Asianet Suvarna News Asianet Suvarna News

International Friendship Day 2022: ಭಾರತದಲ್ಲಿ ಫ್ರೆಂಡ್‌ಶಿಪ್ ಡೇ ಆಚರಣೆ ಯಾವಾಗ ?

ಸ್ನೇಹವೆಂಬುದು ಒಂದು ಮಧುರವಾದ ಬಾಂಧವ್ಯ. ಸ್ನೇಹಿತರು ಸುಖ, ದುಖಃ, ಸಂತೋಷ, ನೋವುಗಳಲ್ಲಿ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಭಾಗಿಯಾಗುತ್ತಾರೆ. ಇದು ಜುಲೈ 30 ,  ಅಂತಾರಾಷ್ಟ್ರೀಯ ಸ್ನೇಹಿತರ ದಿನ. ಆದರೆ ಭಾರತದಲ್ಲಿ ಆಗಸ್ಟ್ 7ನೇ ತಾರೀಕಿನಂದು ಸ್ನೇಹಿತರ ದಿನಾಚರಣೆ ಮಾಡಲಾಗುತ್ತದೆ. ಆ ಬಗ್ಗೆ ತಿಳಿಯೋಣ. 

International Friendship Day 2022: Date, History And Importance Of The Day Vin
Author
Bengaluru, First Published Jul 30, 2022, 3:36 PM IST

ಸ್ನೇಹವೆಂಬುದು ಒಂದು ಸುಂದರವಾದ ಸಂಬಂಧ. ಕಷ್ಟದಲ್ಲಿ ಹೆಗಲಾಗುವ ಸುಖದಲ್ಲಿ ಭಾಗಿಯಾಗುವ ಸ್ನೇಹಿತರು ಎಲ್ಲರಿಗೂ ಇರುತ್ತಾರೆ. ಸ್ನೇಹಿತರು ಎಷ್ಟೊಂದು ಆತ್ಮೀಯರಾಗಿರುತ್ತಾರೆ ಎಂದ್ರೆ, ಮನೆಯವರ ಬಳಿ ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು ಅವರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಸ್ನೇಹದ ಸುಂದರ ಬಂಧದ ಆಚರಣೆ ಎಂದು ಕರೆಯಲ್ಪಡುವ, ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಜುಲೈ 30ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಇಂದು ಸ್ನೇಹಿತರ ದಿನವನ್ನು ಆಚರಣೆ ಮಾಡುವುದಿಲ್ಲ. ಆಗಸ್ಟ್ ಮೊದಲ ಭಾನುವಾರ ಅಂದರೆ, ಈ ವರ್ಷ ಆಗಸ್ಟ್ 7ನೇ ದಿನದಂದು ಆಚರಣೆ ಮಾಡಲಾಗುತ್ತದೆ.

ಅಂತಾರಾಷ್ಟ್ರೀಯ ಸ್ನೇಹ ದಿನದ ಇತಿಹಾಸ
ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಮೊದಲು 30 ಜುಲೈ 1958ರಂದು ವರ್ಲ್ಡ್ ಫ್ರೆಂಡ್‌ಶಿಪ್ ಕ್ರುಸೇಡ್‌ನಿಂದ ಪ್ರಸ್ತಾಪಿಸಲಾಯಿತು. ಇದು ಅಂತಾರಾಷ್ಟ್ರೀಯ ನಾಗರಿಕ ಸಂಸ್ಥೆಯಾಗಿದೆ. ಅಧಿಕೃತವಾಗಿ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವುದು 2011ರಿಂದ ಪ್ರಾರಂಭವಾಯಿತು. ಸ್ನೇಹ ಮತ್ತು ಅದರ ಪ್ರಾಮುಖ್ಯತೆಯನ್ನು (Importance) ಬಲಪಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಈ ದಿನವನ್ನು ಉತ್ತೇಜಿಸಿತು. ವಿಶ್ವಸಂಸ್ಥೆಯು ಜುಲೈ 30ರಂದು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಅಧಿಕೃತವಾಗಿ ಘೋಷಿಸಿತು. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು  (International Friendship Day) 1958ರಲ್ಲಿ ಪರಾಗ್ವೆಯಲ್ಲಿ ಆಚರಿಸಲಾಯಿತು. ಆದರೆ ವಿಶ್ವಸಂಸ್ಥೆಯ ಘೋಷಣೆಯ ನಂತರ ಸಹ ಕೆಲ ದೇಶಗಳಲ್ಲಿ ಬೇರೆ ಬೇರೆ ತಿಂಗಳು, ಬೇರೆ ಬೇರೆ ದಿನಗಳಲ್ಲಿ ಆಚರಣೆ ಮಾಡಲಾಗುತ್ತದೆ. 

World Hepatitis Day: ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಕಾರಣವಾಗುವ ಡೇಂಜರಸ್‌ ಸೋಂಕು !

ಭಾರತದಲ್ಲಿ ಸ್ನೇಹಿತರ ದಿನಾಚರಣೆ ಯಾವಾಗ ?
ಭಾರತ ಸೇರಿದಂತೆ ಕೆಲವು ದೇಶಗಳು ಪ್ರತಿ ಆಗಸ್ಟ್‌ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 7, 2022 ರಂದು ಪ್ರೆಂಡ್‍ಶಿಪ್ ಡೇ ಆಚರಿಸಲಾಗುತ್ತದೆ. ಈ ದಿನ ಜೊತೆಗಿರುವ ಸ್ನೇಹಿತರು, ಹಳೆಯ ಸ್ನೇಹಿತರು ಪರಸ್ಪರ ಶುಭಾಶಯ (Wishes) ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಸ್ನೇಹಿತರು ಪರಸ್ಪರರ ಕೈ ಮೇಲೆ ಫ್ರೆಂಡ್‌ ಶಿಪ್‌ ಬ್ಯಾಂಡ್ ಅನ್ನು ಕಟ್ಟಿ, ಖುಷಿಪಡುತ್ತಾರೆ.

ಭಾರತ, ಬಾಂಗ್ಲಾದೇಶ, ಮಲೇಷ್ಯಾ, ಯುಎಇ, ಯುಎಸ್‌ನಲ್ಲಿ ಮಾತ್ರ ಆಗಸ್ಟ್ ಮೊದಲ ಭಾನುವಾರ ಅಂತರಾಷ್ಟ್ರೀಯ ಸ್ನೇಹ ದಿನವನ್ನು ಆಚರಣೆ ಮಾಡಲಾಗುತ್ತದೆ. ನೇಪಾಳದಲ್ಲಿ ಜುಲೈ 30ರಂದು, ಬರ್ಲಿನ್, ಓರ್ಬಲಿಯೊ, ಓಹೊಯೋದಲ್ಲಿ ಏಪ್ರಿಲ್ 9 ರಂದು ಆಚರಿಸಲಾಗುತ್ತದೆ. ಅರ್ಜೆಂಟೀನಾ, ಮೆಕ್ಸಿಕೋದಲ್ಲಿ ಜುಲೈ 14 ರಂದು ಆಚರಣೆ ಮಾಡಿದರೆ, ಬ್ರೆಜಿಲ್‌ನಲ್ಲಿ ಜುಲೈ 20ರಂದು ಅಂತರಾಷ್ಟ್ರೀಯ ಸ್ನೇಹ ದಿನವನ್ನು ಆಚರಣೆ (Celebration) ಮಾಡಲಾಗುತ್ತದೆ.

World Brain Day: ಎಲ್ಲಾ ಮರೆತ್‌ ಹೋಗ್ತಿದೆ ಅನ್ನೋದಲ್ಲ, ಮೆದುಳನ್ನು ಆರೋಗ್ಯವಾಗಿಟ್ಟುಕೊಳ್ಳಿ

ಸ್ನೇಹಿತರ ದಿನ ಆಚರಣೆ ಮಾಡುವುದು ಹೇಗೆ ?
ಸ್ನೇಹವು ಮನುಷ್ಯರ ನಡುವಿನ ಅತ್ಯಂತ ಸುಂದರವಾದ ಸಂಬಂಧ (Relationship)ಗಳಲ್ಲಿ ಒಂದಾಗಿದೆ. ಜಾತಿ-ಮತ, ಮೇಲು-ಕೀಳು, ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಎಲ್ಲರೂ ಸ್ನೇಹಿತರಾಗುತ್ತಾರೆ. ಹೀಗಾಗಿ ಜೀವನ (Life)ದಲ್ಲಿ ಸ್ನೇಹಿತರು ತುಂಬಾ ಮುಖ್ಯವಾಗುತ್ತಾರೆ. ಬಾಂಧವ್ಯವೂ ಮುಖ್ಯವಾಗುತ್ತದೆ. ಹೀಗಾಗಿ ಈ ದಿನವನ್ನು ಸಹ ಅರ್ಥಪೂರ್ಣವಾಗಿ ಆಚರಿಸಬೇಕಾದುದು ಮುಖ್ಯ. ಸ್ನೇಹಿತ ಎಂದರೆ ಕಷ್ಟದ ಸಮಯದಲ್ಲಿ ಯಾವಾಗಲೂ ಇರುವ ವ್ಯಕ್ತಿ. ನಿಮ್ಮನ್ನು ಬೆಂಬಲಿಸುವ ಮತ್ತು ಮಾರ್ಗದರ್ಶನ ಮಾಡುವ ಸಹಚರರು. ನಮ್ಮ ಜೀವನದಲ್ಲಿ ಸ್ನೇಹಿತರ ಕೊಡುಗೆಯನ್ನು  ಅಂತರರಾಷ್ಟ್ರೀಯ ಸ್ನೇಹ ದಿನವು ಉತ್ತಮ ಮಾರ್ಗವಾಗಿದೆ. ಈ ದಿನ ಸ್ನೇಹಿತರ ಕೈಗೆ ಬ್ಯಾಂಡ್ ಕಟ್ಟಿ, ಗಿಫ್ಟ್ ನೀಡಿ ಖುಷಿ ಪಡಬಹುದು. 

Follow Us:
Download App:
  • android
  • ios