25 ವರ್ಷವಾದ್ರೂ ಸಿಂಗಲ್ ಆಗಿದ್ರೆ ಈ ಊರಲ್ಲಿ ಕಾದಿದೆ ಮಸಾಲೆ ಸ್ನಾನದ ಶಿಕ್ಷೆ !
ಲೇಟಾಗಿ ಮದುವೆ (Marriage)ಯಾಗುವವರು ಮನೆ ಮಂದಿ, ಕುಟುಂಬಸ್ಥರು, ನೆರೆಹೊರೆಯವರು ಹೀಗೆ ಎಲ್ಲರಿಂದಲೂ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಯಾರಿಗೂ ಹೇಳದೆ ಮದುವೆಯಾಗಿರಬಹುದು, ಯಾರನ್ನಾದರೂ ಪ್ರೀತಿಸುತ್ತಿರಬುದು ಹೀಗೆ ಹಲವಾರು ರೀತಿಯಲ್ಲಿ ಟೀಕಿಸುತ್ತಾರೆ. ಆದ್ರೆ ಈ ಊರಲ್ಲಿ 25 ವರ್ಷ ಆಗಿಯೂ ಸಿಂಗಲ್ (Single) ಬೇರೆಯೇ ಶಿಕ್ಷೆ ಕಾದಿದೆ. ಅದೇನೂಂತ ತಿಳ್ಕೊಳ್ಳೋ ಕುತೂಹಲ ನಿಮಗೂ ಇದೆ ಅಲ್ವಾ ?
ಹಿಂದಿನ ಕಾಲದಲ್ಲೆಲ್ಲಾ ಹುಡುಗ-ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ (Marriage) ಮಾಡಿಬಿಡುತ್ತಿದ್ದರು. ಹುಡುಗಿಯರಿಗೆ 18 ಹುಡುಗರಿಗೆ 20 ಹಸೆಮಣೆ ಏರಿಯಾಗಿರುತ್ತಿತ್ತು. ಚಿಕ್ಕಂದಿನಲ್ಲೇ ಮದುವೆಯಾದರೆ ಏನೂ ಸಮಸ್ಯೆಯಿಲ್ಲ. ಮದುವೆಯಾಗುವುದು ಲೇಟಾದರೆ ಸಾಮಾಜಿಕವಾಗಿ, ಕೌಟುಂಬಿಕವಾಗಿ ಸಮಸ್ಯೆಗಳು (Problems) ಕಾಣಿಸಿಕೊಳ್ಳುತ್ತವೆ ಅನ್ನೋದು ಹಿಂದಿನ ಕಾಲದವರ ನಂಬಿಕೆಯಾಗಿತ್ತು. ಮಾತ್ರವಲ್ಲ ಲೈಂಗಿಕ ಜೀವನ (Sex life)ವೂ ಚೆನ್ನಾಗಿರುವುದಿಲ್ಲ, ತಡವಾಗಿ ಮದುವೆಯಾದರೆ ಮಕ್ಕಳಾಗದಿರುವ ಸಮಸ್ಯೆಯೂ ತಲೆದೋರುತ್ತದೆ ಎಂದು ಹಿಂದಿನ ಕಾಲದವರು ನಂಬಿದ್ದರು. ಹೀಗಾಗಿಯೇ ಬೇಗನೇ ಹುಡುಗ-ಹುಡುಗಿಯನ್ನು ಹುಡುಕಿ ಜೋಡಿ ಮಾಡಿ ಮದುವೆ ಮಾಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಜೀವನಶೈಲಿಯ (Lifestyle) ಜೊತೆ ಜನರ ಮದುವೆಯಾಗುವ ವಯಸ್ಸು ಸಹ ಬದಲಾಗಿದೆ.
ಕೆಲವೊಬ್ಬರು ಮೊದಲಿನ ಕಾಲದಂತೆ ಬೇಗನೇ ಮದುವೆಯಾದರೆ ಇನ್ನು ಕೆಲವರು ವಯಸ್ಸು ಕಳೆಯುತ್ತಾ ಇದ್ದರೂ ಸಿಂಗಲ್ (Single) ಆಗೇ ಇರುತ್ತಾರೆ. ಈಗೆಲ್ಲಾ ವರುಷ 30-40 ಕಳೆದರೂ ಮದುವೆಯಾಗುವ ಬಗ್ಗೆ ಕೆಲವೊಬ್ಬರು ಆಸಕ್ತಿ ತೋರುವುದಿಲ್ಲ. ಅದಕ್ಕೆ ಹಿರಿಯರು, ಕುಟುಂಬಸ್ಥರು, ಸ್ನೇಹಿತರು ಹೀಗಳೆದರೂ ಡೋಂಟ್ ಕೇರ್ ಎಂದು ಸುಮ್ಮನಾಗುತ್ತಾರೆ. ಆದ್ರೆ ಈ ಊರಲ್ಲಿ 25 ವರ್ಷ ಆಗಿಯೂ ಮದುವೆಯಾಗದಿದ್ದರೆ ಬೇರೆಯೇ ಶಿಕ್ಷೆ ಕಾದಿದೆ. ಅದೇನೂಂತ ತಿಳ್ಕೊಳ್ಳೋ ಕುತೂಹಲ ನಿಮಗೂ ಇದೆ ಅಲ್ವಾ ?
ಮದ್ವೆ ವೇಳೆ ಜಾರಿಬಿದ್ದ ವರನ ಪ್ಯಾಂಟ್: ಮುಸಿಮುಸಿ ನಕ್ಕ ವಧು: ವಿಡಿಯೋ ವೈರಲ್
ದಾಲ್ಚಿನ್ನಿ (cinnamon) ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಒಂದು ಮಸಾಲೆ (Spice) ಪದಾರ್ಥ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಊರಲ್ಲಿ ದಾಲ್ಚಿನ್ನಿಯನ್ನು 25 ವರ್ಷಕ್ಕೆ ಮದುವೆಯಾಗದೇ ಇರುವವರಿಗೆ ಶಿಕ್ಷೆ ನೀಡಲು ಬಳಸಲಾಗುತ್ತದೆ. ಇಲ್ಲಿ 25 ವರ್ಷಕ್ಕೆ ಮದುವೆಯಾಗದೇ ಇರುವವರಿಗೆ ದಾಲ್ಚಿನ್ನಿ ಮಸಾಲೆಯನ್ನು ಮೆತ್ತುತ್ತಾರೆ.ಮಾಧ್ಯಮ ವರದಿಯೊಂದರ ಪ್ರಕಾರ, 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಡ್ಯಾನಿಷ್ ಯುವಕ, ಯುವತಿಯರ ಮೇಲೆ, ಅವರ ಕುಟುಂಬದ ಸದಸ್ಯರು ದಾಲ್ಚಿನಿ ಪುಡಿಯನ್ನು ಸುರಿಯುತ್ತಾರೆ. ಇದು ಮೇಲ್ನೋಟಕ್ಕೆ, 25 ವರ್ಷವಾಗುವುದರ ಒಳಗೆ ಸೆಟಲ್ ಆಗಿ, ಮದುವೆಯಾಗದೇ ಇರುವುದಕ್ಕೆ ಒಂದು ಶಿಕ್ಷೆಯಂತೆ (Punishment) ಕಾಣಬಹುದು. ಆದರೆ, ಹುಟ್ಟು ಹಬ್ಬ (Birthday) ಆಚರಿಸಿಕೊಳ್ಳುತ್ತಿರುವವರನ್ನು ಗೋಳು ಹೋಯ್ದುಕೊಳ್ಳಲು ಮತ್ತು ತರಲೆ ಮಾಡಲು ಇದು ಮತ್ತೊಂದು ಅವಕಾಶ ಎಂದು ಸಹ ಅಂದುಕೊಳ್ಳಬಹುದು
25 ನೇ ವರ್ಷಕ್ಕೆ ಕಾಲಿಟ್ಟವರ ಮೇಲೆ ಸುಮ್ಮನೆ ಶಾಸ್ತ್ರಕ್ಕೆ ಒಂದಿಷ್ಟು ದಾಲ್ಚಿನ್ನಿ ಪುಡಿ ಸಿಂಪಡಿಸಿ ಸುಮ್ಮನಾಗುವುದಿಲ್ಲ. ಬದಲಿಗೆ ವ್ಯಕ್ತಿಗೆ ಅಡಿಯಿಂದ ಮುಡಿಯ ವರೆಗೆ ದಾಲ್ಚಿನ್ನಿ ಪುಡಿಯಿಂದ ಸ್ನಾನ ಮಾಡಿಸಲಾಗುತ್ತದೆ.ಕೆಲವೊಮ್ಮೆ, ಆ ಪುಡಿ ದೇಹಕ್ಕೆ ಚೆನ್ನಾಗಿ ಮೆತ್ತಿಕೊಳ್ಳಲಿ ಎಂದು ನೀರನ್ನು ಕೂಡ ಸಿಂಪಡಿಸುತ್ತಾರಂತೆ. ಕೆಲವು ತರಲೇ ಪ್ರಿಯರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದಾಲ್ಚಿನ್ನಿ ಪುಡಿ ದೇಹಕ್ಕೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಲು ಮತ್ತು ಮಜಾ ಪಡೆಯಲು ದಾಲ್ಚಿನ್ನಿ ಪುಡಿಯೊಂದಿಗೆ ಮೊಟ್ಟೆಯನ್ನು ಕೂಡ ಬಳಸುತ್ತಾರಂತೆ.
ಆತ ಬಡವ ನಾನು ಬಡವಿ: ಯುವ ಜೋಡಿಯ ಪ್ರೇಮ ಕತೆ ವೈರಲ್
ಈ ಸಂಪ್ರದಾಯದ ಆಚರಣೆಯಲ್ಲಿ ಕುಟುಂಬದ ಸದಸ್ಯರು ಮಾತ್ರವಲ್ಲ ಸ್ನೇಹಿತರು ಕೂಡ ಪಾಲ್ಗೊಳ್ಳುತ್ತಾರೆ. 25 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಯನ್ನು ಲೈಟ್ ಕಂಬ ಅಥವಾ ಮರವೊಂದಕ್ಕೆ ಕಟ್ಟಿ ಹಾಕಿ, ಆಕೆ ಅಥವಾ ಆತನ ಮೈಗೆ ಮೊಟ್ಟೆ ಹಾಗೂ ದಾಲ್ಚಿನ್ನಿ ಪುಡಿಯ ಸ್ನಾನ ಮಾಡಿಸಿ, ಕೀಟಲೆ ಮಾಡುತ್ತಾ ಮನರಂಜನೆ ಪಡೆಯುತ್ತಾರೆ. ಅಲ್ಲಿನ ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ನೀಡಿರುವ ಮಾಹಿತಿಯ ಪ್ರಕಾರ, ಈ ಸಂಪ್ರದಾಯ ನೂರಾರು ವರ್ಷ ಹಳೆಯದ್ದು, ಅಂದರೆ ಮಸಾಲೆ ಮಾರಾಟಗಾರರು ಮಸಾಲೆಗಳನ್ನು ಮಾರಲು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುತ್ತಿದ್ದಂತಹ ಕಾಲದ್ದು.
ನಗರದಿಂದ ನಗರಕ್ಕೆ ಸುತ್ತುತ್ತಾ ಇದ್ದದ್ದರಿಂದ ಅವರು ಮದುವೆಯಾಗಲು ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿರಲಿಲ್ಲ ಮತ್ತು ದೀರ್ಘಕಾಲದ ವರೆಗೆ ಅವಿವಾಹಿತರಾಗಿ ಉಳಿಯುತ್ತಿದ್ದರು. ಅಂತಹ ಮಾರಾಟಗಾರ ಪುರುಷರನ್ನು ಪೆಪ್ಪರ್‍ಡೂಡ್ಸ್ ಮತ್ತು ಮಹಿಳೆಯರನ್ನು ಪೆಪ್ಪರ್ ಮೇಡೆನ್ಸ್ ಎಂದು ಕರೆಯಲಾಗುತ್ತಿತ್ತು.
ಡೆನ್ಮಾರ್ಕ್‍ನಲ್ಲಿ ಈ ಸಂಪ್ರದಾಯ ಇನ್ನೂ ಆಚರಣೆಯಲ್ಲಿ ಇದೆ ಎನ್ನುವುದೇನೋ ನಿಜ. ಹಾಗಂತ, ಇತರರು 25 ಒಳಗೆ ಮದುವೆಯಾಗದೆ ಇದ್ದರೆ ತಪ್ಪು ಎಂದು ಜನರು ಭಾವಿಸುವುದಿಲ್ಲ. ಏಕೆಂದರೆ, ಡ್ಯಾನಿಶ್ ಸಮಾಜದಲ್ಲಿ ಆರಂಭಿಕ ಮದುವೆಗೆ ಯಾವುದೇ ಅವಸರ ಇರುವುದಿಲ್ಲ. ಗಂಡಸರಿಗೆ ಮದುವೆಯಾಗುವ ಸರಾಸರಿ ವಯಸ್ಸು 34 ವರ್ಷಗಳು ಮತ್ತು ಮಹಿಳೆಯರಿಗೆ ಸರಾಸರಿ 32 ವರ್ಷಗಳು.