Asianet Suvarna News Asianet Suvarna News

ನಿಮ್ಮ ಸಂಗಾತಿ ನಿಮ್ಮ ಫೋನ್‌ ಚೆಕ್ ಮಾಡ್ತಾರಾ? ಅವರಿಗೆ ಈ ಸಮಸ್ಯೆ ಇರಬಹುದು!

ಕೆಲವರಿಗೆ ತಮ್ಮ ಗಂಡನ ಅಥವಾ ಹೆಂಡತಿಯ ಅಥವಾ ಗರ್ಲ್‌ಫ್ರೆಂಡ್- ಬಾಯ್‌ಫ್ರೆಂಡ್‌ನ ಫೋನನ್ನು ಕದ್ದು ಕದ್ದು ನೋಡುವ ಚಟ. ಇದು ಯಾಕೆ ಗೊತ್ತೆ?

If your spouse checks your phone there may be psychological problems
Author
Bengaluru, First Published Dec 14, 2020, 3:40 PM IST

ಕೆಲವರಿಗೊಂದು ಅಭ್ಯಾಸವಿದೆ. ತಮ್ಮ ಗಂಡನ ಅಥವಾ ಹೆಂಡತಿಯ ಫೋನನ್ನು ಆಗಾಗ ಚೆಕ್ ಮಾಡ್ತಾ ಇರುವುದು. ಇದನ್ನು ನೀವೂ ಗಮನಿಸಿಯೇ ಇರುತ್ತೀರಿ. ಹೀಗೆ ಪದೇ ಪದೇ ಚೆಕ್ ಮಾಡಿ, ಅದರಲ್ಲಿರೋ ಸಂದೇಶಗಳನ್ನು ಓದುವ ಅಭ್ಯಾಸ ಇರುವವರಿಗೆ ಕೆಲವು ಮಾನಸಿಕ ಸಮಸ್ಯೆಗಳೂ ಇರುಬಹುದು ಅನ್ನುತ್ತದೆ ಸೈಕಾಲಜಿ. ಅವೇನು ಗೊತ್ತಾ?

ಕೀಳರಿಮೆ ಇರಬಹುದು
ಹೀಗೆ ಮಾಡುವವರಿಗೆ ತಮ್ಮ ಬಗ್ಗೆ ಕೀಳರಿಮೆ ಇರಬಹುದು. ತಮ್ಮ ಸಂಗಾತಿಗೆ ತಾವು ಸೂಕ್ತ ವ್ಯಕ್ತಿ ಅಲ್ಲ ಅನಿಸ್ತಾ ಇರಬಹುದು. ಅವರಿಗೆ ಸೂಕ್ತ ವ್ಯಕ್ತಿ ಅನಿಸಿಕೊಳ್ಳೋಕೆ ಏನು ಮಾಡಬೇಕು ಎಂಬ ಹುಡುಕಾಟದಲ್ಲಿರಬಹುದು ಅವರು. ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಮತ್ತಿತರ ವಿರಗಳನ್ನು ಚೆಕ್ ಮಾಡುತ್ತಾ ಇರಬಹುದು.

ತೃಪ್ತಿ ಇರಲಿಕ್ಕಿಲ್ಲ
ಈ ಸಾಂಗತ್ಯ ಅಥವಾ ದಾಂಪತ್ಯದಲ್ಲಿ ನಿಮ್ಮ ಸಂಗಾತಿಗೆ ತೃಪ್ತಿ ಇರಲಿಕ್ಕಿಲ್ಲ. ಆರೋಗ್ಯಕರ ದಾಂಪತ್ಯದಲ್ಲಿ ನಂಬಿಕೆ ಅತ್ಯವಶ್ಯಕ. ಅದು ಇಲ್ಲವಾದರೆ, ನಿಮ್ಮ ಗಂಡ ಅಥವಾ ಹೆಂಡತಿ ನಿಮ್ಮ ಫೋನನ್ನು ಪದೇ ಪದೇ ಚೆಕ್ ಮಾಡುತ್ತಾ ಇದ್ದರೆ ಅವರು ನಿಮಗೆ ಇತರ ಸಂಬಂಧ ಇರಬಹುದಾ ಅಂತ ಒಂದು ಕಣ್ಣಿಟ್ಟಿದ್ದಾರೆ ಅಂತ ಅರ್ಥ. ಒಂದು ಬೆಗಯ ಅನುಮಾನ ನಿಮ್ಮ ಬಗ್ಗೆ ಇರಬಹುದು.

ಅನೈತಿಕ ವಿಚಾರ
ಕೆಲವೊಮ್ಮೆ ಅನೈತಿಕ ಸಂಬಂಧದಲ್ಲಿ ತೊಡಗಿರುವ ವ್ಯಕ್ತಿ, ದಾಂಪತ್ಯದಲ್ಲಿರುವ ಇನ್ನೊಬ್ಬ ವ್ಯಕ್ತಿಯಿಂದಲೂ ಅದನ್ನೇ ನಿರೀಕ್ಷಿಸಬಹುದು. ತನ್ನ ಸಂಗಾತಿಯೂ ತನಗೆ ವಂಚನೆ ಮಾಡುತ್ತಾ ಇರಬಹುದು ಎಂಬ ಭಾವನೇ ಹೀಗೆ ಮಾಡುವಂತೆ ಪ್ರಚೋದಿಸಬಹುದು. ಅಂದರೆ ಇವರು ಒಳಗಿಂದೊಳಗೆ ಅಭದ್ರತಾ ಭಾವನೆ ಅನುಭವಿಸುತ್ತಾ ಇರುತ್ತಾರೆ.

ನಂಬಿಕೆಯ ಸಮಸ್ಯೆ
ನಿಮ್ಮ ಸಂಗಾತಿಗೆ ನಂಬಿಕೆಯ ಸಮಸ್ಯೆ ಇರಬಹುದು. ಈ ಹಿಂದೆ ಯಾರನ್ನೋ ನಂಬಿ ಮೋಸಹೋದ ಅನುಭವ ಇರಲೂಬಹುದು. ಅದರಿಂದಾಗಿ ತನ್ನ ಸಂಗಾತಿಯನ್ನು ಆಗಾಗ ಚೆಕ್ ಮಾಡುವ ಬುದ್ಧಿ ಬಂದಿರಬಹುದು. ತನ್ನ ಈಗಿನ ಸಂಗಾತಿಯೂ ನಂಬಿಕೆಗೆ ಅರ್ಹ ಎಂದು ಖಚಿತಪಡಿಸಿಕೊಳ್ಳುವ ಇರಾದೆ ಇರಬಹುದು.

ಗಡಿಗೆರೆ ಗೊತ್ತಿಲ್ಲದಿರುವುದು
ನಿಮ್ಮ ಸಂಗಾತಿಗೆ ಸಂಬಂಧದಲ್ಲಿ ಒಂದು ಆರೋಗ್ಯಕರ ಬೌಂಡರಿ ನಿಗದಿಪಡಿಸಿಕೊಳ್ಳುವುದು ಗೊತ್ತಿಲ್ಲದೆ ಇರಬಹುದು. ಪ್ರತಿಯೊಂದು ಬಾಂಧವ್ಯದಲ್ಲಿಯೂ ಒಂದು ಆರೋಗ್ಯಕರ ಬೌಂಡರಿಯನ್ನು ಗುರುತಿಸಿಕೊಂಡು ಅದನ್ನು ಪಾಲಿಸುವ ಜರೂರತ್ತು ಇರುತ್ತದೆ. ಅದನ್ನು ದಾಟಿದಾಗ ಸಂಘರ್ಷ ಶುರುವಾಗುತ್ತದೆ ಎಂಬುದನ್ನುತುಂಬಾ ಮಂದಿ ಅರ್ಥ ಮಾಡಿಕೊಂಡೇ ಇರುವುದಿಲ್ಲ.

ಸದಾ ಸುಖಿಯಾಗಿರೋಕೆ ಐದೇ ಸೂತ್ರ! ಏನವು..? ಇಲ್ಲಿ ಓದಿ ...

ಮುಕ್ತತೆ ಇಲ್ಲದಿರುವಿಕ
ನಿಮ್ಮ ಸಂಗಾತಿ ನಿಮ್ಮ ಜೊತೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಲು ಹೆದರುತ್ತಿರಬಹುದು. ತಮ್ಮಲ್ಲಿ ಮುಕ್ತತೆ ಇಲ್ಲದಿರುವುದರಿಂದ ಇನ್ನೊಬ್ಬರಲ್ಲೂ ಅದನ್ನೇ ಶಂಕಿಸಿ, ಅವರ ಫೋನನ್ನು ಇಣುಕಿ ನೋಡುವುದು ಸ್ವಭಾವ ಆಗಿಬಿಡುತ್ತದೆ.

If your spouse checks your phone there may be psychological problems

ಮಾತನಾಡಿಲ್ಲವಾ?
ನೀವು ನಿಮ್ಮ ಸಂಗಾತಿಯ ಜೊತೆಗೆ ತುಂಬಾ ದಿನಗಳಿಂದ ಸರಿಯಾಗಿ ಮಾತನಾಡಿಲ್ಲದೇ ಇದ್ದರೆ, ನಿಮ್ಮಿಬ್ಬರ ಮಧ್ಯೆ ಸಂವಹನ ಸರಿಯಾಗಿ ಏರ್ಪಟ್ಟಿಲ್ಲದೇ ಬ್ರೇಕ್‌ಡೌನ್ ಆಗಿದ್ದರೆ ಅಂಥ ಹೊತ್ತಿನಲ್ಲಿ ಅವರು ನಿಮ್ಮ ಫೋನ್‌ ತಪಶೀಲು ಮಾಡುವ ಇರಾದೆ ತೋರಬಹುದು.

ರೊಮ್ಯಾನ್ಸ್ ಹೆಚ್ಚಿಸಲು ರೊಮ್ಯಾಂಟಿಕ್ ಸೂತ್ರಗಳು..! ...

ಗಂಭೀರವಾಗಿಲ್ಲದೆ ಇರಬಹುದು
ನಿಮ್ಮ ಸಂಗಾತಿ ನಿಮ್ಮಿಬ್ಬರ ಸಂಬಂಧದ ಬಗ್ಗೆ ಸೀರಿಯಸ್ಸಾಗಿ ಇಲ್ಲದೆ ಇರಬಹುದು. ಯಾವ ಕ್ಷಣದಲ್ಲೂ ಮುರಿದುಕೊಳ್ಳಲು ಬಯಸುತ್ತಾ ಇರಬಹುದು. ಅದಕ್ಕಾಗಿ ಜಗಳವಾಡಲು ಕಾರಣ ಹುಡುಕುತ್ತಾ ಇರಬಹುದು.

ಹಾಗೇ ಸುಮ್ಮನೇ
ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ನಿಮ್ಮ ಫೋನನ್ನು ನೋಡುತ್ತಲೂ ಇರಬಹುದು. ಅಥವಾ ನಿಮಗೊಂದು ಸರ್‌ಪ್ರೈಸ್ ಕೊಡುವ ಉದ್ದೇಶವೂ ಇರಬಹುದು.

8 ವರ್ಷ ಡೇಟ್ ಮಾಡಿ ಮದ್ವೆ ಬೇಡ ಎಂದ ಬಾಯ್‌ಫ್ರೆಂಡ್: ಹಠಮಾರಿ ಗರ್ಲ್‌ಫ್ರೆಂಡ್ ಮಾಡಿದ್ದೇನು ನೋಡಿ ...

 

Follow Us:
Download App:
  • android
  • ios