Asianet Suvarna News Asianet Suvarna News

7ನೇ ವಯಸ್ಸಿನ ಮಗಳಲ್ಲಿ ದೈಹಿಕ ಬೆಳವಣಿಗೆ! ಹೆದರೋದು ಬೇಡ

7-8 ವರ್ಷಕ್ಕೆಲ್ಲ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಕಂಡುಬಂದರೆ ಕಂಗಾಲಾಗಬೇಡಿ. ಅದನ್ನೊಂದು ದೊಡ್ಡ ಚಿಂತೆಯ ವಿಷಯವನ್ನಾಗಿ ಪರಿಗಣಿಸದೆ ಸುಲಭವಾಗಿ ಪರಿಸ್ಥಿತಿ ನಿಭಾಯಿಸಿ. ಮಕ್ಕಳ ಆಹಾರ-ವಿಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
 

If daughters have early puberty follow these tips
Author
Bangalore, First Published Aug 4, 2022, 4:00 PM IST

ಮಕ್ಕಳಲ್ಲಿ ಹರೆಯದ ಲಕ್ಷಣ ಕಂಡುಬರುತ್ತಿರುವ ಹಾಗೆಯೇ ಕೆಲವು ಪಾಲಕರು ಚಿಂತಿತರಾಗುತ್ತಾರೆ. ಆತಂಕಕ್ಕೆ ಒಳಗಾಗುತ್ತಾರೆ. ಗಂಡು ಮಕ್ಕಳಾಗಲೀ, ಹೆಣ್ಣು ಮಕ್ಕಳಾಗಲೀ, ಅವರು ದೊಡ್ಡವರಾಗುತ್ತಿದ್ದಾರೆ ಎಂದರೆ ಅದು ಪಾಲಕರಿಗೆ ಅಷ್ಟೇನೂ ಇಷ್ಟವಿಲ್ಲದ ಸಂಗತಿಯೇ ಆಗಿರುತ್ತದೆ. ಆದರೆ, ದೊಡ್ಡವರಾಗುವುದು ಪ್ರಕೃತಿ ಸಹಜ ಕ್ರಿಯೆ. ಹೀಗಾಗಿ, ಪಾಲಕರು ಅದನ್ನು ಸಹಜವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ ಮಕ್ಕಳು ಬಹುಬೇಗ ಪ್ಯೂಬರ್ಟಿ ಅಂದರೆ ಕಿಶೋರಾವಸ್ಥೆಯ ಅಥವಾ ಹರೆಯಪೂರ್ವದ ಹಂತ ತಲುಪುತ್ತಿದ್ದಾರೆ. ಮೊದಲೆಲ್ಲ ಸಾಮಾನ್ಯವಾಗಿ ಹೆಣ್ಣುಮಕ್ಕಳು 10-14 ವರ್ಷದೊಳಗೆ ಗಂಡುಮಕ್ಕಳು 12ರ ನಂತರ ಈ ಹಂತಕ್ಕೆ ತಲುಪುತ್ತಿದ್ದರು. ಆದರೆ, ಈಗ 7-8 ವರ್ಷಕ್ಕೆಲ್ಲ ಹೆಣ್ಣುಮಕ್ಕಳ ದೇಹದಲ್ಲಿ ಬದಲಾವಣೆ ಕಂಡುಬರುವುದು ಸಹಜವಾಗುತ್ತಿದೆ. ಗೊಂಬೆಯೊಂದಿಗೆ ಆಡುವ 7 ವರ್ಷದ ಮಗಳ ಸ್ತನಗಳು ದೊಡ್ಡದಾಗುತ್ತಿರುವ ಬಗ್ಗೆ ಅನೇಕ ತಾಯಂದಿರು ವೈದ್ಯರ ಬಳಿ ಬಂದು ಆತಂಕ ಹಂಚಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಅಧ್ಯಯನಗಳ ಪ್ರಕಾರ, ಶೇಕಡ 15ರಷ್ಟು ಹೆಣ್ಣುಮಕ್ಕಳು ಏಳರ ವಯೋಮಾನಕ್ಕೇ ಕಿಶೋರಾವಸ್ಥೆ ತಲುಪುತ್ತಿದ್ದಾರೆ. ಅವರ ಸ್ತನಗಳು ಬೆಳವಣಿಗೆ ಆಗುವುದು ಕಂಡುಬರುತ್ತಿದೆ. 10 ವರ್ಷಕ್ಕೆಲ್ಲ ಕಂಕುಳು ಹಾಗೂ ಜನನಾಂಗದ ಭಾಗದಲ್ಲಿ ಕೂದಲು ಆರಂಭವಾಗುತ್ತಿದೆ. ಶೇಕಡ 25ರಷ್ಟು ಹೆಣ್ಣುಮಕ್ಕಳಲ್ಲಿ 8 ವರ್ಷಕ್ಕೇ ಪ್ಯೂಬರ್ಟಿ ಹಂತವನ್ನು ಕಾಣಬಹುದು. 

ಸಹಜವಾಗಿ ಪಾಲಕರಿಗೆ (Parents) ಇದು ಆತಂಕದ ವಿಚಾರವಾಗುತ್ತದೆ. ಇದಕ್ಕೆ ಏನು ಕಾರಣ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಕುರಿತು ಸಾಕಷ್ಟು ಅಧ್ಯಯನಗಳು (Studies) ಸಹ ನಡೆಯುತ್ತಿವೆ. ಒಂದು ಅಧ್ಯಯನದ ಪ್ರಕಾರ, ಮನೆಯಲ್ಲಿ ಹಿಂಸೆ ಹೆಚ್ಚಿರುವ ಹೆಣ್ಣುಮಕ್ಕಳು (Girl Children) ಬಹುಬೇಗ ದೊಡ್ಡವರಾಗುತ್ತಾರೆ. ತಂದೆಯ ಅಲಕ್ಷ್ಯಕ್ಕೆ ಒಳಗಾಗುವ ಮಕ್ಕಳಲ್ಲೂ ಇದು ಸಾಮಾನ್ಯ. ಈ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಒತ್ತಡ ಹೆಚ್ಚಿದ್ದಾಗ ಸಂತಾನೋತ್ಪತ್ತಿಗೆ (Fertility) ಸಂಬಂಧಿಸಿದ ಹಾರ್ಮೋನುಗಳು (Hormones) ಮಿದುಳಿನಲ್ಲಿ ಅಭಿವೃದ್ಧಿಯಾಗುತ್ತವೆ ಎನ್ನಲಾಗಿದೆ. ಇವೇ ಹಾರ್ಮೋನುಗಳು ಬಹುಬೇಗ ಕಿಶೋರಾವಸ್ಥೆ (Puberty) ತಲುಪಲು ಕಾರಣವಾಗುತ್ತವೆ. 

ಅಷ್ಟಕ್ಕೂ ಬಹುಬೇಗ ಕಿಶೋರಾವಸ್ಥೆ ತಲುಪಿದರೆ ಸಮಸ್ಯೆ ಏನು ಎಂದು ಅನ್ನಿಸಬಹುದು. 7-8 ವರ್ಷಕ್ಕೆಲ್ಲ ಪ್ಯೂಬರ್ಟಿ ಹಂತ ತಲುಪಿದವರು ಭವಿಷ್ಯದಲ್ಲಿ ಖಿನ್ನತೆ (Depression), ಬೊಜ್ಜು, ಆಹಾರ ಸೇವನೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಕ್ಯಾನ್ಸರ್‌ ಅಪಾಯಕ್ಕೂ ಹೆಚ್ಚು ತುತ್ತಾಗುತ್ತಾರೆ. ಹೀಗಾಗಿ, ಇವರ ಆಹಾರ- ವಿಹಾರದ ಬಗ್ಗೆ ಪಾಲಕರು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಕಿಶೋರಾವಸ್ಥೆ ಶುರುವಾದಾಗ ಪಾಲಕರು ಎಚ್ಚರಿಕೆ ವಹಿಸಬೇಕು.

•    ಮುಕ್ತವಾಗಿ ಮಾತನಾಡಿ (Talk with Them)
ಒಂದೊಮ್ಮೆ ನಿಮ್ಮ ಮಗಳು (Daughter) ಅಥವಾ ಮಗ (Son) ಕಿಶೋರಾವಸ್ಥೆಯಲ್ಲಿದ್ದರೆ ಅವರಿಗೆ ದೇಹದಲ್ಲಿ ಆಗುವ ಬದಲಾವಣೆಗಳ (Changes) ಕುರಿತು ಅರಿವು ನೀಡಿ. ಅವರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿವರಿಸಿ. ಪ್ರತಿಯೊಬ್ಬರಿಗೂ ಇದು ಸಹಜ, ಇದಕ್ಕೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ತಿಳಿಸಿ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಗಂಡುಮಕ್ಕಳಿಗೆ ಮೀಸೆ, ದನಿ ಒಡೆಯುವ ಸಮಯದಲ್ಲಿ ರೇಗಿಸುವುದು ಸಹಜ. ಸಾಧ್ಯವಾದಷ್ಟು ಇದಕ್ಕೆ ಅವಕಾಶ ನೀಡಬೇಡಿ. ನೀವಂತೂ ಹಾಗೆ ಮಾಡಬೇಡಿ. ಯಾರಾದರೂ ರೇಗಿಸಿದರೂ ಅವರನ್ನು ಸಮಾಧಾನಪಡಿಸಿ. ಏಕೆಂದರೆ, ಈ ಸಮಯದಲ್ಲಿ ಅವರು ನಾಚಿಕೆಯ ಮುದ್ದೆಯಾಗಬಹುದು.

ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಏಕೆ ಬೇಕು?

•    ವಯಸ್ಸಿಗೆ (Age) ತಕ್ಕಂತೆ ವರ್ತನೆ ಇರಲಿ
ಮಕ್ಕಳಲ್ಲಿ ಬಹುಬೇಗ ಕಿಶೋರಾವಸ್ಥೆ ಕಾಣುತ್ತಿದೆ ಎಂದರೆ ಅವರು ದೊಡ್ಡವರಾಗಿಯೇ ಬಿಟ್ಟಿದ್ದಾರೆ ಎಂದಲ್ಲ. ಅವರಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಬಂದಿರುವುದಿಲ್ಲ. ಹೀಗಾಗಿ, ಅವರ ಬಳಿ ದೊಡ್ಡವರಂತೆ ವರ್ತಿಸುವ, ಮಾತನಾಡುವ ಅಗತ್ಯವಿಲ್ಲ. ಮೊದಲು ಹೇಗಿದ್ದೀರೋ ಹಾಗೆಯೇ ಇರಿ. ಆದರೆ, ಅವರಿಗೆ ಖಾಸಗಿ ಅಂಗಗಳ ಬಗ್ಗೆ ಅರಿವು ನೀಡಿ. ಅವುಗಳನ್ನು ಯಾರೂ ಸ್ಪರ್ಶಿಸುವುದು ಸರಿಯಲ್ಲ, ಸ್ಪರ್ಶಿಸದಂತೆ ನೋಡಿಕೊಳ್ಳಬೇಕು, ಅಕಸ್ಮಾತ್‌ ಯಾರಾದರೂ ಸ್ಪರ್ಶಿಸಿದರೆ ತಕ್ಷಣ ಅಪ್ಪ-ಅಮ್ಮನಿಗೆ ಹೇಳಬೇಕು ಎನ್ನುವುದನ್ನು ತಿಳಿಸಿ. 

•    ಅವರೊಂದಿಗೆ ಹೆಚ್ಚು ಸಮಯ (Spend Time) ಕಳೆಯಿರಿ
ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು ಈ ಸಮಯದಲ್ಲಿ ಅತ್ಯಗತ್ಯ. ಏಕೆಂದರೆ, ಅವರು ಪ್ರಬುದ್ಧತೆ (Maturity) ನಿಧಾನವಾಗಿ ಬೆಳೆಯುತ್ತಿರುತ್ತದೆ. ಕೋಪ ಬರುತ್ತದೆ, ಸಿಡುಕುತನ ಹೆಚ್ಚಾಗುತ್ತದೆ. ಹೀಗಾಗಿ, ನೀವು ಶಾಂತವಾಗಿದ್ದು, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ.

ಮಹಿಳೆಯರ ಒಳ ಉಡುಪನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು?

Follow Us:
Download App:
  • android
  • ios