ಕಷ್ಟ ಕಣ್ರೀ..25 ವರ್ಷ ಆದ್ಮೇಲೆ ಈ ಊರಲ್ಲಿ ಸಿಂಗಲ್ ಆಗಿ ಇರೋ ಹಾಗಿಲ್ಲ!
ಇವತ್ತಿನ ದಿನಗಳಲ್ಲಿ ಸಿಂಗಲ್ ಆಗಿರೋರು ಕಡಿಮೆ. ಪ್ರತಿಯೊಬ್ಬರೂ ರಿಲೇಶನ್ ಶಿಪ್‌ನಲ್ಲಿದ್ದುಕೊಂಡು ಲೈಫ್ ಎಂಜಾಯ್ ಮಾಡ್ತಾರೆ. ಒಂದು ನಿರ್ಇಷ್ಟ ವಯಸ್ಸು ಕಳೆದ್ಮೇಲೆ ಸಿಂಗಲ್ ಆಗಿದ್ರೆ ಜನರು ಸಹ ಕೊಶ್ಚನ್ ಮಾಡ್ತಾರೆ. ಆದ್ರೆ ಈ ಊರಲ್ಲಿ ಹಾಗಲ್ಲ. 25 ವರ್ಷ ಆದ್ಮೇಲೆ ಸಿಂಗಲ್ ಆಗಿದ್ರೆ ಜನರೇ ಮಸಾಲೆಗಳನ್ನು ಎಸೆದು ಹಿಂಸೆ ಕೊಡ್ತಾರೆ. ಅರೆ ಹೀಗ್ಯಾಕೆ ಅಂತ ಅಚ್ಚರಿಗೊಳ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.
ಸಿಂಗಲ್... ಆಗಿದ್ರೆ, ನಿಮಗೇನೋ ಖುಷಿ ಇರಬಹುದು, ಆದರೆ ಜನ ಖಂಡಿತವಾಗಿಯೂ ನೆಮ್ಮದಿಯಾಗಿರಲು ಬಿಡೋದಿಲ್ಲ. ಯಾಕಂದ್ರೆ ಜನ ಆಗಾಗ್ಗೆ ಯಾವಾಗ ಮದ್ವೆ (Marriage) ಆಗೋದು, ಇಷ್ಟೂ ವರ್ಷ ಆದ್ರೂ ಮದ್ವೆ ಆಗಿಲ್ವಾ? ಯಾರಾದ್ರೂ ಹುಡುಗನ್ನ ನೋಡಿದ್ಯಾ? ಕೊನೆಗೆ ಆ ಹುಡುಗೀನೆ ಸರಿ ಇಲ್ವೇನೋ ಎಂಬಂತಹ ನಿರ್ಧಾರಕ್ಕೂ ಜನ ಬರ್ತಾರೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಸಿಂಗಲ್ ಆಗಿಯೇ ಉಳಿಯುವವರ ಸಂಖ್ಯೆ ಹೆಚ್ಚಾಗ್ತಿದೆ. ದಾಂಪತ್ಯ (Married life) ಜಂಜಾಟ ಯಾರಿಗೆ ಬೇಕಪ್ಪಾ ಅಂದ್ಕೊಂಡು, ಪ್ರೊಫೆಶನಲ್ ಲೈಫ್‌ನಲ್ಲಿ ಗ್ರೋತ್ ಬೇಕು ಅಂದ್ಕೊಂಡು ಮದುವೆಯಾಗದೆ ಸಿಂಗಲ್ ಆಗಿಯೇ ಉಳಿದು ಬಿಡ್ತಾರೆ. ಸಿಂಗಲ್ ಆಗಿರೋರ ಬಗ್ಗೆ ಜನರು ಸಹ ನಾನಾ ರೀತಿಯಲ್ಲಿ ಮಾತನಾಡ್ತಾರೆ. ಆದ್ರೆ ಈ ಊರಲ್ಲಿ ಸಿಂಗಲ್ ಆಗಿದ್ದುಬಿಟ್ರೆ ಜನ್ರು ಜಸ್ಟ್ ಮಾತನಾಡೋದಷ್ಟೆ ಅಲ್ಲ ಮಸಾಲೆಯನ್ನು (Spice) ಮೈ ಮೇಲೆ ಎಸೆದು ಅವಮಾನ ಮಾಡ್ತಾರೆ.
ಹೌದು, ಅಚ್ಚರಿ ಅನಿಸಿದರೂ ಇದು ನಿಜ. ಡೆನ್ಮಾರ್ಕ್‌ನಲ್ಲಿ ನೀವು ಇನ್ನೂ 25 ವರ್ಷ ವಯಸ್ಸಿನವರಾಗಿದ್ದರೆ, ಜನರು ಬೀದಿಯಲ್ಲಿ ಮಸಾಲೆಗಳನ್ನು ಎಸೆಯುತ್ತಾರೆ. ನಿಮಗೆ ವಯಸ್ಸೂ ಹೆಚ್ಚಾದಂತೆ ಹೀಗೆ ಹೆಚ್ಚೆಚ್ಚು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಈ ಸಂಪ್ರದಾಯವು ನೂರಾರು ವರ್ಷಗಳ ಹಿಂದಿನದು. ಮಸಾಲೆ ಮಾರಾಟಗಾರರು ಬ್ಯಾಚುಲರ್ ಆಗಿ ಉಳಿದವರಿಗೆ ಈ ರೀತಿಯ ಶಿಕ್ಷೆ ನೀಡುತ್ತಾರೆ.
ಪಾರ್ಟ್‌ನರ್ ವಿಷ್ಯದಲ್ಲಿ ಸಿಕ್ಕಾಪಟ್ಟೆ ಚ್ಯೂಸಿನಾ ? ಸಿಂಗಲ್ ಆಗೇ ಉಳ್ಕೊತೀರಾ ಅಷ್ಟೆ!
ಡೆನ್ಮಾರ್ಕ್‌ನಲ್ಲಿ 25 ವರ್ಷದ ನಂತರವೂ ಬ್ಯಾಚುಲರ್ ಆಗಿ ಉಳಿದರೆ ಇಂಥಾ ಶಿಕ್ಷೆ ನೀಡಲಾಗುತ್ತೆ. ಡೆನ್ಮಾರ್ಕ್‌ನ ಬೀದಿಗಳು ಸಾಮಾನ್ಯವಾಗಿ ದಾಲ್ಚಿನ್ನಿಯಿಂದ (Cinnamon) ಮುಚ್ಚಲ್ಪಡುತ್ತವೆ. ಸ್ನೇಹಿತರು ಮತ್ತು ಕುಟುಂಬದವರು ಮಸಾಲೆಯನ್ನು ಎಸೆಯುತ್ತಾರೆ. ಅದನ್ನು ದಾಟಿ ಮುಂದೆ ಹೋಗುವುದು ಸಹ ಕಷ್ಟ. ತಲೆಯಿಂದ ಕಾಲಿನವರೆಗೆ ದಾಲ್ಸಿನ್ನಿ ಮುಚ್ಚಲ್ಪಡುತ್ತದೆ. ದೇಹಕ್ಕೆ ದಾಲ್ಚಿನ್ನಿ ಸರಿಯಾಗಿ ಅಂಟಿಕೊಳ್ಳುವಂತೆ ನೀರನ್ನು ಸಹ ಸಿಂಪಡಿಸುತ್ತಾರೆ. ಇದು ದೀರ್ಘಕಾಲದ ಸಂಪ್ರದಾಯದ (Tradition) ಭಾಗವಾಗಿದೆ.
ಡ್ಯಾನಿಶ್ ವ್ಯಕ್ತಿಯೊಬ್ಬರು ಈ ಸಂಪ್ರದಾಯವು ನೂರಾರು ವರ್ಷಗಳ ಹಿಂದಿನದು ಎಂದು ಹೇಳಿದರು, ಮಸಾಲೆ ಮಾರಾಟಗಾರರು ಸುತ್ತಲೂ ಪ್ರಯಾಣಿಸುವಾಗ ಸಿಂಗಲ್ ಆಗಿಯೇ ಉಳಿಯುತ್ತಾರೆ. ಏಕೆಂದರೆ ಅವರು ಯಾರೊಂದಿಗಾದರೂ ನೆಲೆಸಲು ಸಾಕಷ್ಟು ಸಮಯ ಒಂದೇ ಸ್ಥಳದಲ್ಲಿ ಇರಲಿಲ್ಲ. ಈ ಮಾರಾಟಗಾರರಲ್ಲಿ ಅನೇಕರು ಎಂದಿಗೂ ಪಾಲುದಾರರನ್ನು (Partner) ಹುಡುಕುವುದಿಲ್ಲ ಮತ್ತು ನಂತರ ಅವರನ್ನು ಪೆಬರ್ಸ್ವೆಂಡ್ಸ್ ಎಂದು ಉಲ್ಲೇಖಿಸಲಾಗುತ್ತದೆ, ಅಂದರೆ 'ಪೆಪ್ಪರ್ ಡ್ಯೂಡ್ಸ್'. ಒಂಟಿ ಮಹಿಳೆ (Women)ಯನ್ನು ಹೀಗೆ 'ಪೆಬರ್ಮೊ' ಅಥವಾ 'ಪೆಪ್ಪರ್ ಮೇಡನ್' ಎಂದು ಕರೆಯಲಾಗುತ್ತದೆ.
ಹುಡುಗೀರು ಒಂಟಿ ಒಂಟಿಯಾಗಿರೋದೆ ಇಷ್ಟ ಅನ್ತಿದ್ದಾರಲ್ಲ, ಯಾಕಪ್ಪಾ ಹೀಗೆ ?
ವಯಸ್ಸು ಹೆಚ್ಚಾದಂತೆ ಶಿಕ್ಷೆಯ ರೀತಿ, ಪ್ರಮಾಣ ಹೆಚ್ಚಳವಾಗುತ್ತದೆ. 30ನೇ ಹುಟ್ಟುಹಬ್ಬದಂದು ದಾಲ್ಚಿನ್ನಿಯ ಬದಲು ಮೆಣಸನ್ನು ಜನರಿಗೆ ಎರಚಲಾಗುತ್ತದೆ. ಕೆಲವೊಮ್ಮೆ ಮೊಟ್ಟೆ (Egg) ಗಳನ್ನು ಸಹ ಮಿಶ್ರಣಕ್ಕೆ ಸೇರಿಸುತ್ತಾರೆ. ಏಕೆಂದರೆ ಅದು ಅಂಟಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಎಂಬ ಕಾರಣಕ್ಕಾಗಿ. ಡೆನ್ಮಾರ್ಕ್‌ನಲ್ಲಿ ಮದುವೆಯಾಗುವ ಪುರುಷರ ಸರಾಸರಿ ವಯಸ್ಸು 34 ಮತ್ತು ಮಹಿಳೆಯರಿಗೆ ಇದು 32 ಆಗಿದೆ. ಶಿಕ್ಷೆಗಿಂತ ಹೆಚ್ಚಾಗಿ, ಸಂಪ್ರದಾಯವು ತಮಾಷೆಯಾಗಿ ಪರಿಗಣಿಸಲ್ಪಟ್ಟಿದೆ. ಊರಿನ ಜನರೆಲ್ಲರೂ ಖುಷಿಯಿಂದ ಈ ಸಮಯವನ್ನು ಎಂಜಾಯ್ ಮಾಡುತ್ತಾರೆ.
ಡೆನ್ಮಾರ್ಕ್‍ನಲ್ಲಿ ಈ ಸಂಪ್ರದಾಯ ಇನ್ನೂ ಆಚರಣೆಯಲ್ಲಿ ಇದೆ ಎನ್ನುವುದೇನೋ ನಿಜ. ಹಾಗಂತ, ಇತರರು 25 ಒಳಗೆ ಮದುವೆಯಾಗದೆ ಇದ್ದರೆ ತಪ್ಪು ಎಂದು ಜನರು ಭಾವಿಸುವುದಿಲ್ಲ. ಏಕೆಂದರೆ, ಡ್ಯಾನಿಶ್ ಸಮಾಜದಲ್ಲಿ ಆರಂಭಿಕ ಮದುವೆಗೆ ಯಾವುದೇ ಅವಸರ ಇರುವುದಿಲ್ಲ. ಗಂಡಸರಿಗೆ ಮದುವೆಯಾಗುವ ಸರಾಸರಿ ವಯಸ್ಸು 34 ವರ್ಷಗಳು ಮತ್ತು ಮಹಿಳೆಯರಿಗೆ ಸರಾಸರಿ 32 ವರ್ಷಗಳು.