ಮನೆಯ ಸೋ ಕಾಲ್ಡ್ ಒಳ್ಳೆ ಹುಡುಗ ಕಾಂಡೋಮ್ ಆರ್ಡರ್ ಮಾಡ್ದಾಗ ಏನಾಯ್ತು... ಸ್ವಾರಸ್ಯಕರ ವೈರಲ್ ಪೋಸ್ಟ್
ಅವಿವಾಹಿತ ಯುವಕನೋರ್ವ ಆನ್‌ಲೈನ್‌ನಲ್ಲಿ ಕಾಂಡೋಮ್ ಆರ್ಡರ್ ಮಾಡಿ ಅಡ್ರಸ್ ಬದಲಿಸುವುದನ್ನು ಮರೆತಿದ್ದು, ಕಾಂಡೋಮ್ ಅಮ್ಮನ ಕೈ ಸೇರಿದೆ. ಆತನ ಎಡವಟ್ಟಿನ ವಿಚಾರವನ್ನು ಸಹೋದರಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ಪೋಸ್ಟನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ತರ ತರಹದ ಕಾಮೆಂಟ್ ಮಾಡಿದ್ದಾರೆ.
ಸಂಪ್ರದಾಯಬದ್ಧ ದೇಶ ಭಾರತದಲ್ಲಿ ಲೈಂಗಿಕತೆ ಬಗ್ಗೆ, ಲೈಂಗಿಕ ಸುರಕ್ಷತೆ ಬಗ್ಗೆ ಮುಕ್ತವಾಗಿ ಮಾತನಾಡಲು ಇಂದಿಗೂ ಬಹುತೇಕ ಜನ ಅಂಜುತ್ತಾರೆ. ಸೇಫ್ ಸೆಕ್ಸ್ ಗಾಗಿ ಕಾಂಡೋಮ್ ಬಳಸಲು ಹಾಗೂ ಕೊಳ್ಳಲು ಯುವ ಸಮೂಹ ಹಿಂದೆ ಮುಂದೆ ನೋಡುತ್ತಾರೆ. ಮೆಡಿಕಲ್ ಶಾಪ್ ಮಾಲೀಕರು ಏನಂದುಕೊಳ್ಳುವರೋ ಎಂಬ ಹಿಂಜರಿಕೆ ಅವರದ್ದು, ಹೀಗಿರುವಾಗ ಇತ್ತೀಚೆಗೆ ಆನ್‌ಲೈನ್ ಮಾರ್ಕೆಟೀಂಗ್ ವ್ಯವಸ್ಥೆ ಯುವ ಸಮೂಹದ ಈ ಮುಜುಗರದ ಸಂಕಷ್ಟಕ್ಕೆ ಪರಿಹಾರ ಒದಗಿಸಿದ್ದು, ಈಗ ಕಾಂಡೋಮ್ ಕೂಡ ಆನ್‌ಲೈನ್‌ನಲ್ಲೇ ಪೂರೈಸುವ ಅವಕಾಶ ಒದಗಿಸಿದೆ. ಇದು ಅನೇಕರ ಪಾಲಿಗೆ ವರದಾನವಾಗಿದ್ದು, ಕಳೆದ ವರ್ಷ ಆಹಾರ ಡೆಲಿವರಿ ಆಪ್ ಸ್ವಿಗ್ಗಿಯಲ್ಲಿ ಆಹಾರಕ್ಕಿಂತ ಹೆಚ್ಚು ಕಾಂಡೋಮ್ ಪೂರೈಕೆ ಆಗಿದೆ ಎಂಬ ಸುದ್ದಿ ಅಚ್ಚರಿ ಮೂಡಿಸಿತ್ತು. ಈ ಮಧ್ಯೆ ಅವಿವಾಹಿತ ಯುವಕನೋರ್ವ ಆನ್‌ಲೈನ್‌ನಲ್ಲಿ ಕಾಂಡೋಮ್ ಆರ್ಡರ್ ಮಾಡಿ ಅಡ್ರಸ್ ಬದಲಿಸುವುದನ್ನು ಮರೆತಿದ್ದು, ಕಾಂಡೋಮ್ ಅಮ್ಮನ ಕೈ ಸೇರಿದೆ. ಆತನ ಎಡವಟ್ಟಿನ ವಿಚಾರವನ್ನು ಸಹೋದರಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ಪೋಸ್ಟ್‌ಗೆ ನೆಟ್ಟಿಗರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದು, ಈ ಪೋಸ್ಟನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ತರ ತರಹದ ಕಾಮೆಂಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ.
elena (@elena4yo) ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 'ನನ್ನ ಸಹೋದರ ಆರ್ಡರ್ ಮಾಡುವಾಘ ವಿಳಾಸ ಬದಲಿಸಲು ಮರೆತೋದ ಎಂದು ಕಾಣುತ್ತದೆ. ಇದರಿಂದ ಆತ ಮಾಡಿದ ಇನ್ಸ್ಟಾಮಾರ್ಟ್ ಆರ್ಡರ್ ಈಗಷ್ಟೇ ಅಮ್ಮನ ಕೈ ಸೇರಿದೆ ಎಂದು ಬರೆದು ಕಾಂಡೋಮ್ ಪ್ಯಾಕೇಟ್‌ನ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಾಮೆಂಟ್ ಒಂದಕ್ಕಿಂತ ಒಂದು ಹಾಸ್ಯಮಯವಾಗಿದ್ದು, ನಗು ಉಕ್ಕಿಸುತ್ತಿದೆ.
ಬಿಜೆಪಿ ಬಾವುಟದ ಮೇಲೆ ಕಾಂಡೋಮ್ ನೇತು ಹಾಕಿದ ಕಿಡಿಗೇಡಿಗಳು, ಬಂಗಾಳದಲ್ಲಿ ನೀಚ ಕೃತ್ಯ!
ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವಾಗ ಅಲ್ಲಿ ಅಡ್ರೆಸ್ ಚೇಂಜ್ ಮಾಡುವ ಅವಕಾಶ ಇರುತ್ತದೆ. ಆದರೆ ಮನೆಯಲ್ಲಿಲ್ಲದ ಸಹೋದರ ಇನ್ಸ್ಟಾಮಾರ್ಟ್‌ನಲ್ಲಿ ಕಾಂಡೋಮ್ ಆರ್ಡರ್ ಮಾಡಿದ್ದು, ವಿಳಾಸ ಬದಲಿಸಲು ಮರೆತಿದ್ದಾನೆ. ಇದರಿಂದ ಆತ ಮಾಡಿದ ಆರ್ಡರ್ ಅಮ್ಮನ ಕೈ ಸೇರಿದ್ದು, ಆತನಿಗೆ ತೀವ್ರ ಮುಜುಗರಕ್ಕೀಡು ಮಾಡಿದೆ. ಇತ್ತ ಆತನ ಸಹೋದರಿ ಬಂದ ಆರ್ಡರ್ ಫೋಟೋ ತೆಗೆದು ಟ್ವಿಟ್ಟರ್‌ಗೆ ಹಾಕಿದ್ದು, ಸಹೋದರನ ಮಾನ ಜಾಲಾಡಿದ್ದಾಳೆ.
ನೆಟ್ಟಿಗರ ಕಾಮೆಂಟ್ಸ್ ಏನು
ಈ ಪೋಸ್ಟ್‌ಗೆ ಒಬ್ಬರು ಈಗ ಅಣ್ಣನ ಫೋನ್ ಬಹುಶಃ ಸ್ವಿಚ್ಛ್ ಆಫ್ ಆಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಅಣ್ಣ ಕದ್ದುಮುಚ್ಚಿ ಏನು ಮಾಡುತ್ತಿದ್ದಾನೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಅಮ್ಮನಿಗೆ ಆತ ಸಲಿಂಗಕಾಮಿ ಆಗಿಲ್ಲವಲ್ಲ ಎಂದು ಅಮ್ಮನಿಗೆ ಖುಷಿ ಪಡಲು ಹೇಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈಗ ನಿಮ್ಮ ಸಹೋದರ ನಾಪತ್ತೆಯಾಗಿರಬಹುದು ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮನೆಯ ಏಕೈಕ ಸೋ ಕಾಲ್ಡ್ ಒಳ್ಳೆ ಹುಡುಗ ಹೀಗೆ ಮಾಡಿದ್ರೆ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವ್ಯಕ್ತಿಯೊಬ್ಬ ತನ್ನದೇ ಗೋರಿಯಲ್ಲಿ ಮಲಗಿ ತನ್ನ ಮೇಲೆ ಮಣ್ಣು ಎಳೆದು ಹಾಕಿಕೊಳ್ಳುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮತ್ತೆ ಅನೇಕರು ಆರ್‌ಐಪಿ ಬ್ರದರ್ ಎಂದು ಕಾಮೆಂಟ್ ಜೊತೆ ನಗುವಿನ ಇಮೋಜಿ ಸೆಂಡ್ ಮಾಡಿದ್ದಾರೆ. ಮತ್ತೆ ಕೆಲವರು ಕುತೂಹಲದಿಂದ ಆಮೇಲೇನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್‌ನ್ನು 5 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ಪೋಸ್ಟ್‌ಗೆ ಬಂದ ನೆಟ್ಟಿಗರ ಕಾಮೆಂಟ್‌ಗಳು ನಗೆಯುಕ್ಕಿಸುತ್ತಿವೆ.
ಕನ್ಯಾವಿವಾಹ ಯೋಜನೆ ಕಿಟ್ಟಲ್ಲಿ ಕಾಂಡೋಮ್: ಕಾಂಗ್ರೆಸ್ ಟೀಕೆಗೆ ನೆಟ್ಟಿಗರು ಗರಂ!
ಒಟ್ಟಿನಲ್ಲಿ ಅಮ್ಮನೆದರು ಬಹಳ ಮುಗ್ದರಂತೆ ಅಮಾಯಕರಂತೆ ಇರುವ ಕೆಲವು ಮಕ್ಕಳು ಮಾಡುವ ಕಿತಾಪತಿಗಳು ಹೀಗೆಲ್ಲಾ ಕೆಲವೊಮ್ಮೆ ಬಯಲಾಗವುದು ಮಾತ್ರ ಸತ್ಯ.