Name Astrology: ಈ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಫಾಸ್ಟ್!

ಈ ನಾಲ್ಕು ಅಕ್ಷರಗಳಿಂದ ಹೆಸರು ಆರಂಭವಾಗುವ ಮಕ್ಕಳು ಮೆದುಳು ಬಹಳ ವೇಗವಾಗಿ ಕೆಲಸ ಮಾಡುತ್ತದೆ. ಅವರು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಬೇಗ ಪಡೆದುಕೊಳ್ಳುತ್ತಾರೆ. 

The mind of children with these 4 names runs faster than the computer skr

ಹೆಸರಿಗೂ ಅದರೊಂದಿಗೆ ಗ್ರಹ, ರಾಶಿಗಳಿಗೂ ಇರುವ ಸಂಬಂಧ ವಿಶೇಷವಾದುದು. ಹುಟ್ಟಿದ ಸಮಯ, ರಾಶಿ, ನಕ್ಷತ್ರಗಳಿಗನುಗುಣವಾಗಿ ಮಕ್ಕಳಿಗೆ ಯಾವ ಅಕ್ಷರದಿಂದ ಹೆಸರಿಡಬೇಕೆಂದು ಸಲಹೆ ನೀಡಲಾಗುತ್ತದೆ. ಈ ಹೆಸರು ಅವರ ಭವಿಷ್ಯದುದ್ದಕ್ಕೂ ಗುರುತಾಗಿರುತ್ತದೆ. ಜೊತೆಗೆ ಸಾಕಷ್ಟು ರೀತಿಯಲ್ಲಿ ಅವರ ಜೀವನದ ಅನುಭವಗಳೊಂದಿಗೆ ಬೆಸೆದುಕೊಂಡಿರುತ್ತದೆ. 

ಕೆಲವರು ಹೀಗೆ ಹುಟ್ಟಿದಾಗ ಸಲಹೆ ನೀಡಿದ ಹೆಸರುಗಳನ್ನಿಟ್ಟರೆ ಮತ್ತೆ ಕೆಲವರು ಇಡುವುದಿಲ್ಲ. ಆದರೆ ಯಾವ ಅಕ್ಷರದ ಹೆಸರನ್ನು ಜ್ಯೋತಿಷ್ಯ ಸಲಹೆ ಮಾಡುತ್ತದೆಯೋ ಅದೇ ಅಕ್ಷರದ ಹೆಸರನ್ನಿಡುವುದರಿಂದ ಮಗುವಿಗೆ ಸಾಕಷ್ಟು ಲಾಭಗಳಾಗುತ್ತವೆ. ಇಂದು ಈ ರೀತಿಯಾಗಿ ಹುಟ್ಟಿದ ಸಮಯಕ್ಕನುಗುಣವಾಗಿ ಇಟ್ಟ ಹೆಸರಿನ ಆಧಾರದ ಮೇಲೆ ಯಾವ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರಿಗಿಂತ ವೇಗವಾಗಿ ಕೆಲಸ ಮಾಡುತ್ತದೆ, ಯಾವ ಮಕ್ಕಳು ಎಲ್ಲರಿಗಿಂತ ಚೂಟಿಯಾಗಿರುತ್ತಾರೆ ನೋಡೋಣ. ಈ ಮಕ್ಕಳು ಚೂಟಿಯಷ್ಟೇ ಅಲ್ಲ, ಅವರ ಬದುಕಿನಲ್ಲಿ ಎಂದಿಗೂ ಅಗತ್ಯ ವಸ್ತುಗಳ ಕೊರತೆ ಬರದು. ಅವರು ಬಹಳ ಪರಿಶ್ರಮಿಗಳಾಗುತ್ತಾರೆ ಜೊತೆಗೆ ಬುದ್ಧಿವಂತಿಕೆ(hardworking and intelligent)ಯೂ ಜೊತೆಗಿರುತ್ತದೆ. ಇವೆರಡು ಜೊತೆಗಿದ್ದಾಗ ಅದೃಷ್ಟ ಜೊತೆಗೂಡುತ್ತದೆ. ತನ್ನಿಂತಾನೇ ಯಶಸ್ಸು ಹಿಂಬಾಲಿಸುತ್ತದೆ. 

ಅಬ್ಬಬ್ಬಾ ಲಾಟ್ರಿ! ಇನ್ನೊಂದು ತಿಂಗಳ ಕಾಲ ಈ ಐದು ರಾಶಿಗಳಿಗೆ ಬುಧಾದಿತ್ಯ ಯೋಗ!

ಕೆ ಅಕ್ಷರ(Letter K): k ಫಾರ್ ನಾಲೆಡ್ಜ್ ಎನ್ನಬಹುದು. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಮಕ್ಕಳು ಹೆಚ್ಚು ಬುದ್ಧಿವಂತರು ಮತ್ತು ಶ್ರಮಶೀಲರು. ಅವರು ತಮ್ಮ ಬುದ್ಧಿವಂತಿಕೆಯ ಬಲದ ಮೇಲೆ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅವರ ಜೀವನದಲ್ಲಿ ಸೌಕರ್ಯಗಳ ಕೊರತೆಯಿರುವುದಿಲ್ಲ. ಇದ್ದರೂ ಹಟ ಹಿಡಿದು ಸಾಧಿಸಿ, ಮುಂದೆ ತಾನು, ತನ್ನವರಿಗೆ ಕೊರತೆ ಬರದಂತೆ ಮಾಡುವ ಸಾಮರ್ಥ್ಯ ಇವರಲ್ಲಿರುತ್ತದೆ. ಒಮ್ಮೆ ಕೆಲಸವನ್ನು ಮಾಡಲು ಯೋಚಿಸಿದರೆ, ಅವರು ಅದನ್ನು ಪೂರ್ಣಗೊಳಿಸಿದ ನಂತರವೇ ಏಳುವುದು. ಅವರ ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಅವರು ಸಮಾಜದಲ್ಲಿ ಪರಿಶ್ರಮಿಗಳೂ, ಬುದ್ಧಿವಂತರೂ, ನ್ಯಾಯನಿಷ್ಠರೂ ಆಗಿ ವಿಭಿನ್ನವಾದ ಗುರುತನ್ನು ಹೊಂದುತ್ತಾರೆ.

ಎಲ್ ಅಕ್ಷರ(Letter L): ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು, ಅವರ ಮನಸ್ಸು ತುಂಬಾ ವೇಗವಾಗಿ ಓಡುತ್ತದೆ. ತಮ್ಮ ತೀಕ್ಷ್ಣ ಮನಸ್ಸಿನಿಂದ, ಅವರು ಚಿಕ್ಕ ವಯಸ್ಸಿನಲ್ಲೇ ಯಶಸ್ಸನ್ನು ಸಾಧಿಸುತ್ತಾರೆ. ಅವರು ಸಮಾಜದಲ್ಲಿ ವಿಭಿನ್ನವಾದ ಗುರುತನ್ನು ಹೊಂದುತ್ತಾರೆ. ಅವರಲ್ಲಿ ಯಾವತ್ತೂ ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಅವರು ಏನನ್ನಾದರೂ ಮಾಡಲು ಒಮ್ಮೆ ಯೋಚಿಸಿದರೆ, ಸಾಧಿಸುವವರೆಗೂ ಮನಸ್ಸು ಚಂಚಲವಾಗಲು ಬಿಡುವುದಿಲ್ಲ. ಇವರ ಎನರ್ಜಿ ಸದಾ ಒಳ್ಳೆಯದರ ಕಡೆಗೇ ಹರಿಯುವಂತೆ ಪೋಷಕರು ನೋಡಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಇವರ ಪ್ರತಿಭೆ ಒಳ್ಳೆಯದಕ್ಕಾಗಿ ವಿನಿಯೋಗವಾಗುತ್ತದೆ. 

ವರ್ಷದ ಮೊದಲ ಚಂದ್ರಗ್ರಹಣ ವೀಕ್ಷಣೆ ಹೇಗೆ?

ಪಿ ಅಕ್ಷರ(Letter P): ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಮಕ್ಕಳು ತುಂಬಾ ಬುದ್ಧಿವಂತರು ಮತ್ತು ಚುರುಕಾದ ನಡೆಯವರು. ಅವರು ಚಿಕ್ಕ ವಯಸ್ಸಿನಿಂದಲೇ ತಮ್ಮ ವೃತ್ತಿಜೀವನದ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಅವರು ಯಶಸ್ಸನ್ನು ಪಡೆಯಲು ಶ್ರಮಿಸುತ್ತಾರೆ ಮತ್ತು ಕೊನೆಯಲ್ಲಿ ಅವರು ಯಶಸ್ಸನ್ನು ಪಡೆದೇ ತೀರುತ್ತಾರೆ. ಅವರ ಜೀವನವು ಸಂತೋಷದಿಂದ ತುಂಬಿರುತ್ತದೆ. ಸದಾ ಸುತ್ತಲಿರುವವರ ಪ್ರೀತಿ ವಿಶ್ವಾಸ ಗಳಿಸಿ ನಗುನಗುತ್ತಿರುತ್ತಾರೆ. ಎಷ್ಟು ಚುರುಕಾಗಿರುತ್ತಾರೋ ಅಷ್ಟೇ ತಾಳ್ಮೆಯೂ ಇರುವುದು ಇವರ ವಿಶೇಷ. ಈ ವಿಶೇಷ ಕಾರಣವೇ ಇವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios