Asianet Suvarna News Asianet Suvarna News

ಐಸ್‌ಕ್ರೀಂ ನೀಡಲು ಕಾಡಿಸಿದ ಮಾರಾಟಗಾರ... ಕೋಪದಿಂದ ಕುದ್ದೋದ ಪುಟಾಣಿ

ಐಸ್‌ಕ್ರೀಂ ಮಾರಾಟಗಾರನ ಕಿತಾಪತಿಗೆ ರೊಚ್ಚಿಗೆದ್ದ ಬಾಲಕಿ ತನ್ನ ಆಕ್ರೋಶವನ್ನೆಲ್ಲಾ ಆತನ ಮುಂದೆ ಹೊರ ಹಾಕಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

little girl shows her angry with Ice cream vendor, video goes viral in Social Media Akb
Author
First Published Nov 23, 2022, 2:53 PM IST

ಟರ್ಕಿಶ್ ಐಸ್‌ಕ್ರೀಂ ಮಾರಾಟಗಾರರು, ಐಸ್‌ಕ್ರೀಂ ನೀಡುವ ಮುಂಚೆ ಗ್ರಾಹಕರನ್ನು ಕಾಡಿಸುವ ಸಾಕಷ್ಟು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಐಸ್‌ಕ್ರೀಂ ಮಾರಾಟಗಾರ ಹಲವು ನಿಮಿಷಗಳ ಕಾಲ ಐಸ್‌ಕ್ರೀಂ ನೀಡಿದಂತೆ ಮಾಡಿ ಗ್ರಾಹಕರನ್ನು ಮೇಲೆ ಕೆಳಗೆ ಮಾಡುತ್ತಾನೆ. ಐಸ್‌ಕ್ರೀಂಗಾಗಿ ಕಾದು ಕಾದು ಕೈ ನೀಡಿ ನೀಡಿ ಸುಸ್ತಾಗುವಂತೆ ಮಾಡುವ ಐಸ್‌ಕ್ರೀಂ ಮಾರಾಟಗಾರನ ಟ್ರಿಕ್ಸ್‌ಗೆ ಅನೇಕರು ಈ ಹಿಂದೆಯೂ ಬೆರಗಾಗಿದ್ದಾರೆ. ಆದರೆ ಪುಟ್ಟ ಬಾಲಕಿಗೆ ಮಾತ್ರ ಈತನ ಟ್ರಿಕ್ಸ್ ಇಷ್ಟವಾಗಿಲ್ಲ. ಐಸ್‌ಕ್ರೀಂ ಮಾರಾಟಗಾರನ ಕಿತಾಪತಿಗೆ ರೊಚ್ಚಿಗೆದ್ದ ಬಾಲಕಿ ತನ್ನ ಆಕ್ರೋಶವನ್ನೆಲ್ಲಾ ಆತನ ಮುಂದೆ ಹೊರ ಹಾಕಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 

ತನ್ನ ಎಲ್ಲಾ ಗ್ರಾಹಕರಿಗೂ (customers) ಮಾಡುವಂತೆ ಈ ಬಾಲಕಿಗೂ ಐಸ್‌ಕ್ರೀಂ ಮಾರಾಟಗಾರ ಸಾಕಷ್ಟು ಕಾಡಿಸಿದ್ದಾನೆ. ಮೊದಲಿಗೆ ಬಾಲಕಿಗೆ ಐಸ್‌ಕ್ರೀಂನ ಖಾಲಿ ಕೋನ್ (ice cream cone) ನೀಡಿದ್ದು, ಇದರಿಂದ ಸಿಟ್ಟಿಗೆದ್ದ ಬಾಲಕಿ ಅದನ್ನು ತೆಗೆದು ಆತನ ಮುಖಕ್ಕೆ ಬಿಸಾಕಿದ್ದಾಳೆ. ಆದರೂ ಐಸ್‌ಕ್ರೀಂ ನೀಡುವವ ಮಾತ್ರ ಬಾಲಕಿಯ ಸಿಟ್ಟಿಗೆ ಕರಗಿಲ್ಲ. ಮತ್ತಷ್ಟು ಕಾಡಿಸುತ್ತಲೇ ಆಕೆಗೆ ಹಲವು ಬಾರಿ ಐಸ್‌ಕ್ರೀಂ ಇಲ್ಲದ ಖಾಲಿ ಖಾಲಿ ಕೋನ್‌ಗಳನ್ನು ಹಲವು ಬಾರಿ ನೀಡಿದ್ದಾನೆ. ಕೊನೆಗೆ ಮಗು ಐಸ್‌ಕ್ರೀಂ ಸಿಗದ ಸಿಟ್ಟಿಗೆ ಅತ್ತು ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ. ಬಳಿಕ ಬಾಲಕಿಯನ್ನು ಆಕೆಯ ಪೋಷಕರು (parents) ಎತ್ತಿಕೊಂಡಿದ್ದು, ಕೊನೆಗೂ ಐಸ್‌ಕ್ರೀಂ ಕಿತ್ತುಕೊಳ್ಳುವಲ್ಲಿ ಬಾಲಕಿ ಯಶಸ್ವಿಯಾಗಿದ್ದಾಳೆ. 

ತಿನ್ನುವ ವಿಚಾರದಲ್ಲಿ ಯಾರಿಗೂ ಹೆಚ್ಚು ಹೊತ್ತು ತಾಳ್ಮೆಯಿಂದ ಕಾಯಲು ಸಾಧ್ಯವಿಲ್ಲ. ಕಣ್ಣಿದುರು ತಮ್ಮ ಇಷ್ಟದ ತಿನಿಸು ಕಾಣಿಸುತ್ತಿದ್ದರೆ ಸುಮ್ಮನೆ ಕೂರಲು ಯಾರಿಗೆ ಸಾಧ್ಯವಿದೆ. ಇಲ್ಲಿ ಅದೂ ಐಸ್‌ಕ್ರೀಂ, ಐಸ್‌ಕ್ರೀಂ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಬಹುತೇಕರು ಐಸ್‌ಕ್ರೀಂಗಾಗಿ ಬಾಯಿ ಬಾಯಿ ಬಿಟ್ಟು ನೋಡುತ್ತಿರುತ್ತಾರೆ. ಮಕ್ಕಳಂತೂ ಮನೆಗೆ ಐಸ್‌ಕ್ರೀಂ ತಂದರೆ ಕೊಡುವವರೆಗೂ ಸುಮ್ಮನಿರುವುದಿಲ್ಲ. ಹಾಗೆಯೇ ಇಲ್ಲಿ ಪುಟ್ಟ ಬಾಲಕಿಗೆ ಕಣ್ಣೆದುರು ಇರುವ ಐಸ್‌ಕ್ರೀಂ ಅನ್ನು ತಿನ್ನಲು ಕೊಡದೇ ಕಾಡಿಸಿದ ಆತನ ಬಗ್ಗೆ ಇನ್ನಿಲ್ಲದ ಕೋಪ ಬಂದಿದ್ದು, ಪುಟ್ಟ ಬಾಲಕಿ ಸಿಟ್ಟು ತೋರಿಸಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. 

ಐಸ್‌ಕ್ರೀಂ ಫೋಟೋ ನೋಡಿ ನೆಕ್ಕಲು ಶುರು ಮಾಡಿದ ಶ್ವಾನ: ವೈರಲ್ ವಿಡಿಯೋ

Idli Ice Cream: ಇಡ್ಲಿ ಮತ್ತು ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ?

ಐಸ್‌ಕ್ರೀಂ ಎಂದುಕೊಂಡು ಹುಳಿ ಕ್ರೀಂ ತಿಂದ ಮಗು, ಮುಖ ಹೇಗೆ ಮಾಡಿಕೊಳ್ತು ನೋಡಿ !

Follow Us:
Download App:
  • android
  • ios