ಹುಡುಗರೇ, ಇನ್ಮುಂದೆ ಹುಡುಗೀರು ನಿಮ್ಮಲ್ಲಿ ಬಯಸುವ ಗುಣಗಳಿವು!

ಕೊರೋನಾ ವೈರಸ್‌ ಸಂಬಂಧಗಳ ಮೇಲೂ ಕರಾಳ ಛಾಯೆ ಬೀರಿದೆ. ಬಹುಶಃ ಇನ್ನು ಮುಂದೆ ತಾವು ಮದುವೆ ಆಗಬೇಕಿರೋ ಹುಡುಗರಲ್ಲಿ ಹುಡುಗಿಯರು ಈ ಕೆಳಗಿನ ಗುಣ, ಸ್ವಭಾವ ಅಥವಾ ಶ್ರೀಮಂತಿಕೆಗಳನ್ನು ಅಪೇಕ್ಷೆ ಪಡೋ ಸಾಧ್ಯತೆ ಇದೆ.

In future Girls choose these type of boys to marry

ಕೊರೋನಾ ವೈರಸ್‌ನಿಂದ ಇಡೀ ಲೋಕವೇ ತತ್ತರಿಸಿದೆ. ಮದುವೆಗಳು ಕೂಡ ನಿಂತುಹೋಗಿವೆ. ಗುಜರಾತ್‌ನಲ್ಲಿ ಒಬ್ಬಳು ಹುಡುಗಿ, ಅಮೆರಿಕದಲ್ಲಿರುವ ವರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಈಗ ಆ ಮದುವೆಯನ್ನೇ ಆಕೆ ಕ್ಯಾನ್ಸಲ್‌ ಮಾಡಿದ್ದಾಳೆ. ಅದಕ್ಕೆ ಆಕೆ ಕೊಟ್ಟಿರುವ ಕಾರಣ- ವಿದೇಶದಿಂದ ನಮ್ಮ ದೇಶಕ್ಕೆ ಬರೋಕಾಗಲ್ಲ, ಬಂದ್ರೂ ಹದಿನಾಲ್ಕು ದಿನ ಜೈಲಲಲ್ಲಿ ಇರೋ ಥರ ಕ್ವಾರಂಟೈನ್‌ನಲ್ಲಿ ಇರಬೇಕು ಅಂದರೆ ಅಂಥ ಸಂಬಂಧ ನನಗೆ ಬೇಕಿಲ್ಲ. 

ಇಂಥ ಕಾರಣಗಳು ಇನ್ನು ಮುಂದೆ ಹಲವು ರೀತಿಯಲ್ಲಿ ಮುದುವೆ ಸಂಬಂಧಗಳನ್ನು ಬಾಧಿಸಲಿವೆ ಎನ್ನುತ್ತಾರೆ ಮದುವೆ ಮಾರುಕಟ್ಟೆ ತಜ್ಞರು, ಮನೋವಿಜ್ಞಾನಿಗಳು. ಯಾಕೆಂದರೆ ಕೊರೋನಾ ವೈರಸ್‌ ಸಂಬಂಧಗಳ ಮೇಲೂ ಕರಾಳ ಛಾಯೆ ಬೀರಿದೆ. ಬಹುಶಃ ಇನ್ನು ಮುಂದೆ ತಾವು ಮದುವೆ ಆಗಬೇಕಿರೋ ಹುಡುಗರಲ್ಲಿ ಹುಡುಗಿಯರು ಈ ಕೆಳಗಿನ ಗುಣ, ಸ್ವಭಾವ ಅಥವಾ ಶ್ರೀಮಂತಿಕೆಗಳನ್ನು ಅಪೇಕ್ಷೆ ಪಡೋ ಸಾಧ್ಯತೆ ಇದೆ. 

ಸೃಜನಶೀಲ ಮನಸ್ಸು ಹುಟ್ಟು ಹಾಕಿದ ಲಾಕ್‌ಡೌನ್

- ಹುಡುಗ ವಿದೇಶದಲ್ಲಿ ಇರಬಾರದು, ಇದ್ದರೂ ಐಟಿ ಕ್ಷೇತ್ರದಲ್ಲಿ ಇರಬಾರದು. ಯಾಕೆಂದರೆ ಐಟಿ ವಲಯದಲ್ಲಿ ಈಗಾಗಲೇ ಜಾಬ್‌ ಕಟ್‌, ಸಂಬಳ ಕಟ್‌, ಇತ್ಯಾದಿಗಳು ಆರಂಭವಾಗಿವೆ. ಇನ್ನು ಮುಂದೆ ಭಾರತೀಯ ವಲಸಿಗರಿಗೆ ಗ್ರೀನ್‌ ಕಾರ್ಡ್ ಕೊಡುವ ಮುನ್ನ ಅಮೆರಿಕ ನೂರಾರು ಬಾರಿ ಯೋಚಿಸಲಿದೆ. ಹೋದರೂ ಬಹುಶಃ ಅಲ್ಲಿಯ ಪ್ರಜೆಗಳಾಗಿಯೇ ಉಳಿಯುವ ಸಾಧ್ಯತೆ ಕಡಿಮೆ. ವೈದ್ಯಕೀಯ ವಲಯದವನಾದರೆ ಅಂಥ ಹುಡುಗನಿಗೆ ಎರಡನೇ ಆದ್ಯತೆ. ಹುಡುಗ ಸಾಕಷ್ಟು ಹಣ ಗಳಿಸಿದ್ದು, ಕಾರು- ಮನೆ ಇತ್ಯಾದಿ ಹೊಂದಿದ್ದರೆ, ಮೆಡಿಕಲ್‌ ಇನ್ಶೂರೆನ್ಸ್ ಹೊಂದಿದ್ದರೆ ಮೊದಲ ಆದ್ಯತೆ. ಯಾಕೆಂದರೆ ಸರಿಯಾದ ಮೆಡಿಕಲ್‌ ಇನ್ಶೂರೆನ್ಸ್‌ ಇಲ್ಲದೆ ಅಮೆರಿಕ ಮುಂತಾದ ಕಡೆ ಜೀವನವೇ ನಡೆಯವುದಿಲ್ಲ. 
- ಮೆಡಿಕಲ್‌ ಮಾಡಿದ ಹುಡುಗಿಯರು ಮೆಡಿಕಲ್‌ ಮಾಡಿದ ಹುಡುಗರನ್ನೇ ಮೊದಲು ಆಯ್ದುಕೊಳ್ಳುತ್ತಿದ್ದರು. ಈಗ ಅವರು ಎಂಜಿನಿಯರ್‌ಗಳನ್ನು ಆಯ್ದುಕೊಳ್ಳುವ ಸಾಧ್ಯತೆ ಇದೆ. ಯಾಕೆಂದರೆ ಡಾಕ್ಟರ್‌ಗಳು ಎದುರಿಸುತ್ತಿರುವ ರಿಸ್ಕ್‌ಗಳ ಅಗಾಧತೆ ಅವರಿಗೆ ಈಗ ಅರಿವಾಗಿದೆ.
- ಮಧ್ಯಮ ವರ್ಗದ ಹುಡುಗ, ಒಳ್ಳೆಯ ಕೆಲಸ ಹಾಗೂ ಕೈತುಂಬಾ ಸಂಬಳ ಬರುವಂತಿದ್ದರೆ ಬೆಂಗಳೂರಿನಲ್ಲಿದ್ದರೂ ಪರವಾಗಿಲ್ಲ. ಒಳ್ಳೆಯ ಸಂಬಳ ಬರುವ ಕೆಲಸವಿದ್ದು ಊರಿನಲ್ಲಿದ್ದರೆ ಚೆನ್ನ. ಹಳ್ಳಿಯಲ್ಲಿದ್ದರೆ ಆತ ಒಬ್ಬನೇ ಮಗನಾಗಿದ್ದರೆ ಒಳ್ಳೆಯದು. ಫ್ಯಾಮಿಲಿಯಲ್ಲಿ ಡಯಾಬಿಟಿಸ್‌, ಬಿಪಿ, ಕ್ಯಾನ್ಸರ್ ಮೊದಲಾದ ರೋಗಗಳು ಇವೆಯಾ ಇಲ್ಲವಾ ಎಂಬುದನ್ನು ಕ್ರಾಸ್‌ ಚೆಕ್‌ ಮಾಡಲಾಗುತ್ತದೆ. ಇದ್ದರೆ ಅಂಥವರು ರಿಜೆಕ್ಟ್. 

ಲೈಂಗಿಕ ಕ್ರಿಯೆಯಿಂದ ಕೊರೋನಾ ಹರಡುತ್ತಾ? ಸಿಕ್ಕಿತು ಉತ್ತರ 

- ಹುಡುಗ ಪೌರೋಹಿತ್ಯ ಮಾಡುವವನಾಗಿದ್ದರೆ, ಅಡುಗೆ ಮಾಡಿ ಜೀವಿಸುವವನಾದರೆ ಹುಡುಗಿ ಸಿಗುವುದು ಕಷ್ಟ ಕಷ್ಟ. ಈಗಾಗಲೇ ಅದು ಕಷ್ಟವಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಇಂಥವರ ಬದುಕು ಇನ್ನಷ್ಟು ಕಷ್ಟವಾಗಿದೆ. ಹೀಗಾಗಿ ಹುಡುಗಿಯರು ಇವರನ್ನು ಆರಿಸುವ ಮುನ್ನ ತುಸು ಹಿಂದೆ ಮುಂದೆ ನೋಡುತ್ತಾರೆ.
- ಬೆಂಗಳೂರು ಅಥವಾ ಬೇರೆ ಸಿಟಿಗಳಲ್ಲಿ ಕೆಲಸ ಮಾಡುವ ಹುಡುಗನಾಗಿದ್ದರೂ, ಹಳ್ಳಿಯಲ್ಲಿ ಸ್ವಲ್ಪವಾದರೂ ಆಸ್ತಿ ಇರಲಿ ಎಂದು ಬಯಸುತ್ತಾರೆ. ಯಾಕೆಂದರೆ ಕಂಪನಿ ಕೆಲಸ ಕೈಕೊಟ್ಟರೆ, ಹಳ್ಳಿಯಲ್ಲಾದರೂ ಬಂದು ಬದುಕಬಹುದು ಎಂಬ ದೂರಾಲೋಚನೆ.

#ಫೀಲ್‌ಫ್ರೀ: ಅವಳಿಗೆ ಹಲವು ಸಲ ಕ್ಲೈಮ್ಯಾಕ್ಸ್, ನಾನೇನು ಮಾಡಲಿ? 

- ಆದರೆ ಇವೆಲ್ಲವೂ ಅರೇಂಜ್ಡ್ ಮದುವೆಗಳಲ್ಲಿ ಮಾತ್ರ ನಾವು ಕಾಣಬಹುದಾದ ಸಂಗತಿಗಳು. ಪ್ರೇಮ ವಿವಾಹಗಳಲ್ಲಿ ಇಂಥ ಅಪೇಕ್ಷೆಗಳು ಮೊದಲು ಕಾಣಿಸಿಕೊಳ್ಳುವುದಿಲ್ಲ. ಯಾಕೆಂದರೆ ಹೆಣ್ಣುಮಕ್ಕಳು ಭಾವಜೀವಿಗಳು. ಇವರು ತಾವು ಪ್ರೇಮಿಸುವ ಹುಡುಗನಲ್ಲಿ ಮೊದಲು ನೋಡುವುದು ಅವನು ಗುಣವಂತನಾ ಅಲ್ವಾ, ಅವನಿಗೆ ಹಾಸ್ಯಪ್ರಜ್ಞೆ ಇದೆಯಾ ಇಲ್ವಾ, ಅವನು ದುಡಿದು ನನ್ನನ್ನು ಸಾಕಬಲ್ಲನಾ- ಇಷ್ಟನ್ನು ಮಾತ್ರ. ಅವನಉ ಶ್ರೀಮಂತ ಹೌದೋ ಅಲ್ಲವೋ ಎಂಬುದು ಸೆಕೆಂಡರಿ. ಹುಡುಗನಿಗೆ ಉದ್ಯೋಗವೇ ಇಲ್ಲದಿದ್ದರೂ ಹುಡುಗಿಯರು ಅಂಥವರನ್ನು ಪ್ರೀತಿಸುವ ನಿದರ್ಶನಗಳು ಸಾಕಷ್ಟಿವೆ. ಆದ್ದರಿಂದ ಹುಡುಗರು ಎದೆಗುಂದಬೇಕಿಲ್ಲ. 

Latest Videos
Follow Us:
Download App:
  • android
  • ios