Asianet Suvarna News Asianet Suvarna News

International Daughters Day: ಹೆಣ್ಣುಮಕ್ಕಳ ದಿನದ ಇತಿಹಾಸ ಮತ್ತು ಮಹತ್ವ

ಇಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ. ಹೆಣ್ಣಿನ ಸುರಕ್ಷಿತೆ, ಶಿಕ್ಷಣದ ಕುರಿತು ಅರಿವು ಮೂಡಿಸುವ ಹಾಗೂ ಅವರ ಭದ್ರತೆಗೆ ಸಂಕಲ್ಪ ತೊಡುವ ದಿನವಾಗಿದೆ. ಈ ದಿನದ ಇತಿಹಾಸ ಹಾಗೂ ಮಹತ್ವವೇನು ತಿಳಿಯಿರಿ.

International Daughters Day: Significance And Importance Of The Day Vin
Author
First Published Sep 25, 2022, 4:15 PM IST

ಸೆಪ್ಟೆಂಬರ್ 25ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಈ ದಿನವು ಪೋಷಕರು ತಮ್ಮ ಅಮೂಲ್ಯ ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಅವರ ಬಗ್ಗೆ ಹೆಮ್ಮೆ ಪಡುವ ದಿನವಾಗಿದೆ. ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಇದನ್ನು ಸೆಪ್ಟೆಂಬರ್‌ನಲ್ಲಿ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ದಿನ, ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉಡುಗೊರೆಗಳು, ಕೈಯಿಂದ ಮಾಡಿದ ಕಾರ್ಡ್‌ಗಳು, ಅವರ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸಿ ಖುಷಿಯಿಂದ ಸಮಯ ಕಳೆಯುತ್ತಾರೆ.

ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ 2022ರ ಇತಿಹಾಸ 
ಈ ದಿನವು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದಕ್ಕೆ ಯಾವುದೇ ನಿಜವಾದ ಮೂಲವಿಲ್ಲದಿದ್ದರೂ, ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ, ಹೆಣ್ಣು ಮಗುವನ್ನು ಹೊಣೆಗಾರಿಕೆಯಾಗಿ ಗ್ರಹಿಸಲಾಗಿದೆ. ಸಾಂಪ್ರದಾಯಿಕವಾಗಿ ಕುಟುಂಬಗಳು ಗಂಡು ಮಗುವಿಗೆ ಆದ್ಯತೆ ನೀಡುತ್ತವೆ. ವರದಕ್ಷಿಣೆ (Dowry), ಹೆಣ್ಣು ಶಿಶುಹತ್ಯೆ ಮತ್ತು ಭ್ರೂಣಹತ್ಯೆಯಂತಹ ಸಮಸ್ಯೆಗಳು ಇಂದಿಗೂ ಅಸ್ತಿತ್ವದಲ್ಲಿವೆ. ಆದ್ದರಿಂದ, ಹೆಣ್ಣು ಮಗುವಿನ ಮೇಲಿನ ಕಳಂಕವನ್ನು ಹೊರಹಾಕಲು ಮತ್ತು ಅಪರಾಧಗಳನ್ನು ನಿಭಾಯಿಸಲು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ (International Daughters Day) ಪರಿಚಯಿಸಲಾಯಿತು.

ಹದಿ ಹರೆಯದ ಮಗಳ ಜೊತೆ ಅಪ್ಪನ ಬಿಹೇವಿಯರ್ ಹೇಗಿರಬೇಕು?

ಹೆಣ್ಣು ಮಗುವನ್ನು ಹೊಂದಿರುವ ಕಳಂಕದ ವಿರುದ್ಧ ಹೋರಾಡಲು, ಹೆಣ್ಣು ಮಕ್ಕಳನ್ನು ಹೊಣೆಗಾರಿಕೆ (Responsibility) ಎಂದು ಭಾವಿಸುವ ತಪ್ಪು ಕಲ್ಪನೆಯ ವಿರುದ್ಧ  ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆ (Woman)ಯರನ್ನು ಗೌರವಿಸುವುದು ಈ ದಿನದ ನಿಜವಾದ ಅರ್ಥವಾಗಿದೆ. ಸಂಸ್ಥೆಗಳು ಮತ್ತು ಸರ್ಕಾರಗಳು ಈ ದಿನದಂದು ಲಿಂಗ ಅಂತರದ ವಿರುದ್ಧ ಹೋರಾಡಲು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದ ಅವಕಾಶಗಳನ್ನು ಒದಗಿಸಲು ಪಣ ತೊಡುತ್ತವೆ.

ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಗೌರವ (Respect) ಮತ್ತು ಪ್ರೀತಿಯಿಂದ ನಡೆಸಿಕೊಳ್ಳುವ ಮೂಲಕ ಮತ್ತು ಅವರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ದಿನವನ್ನು ವಿಶೇಷವಾಗಿಸಬಹುದು. ಕೈಯಿಂದ ಮಾಡಿದ ಉಡುಗೊರೆ (Gift)ಗಳನ್ನು ನೀಡಬಹುದು.

ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಮಹತ್ವ
ಸಂಸ್ಥೆಗಳು ಮತ್ತು ಸರ್ಕಾರಗಳು ಲಿಂಗ (Gender) ಅಂತರವನ್ನು ಮುಚ್ಚಲು ಮತ್ತು ಸಮಾಜಕ್ಕೆ ಸಮಾನ ಅವಕಾಶವನ್ನು ಒದಗಿಸಲು ಶ್ರಮಿಸುತ್ತವೆ. ಸಮಾಜ (Society) ಮತ್ತು ಕುಟುಂಬ (Family) ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳನ್ನು ಸಮಾನ ನೆಲೆಯಲ್ಲಿ ಪಾಲುದಾರರನ್ನಾಗಿ ಒಪ್ಪಿಕೊಳ್ಳಲು ಈ ದಿನವು ಪ್ರೇರೇಪಿಸುತ್ತದೆ.

ಆತ್ಮೀಯ ಅಪ್ಪ ಇಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ಬುಲೀಮಿಯಾ! ಏನಿದು ಸಮಸ್ಯೆ?

ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಉಲ್ಲೇಖಗಳು
ಹೆಣ್ಣುಮಕ್ಕಳು ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಲು ಮೇಲಿನಿಂದ ಕಳುಹಿಸಲ್ಪಟ್ಟ ದೇವತೆಗಳು- ಜೆ. ಲೀ
ಅವರ ನಡುವಿನ ಅಂತರ ಏನೇ ಇರಲಿಯಾವುದೇ ತಾಯಿ ಮತ್ತು ಮಗಳು ಎಂದಿಗೂ ಬೇರೆಯಾಗಿ ವಾಸಿಸುವುದಿಲ್ಲ.- ಕ್ರಿಸ್ಟಿ ವ್ಯಾಟ್ಸನ್
ಮಗಳು ತನ್ನ ತಾಯಿಯ ಜೀವನದ ವಿವರಗಳನ್ನು ಎಷ್ಟು ಹೆಚ್ಚು ತಿಳಿದಿದ್ದಾಳೆ, ಮಗಳು ಬಲಶಾಲಿಯಾಗುತ್ತಾಳೆ - ಅನಿತಾ ಡೈಮಂಟ್
ನಾನು ಕೇಳಿದ ಅತ್ಯುತ್ತಮ ಸಂಗೀತವೆಂದರೆ ನನ್ನ ಮಗಳ ನಗುವಿನ ಧ್ವನಿ- ದೇಸಿಶ್ ಮೃಧಾ

Follow Us:
Download App:
  • android
  • ios