Asianet Suvarna News Asianet Suvarna News

ಇಂಥಾ ಹೆಸರನ್ನಿಟ್ಟರೆ ಮಕ್ಕಳು ಯಾವಾಗ್ಲೂ ಚುರುಕಾಗಿರ್ತಾರೆ

ನೀವು ಮಗುವಿಗೆ (Baby) ಪರಿಪೂರ್ಣ ಹೆಸರನ್ನು ಹುಡುಕುತ್ತಿದ್ದರೆ, ಈಗ ನೀವು ಹೆಚ್ಚು ಹುಡುಕಾಡುವ ಅಗತ್ಯವಿಲ್ಲ. ಇಲ್ಲಿ ನಾವು ನಿಮಗೆ ಅಂತಹ ಮಕ್ಕಳ ಹೆಸರು (Name)ಗಳನ್ನು ಹೇಳುತ್ತಿದ್ದೇವೆ. ಮಗುವಿಗೆ ಈ ಹೆಸರನ್ನು ನೀಡುವ ಮೂಲಕ, ನೀವು ಮೊದಲಿನಿಂದಲೂ ಅವರಲ್ಲಿ ಚುರುಕುತನ, ಸೃಜನಶೀಲತೆಯ (Creativity) ಗುಣಮಟ್ಟವನ್ನು ತುಂಬಬಹುದು. ಅಂಥಾ ಹೆಸರುಗಳು ಯಾವುವು ತಿಳಿಯೋಣ.

If You Give These Names To The Child Then There Will Be No Lack Of Creativity In Life Vin
Author
Bengaluru, First Published May 14, 2022, 3:53 PM IST

ಹೆಸರು (Name) ನಮ್ಮ ಜೀವನ, ನಡವಳಿಕೆ ಮತ್ತು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ಪೋಷಕರು ತಮ್ಮ ಮಗು (Baby)ವಿಗೆ ಸರಿಯಾದ ಹೆಸರನ್ನು ಆಯ್ಕೆ ಮಾಡಲು ಹೆಚ್ಚು ಶ್ರಮ ಪಡುತ್ತಾರೆ. ಅರ್ಥಪೂರ್ಣ ಹೆಸರನ್ನಿಡಲು ಹಿರಿಯರ ಸಲಹೆಯನ್ನು ಕೇಳುತ್ತಾರೆ.   

ತಮ್ಮ ಮಗು ಬುದ್ಧಿವಂತನಾಗಬೇಕೆಂದು ಯಾವ ಪೋಷಕರು (Parents) ತಾನೇ ಇಷ್ಟಪಡುವುದಿಲ್ಲ ಹೇಳಿ. ಮಕ್ಕಳು ದೊಡ್ಡವರಾದಾಗ
ನಿಮ್ಮ ಮಗು ಬುದ್ಧಿವಂತನಾಗಬೇಕೆಂದು ನೀವು ಬಯಸಿದರೆ, ನೀವು ಅವನಿಗೆ ಬುದ್ಧಿವಂತ (Intellectual) ಎಂಬ ಅರ್ಥವಿರುವ ಹೆಸರನ್ನು ಇಡಬಹುದು. ಅದೇ ರೀತಿ, ನಿಮ್ಮ ಮಗು ಸೃಜನಾತ್ಮಕವಾಗಿರಬೇಕು ಎಂದು ನೀವು ಬಯಸಿದರೆ, ನಂತರ ನೀವು ಅವರಿಗೆ ಸೃಜನಾತ್ಮಕ (Creativity) ಅರ್ಥವನ್ನು ಹೊಂದಿರುವ ಹೆಸರನ್ನು ಆಯ್ಕೆ(Select) ಮಾಡಬಹುದು. ಈ ರೀತಿಯಾಗಿ, ಹೆಸರಿನ ಪರಿಣಾಮವು ಮಗುವಿನ ಸ್ವಭಾವದ ಮೇಲೂ ಗೋಚರಿಸುತ್ತದೆ. ನಿಮ್ಮ ಮಗುವಿಗೆ ಚುರುಕಾಗಿರಬೇಕು, ಸೃಜನಶೀಲರಾಗಿರಬೇಕು ಎಂದು ಅಂದುಕೊಂಡರೆ ನೀವು ಇಡಬಹುದಾದ ಕೆಲವೊಂದು ಹೆಸರುಗಳು ಇಲ್ಲಿವೆ.

Name Astrology: ಈ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಫಾಸ್ಟ್!

ಮಕ್ಕಳು ಚುರುಕಾಗಿರಲು ಇಂಥಾ ಹೆಸರನ್ನಿಡಿ

ಗಂಡು ಮಗುವಿನ ಹೆಸರು

ಅಮಂತ್: ನಿಮ್ಮ ಮಗನಿಗೆ ನೀವು ಅಮಂತ್ ಎಂಬ ಹೆಸರನ್ನು ತೆಗೆದುಕೊಳ್ಳಬಹುದು. ಈ ಅರೇಬಿಕ್ ಮೂಲದ ಹೆಸರು ಸೂಕ್ಷ್ಮ, ಸೃಜನಶೀಲ ಮತ್ತು ಪ್ರಾಯೋಗಿಕ ಸ್ವಭಾವ ಎಂದರ್ಥ.

ಪರಾಗ್: ಇದು ಭಾರತೀಯ ಮೂಲದ ಹೆಸರು. ಪರಾಗ್ ಹೆಸರಿನ ಅರ್ಥವು ಕಾಲ್ಪನಿಕ ಮತ್ತು ಸೃಜನಶೀಲವಾಗಿದೆ. ಭಾರತದಲ್ಲಿ ಪೋಷಕರು ಈ ಹೆಸರನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ.

ಸೃಜನ್: ನಿಮ್ಮ ಮಗನಿಗೆ ಸೃಜನ್ ಎಂಬ ಹೆಸರನ್ನು ಸಹ ನೀವು ಆಯ್ಕೆ ಮಾಡಬಹುದು. ಸೃಜನ್ ಎಂಬುದು ಭಾರತೀಯ ಹೆಸರು, ಇದರರ್ಥ ಅತ್ಯಂತ ಸೃಜನಶೀಲ ಎಂಬುದಾಗಿದೆ.

ಎಡ್ವಿನ್: ಇದು ಆಫ್ರಿಕಾನ್ಸ್ ಹೆಸರು. ನಿಮ್ಮ ಗಂಡು ಮಗುವಿಗೆ ನೀವು ಈ ಇಂಗ್ಲಿಷ್ ಹೆಸರನ್ನು ನೀಡಬಹುದು. ಎಡ್ವಿನ್ ಹೆಸರಿನ ಅರ್ಥ ಕಲಾವಿದ ಮತ್ತು ಸೃಜನಶೀಲ ವ್ಯಕ್ತಿ.

ಮಕ್ಕಳ ಡೈಪರ್ ರಾಶಸ್ ಗೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

ಹೆಣ್ಣು ಮಗುವಿನ ಹೆಸರು

ರಚಿತಾ: ನಿಮ್ಮ ಮಗಳ ಹೆಸರು 'ಆರ್' ಅಕ್ಷರದಿಂದ ಬಂದಿದ್ದರೆ, ನಿಮ್ಮ ಮಗಳಿಗೆ ರಚಿತಾ ಎಂದು ಹೆಸರಿಸಬಹುದು. ಈ ಭಾರತೀಯ ಮೂಲದ ಹೆಸರು ಎಂದರೆ ಸೃಜನಶೀಲ ಮತ್ತು ಪ್ರತಿಭಾವಂತ ಎಂಬುದಾಗಿದೆ.

ವಿದುಷಿ: ಹೆಣ್ಣು ಮಗುವಿನ ಈ ಹೆಸರು ಕೂಡ ತುಂಬಾ ವಿಶಿಷ್ಟವಾಗಿದೆ. ಈ ಭಾರತೀಯ ಮೂಲದ ಹೆಸರು ಅದ್ಭುತ ಮತ್ತು ಬುದ್ಧಿವಂತ ಎಂದರ್ಥ. ಹಿಂದೂ ಧರ್ಮದಲ್ಲಿ ವಿದುಷಿ ಎಂಬ ಹೆಸರು ಬಹಳ ಜನಪ್ರಿಯವಾಗಿದೆ.

ವೈಶಾಲಿ: ಮಗಳ ಹೆಸರು 'ವಿ' ಅಕ್ಷರದಿಂದ ಬಂದರೆ, ನೀವು ವೈಶಾಲಿ ಎಂಬ ಹೆಸರನ್ನು ಸಹ ಆಯ್ಕೆ ಮಾಡಬಹುದು. ವೈಶಾಲಿ ಹೆಸರಿನ ಅರ್ಥಗಳು ಸುಂದರ, ಸೃಜನಾತ್ಮಕ ಅಥವಾ ದೊಡ್ಡ ಹೃದಯ ಎಂಬುದಾಗಿದೆ.

ಅಲ್ಪನಾ: ಇದು ಭಾರತೀಯ ಮೂಲದ ಹೆಸರು. ಅಲ್ಪನಾ ಎಂಬ ಹೆಸರಿನ ಅರ್ಥವು ಅತ್ಯಾಧುನಿಕ ಅಥವಾ ಸೃಜನಶೀಲ ವರ್ಣರಂಜಿತ ಲಕ್ಷಣಗಳು. ನಿಮ್ಮ ಹೆಣ್ಣು ಮಗುವಿಗೆ ನೀವು ಚಿಕ್ಕ ಹೆಸರನ್ನು ನೀಡಬಹುದು.

ಜೋನ್ನಾ: ನಿಮ್ಮ ಹೆಣ್ಣು ಮಗುವಿಗೆ ಈ ಪಾಶ್ಚಾತ್ಯ ಅಥವಾ ಆಧುನಿಕ ಹೆಸರನ್ನು ಸಹ ನೀವು ಇಷ್ಟಪಡಬಹುದು. ಜೊವಾನ್ನಾ ಹೆಸರಿನ ಅರ್ಥವು ಮಹತ್ವಾಕಾಂಕ್ಷೆಯ, ಸೃಜನಶೀಲ ಮತ್ತು ಬಹುಮುಖವಾಗಿದೆ.

ಡೈಸಿ: ನೀವು ಹೆಣ್ಣು ಮಗುವಿಗೆ ಈ ಮುದ್ದಾದ ಹೆಸರನ್ನು ಆಯ್ಕೆ ಮಾಡಬಹುದು. ಡೈಸಿ ಸಾಕಷ್ಟು ಟ್ರೆಂಡಿ ಹೆಸರು, ನೀವು ಇಷ್ಟಪಡಬಹುದು. ನೀವು ಮಗುವಿಗೆ ಈ ಹೆಸರುಗಳನ್ನು ನೀಡಿದರೆ, ಜೀವನದಲ್ಲಿ ಯಾವುದೇ ಸೃಜನಶೀಲತೆಯ ಕೊರತೆ ಇರುವುದಿಲ್ಲ.

Follow Us:
Download App:
  • android
  • ios