ಕೋಪಗೊಳ್ಳೋ ಮಕ್ಕಳನ್ನು ಕರೆಕ್ಟಾಗಿ ಸಂಭಾಳಿಸೋದು ಹೇಗೆ? ಇಲ್ಲಿದೆ ಟಿಪ್ಸ್

ಹೇಳಿಕೇಳಿ ಬೇಸಿಗೆ ರಜೆ. ಮಕ್ಕಳು ಮನೆಯಲ್ಲೇ ಇರುತ್ತಾರೆ. ಅವರ ತುಂಟಾಟ, ಗಲಾಟೆ ನಡುವೆ ಕೆಲವೊಮ್ಮೆ ವಿಪರೀತ ಸಿಟ್ಟೂ ಪೋಷಕರನ್ನು ತಬ್ಬಿಬ್ಬು ಮಾಡುತ್ತದೆ. ಮಕ್ಕಳ ಈ ಸಿಟ್ಟನ್ನು ಸಂಭಾಳಿಸೋದು ಹೇಗೆ?

How to control kids

ಇದು ಬೇಸಿಗೆ ರಜೆ. ಮಕ್ಕಳು ಮನೆಯಲ್ಲೇ ಇರುತ್ತಾರೆ. ಈ ಸಮಯದಲ್ಲಿ ಅವರ ಕೋಪ, ಗಲಾಟೆ ಎಲ್ಲ ಜೋರಾಗಿರುತ್ತೆ. ಈ ಸಮಯದಲ್ಲಿ ಮಕ್ಕಳನ್ನು ನಿರ್ವಹಿಸೋದೂ ಒಂದು ಕಲೆ. ಅದರಲ್ಲೂ ಕೆಲವೊಮ್ಮೆ ಮಕ್ಕಳು ಅನಾವಶ್ಯಕ ಹಠ ಮಾಡೋದು, ಕೋಪ ಮಾಡೋದು ಎಲ್ಲ ಕಾಮನ್. ಅವರ ಈ ಸ್ವಭಾವವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಹೋದರೆ ಅದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳು ಕೋಪಗೊಂಡಾಗ ಸಾಮನ್ಯವಾಗಿ ಪೋಷಕರು ಕೋಪ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಕೋಪ ಕಡಿಮೆ ಆಗೋದಿಲ್ಲ. ಆ ಜಾಗದಲ್ಲಿ ಬೇಸರವೂ ಸೇರಿಕೊಳ್ಳುತ್ತದೆ. ಅಪ್ಪ ಅಮ್ಮನ ಬಗ್ಗೆ ಅವರ ತಪ್ಪು ತಿಳಿವಳಿಕೆ ಹೆಚ್ಚಬಹುದು. ಹಾಗಾದರೆ ಮಕ್ಕಳಿಗೆ ಸಿಟ್ಟು ಬಂದಾಗ ಅದನ್ನು ಕಡಿಮೆ ಮಾಡುವುದು ಹೇಗೆ? ಪೋಷಕರು ಏನು ಮಾಡಬೇಕು ಇಲ್ಲಿದೆ ಮಾಹಿತಿ ಇಲ್ಲಿದೆ.

ಪೋಷಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ನಡುವೆ ಗೊಂದಲ ಏರ್ಪಡುವುದು ಸಹಜ. ಈ ಗೊಂದಲ ಸ್ಪಷ್ಟ ವಾಗುವುದರಿಂದಲೇ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ಸಾಧ್ಯ. ಅದಕ್ಕೂ ಮೊದಲು ಅವರ ಜೀವನಕ್ಕೆ ಅಗತ್ಯವಾದ ಮೌಲ್ಯಗಳು ಮತ್ತು ಕೌಶಲಗಳನ್ನು ಸಹ ಕಲಿಸಬೇಕಾಗುತ್ತದೆ. ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ. ಆದರೆ ಸಮಯಾನುಸಾರ ಮಕ್ಕಳು ಕೋಪೋದ್ರಿಕ್ತರಾಗುವುದು ಪೋಷಕರಿಗೆ ಕಷ್ಟಕರವಾಗಬಹುದು

ಕೆಲವೊಮ್ಮೆ, ಮಕ್ಕಳ ಕೋಪ ಪೋಷಕರನ್ನು ಕೋಪಗೊಳ್ಳುವಂತೆ ಮಾಡಬಹುದು, ವಿಶೇಷವಾಗಿ ಕೆಲವು ಮಕ್ಕಳಿಗೆ ಆಗಾಗ ಕೋಪ ಬರುವುದರಿಂದ ಪೋಷಕರು ಇದನ್ನು ಹೇಗೆ ನಿರ್ವಹಿಸಬೇಖು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

Parenting Tips : ಮಕ್ಕಳಿಗೆ ಮೊಬೈಲ್ ಫೋನ್ ನೀಡಲು ಇದು ಬೆಸ್ಟ್

ಮಕ್ಕಳು ಕೋಪಗೊಂಡಾಗ ನಾವು ಅವರಿಗಿಂತತ ಹೆಚ್ಚು ಕೋಪ ಮಾಡಿಕೊಂಡು ಮಗುವನ್ನು ಕೋಣೆಗೆ ಹೋಗುವಂತೆ ಹೇಳಬಾರದು.ಮಕ್ಕಳು ಕೋಪ ಮಾಡಿಕೊಂಡಾಗ ಜಾಗರೂಕರಾಗಿರಬೇಕು. ಎಲ್ಲಿಯಾದರೂ ಮಕ್ಕಳ ಭಾವನೆಗಳನ್ನು ಏಕಾಂಗಿಯಾಗಿ ವ್ಯವಹರಿಸುವಂತೆ ಮಾಡಿದಲ್ಲಿ ಅವರ ಭಾವನೆಗಳು ತಮ್ಮ ಹೆತ್ತವರಿಗೆ ನಿಭಾಯಸಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾರೆ. ಇದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹಾಗಾಗಿ ಕೋಪ ಬಂದ ಮಕ್ಕಳನ್ನು ನೀವೇ ನಿಭಾಯಿಸಿ.

ಏನೇ ಇರಲಿ, ಮಕ್ಕಳ ಕೋಪವನ್ನು ಹೃದಯಕ್ಕೆ ತೆಗೆದುಕೊಳ್ಳಬಾರದು. ಕೆಟ್ಟದಾಗಿ ಭಾವಿಸಬಾರದು. ಬದಲಾಗಿ ಮಗುವು ಆಗಾಗ್ಗೆ ಕೋಪಗೊಳ್ಳಲು ಆಳವಾಗಿ ಬೇರೂರಿರುವ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು ಮತ್ತು ಅದನ್ನು ಒಳ್ಳೆ ರೀತಿಯಲ್ಲಿ ಪರಿಹರಿಸಬೇಕು. ಕೆಲವೊಮ್ಮೆ ಪೋಷಕರು ಸೃಷ್ಟಿಸಿಟ್ಟ ಕಟ್ಟಳೆಗಳಿಂದ ಮಕ್ಕಳಿಗೆ ನಿರಾಶೆ, ಅಸಮಾಧಾನ ಅನುಭವಿಸಬಹುದು ಆದರೆ ಅದು ಅವರ ಬೆಳವಣಿಗೆ ಮತ್ತು ತಿಳುವಳಿಕೆಯ ಒಂದು ಭಾಗವಾಗಿದೆ.

ಕೋಪ ಮಾಡಿಕೊಂಡರೆ ಕೇಳಿದ್ದೆಲ್ಲಾ ಸಿಗುತ್ತದೆ ಎಂಬ ಭಾವನೆ ಮಕ್ಕಳಲ್ಲಿ ಬರಬಾರದು. ಹಾಗೆಂದು ಅವರಿಗೆ ಬೇಕಾದುದನ್ನು ಒದಗಿಸದೆಯೇ ಇರಲು ಬಾರದು ಯಾವುದು ಸರಿ ಎಂದು ನಿರ್ಧರಿಸಿ ಮಕ್ಕಳಲ್ಲಿ ಕೋಪ ಕಡಿಮೆ ಮಾಡಬೇಕು. ವಯಸ್ಕರು ಕೋಪ ಮಾಡಿಕೊಂಡು ಮಕ್ಕಳಿಗೆ ಗದರುವ ಬದಲು ಅವರ ಭಾವನೆಗಳಿಗೆ ಬೆಲೆ ಕೊಟ್ಟು. ಕೋಪದಿಂದ ಆಗುವ ತೊಂದರೆ ತಿಳಿಸಬೇಕು.

ನಾಯಿ ಹಾಗೂ ಪುಟ್ಟ ಬಾಲಕ: 3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ ವೀಡಿಯೋ ಇದು

ಎಲ್ಲಕ್ಕಿಂತ ಮುಖ್ಯವಾಗಿ ಹೆತ್ತವರು ಮಕ್ಕಳು ಸಿಟ್ಟು ಮಾಡಿಕೊಂಡಾಗ ಯಾವ ಭಾವನೆಯನ್ನೂ ತೋರಿಸಿಕೊಳ್ಳದೇ ನಿರ್ಲಪ್ತರಾಗಿ ಸಮಸ್ಯೆ ಬಗೆಹರಿಸುವುದು ಉತ್ತಮ. ಅವರಲ್ಲಿ ನೆಗೆಟಿವ್ ಭಾವನೆ ಮೂಡಿಸುವ ಪ್ರಯತ್ನ ಬೇಡ. ಬೇರೆ ಮಕ್ಕಳ ಜೊತೆ ಹೋಲಿಸಿ, ಆ ಮಗು ಜಾಣ, ಅದರಂತೆ ನೀನಾಗಬೇಕು ಅನ್ನೋದು ಮಗುವಿನ ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ. ಮಕ್ಕಳಿಗೆ ಸಿಟ್ಟು ಬಂದಾಗ ಅದನ್ನು ನಿರ್ವಹಿಸೋದು ಹೇಗೆ, ಆ ಸಿಟ್ಟನ್ನು ಕೆಲಸಗಳಿಗೆ ಶಿಫ್ಟ್ ಮಾಡಿ ಹೇಗೆ ನಿವಾರಿಸಿಕೊಳ್ಳಬಹುದು ಎಂಬಂಥಾ ಕೆಲವು ಟಿಪ್ಸ್ ಕಲಿಸಿಕೊಟ್ಟರೆ ಮಕ್ಕಳಿಗೆ ಇದೊಂದು ಜೀವನಪಾಠವೂ ಆಗುತ್ತದೆ.

Latest Videos
Follow Us:
Download App:
  • android
  • ios