇಷವಾಗಿ ವೃದ್ಧಾಪ್ಯದಲ್ಲಿ ಪತ್ನಿಯಿಲ್ಲದ ಪತಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಅವನಿಗೆ ಅವಳು.. ಅವಳಿಗೆ ಅವನು ಆಸರೆಯಾದ್ರೆ ಜೀವನದ ತುತ್ತತುದಿಯಲ್ಲೂ ಸಂತೋಷ ಕಾಣಬಹುದು. 

 

 

Latest Videos
Follow Us:
Download App:
  • android
  • ios