ಡೇಟ್ ಮಾಡೋರಿಗೆ ಬೇಕಾದಷ್ಟು ಡೇಟಿಂಗ್ ಎಪ್ಲಿಕೇಷನ್‌ಗಳಿವೆ, ಸೋಷಿಯಲ್ ಮೀಡಿಯಾದಲ್ಲಿಯೂ ಸಂಬಂಧಗಳು ಬೆಳೆಯುತ್ತೆ, ಇದರಲ್ಲಿ ಸುಮ್ಮನೆ ಖುಷಿಗೆ ಫ್ಲರ್ಟ್ ಮಾಡೋರಿಂದ, ಒಮ್ಮೆಯೂ ಭೇಟಿಯಾಗದೆ ಮದುವೆಯಾಗೋ ತನಕ ಸಂಬಂಧ ಬೆಳೆಯುತ್ತದೆ.

ಆದ್ರೆ ಮದುವೆಯಾಗೋಕೆ ಯಾವ ಆಸಕ್ತಿ, ಪ್ಲಾನ್ ಇಲ್ಲಾ ಅಂದ್ರೂ ಡೇಟ್ ಮಾಡ್ತಾ, ಜಾಲಿಯಾಗಿ ಸುತ್ತಾಡೋಕೆ ಒಬ್ರು ಇರ್ಲಿ ಅಂತ ರಿಲೇಷನ್‌ಶಿಪ್ ಮಾಡೋರು ಇದನ್ನ ಓದ್ಲೇಬೇಕು. ಇಲ್ಲೊಬ್ಬ ಯುವತಿ ಡೇಟ್ ಮಾಡಿ ಮದುವೆಯಾಗದ ಬಾಯ್‌ಫ್ರೆಂಡ್‌ಗೆ ಮಾಡಿದ್ದೇನು ಗೊತ್ತಾ..?

ಲಿವ್ ಇನ್‌ನಲ್ಲಿದ್ದ ಸಹೋದರಿಯರು ಮದುವೆಯಾದ್ರು.. ಒಟ್ಟಿಗೆ ಬಾಳ್ತೆವೆ!

ಒಂದೆರಡಲ್ಲ, ಬರೋಬ್ಬರಿ 8 ವರ್ಷ ಡೇಟಿಂಗ್ ಮಾಡಿದ ಬಾಯ್‌ಫ್ರೆಂಡ್‌ ಒಂದು ಮಗುವಾದ ಮೇಲೂ ಮದುವೆಯಾಗೋ ಯೋಚನೆಯನ್ನೇ ಮಾಡಿಲ್ಲ. ಹೇಳಿ ಹೇಳಿ ಈಕೆಗೂ ಸಾಕಾಯ್ತು. ಸೀದಾ ಕಾನೂನು ಮೊರೆ ಹೋದ್ಲು ಈಕೆ

ಆಫ್ರಿಕಾದಲ್ಲಿ ನಡೆದ ಘಟನೆ ಟೈಂ ಪಾಸ್ ರಿಲೇಷನ್‌ಶಿಪ್ ಮಾಡೋರಿಗೆಲ್ಲಾ ಪಾಠ. ಝಂಬೀಯಾ ಕೋರ್ಟ್‌ಗೆ ಬಂದ ಗೆಟ್ರೂಡ್ ಗೋಮಾ, ಬಾಯ್‌ಫ್ರೆಂಡ್ ಹರ್ಬರ್ಟ್ ಸಲಾಲಿಕಿ ಮದುವೆಯಾಗ್ತಾನೆ ಅಂತ ಕಾದು ಸಾಕಾಯ್ತು ಎಂದು ಹೇಳಿದ್ದಾಳೆ.

ದಾಂಪತ್ಯದ ನೆಮ್ಮದಿ ಕೆಡಿಸೋ ಮಾತುಗಳು ಯಾವುವು ಗೊತ್ತಾ?

26 ವರ್ಷದ ಗೋಮಾ ಈಗಲೂ ತನ್ನ ಪೋಷಕರ ಜೊತೆಗೇ ಬದುಕುತ್ತಿದ್ದು, ಈ ಜೋಡಿಗೆ ಮಗು ಕೂಡಾ ಇದೆ. ಸಲಾಲಿಕಿಗೆ 28 ವರ್ಷ. ಅವನು ಬೇರೆ ಮನೆಯಲ್ಲಿ ಬದುಕುತ್ತಿದ್ದಾನೆ ಎಂದು ಗೋಮಾ ಆರೋಪಿಸಿದ್ದಾಳೆ.

ನಂಗೆ ನನ್ನ ಪಾರ್ಟ್‌ನರ್ ಮೋಸ ಮಾಡುತ್ತಿದ್ದಾನೆ ಎಂದನಿಸುತ್ತಿದೆ. ಬೇರೆ ಯುವತಿ ಜೊತೆಗೂ ಅವನು ಸೆಕ್ಸ್ ಮಾಡ್ತಿದ್ದಾನೆ ಎಂದು ಗೋಮಾ ಆರೋಪಿಸಿದ್ದಾಳೆ. ನನ್ನನ್ನು ಮದುವೆಯಾಗುತ್ತೇನೆ ಎಂದು ಪ್ರಾಮಿಸ್ ಮಾಡಿ ಮೋಸ ಮಾಡಿದ್ದಾನೆ ಎಂದದ್ದಾಳೆ.

ವರದಕ್ಷಿಕಣೆಯನ್ನೂ ಕೊಟ್ಟಾಗಿದೆ:

ಜಾಂಬಿಯಾದಲ್ಲಿ ಗಂಡಂದಿರು ತಮ್ಮ ಉದ್ದೇಶಿತ ವಧುವಿನ ಕುಟುಂಬಕ್ಕೆ ವರದಕ್ಷಿಣೆ ನೀಡುತ್ತಾರೆ. ಇದನ್ನು ಲೋಬೋಲಾ ಅಥವಾ ಮೆಚ್ಚುಗೆಯ ಶುಲ್ಕ ಎಂದು ಕರೆಯಲಾಗುತ್ತದೆ. ಮತ್ತು ಅವನು ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಂಕೇತವಾಗಿ ಇದನ್ನು ಪರಿಗಣಿಸಲಾಗುತ್ತದೆ.

ಡೌರಿ ಏನೋ ಕೊಟ್ಟಿದ್ದಾನೆ. ಆದರೆ ಆತನ ಮಗುವಿಗೆ ತಾಯಿಯಾದ ನನ್ನನ್ನು ಮದುವೆಯಾಗೋ ಮಾತು ಉಳಿಸಿಕೊಂಡಿಲ್ಲ ಎಂದು ಗೋಮಾ ಆರೋಪಿಸಿದ್ದಾಳೆ. ಕಾದು ಕಾದು ಸುಸ್ತಾಗಿ ಈಕೆ ಕೋರ್ಟ್‌ಗೆ ದೂರು ನೀಡಲು ನಿರ್ಧರಿಸಿದ್ದಾಳೆ.

ಈ ರೀತಿಯ ಹುಡುಗರಿಗೆ ಕ್ಲೀನ್ ಬೋಲ್ಡ್ ಆಗುತ್ತಾರೆ ಹುಡುಗಿಯರು..

ಅವನು ಸ್ವಲ್ಪಾನೂ ಸೀರಿಯಸ್ ಆಗಿಲ್ಲ. ಹಾಗಾಗಿ ನಾನು ಕಾನೂನಿನ ನೆರವು ಪಡೆಯುತ್ತಿದ್ದೇನೆ. ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಹಕ್ಕು ಇದೆ ಎಂದಿದ್ದಾಳೆ ಗೋಮಾ. ನನ್ನಲ್ಲಿ ಮದುವೆಯಾಗೋಕೆ ಬೇಕಾದಷ್ಟು ಹಣವಿಲ್ಲ, ಆಕೆ ನನ್ನ ಕಡೆ ಜಾಸ್ತಿ ಗಮನವನ್ನೂ ಕೊಡುತ್ತಿಲ್ಲ ಎಂದು ಸಲಾಲಿಕಿ ಆರೋಪಿಸಿದ್ದಾನೆ.

ಇವರಿಬ್ಬರೂ ಮದುವೆಯಾಗದ ಕಾರಣ ಈ ಸಂಬಂಧ ಸರಿ ಮಾಡೋಕೆ ಕೋರ್ಟ್ ಹೆಚ್ಚೇನೂ ಮಾಡೋ ಸಾಧ್ಯತೆ ಕಡಿಮೆ ಇದೆ. ಈ ಜೋಡಿ ಕೋರ್ಟ್‌ನಿಂದ ಹರಗೆ ತಮ್ಮ ಸಂಬಂಧ ಸರಿ ಮಾಡೋಕೆ ಪ್ರಯತ್ನಿಸಬೇಕು ಎಂದು ಜಡ್ಜ್ ಸಲಹೆ ನೀಡಿದ್ದಾರೆ.