Asianet Suvarna News Asianet Suvarna News

International Kissing Day 2023: ಚುಂಬನದ ದಿನ ಆರಂಭವಾಗಿದ್ದು ಯಾವಾಗ, ಈ ದಿನದ ಮಹತ್ವವೇನು?

ಜುಲೈ 6ನೇ ತಾರೀಕನ್ನು ಅಂತಾರಾಷ್ಟ್ರೀಯ ಚುಂಬನ ದಿನವೆಂದು  ಆಚರಿಸಲಾಗುತ್ತದೆ.ಈ ದಿನವನ್ನು ಆಚರಿಸುವ ಹಿಂದಿನ ಕಾರಣವೆಂದರೆ ಆರೋಗ್ಯಕರ ರೀತಿಯಲ್ಲಿ ಚುಂಬನವನ್ನು ಉತ್ತೇಜಿಸುವುದಾಗಿದೆ. ಈ ದಿನದ ಆಚರಣೆ ಯಾವಾಗ ಆರಂಭವಾಯಿತು, ದಿನದ ಮಹತ್ವವೇನು ಅನ್ನೋ ಮಾಹಿತಿ ಇಲ್ಲಿದೆ.

International Kissing Day 2023, History, Significance, Facts Vin
Author
First Published Jul 6, 2023, 9:26 AM IST | Last Updated Jul 6, 2023, 9:26 AM IST

ಜುಲೈ 6ರಂದು ಅಂತಾರಾಷ್ಟ್ರೀಯ ಕಿಸ್ಸಿಂಗ್ ಡೇಆಚರಿಸಲಾಗುತ್ತದೆ.  ಫೆಬ್ರವರಿ 13 ರಂದು ಪ್ರೇಮಿಗಳ ವಾರದಲ್ಲಿ ಕೂಡ ಕಿಸ್ಸಿಂಗ್ ಡೇ ಆಚರಿಸಲಾಗುತ್ತದೆ. ಆದರೆ ಇದರ ಹೊರತಾಗಿ ಜುಲೈ 6ನೇ ತಾರೀಕನ್ನು ಅಂತರಾಷ್ಟ್ರೀಯ ಚುಂಬನ ದಿನವೆಂದು  ಆಚರಿಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಈ ದಿನವನ್ನು ಆಚರಿಸುವ ಹಿಂದಿನ ಕಾರಣವೆಂದರೆ ಆರೋಗ್ಯಕರ ರೀತಿಯಲ್ಲಿ ಚುಂಬನವನ್ನು ಉತ್ತೇಜಿಸುವುದಾಗಿದೆ. ಚುಂಬನವು ಕೇವಲ ದೈಹಿಕ ಆಕರ್ಷಣೆಗೆ ಮಾತ್ರ ಸಂಬಂಧಿಸಿಲ್ಲ. ಭಾವನೆ ವ್ಯಕ್ತಪಡಿಸಲು ಹಾಗೂ ಆರೋಗ್ಯಕ್ಕೆ ಇದು ಒಳ್ಳೆಯದು. ಪ್ರಪಂಚದ ಅನೇಕ ದೇಶಗಳಲ್ಲಿ ಕಿಸ್ಸಿಂಗ್ ಡೇ ಆಚರಿಸಲಾಗುತ್ತದೆ. ಈ ಆಚರಣೆ ಆರಂಭವಾಗಿದ್ದು ಯಾವಾಗ, ಈ ದಿನವನ್ನು ಆರಂಭಿಸಿದರ ಉದ್ದೇಶವೇನು, ಮಹತ್ವವೇನು ಎಂಬುದನ್ನು ತಿಳಿದುಕೊಲ್ಳೋಣ.

ಅಂತಾರಾಷ್ಟ್ರೀಯ ಚುಂಬನ ದಿನದ ಇತಿಹಾಸ
2006ರಲ್ಲಿ ಅಂತಾರಾಷ್ಟ್ರೀಯ ಚುಂಬನ ದಿನವನ್ನು (International Kissing Day) ಆರಂಭಿಸಲಾಯಿತು. ಇದು ಹೃದಯಸ್ಪರ್ಶಿ ಸೂಚಕದ ಮಹತ್ವವನ್ನು ಆಚರಿಸಲು ಮೀಸಲಾಗಿರುವ ದಿನವಾಗಿದೆ. ಮೂಲತಃ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇದನ್ನು ಆಚರಿಸಲಾಯಿತು. ಈ ದಿನವು ಪ್ರಪಂಚದಾದ್ಯಂತದ ಜನರಿಂದ ವ್ಯಾಪಕವಾದ ಮನ್ನಣೆ ಮತ್ತು ಪ್ರೀತಿ (Love)ಯನ್ನು ಗಳಿಸಿತು. ಆ ನಂತರ ಪ್ರತಿ ಜುಲೈ 6ರಂದು, ವ್ಯಕ್ತಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಚುಂಬನದ ಮೂಲಕ ತಮ್ಮ ಬಂಧವನ್ನು (Bonding) ಬಲಪಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 

ಅಬ್ಬಾ ನೋಡಿದ್ರೇನೆ ಭಯವಾಗುತ್ತೆ..ಚಲಿಸುವ ರೈಲಿನಲ್ಲಿ ಜೋಡಿಯಿಂದ ಇದೆಂಥಾ ಹುಚ್ಚಾಟ..!

ನಾವು ಪ್ರೀತಿಸುವ ವ್ಯಕ್ತಿಗೆ ನಮ್ಮ ಭಾವನೆಗಳನ್ನು (Feelings) ವ್ಯಕ್ತಪಡಿಸುವುದು ಸುಂದರವಾದ ವಿಷಯವಾಗಿದ್ದರೂ, ನಾವು ಯಾರನ್ನಾದರೂ ಚುಂಬಿಸುವ ಮೊದಲು ಒಪ್ಪಿಗೆಯನ್ನು ಕೇಳಲು ನಾವು ಯಾವಾಗಲೂ ತಿಳಿದಿರಬೇಕು. ಕಿಸ್ ಎಂದರೆ ಇತರ ವ್ಯಕ್ತಿಯನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಭಾವನೆಯಾಗಿದೆ. ಚುಂಬನದ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅದು ಹೇಗೆ ಮುಖ್ಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಂತರರಾಷ್ಟ್ರೀಯ ಚುಂಬನ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಚುಂಬನ ದಿನದ ಮಹತ್ವ
ಅಂತರಾಷ್ಟ್ರೀಯ ಚುಂಬನ ದಿನದ ಆಚರಣೆಯು ಜನರು ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸುತ್ತದೆ. ಇದು ಕೆಲಸಕ್ಕೆ ಹೊರಡುವ ಮೊದಲು ನೀಡುವ ಸಿಹಿ ಮುತ್ತು ಆಗಿರಲಿ ಅಥವಾ ಒತ್ತಡದ (Pressure) ದಿನದ ಕೊನೆಯಲ್ಲಿ ಭಾವೋದ್ರಿಕ್ತ ಮುತ್ತು ಆಗಿರಲಿ, ಈ ಸಣ್ಣ ಸನ್ನೆಗಳು ಪ್ರಣಯವನ್ನು ಜೀವಂತವಾಗಿಡುವಲ್ಲಿ ಅಪಾರ ಶಕ್ತಿಯನ್ನು ಹೊಂದಿವೆ. ಈ ವಿಶೇಷ ದಿನವು ಪ್ರೀತಿಯನ್ನು ಆಚರಿಸುವುದು ಮಾತ್ರವಲ್ಲದೆ ನಮ್ಮ ಸಂಬಂಧಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವ ಮಹತ್ವದ (Importance) ಬಗ್ಗೆ ಜಾಗೃತಿ ಮೂಡಿಸುತ್ತದೆ.

National Kissing Day: ಮುತ್ತಿಕ್ಕಿದರೆ ಮತ್ತಷ್ಟು ಯೌವನ! ಮತ್ತೇನಾಗುತ್ತೆ ಆರೋಗ್ಯಕ್ಕೆ?

ಪ್ರೀತಿಯ ಮುತ್ತು, ಗೌರವ ಸೂಚಿಸುವ ಮುತ್ತು
ಕಿಸ್ ಎಂಬುದು ಪ್ರೀತಿ ಮತ್ತು ವಾತ್ಸಲ್ಯದ ಟೈಮ್‌ಲೆಸ್ ಸಂಕೇತವಾಗಿದ್ದು ಅದು ಭಾಷೆಯ ಅಡೆತಡೆಗಳನ್ನು ಮೀರುತ್ತದೆ ಮತ್ತು ಭಾವನೆಗಳನ್ನು ಸಲೀಸಾಗಿ ಮತ್ತೊಬ್ಬರಿಗೆ ವ್ಯಕ್ತಪಡಿಸುತ್ತದೆ. ಪ್ರೀತಿಯನ್ನು ತೋರ್ಪಡಿಸುವ ಕೆನ್ನೆಗಳ ಮೇಲಿನ ಬೆಚ್ಚಗಿನ ಚುಂಬನದಿಂದ ತೊಡಗಿ ಗೌರವವನ್ನು ತಿಳಿಸುವ ಹಣೆಯ ಮೇಲೆ ಚುಂಬವದ ವರೆಗೆ, ಪ್ರತಿ ಗೆಸ್ಚರ್ ಅನನ್ಯ ಮತ್ತು ಹೃತ್ಪೂರ್ವಕ ಸಂದೇಶವನ್ನು ಹೊಂದಿರುತ್ತದೆ.  ಮುತ್ತುಗಳಲ್ಲಿ ಹಲವು ವಿಧಗಳಿವೆ. ವ್ಯಕ್ತಿ ನೀಡುವ ಮುತ್ತಿನ ಮೂಲಕವೇ ಆತನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ದಂಪತಿ ವಿಷ್ಯಕ್ಕೆ ಬಂದ್ರೆ ಸಂಬಂಧ ಯಾವ ಹಂತದಲ್ಲಿದೆ ಎನ್ನುವುದ್ರ ಮೇಲೆ ನೀವು ಚುಂಬಿಸುವ ವಿಧಾನವನ್ನು ಬದಲಿಸಿಕೊಳ್ಳಬೇಕು. ಆಗ ನಿಮ್ಮ ನಿಜವಾದ ಭಾವನೆ ಸಂಗಾತಿಗೆ ಅರ್ಥವಾಗುತ್ತದೆ. ಇಲ್ಲವೆಂದ್ರೆ ಸಮಸ್ಯೆ  ಎದುರಾಗುತ್ತದೆ. 

Latest Videos
Follow Us:
Download App:
  • android
  • ios