Asianet Suvarna News Asianet Suvarna News

ನನಗೆ ಪತಿ ಬೇಕು... ಆತನಿರುವಲ್ಲಿಗೆ ಹೋಗುತ್ತೇನೆಂದು ಅಳುವ ಪುಟಾಣಿ... ವಿಡಿಯೋ

ಮಗುವೊಂದು ನಾನು ಪತಿಯ (husband) ಬಳಿ ಹೋಗಬೇಕು ಎಂದು ಜೋರಾಗಿ ಮನೆಯವರೊಂದಿಗೆ ಹಠ ಮಾಡಿ ಅಳಲು ಶುರು ಮಾಡಿದೆ. ಇದನ್ನು ನೋಡಿದ ಪೋಷಕರು ಮಗುವಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

I want husband little girl crying a lot asking parents about husband watch funny viral video akb
Author
First Published Dec 11, 2022, 9:11 PM IST

ಪುಟಾಣಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಮಕ್ಕಳ ತುಂಟಾಟಗಳು ತೊದಲು ನುಡಿಗಳು ಎಲ್ಲರನ್ನು ನಕ್ಕು ನಗಿಸುತ್ತವೆ. ಮನೆಯಲ್ಲೊಂದು ಮಗುವಿದ್ದರೆ ಅದರ ಆಟ ತೊದಲು ಮಾತುಗಳಿಂದ ಪೋಷಕರಲ್ಲದೇ ಮನೆಯಲ್ಲಿ ಇರುವ ಹಿರಿಯರಿಗೆ ನೆಮ್ಮದಿ ಸಿಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಪುಟಾಣಿ ಮಗುವಿನ ವಿಡಿಯೋವೊಂದು ಎಲ್ಲರನ್ನು ನಕ್ಕು ನಗಿಸುತ್ತಿದೆ. ಈ ವಿಡಿಯೋದಲ್ಲಿ ಮಗುವೊಂದು ನಾನು ಪತಿಯ (husband) ಬಳಿ ಹೋಗಬೇಕು ಎಂದು ಜೋರಾಗಿ ಮನೆಯವರೊಂದಿಗೆ ಹಠ ಮಾಡಿ ಅಳಲು ಶುರು ಮಾಡಿದೆ. ಇದನ್ನು ನೋಡಿದ ಪೋಷಕರು ಮಗುವಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮಕ್ಕಳಿಗೆ ಪತಿ ಇರುವುದಿಲ್ಲ. ದೊಡ್ಡವರಿಗೆ ಮಾತ್ರ ಪತಿ ಇರುತ್ತಾರೆ ಎಂದು ಆ ಮಗುವಿಗೆ ಮನೆಯ ಹಿರಿಯರೊಬ್ಬರು ಬುದ್ಧಿ ಹೇಳುತ್ತಿದ್ದಾರೆ. ಅಲ್ಲದೇ ಮಗುವಿನ ಬಳಿ ನಿನ್ನ ಪತಿ ಯಾರೂ ಎಂದು ಕೇಳುತ್ತಾರೆ. ಆಗ ಆ ಮಗು ಮಾಮಾ ಎಂದು ಹೇಳುತ್ತದೆ.

ಅದಕ್ಕೆ ಪೋಷಕರು (Parents) ಮಾಮಾ ನಿನ್ನ ಪತಿ ಆಗುವುದಿಲ್ಲ. ಮಾಮಾ ಮಾಮಿಯ ಪತಿ ಆಗುತ್ತಾರೆ. ಅಪ್ಪ ಅಮ್ಮನಿಗೆ ಪತಿ ಆಗುತ್ತಾರೆ. ಅಜ್ಜ ಅಜ್ಜಿಯ (Grand Parents) ಪತಿ ಆಗುತ್ತಾರೆ ಆರ್ಥ ಆಯ್ತಾ ಎಂದು ಮಗುವನ್ನು ಕೇಳುತ್ತಾರೆ. ಈ ವೇಳೆ ಇನ್ನಷ್ಟು ಸಿಟ್ಟಿಗೆದ್ದ ಮಗು (Kid) ಕಿರುಚುವ ಸ್ವರದಲ್ಲಿ ಹಾಗಾದರೆ ನನ್ನ ಪತಿ ಯಾರು ಎಂದು ಜೋರಾಗಿ ಕೇಳುತ್ತಾಳೆ. ಇದಕ್ಕೆ ಮನೆಯಲ್ಲಿದ್ದವರೆಲ್ಲರೂ ಜೋರಾಗಿ ನಗಲು ಶುರು ಮಾಡಿದ್ದು, ಮಹಿಳೆಯೊಬ್ಬರು, ಆತ ಬಹುಶಃ ಎಲ್ಲಾದರು ಆಟವಾಡುತ್ತಿರಬಹುದು ಎಂದು ಹೇಳಿ ಮಗುವನ್ನು ಸಮಾಧಾನಪಡಿಸಲು ನೋಡುತ್ತಾರೆ. ಅಲ್ಲದೇ ಈಗ ಆತ ಸಿಗಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಮಗು ಹಾಗಾದರೆ ನನ್ನ ಪತಿ ಎಲ್ಲಿಗೆ ಹೋಗಿದ್ದಾನೆ ಎಂದು ಮತ್ತೆ ಪೋಷಕರನ್ನು ಪ್ರಶ್ನಿಸಿದೆ. ಇದಕ್ಕೆ ಮತ್ತೆ ಮನೆಯವರೆಲ್ಲರೂ ಜೋರಾಗಿ ನಗಲು ಶುರು ಮಾಡಿದ್ದಾರೆ. ನಂತರ ಮಕ್ಕಳಿಗೆ ಪತಿ ಇರುವುದಿಲ್ಲ ಮಗುವೇ, ಮಕ್ಕಳು ದೊಡ್ಡವರಾದ ಮೇಲೆ ಪತಿ ಸಿಗುತ್ತಾರೆ. ಮಕ್ಕಳಿಗೆ ಕೇವಲ ಅಣ್ಣ ತಂಗಿ ಅಕ್ಕ ತಮ್ಮ ಇರುತ್ತಾರೆ ಎಂದು ದೊಡ್ಡವರು ಮಗುವಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಮಗು ಮಾತ್ರ ಅದನ್ನು ಕೇಳಲು ಸಿದ್ಧವಿಲ್ಲದೇ ಹಿಂದಿ ಭಾಷೆಯಲ್ಲಿ(Hindi Language) ಮೇರೆ ಪತಿ ಛಾಹಿಯೇ (ನನಗೆ ಗಂಡ ಬೇಕು) ಎಂದು ಮತ್ತೆ ಅಳಲು ಶುರು ಮಾಡುತ್ತಾಳೆ. 

ಐಸ್‌ಕ್ರೀಂ ನೀಡಲು ಕಾಡಿಸಿದ ಮಾರಾಟಗಾರ... ಕೋಪದಿಂದ ಕುದ್ದೋದ ಪುಟಾಣಿ

ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು ಬಹುತೇಕರು ನಗುವ ಇಮೋಜಿ ಕಾಮೆಂಟ್ ಮಾಡಿದ್ದಾರೆ. reviewbymanisha ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈ ಪುಟ್ಟ ಮಗುವಿನ ವಿಡಿಯೋ ಎಲ್ಲರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ದಯವಿಟ್ಟು ಅವಳಿಗೆ ಅವಳ ಗಂಡನನ್ನು ಕೊಟ್ಟು ಬಿಡಿ ಎಂದು ವಿಡಿಯೋ ನೋಡಿದವರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಂದೆಡೆ ಯುವತಿಯೊಬ್ಬಳು ನನಗೂ ನನ್ನ ಪತಿ ಇನ್ನು ಸಿಕ್ಕಿಲ್ಲ. ಅವನು ಎಲ್ಲಿ ಆಟವಾಡ್ತಿದ್ದಾನೋ ಬೇರೆ ಯುವತಿಯರ ಫೀಲಿಂಗ್ಸ್ (Feelings) ಜೊತೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾಳೆ. ಹಲವು ವರ್ಷಗಳ ಬಳಿಕ ಆ ವಿಡಿಯೋವನ್ನು ಆ ಮಗುವಿಗೆ ತೋರಿಸಿದರೆ ಆಕೆ ಬಹಳ ಬೇಜಾರು ಮಾಡಿಕೊಳ್ಳಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದಯವಿಟ್ಟು ಯಾರಾದರು ಈಕೆಯನ್ನು ಈಕೆಯ ಪತಿ ಬಳಿ ಕರೆದುಕೊಂಡು ಹೋಗಿ ಇಲ್ಲದಿದ್ದರೆ ಆಕೆ ಅಳುತ್ತಲೇ ಇರುತ್ತಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿ ಅಯ್ಯೋ ನನ್ ಹೆಂಡ್ತಿ ಎಲ್ಲಿದ್ದಾಳೋ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅವಿವಾಹಿತ ವಯಸ್ಕರು ಕೂಡ ಈ ಮಗುವಿನ ವಿಡಿಯೋದಿಂದಾಗಿ ತಮ್ಮ ಭಾವಿ ಪತಿ ಪತ್ನಿಯರನ್ನು ನೆನೆಯುವಂತಾಗಿದೆ ಎಂಬುದು ಮಾತ್ರ ಸುಳ್ಳಲ್ಲ...

ಪುಟ್ಟ ಬಾಲಕನ ಕಿತಾಪತಿಗೆ ಅಪ್ಪನ ಕಾರು ಅಮ್ಮನ ಲಿಪ್‌ಸ್ಟಿಕ್ ಎರಡೂ ಢಮಾರ್

 

Follow Us:
Download App:
  • android
  • ios