ಪ್ರಶ್ನೆ: ನನಗೆ ಮದುವೆಯಾಗಿ ಐದು ವರ್ಷವಾಗಿದೆ. ನನ್ನ ಪತ್ನಿ ನನಗಿಂತ ಎರಡು ವರ್ಷ ಚಿಕ್ಕವಳು. ಇಬ್ಬರೂ ಲೈಂಗಿಕವಾಗಿ ಆಕ್ಟಿವ್‌ ಆಗಿದ್ದೇವೆ. ನಾವು ವಾರಕ್ಕೆರಡು ಬಾರಿಯಾದರೂ ಸೇರುತ್ತೇವೆ. ನಾನು ಮೇಲೆ ಬರುವ ಪೊಸಿಷನ್‌ನಲ್ಲಿ ಮಿಲನ ನಡೆಸಿದಾಗ ಅವಳಿಗೆ ಕೆಲವೊಮ್ಮೆ ಉತ್ತುಂಗ ಸ್ಥಿತಿ ಸಿಗುವುದೇ ಇಲ್ಲವಂತೆ, ಕೆಲವೊಮ್ಮೆ ಮಾತ್ರ ಸಿಗುತ್ತದೆ. ಆದರೆ ಅವಳು ಮೇಲೆ ಬಂದು ಸಂಭೋಗ ನಡೆಸಿದಾಗ, ಪ್ರತಿಬಾರಿಯೂ ಅವಳಿಗೆ ಸಂಪೂರ್ಣ ತೃಪ್ತಿ ಸಿಗುತ್ತದೆ. ಮಾತ್ರವಲ್ಲ, ಕೆಲವೊಮ್ಮೆ ಎರಡು ಬಾರಿ, ಮೂರು ಬಾರಿ ಅವಳು ಸುಖದ ಉತ್ತುಂಗ ತಲುಪಿರುವುದೂ ಉಂಟು. ಇದು ಸಹಜವೇ? ಗಂಡಸರಿಗೆ ಇಂಥ ಬಹು ಸಲದ ಸುಖ ಸಿಗುವುದೇ ಇಲ್ಲವೇ? ನಾನು ಮೇಲೆ ಇದ್ದರೂ, ಕೆಳಗಿದ್ದರೂ, ಒಂದು ಬಾರಿ ಮಾತ್ರ ಆ ಅನುಭವ ಆಗುತ್ತದೆ. ಅದು ಆದ ಬಳಿಕ ಎರಡನೇ ಸಲ ಲೈಂಗಿಕ ಕ್ರಿಯೆ ನಡೆಸಲು ಉತ್ಸಾಹ ಉಳಿಯುವುದಿಲ್ಲ. ಹೀಗೇಕೆ?

ಉತ್ತರ: ಇದು ಪ್ರಕೃತಿ ಸಹಜ. ಗಂಡಸರಿಗೆ ಇಲ್ಲದ, ಆದರೆ ಹೆಣ್ಣು ಮಕ್ಕಳಲ್ಲಿ ಮಾತ್ರ ಇರುವ ವಿಶೇಷವಿದು. ಅವರು ಒಂದೇ ಸಂಭೋಗದ ವೇಳೆ ಎರಡು ಅಥವಾ ಮೂರು ಬಾರಿ ಸುಖದ ಉತ್ತುಂಗದ ಸ್ಥಿತಿ ತಲುಪಬಲ್ಲರು. ಇದನ್ನು ಮಲ್ಟಿಪಲ್‌ ಆರ್ಗ್ಯಾಸಂ ಎನ್ನುತ್ತಾರೆ. ಸೂಕ್ತ ವಾತಾವರಣ ಇದ್ದರೆ, ತುಂಬ ಚೆನ್ನಾಗಿ ಪ್ರೇಮಿಸುವ ಸಂಗಾತಿ ಇದ್ದರೆ, ಮನಸ್ಸು ಪ್ರಫುಲ್ಲವಾಗಿದ್ದರೆ, ಮುನ್ನಲಿವಿನ ಕ್ರಿಯೆಗಳು ಸಮರ್ಪಕವಾಗಿದ್ದರೆ ಆಗ ಹೆಣ್ಣು ಈ ಬಹುಸುಖದ ಸ್ಥಿತಿಯನ್ನು ತಲುಪಬಲ್ಲಳು. ಹಾಗಂತ ಎಲ್ಲರೂ ಈ ಅನುಭವ ಪಡೆಯುತ್ತಾರೆ ಎಂದೇನಿಲ್ಲ. ಕೆಲವರು ಜೀವನಪೂರ್ತಿ ಒಂದು ಆರ್ಗ್ಯಾಸಂಗೆ ತೃಪ್ತರಾಗುತ್ತಾರೆ. ಕೆಲವರು, ಜೀವನಪೂರ್ತಿ ಒಂದೇ ಒಂದು ಬಾರಿಯೂ ಸುಖವನ್ನು ಪಡೆಯುವುದೇ ಇಲ್ಲ! ಇದು ನಿಮಗೆ ವಿಚಿತ್ರ ಅನ್ನಿಸಬಹುದು. ಆದರೆ ಇದು ನಿಜ. ಹೆಚ್ಚಿನ ಗಂಡಸರು ತಮ್ಮ ಸುಖವನ್ನು ಮಾತ್ರ ನೋಡಿಕೊಳ್ಳುತ್ತಾರೆ. ತಮ್ಮ ಸಂಗಾತಿಯ ಸುಖವನ್ನು ಪರಿಗಣಿಸುವುದೇ ಇಲ್ಲ. 

AIDS ಎದುರಿಸಿದ ಪೋರ್ನ್ ಇಂಡಸ್ಟ್ರಿ, ಕೊರೋನಾ ಜೊತೆ ಹೇಗೆ ಹೋರಾಡುತ್ತೆ? 

ಇನ್ನು, ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ. ಗಂಡಸರಿಗೆ ಸೆಕ್ಸ್‌ನ ಚರಮಸ್ಥಿತಿ ಎಂದರೆ ವೀರ್ಯಸ್ಖಲನದ ವೇಳೆ. ಆ ಸಂದರ್ಭದಲ್ಲಿ ದೇಹದ ನರಗಳೆಲ್ಲ ಸಡಿಲಾಗಿ ಸುಖದ ಅಲೆಯಲ್ಲಿ ದೇಹ ತೇಲಿದಂತಾಗುತ್ತದೆ. ಇನ್ನೊಮ್ಮೆ ಅಂಥ ಕ್ಷಣ ಬರಬೇಕಾದರೆ ಮತ್ತೊಮ್ಮೆ ವೀರ್ಯ ಸ್ಖಲನ ಆಗಬೇಕು. ಆದರೆ ಕನಿಷ್ಠ ಎರಡು ಗಂಟೆಗಳ ಕಾಲ ಅದು ಸಾಧ್ಯವಿಲ್ಲ. ಹೀಗಾಗಿ ಗಂಡಸು ಚರಮಸ್ಥಿತಿ ಪಡೆಯುವುದು ಒಂದೇ ಬಾರಿ. ಹೆಣ್ಣಿನ ಯೋನಿಯಲ್ಲಿ ಭಗಾಂಕುರ ಎಂಬ ಒಂದು ಸಣ್ಣ ಭಾಗವಿದೆ. ಯೋನಿಯ ಮೇಲ್ಭಾಗದಲ್ಲಿ, ಸಣ್ಣಗೆ ಹೊರಚಾಚಿಕೊಂಡಂತೆ ಇರುತ್ತದೆ. ಈ ಭಾಗ ಅತ್ಯಂತ ಸಂವೇದನಶೀಲವಾದುದು. ಇಲ್ಲಿಗೆ ಶಿಶ್ನದ ಘರ್ಷಣೆಯಾಗುವ ಸಂದರ್ಭದಲ್ಲಿ ಹೆಣ್ಣು ಸುಖದ ಅನುಭವ ಪಡೆಯುತ್ತಾಳೆ. ಇಲ್ಲಿನ ನರಗಳೂ ತೀವ್ರ ಸಂವೇದನಶೀಲವಾಗಿದ್ದು, ಮೆದುಳಿಗೆ ಸುಖದ ಸಂದೇಶವನ್ನು ಒಯ್ಯುತ್ತವೆ. ಹಲವು ಬಾರಿ ಇವು ಅಂಥ ಸುಖದ ಅನುಭವ ಪಡೆಯಬಲ್ಲವು. ನೀವು ನಿಮ್ಮ ಸಂಗಾತಿಗೆ ಹಲವು ಬಾರಿ ಸುಖದ ಅನುಭವ ಕೊಡಬಲ್ಲಿರಿ ಎಂಬುದು ಸಂತೋಷದ ವಿಷಯ. ಇದು ಆರೋಗ್ಯಕರ.

#FeelFree: ಆ ಜಾಗ ತುರಿಸುತ್ತಲೇ ಇರಬೇಕು ಅನಿಸುತ್ತೆ !

ನೀವು ಒಂದೇ ಸಂಭೋಗದಲ್ಲಿ ಹಲವು ಬಾರಿ ಸುಖ ಅನುಭವಿಸಲು ಸಾಧ್ಯವಿದೆ. ಇದಕ್ಕೆ ಸ್ಟಾಪ್‌ ಆಂಡ್‌ ಸ್ಟಾರ್ಟ್ ಮೆಥಡ್‌ ಅನ್ನುತ್ತಾರೆ. ಅಂದರೆ ಸಂಭೋಗದ ಸಂದರ್ಭದಲ್ಲಿ ಇನ್ನೇನು ವೀರ್ಯ ಸ್ಖಲನವಾಗಲಿದೆ ಅನ್ನುವ ಸಂದರ್ಭದಲ್ಲಿ ನಿಲ್ಲಿಸಬೇಕು, ಸ್ಖಲನವಾಗದಂತೆ ನರಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಕೆಲವು ಸೆಕೆಂಡ್‌ಗಳ ಕಾಲ ಹೀಗೇ ಇದ್ದು, ನಂತರ ಮುಂದುವರಿಸಬಹುದು. ಇದು ಸಂಗಾತಿಯ ಸಹಕಾರವನ್ನೂ ಅಪೇಕ್ಷಿಸುವ ಕ್ರಿಯೆ. ಹಾಗೇ ನೀವು ಇಂಥ ನಿಯಂತ್ರಣದ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕಾದರೆ ಕೆಗೆಲ್‌ ವ್ಯಾಯಾಮವನ್ನು ಮಾಡಬಹುದು. ಕೆಗೆಲ್‌ ವ್ಯಾಯಾಮದ ಬಗ್ಗೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವಿವರಗಳು ಸಿಗುತ್ತವೆ. ಇದು ಮೂತ್ರನಾಳಗಳನ್ನು ಬಿಗಿಹಿಡಿದು ಸಡಿಲ ಮಾಡುವ ಒಂದು ಬಗೆಯ ವ್ಯಾಯಾಮ. ಇದರ ಮೂಲಕ ನಿಮ್ಮ ಸಂಭೋಗದ ಸಮಯದ ಮೇಲೆ ನೀವು ಹಿಡಿತ ಸಾಧಿಸಬಹುದು.