Asianet Suvarna News Asianet Suvarna News

ಪಾರ್ಟ್‌ನರ್‌ ವಿಷ್ಯದಲ್ಲಿ ಸಿಕ್ಕಾಪಟ್ಟೆ ಚ್ಯೂಸಿನಾ ? ಸಿಂಗಲ್ ಆಗೇ ಉಳ್ಕೊತೀರಾ ಅಷ್ಟೆ!

ಪ್ರತಿಯೊಬ್ಬರೂ ತಮ್ಮನ್ನು ಪ್ರೀತಿಸುವ ಪಾರ್ಟ್‌ನರ್‌ ಯಾವಾಗಲೂ ಜೊತೆಗಿರಬೇಕೆಂದು ಬಯಸುತ್ತಾರೆ. ಆದರೆ ಕೆಲವೊಬ್ಬರು ಎಷ್ಟು ವರ್ಷಗಳಾದ್ರೂ ಸಂಗಾತಿ ದೊರಕದೆ ಸಿಂಗಲ್ ಆಗೇ ಉಳಿದುಬಿಡ್ತಾರೆ. ಅದಕ್ಕೇನು ಕಾರಣ ಅಂತ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ?

Relationship Problems: Because Of These Reasons Boys Remain Single Vin
Author
First Published Oct 5, 2022, 3:20 PM IST

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರೀತಿಯನ್ನು ಬಯಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಎಲ್ಲರೂ ಸೂಕ್ತ ಸಂಗಾತಿಯ ಹುಡುಕಾಟದಲ್ಲಿರುತ್ತಾರೆ. ಆದರೆ ಕೆಲವೊಬ್ಬರು ಅದೆಷ್ಟೋ ಪ್ರಯತ್ನಗಳ ನಂತರವೂ ಒಂಟಿಯಾಗಿ ಉಳಿದುಬಿಡುತ್ತಾರೆ. ಹೀಗೆ ಸಿಂಗಲ್ ಆಗಿ ಉಳಿದುಬಿಡುವವರಲ್ಲಿ ಪುರುಷರೇ ಹೆಚ್ಚು ಮತ್ತು ಅದಕ್ಕೆ ಹಲವಾರು ಕಾರಣಗಳಿವೆ. ಅದೇನೆಂದು ತಿಳಿದುಕೊಳ್ಳೋಣ.

ಪುರುಷರು ತಮ್ಮ ಬಗ್ಗೆಯೇ ಕಾಳಜಿ ವಹಿಸುವುದಿಲ್ಲ: ಹೆಚ್ಚಿನ ಪುರುಷರು ಸಿಂಗಲ್‌ ಲೈಫ್‌ನ್ನು ಎಂಜಾಯ್ ಮಾಡಲು ಬಯಸುತ್ತಾರೆ. ಆದರೆ ತಮ್ಮ ಬಗ್ಗೆ ಯಾವುದೇ ರೀತಿಯಲ್ಲಿ ಕಾಳಜಿ (Care) ವಹಿಸುವುದಿಲ್ಲ. ಇದು ಅವರ ಜೀವನದಲ್ಲಿ ತುಂಬಾ ನಕಾರಾತ್ಮಕ ವಿಧಾನವಾಗಿದೆ. ಏಕೆಂದರೆ ಮಹಿಳೆಯರು (Woman) ತಮ್ಮ ಆರೋಗ್ಯ (Health) ಮತ್ತು ಲುಕ್‌ ಬಗ್ಗೆ ಗಮನ ಹರಿಸದ ಪುರುಷರೊಂದಿಗೆ ಇರಲು ಇಷ್ಟಪಡುವುದಿಲ್ಲ. ಹೀಗಾಗಿ ಇಂಥವರು ಯಾರಿಗೂ ಇಷ್ಟವಾಗದೆ ಸಿಂಗಲ್ ಆಗಿಯೇ ಉಳಿದುಬಿಡುತ್ತಾರೆ.

ಹುಡುಗೀರು ಒಂಟಿ ಒಂಟಿಯಾಗಿರೋದೆ ಇಷ್ಟ ಅನ್ತಿದ್ದಾರಲ್ಲ, ಯಾಕಪ್ಪಾ ಹೀಗೆ ?

ಜೀವನ ನಿರ್ವಹಣೆಗೆ ಪ್ರಯತ್ನ ಪಡದವರು: ಜೀವನ (Life)ದಲ್ಲಿ ಎಲ್ಲರಿಗೂ ಕಷ್ಟಗಳಿರುತ್ತವೆ. ಆದರೆ ಕಷ್ಟವನ್ನು ಸಮರ್ಥವಾಗಿ ಎದುರಿಸಲು ತಿಳಿದಿರಬೇಕು. ಆದರೆ ಕೆಲವೊಬ್ಬರಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ಹೇಗೆ ಎದುರಿಸಬೇಕು ಎಂಬುದೇ ತಿಳಿದಿರುವುದಿಲ್ಲ. ಕಷ್ಟಗಳು ಬಂದಾಗ ಹತಾಶರಾಗಿ ಕೈ ಚೆಲ್ಲಿ ಕುಳಿತುಬಿಡುತ್ತಾರೆ. ತಮ್ಮ ಜೀವನ ನಿರ್ವಹಣೆಗೆ ಸ್ವಲ್ಪವೂ ಪ್ರಯತ್ನಿಸದ ಪುರುಷರ ಬಗ್ಗೆ ಮಹಿಳೆಯರು ಬಹುಬೇಗ ಆಕರ್ಷಿತರಾಗುವುದಿಲ್ಲ. ಅಂತಹ ಜನರ ಬಗ್ಗೆ ಅವರ ವರ್ತನೆ (Behaviour) ಯಾವಾಗಲೂ ಕಠಿಣವಾಗಿರುತ್ತದೆ. ಅಭ್ಯಾಸ ಮತ್ತು ಸ್ವಭಾವದಲ್ಲಿ ಉತ್ತಮವಾಗಿದ್ದರೂ ಹೀಗಿರುವ ಯುವಕರು ಸಿಂಗಲ್ ಆಗಿ ಉಳಿದುಬಿಡುತ್ತಾರೆ.

ಕಡಿಮೆ ಸ್ವಾಭಿಮಾನವಿರುವವರು: ತಮ್ಮ ಇಷ್ಟ-ಅನಿಷ್ಟಗಳ ಬಗ್ಗೆ ವಿಶ್ವಾಸವಿಲ್ಲದ ಪುರುಷರ ಜೊತೆ ಮಹಿಳೆಯರುಬೆರೆಯಲು ಇಷ್ಟಪಡುವುದಿಲ್ಲ. ಏಕೆಂದರೆ ಆತ್ಮಸ್ಥೈರ್ಯವು (Confidence) ಅತ್ಯಂತ ಆಕರ್ಷಕವಾದ ಗುಣವಾಗಿದೆ. ಇದು ಕ್ಷಣದಲ್ಲಿ ಯಾರ ಮನಸ್ಸನ್ನು ಸಹ ನಿಮ್ಮ ಕಡೆಗೆ ಆಕರ್ಷಿಸುತ್ತದೆ. ಜೀವನದುದ್ದಕ್ಕೂ ಆತ್ಮಸ್ಥೈರ್ಯದ ಕೊರತೆಯಿಂದ ಬಳಲುವವರು ಏಕಾಂಗಿಯಾಗಿ ಉಳಿದುಬಿಡುತ್ತಾರೆ.

Relationship Tips: ಸಿಂಗಲ್ಲಾ? ಸಂಗಾತಿ ಹುಡುಕಾಟದಲ್ಲಿ ಹತಾಶರಾಗ್ಬೇಡಿ

ಕಳಪೆ ಫ್ಲರ್ಟಿಂಗ್ ಕೌಶಲ್ಯಗಳು: ಫ್ಲರ್ಟಿಂಗ್ ಕೌಶಲ್ಯಗಳು ಕಳಪೆಯಾಗಿರುವ ಪುರುಷರನ್ನು (Men) ಮಹಿಳೆಯರು ಇಷ್ಟಪಡುವುದಿಲ್ಲ. ಅಂತಹವರಿಗೆ ಡೇಟಿಂಗ್ ಮತ್ತು ಸಂಬಂಧಗಳ ಬಗ್ಗೆ ಚೆನ್ನಾಗಿ ಮಾತನಾಡಲು ತಿಳಿದಿರುವುದಿಲ್ಲ. ತನ್ನಲ್ಲಿ ಮಹಿಳೆಯರು ಏನು ಇಷ್ಟಪಡುತ್ತಾರೆ ಮತ್ತು ಇಷ್ಟಪಡುವುದಿಲ್ಲ ಎಂಬುದನ್ನು ಇಂಥಾ ಪುರುಷರು ಎಂದಿಗೂ ತಿಳಿದುಕೊಳ್ಳುವುದಿಲ್ಲ. ಹೀಗಾಗಿ ತಮ್ಮನ್ನು ಅವರು ಇಂಪ್ರೂವ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಏಕಾಂಗಿಯಾಗಿಯೇ ಜೀವನ ನಡೆಸುತ್ತಾರೆ. .

ತುಂಬಾ ನಾಚಿಕೆ ಸ್ವಭಾವದವರು: ತುಂಬಾ ನಾಚಿಕೆಪಡುವ (Shy) ಸ್ವಭಾವ  ಕೂಡಾ ಪುರುಷರು ಒಂಟಿಯಾಗಿ ಉಳಿಯಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಂತಹ ಪುರುಷರು ಬೇಗನೆ ಜನರೊಂದಿಗೆ ಬೆರೆಯುವುದಿಲ್ಲ. ಹೀಗಾಗಿ ಅವರು ಏಕಾಂಗಿಯಾಗಿರುತ್ತಾರೆ. ವಾಸ್ತವವಾಗಿ, ಅಂತರ್ಮುಖಿ ವ್ಯಕ್ತಿಯು ಸರಿಯಾಗಿ ಮಾತನಾಡಲು ಸಾಧ್ಯವಾಗದ ಕಾರಣ ಉತ್ತಮ ಸಂಬಂಧ (Relationship)ವನ್ನು ಕಳೆದುಕೊಳ್ಳುತ್ತಾರೆ. ಪುರುಷರು ಅವಿವಾಹಿತರಾಗಿ ಉಳಿಯಲು ಇದೂ ಒಂದು ಮುಖ್ಯ ಕಾರಣ.

ಒಂಟಿ ಜೀವನದ ಸುಖ ತಾತ್ಕಾಲಿಕ, ಆಯಸ್ಸೇ ಕಡಿಮೆಯಾಗುತ್ತೆ ಅನ್ನುತ್ತೆ ಅಧ್ಯಯನ

ತುಂಬಾ ಚ್ಯೂಸಿ ಸ್ವಭಾದವರು: ಜೀವನದಲ್ಲಿ ಹಲವು ಆಯ್ಕೆಗಳನ್ನು ಮಾಡಿದರೂ ಪರವಾಗಿಲ್ಲ. ಆದರೆ ಮದುವೆಯ ವಿಷಯದಲ್ಲಿ ಹೆಚ್ಚು ಆಯ್ಕೆ (Choice) ಮಾಡುವುದು ಒಳ್ಳೆಯದಲ್ಲ. ಕೆಲವು ಪುರುಷರು ಇದೇ ಕಾರಣಕ್ಕೆ ಹಲವು ಹುಡುಗಿಯರನ್ನು ತಿರಸ್ಕರಿಸುತ್ತಾರೆ. ಏಕೆಂದರೆ ಅವರು ತಮ್ಮ ಜೀವನ ಸಂಗಾತಿಯಲ್ಲಿ ಹಲವು ಗುಣಗಳನ್ನು ಬಯಸುತ್ತಾರೆ. ಆದರೆ ಯಾರೂ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ ಎಂಬುದನ್ನು ಇಂಥವರು ಅರ್ಥ ಮಾಡಿಕೊಳ್ಳುವುದಿಲ್ಲ.

ಹಿಂದಿನ ಕೆಟ್ಟ ಸಂಬಂಧದ ಅನುಭವ: ಈ ಹಿಂದೆ ಸಂಬಂಧದಲ್ಲಿದ್ದಾಗ ಕೆಟ್ಟ ಅನುಭವ (Experience) ಆಗಿದ್ದರೆ ಇದು ಪುರುಷರು ಒಂಟಿಯಾಗಿಯೇ ಇರುವ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗುತ್ತದೆ. ಹಿಂದಿನ ಸಂಬಂಧಗಳ ನೋವು ಮತ್ತು ದ್ರೋಹವು ಪುರುಷರಿಗೆ ಮಹಿಳೆಯರ ಮೇಲಿನ ದೃಷ್ಟಿಕೋನವನ್ನೇ ಬದಲಾಯಿಸಿಬಿಡುತ್ತದೆ. ಇಂಥವರು ಎಷ್ಟೇ ಸ್ಟ್ರಾಂಗ್ ಆಗಿದ್ದರೂ ತಮ್ಮ ಹಿಂದಿನ ಸಂಬಂಧಗಳಲ್ಲಿನ ಕೆಟ್ಟ ಅನುಭವಗಳಿಂದ ಬೇಗನೆ ಚೇತರಿಸಿಕೊಳ್ಳುವುದಿಲ್ಲ.

Follow Us:
Download App:
  • android
  • ios