‘ಅಪ್ಪಾ..I Hate You’: ತಂದೆ ಕಿರುಕುಳ ತಾಳಲಾರದೆ ನೇಣಿಗೆ ಶರಣು, 16 ವರ್ಷದ ಮಗಳ ಡೆತ್ ನೋಟ್ ನೋಡಿ ಹೆತ್ತವರೇ ಶಾಕ್!
ಅಪ್ಪಾ ಐ ಲವ್ ಯೂ ಪಾ..ಈ ಪ್ರೀತಿಯ ನುಡಿ ಹೆಣ್ಣುಮಕ್ಕಳ ಪಾಲಿನ ಹೀರೋ ಆಗಿರುವ ತಂದೆಗೆ ಸ್ಫೂರ್ತಿಯ ಟಾನಿಕ್. ಇದರ ನಡುವೆ ಮಗಳಿಗೆ ಬೆಳಕಾಗುವ, ಉಜ್ವಲ ಭವಿಷ್ಯ ರೂಪಿಸುವ ಅಪ್ಪನೇ ವಿಲನ್ ಆದ ಹಲವು ಘಟನೆಗಳೂ ಇವೆ. ಆದರೆ ಇಲ್ಲೊಂದು ಘಟನೆ ನಿಮ್ಮ ಕಣ್ಣಲ್ಲಿ ನೀರು ತರಿಸದೇ ಇರದು. ಈಕೆಯ ಬಾಳಲ್ಲಿ ಅಪ್ಪನೇ ವಿಲನ್. ಅಪ್ಪನಿಂದಲೇ ಬದುಕು ಅಂತ್ಯಗೊಳಿಸಿದ್ದಾರೆ. ಈಕೆ ಬರೆದ ಡೆತ್ ಓದಿದ ಪೊಲೀಸರ ಕಣ್ಣಲ್ಲೂ ಕಣ್ಮೀರು.
ಅಪ್ಪ, ಹೆಣ್ಣು ಮಕ್ಕಳ ಪಾಲಿನ ಮೊದಲ ಹೀರೋ. ಅಪ್ಪನಿಗಾಗಿ ಕಿಡ್ನಿ ಕೊಟ್ಟ ನೂರಾರು ಹೆಣ್ಮಕ್ಕಳಿದ್ದಾರೆ. ಸಾಯುತ್ತಿದ್ದ ಅಪ್ಪನ ಪಾಲಿಗೆ ಜೀವರಕ್ಷಕಿಯರಾಗಿದ್ದಾರೆ. ಆದ್ರೆ, ಅದೇ ಅಪ್ಪನಿಂದಾಗಿ ಮಗಳೊಬ್ಬಳು ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಗುಜರಾತ್‌ನ ರಾಜ್ಕೋಟ್ನಲ್ಲಿ ನಡೆದಿದೆ.
ಗುಜರಾತ್‌ನ ಪೋರ್‌ಬಂದರ್ ಜಿಲ್ಲೆಯ ಕುಟಿಯಾನಾದ ನಿವಾಸಿ ದಿವ್ಯಾ ರಮೇಶ್‌ಗೆ ಓದುವ ಹುಚ್ಚು. 11ನೇ ಕ್ಲಾಸ್ ಕಲಿಯುತ್ತಿದ್ದ ದಿವ್ಯಾ, ಹೈಯರ್ ಸ್ಟಡೀಸ್‌ಗಾಗಿ ಅಜ್ಜಿಯ ಮನೆಯಿದ್ದ ಧೋರಾಜಿ ಸಿಟಿಗೆ ಬಂದಿದ್ದಳು. ಅಲ್ಲಿನ ರಾಯಲ್ ಶಾಲೆಯ ಹಾಸ್ಟೆಲ್‌ನಲ್ಲಿ ನೆಲೆಸಿದ್ದಳು. ಓದಿನಲ್ಲೂ ಮುಂದು, ಬೇರೆ ಚಟುವಟಿಕೆಯಲ್ಲೂ ಮುಂದಿದ್ದ ದಿವ್ಯಾ, ಕಳೆದ ಶನಿವಾರ, ತಾನಿದ್ದ ಹಾಸ್ಟೆಲ್ ರೂಮ್ ಫ್ಯಾನ್ನಲ್ಲಿ ನೇಣಿಗೆ ಶರಣಾಬಿಟ್ಟಳು. ಆಕೆಯ ಸಾವು, ಇಡೀ ಹಾಸ್ಟೆಲ್ ಅಲ್ಲ, ಇಡೀ ಊರಿನ ಜನರನ್ನು ಶಾಕ್ಗೀಡು ಮಾಡಿದೆ.
ನೀರಿಲ್ಲದ ಬಾವಿಗೆ ಎಸೆದ ಮಗುವನ್ನು ಕಾಪಾಡಿದ ನಾಗರಹಾವು, ಕಂದನ ಹೊಟ್ಟೆ ಸುತ್ತಿಕೊಂಡು ರಾತ್ರಿ ಇಡೀ ಕಾದ ಸರ್ಪ!
ಶುಕ್ರವಾರ ಮಧ್ಯಾಹ್ನ ದಿವ್ಯಾ ಸ್ವಲ್ಪ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ವಾಪಸ್ ಕರೆತರಲಾಗಿತ್ತು. ದಿವ್ಯಾಗೆ ಹುಷಾರಿಲ್ಲದ ಕಾರಣ, ಆಕೆಯನ್ನು ರೂಂನಲ್ಲೇ ಓದಲು ಬಿಟ್ಟು ರೂಮ್ಮೇಟ್ಸ್ ಹಾಲ್‌ಗೆ ಬಂದಿದ್ದರು. ತಮ್ಮ ಓದು ಮುಗಿದ ಬಳಿಕ ಹುಡುಗಿಯರು ರೂಂಗೆ ವಾಪಸ್ಸಾಗಿ ನೋಡಿದಾಗ, ದಿವ್ಯಾ ನೇಣಿನ ಕುಣಿಯಲ್ಲಿ ತೂಗಾಡುತ್ತಿದ್ದಳು.
ವಿಷಯ ತಿಳಿಯುತ್ತಿದ್ದಂತೆ ಹಾಸ್ಟೆಲ್ಗೆ ಧಾವಿಸಿದ ಪೊಲೀಸರು, ದಿವ್ಯಾಳ ರೂಮ್ ಪರಿಶೀಲಿಸಿದಾಗ ಸಿಕ್ಕಿದ್ದೇ ಡೆತ್ನೋಟ್. ಆಕೆಯ ಡೆತ್ನೋಟ್ ಓದಿದ ಪೊಲೀಸರು ಕೆಲಕಾಲ ದಿಗ್ಮೂಢರಾಗಿಬಿಟ್ಟರು. ಯಾಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ದಿವ್ಯಾ ವಿವರವಾಗಿ ಬರೆದಿದ್ದಳು.
‘ಅಪ್ಪಾ.. ನಾನು ನಿನ್ನನ್ನು ದ್ವೇಷಿಸುತ್ತೇನೆ. ನನ್ನ ಸಾವಿಗೆ ನೀನು ಮಾತ್ರ. ನೀನು ಎಂದಿಗೂ ನನ್ನನ್ನು ಮಗಳು ಎಂದು ಭಾವಿಸಲೇ ಇಲ್ಲ. ಬೈಯ್ಯೋದು, ಆರ್ಡರ್ ಮಾಡೋದಷ್ಟೇ ನಿನಗೆ ಗೊತ್ತಿರೋದು..’ ಎಂದು ಅಪ್ಪ ರಮೇಶ್ ಬಗ್ಗೆ ಕೆಂಡಕಾರಿದ್ದಾಳೆ. ಡೆತ್ ನೋಟ್‌ನಲ್ಲಿ ತನ್ನ ಅಜ್ಜಿಯ ಬಗ್ಗೆಯೂ ಬರೆದಿರುವ ದಿವ್ಯಾ, ಅಜ್ಜಿಯೇ ನನಗೆ ತಂದೆ- ತಾಯಿಯ ಪ್ರೀತಿ ನೀಡಿದರು ಎಂದಿದ್ದು, ಡೆತ್ ನೋಟ್‌ನ ಕೊನೆಯಲ್ಲಿ ಆಕೆ ಅಜ್ಜಿಯ ಕ್ಷಮೆ ಯಾಚಿಸಿದ್ದಾಳೆ. ತನ್ನ ತಾಯಿಯನ್ನೂ ನೆನಪಿಸಿಕೊಂಡಿರುವ ದಿವ್ಯಾ, ಅಮ್ಮಾ ನನ್ನನ್ನು ಕ್ಷಮಿಸಿ ಬಿಡು. ನಾನು ಇಷ್ಟೊಂದು ಒತ್ತಡದಲ್ಲಿ ಬದುಕಲು ಆಗುತ್ತಿಲ್ಲ. ನಾನು ಎಂದಿಗೂ ಶಾಂತಿಯಿಂದ ಬದುಕಿರಲು ಸಾಧ್ಯ ಆಗ್ತಿರಲಿಲ್ಲ ಅಂತ ಅಲವತ್ತುಕೊಂಡಿದ್ದಾಳೆ. ದಿವ್ಯಾ ಡೆತ್ನೋಟ್ ಓದಿದ ಪೊಲೀಸರು ಕಣ್ಣೀರಾಗಿದ್ದಾರೆ. ತಂದೆ ರಮೇಶ್ಭಾಯ್ ಬಿಎಸ್ಎಫ್ನಲ್ಲಿ ಸೈನಿಕನಾಗಿ ಕೆಲಸ ನಿರ್ವಹಿಸುತ್ತಿದ್ದು, ದಿವ್ಯಾಳಿಗೆ ಯಾಕಿಷ್ಟು ಕಿರುಕುಳ ನೀಡುತ್ತಿದ್ದ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!
ಅಜ್ಜಿಯ ಪ್ರೀತಿಯಲ್ಲೇ ಬೆಳೆದ ದಿವ್ಯಾಗೆ ಅಪ್ಪ ರಮೇಶ್ ಜತೆ ಬಾಂಧವ್ಯ ಇರಲಿಲ್ಲ ಎನ್ನಲಾಗಿದೆ. ಓದುವ ವಯಸ್ಸಿನ, ಎದೆಮಟ್ಟಕ್ಕೆ ಬೆಳೆದ ಮಕ್ಕಳು ತಂದೆ-ತಾಯಿಯರ ಪ್ರೀತಿಯಿಂದ ವಂಚಿತರಾದ್ರೆ, ಮಾನಸಿಕ ಒತ್ತಡಕ್ಕೆ ಸಿಲುಕಿದ್ರೆ ಅವರಿಗೆ ಬೇಕಾದ ಪ್ರೀತಿ ಸಿಗದಿದ್ದಾಗ, ಜೀವವನ್ನೇ ಕಳೆದುಕೊಳ್ಳುವಂಥ ಕಠಿಣ ನಿರ್ಧಾರಕ್ಕೆ ಬಂದು ಬಿಡುತ್ತಾರೆ ಅನ್ನೋದಕ್ಕೆ ದಿವ್ಯಾ ಪ್ರಕರಣವೇ ಸಾಕ್ಷಿ..