Asianet Suvarna News Asianet Suvarna News

Relationship Tips: ಭಾವನೆಗಳ ಸಮತೋಲನಕ್ಕೆ ಸರಳ ಸೂತ್ರ

ಪ್ರತಿ ದಿನ, ಪ್ರತಿ ಕ್ಷಣ ನಾವು ಹೇಗಿರ್ತೇವೆ ಎಂಬುದು ನಮ್ಮ ಭಾವನೆಯನ್ನು ಅವಲಂಬಿಸಿರುತ್ತದೆ. ಎಲ್ಲಿ ಯಾವ ಭಾವನೆ ವ್ಯಕ್ತಪಡಿಸಬೇಕು ಎಂಬುದು ನಮಗೆ ಗೊತ್ತಿರಬೇಕು. ಭಾವನೆಗಳ ಸಮತೋಲನ ಕಲಿತ್ರೆ ಬಾಳು ಹಸನಾದಂತೆ.
 

How To Overcome Emotional Weakness and simple tricks to balance roo
Author
First Published Jun 15, 2023, 5:53 PM IST

ವ್ಯಕ್ತಿಯ ವ್ಯಕ್ತಿತ್ವವನ್ನು ಆತ ವ್ಯಕ್ತಪಡಿಸುವ ಭಾವನೆಗಳಿಂದಲೇ ಪತ್ತೆ ಮಾಡ್ಬಹುದು. ನೋವು, ಸಂತೋಷ, ಬೇಸರ, ಪ್ರೀತಿ, ಭಯ, ಆಲಸ್ಯ, ಅನಾರೋಗ್ಯ ಎಲ್ಲವನ್ನೂ ಭಾವನೆಗಳೇ ಹೇಳುತ್ವೆ. ಒಬ್ಬ ಮನುಷ್ಯ ಅತಿ ಹೆಚ್ಚು ವ್ಯಕ್ತಪಡಿಸುವ ಭಾವನೆ ಮೂಲಕ ಆತನ ವ್ಯಕ್ತಿತ್ವ ಎಂದಹದ್ದು ಅಂತಾ ಹೇಳಲಾಗುತ್ತದೆ. ಭಾವನೆಗಳನ್ನು ಮರೆಮಾಚೋದು ಕಷ್ಟ. ನಿಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ನೀವು ಹಿಡಿದಿಡುವ ಪ್ರಯತ್ನ ನಡೆಸಿದ್ರೂ ನಿಮ್ಮ ಹಾವಭಾವ, ನಿಮ್ಮ ಮುಖದಿಂದ ನಿಮಗೆ ಗೊತ್ತಿಲ್ಲದೆ ಭಾವನೆ ವ್ಯಕ್ತವಾಗಿರುತ್ತದೆ. ನಮ್ಮ ಕ್ರಿಯೆಯ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳು ನಿಜವಾಗ್ಲೂ ಶಕ್ತಿಯುತವಾಗಿರುತ್ತದೆ. ಭಾವನೆಗಳನ್ನು ಸಮತೋಲನದಲ್ಲಿಡುವುದು ಬಹಳ ಮುಖ್ಯ. ನಿಮಗೆ ಅದ್ರಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗಿಲ್ಲ ಎಂದಾಗ ಸಮಸ್ಯೆ ಶುರುವಾಗುತ್ತದೆ. ನೀವು ದುರ್ಬಲಾಗ್ತೀರಿ. ಇದ್ರ ಲಾಭವನ್ನು ಬೇರೆಯವರು ಪಡೆಯುತ್ತಾರೆ. ಹಾಗಾಗಿ ನಿಮ್ಮ ಭಾವನೆಗಳನ್ನು ನೀವು ಸಮತೋಲನದಲ್ಲಿಡಬೇಕು. ಭಾವನೆಗಳನ್ನು ಸಮತೋಲನದಲ್ಲಿಡಲು, ಸರಿಯಾಗಿ ನಿರ್ವಹಿಸಲು ನೀವು ಸೂಕ್ತರಾಗಿದ್ದೀರೆ ಎಂಬುದನ್ನು ಪತ್ತೆ ಹಚ್ಚಬೇಕು. ಕೆಲ ಮಾರ್ಗಗಳನ್ನು ಅನುಸರಿಸುವುದ್ರಿಂದ ಭಾವನೆ ನಿಯಂತ್ರಣಕ್ಕೆ ಬರುವುದಲ್ಲದೆ ನಿಮ್ಮ ವ್ಯಕ್ತಿತ್ವ ಹಾಗೂ ಸಂಬಂಧ ಎರಡೂ ಸುಧಾರಿಸುತ್ತದೆ.  

ಈಗ್ಲೇ ಆಗೋದಿಲ್ಲ, ಒಂದಿಷ್ಟು ಸಮಯ (Time) ನೀಡಿ: ಯಾವುದೇ ಒಂದು ವಿಷ್ಯದ ಬಗ್ಗೆ ಆತುರವಾಗಿ ಪ್ರತಿಕ್ರಿಯೆ ನೀಡೋದು ತಪ್ಪು. ಮೊದಲು ಮುಂದಿನ ವ್ಯಕ್ತಿ ಹೇಳೋದನ್ನು ಸರಿಯಾಗಿ ಕೇಳ್ಬೇಕು. ನಂತ್ರ ನಿಮ್ಮ ಭಾವನೆ (Feeling) ಯನ್ನು ವ್ಯಕ್ತಪಡಿಸಬೇಕು. ತಕ್ಷಣ ಉತ್ತರಿಸಲು ಸಾಧ್ಯವಿಲ್ಲ ಎಂದಾಗ, ಸ್ವಲ್ಪ ಸಮಯ ಕೇಳ್ಬೇಕು. ನೀವೂ ಹೀಗೆ ಮಾಡ್ತಿದ್ದರೆ ನಿಮ್ಮ ಭಾವನೆ ಸಮತೋಲನದಲ್ಲಿದೆ ಎಂದೇ ಅರ್ಥ. ತಕ್ಷಣ ಉತ್ತರಿಸಿ, ಪ್ರತಿಕ್ರಿಯೆ ನೀಡಿ, ನಂತ್ರ ಪಶ್ಚಾತಾಪಪಡುವವರು ನೀವಾಗಿದ್ದರೆ ಸಮತೋಲನದ ಅಗತ್ಯವಿದೆ ಎಂದು ಅರ್ಥೈಸಿಕೊಳ್ಳಿ.

ಮದ್ವೆ ಆದ್ರೂ ಲೈಫ್ ಬೋರ್ ಅನಿಸ್ತಾ ಇದ್ಯಾ? ಏನ್ಮಾಡೋದು?

ಸಾಧ್ಯವಿಲ್ಲ: ಹೆಚ್ಚು ಭಾವನಾತ್ಮಕ ವ್ಯಕ್ತಿ ಸಾಧ್ಯವಿಲ್ಲ, ನೋ ಎನ್ನುವ ಪದವನ್ನು ಅತಿ ಕಡಿಮೆ ಬಾರಿ ಬಳಸ್ತಾನೆ. ಬೇರೆಯವರ ಭಾವನೆಗಳಿಗೆ ಧಕ್ಕಯಾದ್ರೆ, ಅವರಿಗೆ ಬೇಸರವಾದ್ರೆ ಎಂಬ ಆಲೋಚನೆಯಲ್ಲಿ ತಾನು ಕಷ್ಟಕ್ಕೆ ಸಿಲುಕುತ್ತಾನೆ. ಆದ್ರೆ ಭಾವನಾತ್ಮಕವಾಗಿ ಸಮತೋಲನದಲ್ಲಿರುವ ಜನರು ನೈತಿಕ ತತ್ವಗಳು, ಅಗತ್ಯತೆಗಳು ಮತ್ತು ಆಸೆಗಳನ್ನು ಆಧರಿಸಿ ಉತ್ತರ ನೀಡುತ್ತಾರೆ. ಏನು ಮಾಡ್ಬೇಕು, ಏನು ಮಾಡಬಾರದು ಎಂಬ ಬಗ್ಗೆ ಅವರು ಸ್ಪಷ್ಟವಾಗಿರುವ ಕಾರಣ, ಬೇರೆಯವರಿಗೆ ಬೇಸರವಾಗದಂತೆ ಪ್ರೀತಿಯಿಂದ ನಿರಾಕರಿಸುತ್ತಾರೆ.

ನಡವಳಿಕೆ ಇಷ್ಟವಾಗ್ತಿಲ್ಲ: ಭಾವನಾತ್ಮಕವಾಗಿ ಸಮತೋಲದಲ್ಲಿರುವ ವ್ಯಕ್ತಿ, ಇತರರನ್ನು ಗೌರವಿಸುತ್ತಾನೆ. ಆದ್ರೆ ತನ್ನ ಭಾವನೆಗಳಿಗೆ ಧಕ್ಕೆಯಾಗ್ತಿದೆ ಎಂದಾಗ ಗಡಿ ಉಲ್ಲಂಘನೆಯಾಗ್ತಿದೆ ಎಂದಾಗ ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ವಿರೋಧಿಸುತ್ತಾರೆ. ತಮಗೆ ಅವಮಾನವಾಗ್ತಿದೆ ಅಂದ್ರೆ ಅದನ್ನು ನೇರವಾಗಿ ಹೇಳ್ತಾರೆ. 

Relationship Tips: ನೀವೂ ’ಹೆಂಡತಿ ಕೇಳಿ ಹೇಳ್ತೀನಿ’ ಅಂತೀರಾ? ಮಹಿಳೆ ಲೀಡ್ ಮಾಡೋ ಸಂಸಾರವಾ ನಿಮ್ದು?

ನಾನು ಹೀಗೆ ಇದ್ದೇನೆ, ನನಗೆ ಇದ್ರಿಂದ ನಾಚಿಕೆ ಇಲ್ಲ: ಭಾವನಾತ್ಮಕವಾಗಿ ಸುರಕ್ಷಿತವಾಗಿರುವ ಜನರು ಈ ಮಾತಿಗೆ ಬದ್ಧರಾಗಿರ್ತಾರೆ. ತಾವು ಹೇಗಿದ್ದೇವೆ, ತಮ್ಮ ಸುತ್ತಮುತ್ತಲಿನ ಜನರು ಹೇಗಿದ್ದಾರೆ, ಅವರು ಏನು ಮಾಡ್ತಿದ್ದಾರೆ ಎಂಬ ಬಗ್ಗೆ ಇವರಿಗೆ ಸ್ಪಷ್ಟತೆ ಇರುತ್ತದೆ. ಇಂಥವರನ್ನು ಮೋಸ ಮಾಡೋದು ಕಷ್ಟ. ಸತ್ಯ ಹಾಗೂ ಶಕ್ತಿಯನ್ನು ಗುರುತಿಸುವ ಇವರು ತಮ್ಮ ಸ್ವಭಾವದ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ.

ನಾನು ಹೀಗಿದ್ದೀನಾ?: ಭಾವನಾತ್ಮಕವಾಗಿ ನೀವು ದುರ್ಬಲವಾಗಿದ್ದರೆ ನಿಮ್ಮ ಸುತ್ತಮುತ್ತಲಿನವರ ಮಾತನ್ನು ಗಂಭೀರವಾಗಿ ಪರಿಗಣಿಸ್ತೀರಿ. ಇದ್ರಿಂದ ಸದಾ ದುಃಖದಲ್ಲಿರ್ತೀರಿ. ಅದೇ ಭಾವನಾತ್ಮಕವಾಗಿ ಸಮತೋಲದಲ್ಲಿರುವ ವ್ಯಕ್ತಿ ಯಾರ ಮಾತಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನಕಾರಾತ್ಮಕ ಮಾತುಗಳು ಬಂದ್ರೆ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ತಮ್ಮನ್ನು ಸುಧಾರಿಸುವ ಕಾರ್ಯ ಮಾಡ್ತಾರೆ.

ಸುಧಾರಣೆಗೆ ಪ್ರಯತ್ನ: ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯಕ್ತಿ ಹೊಂದಾಣಿಕೆಗೆ ಸಿದ್ಧವಿರ್ತಾನೆ. ಸಂಬಂಧ ಉಳಿಯಲು ಹೊಂದಾಣಿಕೆ ಅಗತ್ಯ ಎಂಬುದನ್ನು ತಿಳಿದಿರುವ ವ್ಯಕ್ತಿ, ತಪ್ಪಾದಲ್ಲಿ ಕ್ಷಮೆ ಕೇಳಿ, ಸುಧಾರಣೆ ಮಾಡಿಕೊಳ್ಳುವ ಭರವಸೆ ನೀಡ್ತಾನೆ.

Follow Us:
Download App:
  • android
  • ios