ರಾತ್ರಿ ವೈದ್ಯ ಪತಿ ಇಡ್ತಿದ್ದ ಆ ಬೇಡಿಕೆ ಈಡೇರಿಸಲಾಗದೇ ಠಾಣೆ ಮೆಟ್ಟಿಲೇರಿದ ಪತ್ನಿ!
ಉತ್ತರ ಪ್ರದೇಶದಲ್ಲಿ ಡಾಕ್ಟರ್ ಒಬ್ಬರ ವರ್ತನೆ ಅಚ್ಚರಿಗೊಳಿಸಿದೆ. ಮದುವೆಯಾಗಿ ಮೂರು ತಿಂಗಳಿಗೇ ಪೊಲೀಸ್ ಠಾಣೆ ಏರುವಂತಾಗಿದೆ. ಆತ ಮಧ್ಯರಾತ್ರಿ ತನ್ನ ಪತ್ನಿ ಮುಂದಿಡುತ್ತಿದ್ದ ಬೇಡಿಕೆಯೆ ಇದಕ್ಕೆಲ್ಲ ಕಾರಣ.
ಮದುವೆ (Marriage)ಯಾಗಿ ಮೂರು ತಿಂಗಳಾಗಿಲ್ಲ, ಆಗ್ಲೇ ವೈದ್ಯೆ (doctor) ತವರು ಸೇರಿದ್ದಾಳೆ. ಅಷ್ಟೇ ಅಲ್ಲ ಪೊಲೀಸರಿಗೆ ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಆಕೆಯ ದೂರು ಕೇಳಿದ ಪೊಲೀಸ (Police)ರು ಅಚ್ಚರಿಗೊಳಗಾಗಿದ್ದಾರೆ. ಪ್ರಕರಣವನ್ನು ಕೌಟುಂಬಿಕ ಕಾನೂನು ಕೇಂದ್ರಕ್ಕೆ ಕಳುಹಿಸಿದ್ದು, ಅಲ್ಲಿ ವೈದ್ಯೆ ಕೋಪಕ್ಕೆ ಕಾರಣ ಪತ್ತೆಯಾಗಿದೆ.
ಘಟನೆ ಉತ್ತರ ಪ್ರದೇಶ (Uttar Pradesh)ದಲ್ಲಿ ನಡೆದಿದೆ. ಇಲ್ಲಿನ ಆಗ್ರಾ ಜಿಲ್ಲೆಯ ವೈದ್ಯೆಯೊಬ್ಬಳಿಗೆ ತನ್ನ ಪತಿಯ ಪ್ರೀತಿ (Love)ಯೇ ಸಂಕಷ್ಟ ತಂದಿದೆ. ಪತಿಯ ವರ್ತನೆಗೆ ಬೇಸತ್ತು ಮನೆ ಬಿಟ್ಟಿದ್ದಾಳೆ. ಮಧ್ಯರಾತ್ರಿ ಪತಿ ಇಡ್ತಿದ್ದ ಬೇಡಿಕೆಯೇ ಆಕೆ ದೂರವಾಗಲು ಕಾರಣವಾಗಿದೆ. ಪೀಡಿತೆ ಪತಿ ಕೂಡ ವೈದ್ಯನಾಗಿದ್ದಾನೆ. ಇಬ್ಬರ ಮದುವೆ ಕೇವಲ ಮೂರು ತಿಂಗಳ ಹಿಂದೆ ನಡೆದಿದೆ. ಡಾಕ್ಟರ್ ಪ್ರತಿ ರಾತ್ರಿ ಹೆಂಡ್ತಿ ಮುಂದಿಡುತ್ತಿದ್ದ ಆಸೆ ಪತ್ನಿಗೆ ಇಷ್ಟವಾಗಿರಲಿಲ್ಲ. ಇದು, ಆಕೆಯನ್ನು ಪ್ರತಿ ದಿನ ಮುಜುಗರಕ್ಕೊಳಪಡಿಸುತ್ತಿತ್ತು. ಇದ್ರಿಂದ ಬೇಸತ್ತ ವೈದ್ಯೆ ಮನೆ ಬಿಟ್ಟಿದ್ದಳು. ಅಷ್ಟಕ್ಕೇ ಸುಮ್ಮನಿರದ ಆಕೆ ಪೊಲೀಸರಿಗೆ ಪತಿಯ ವಿಚಿತ್ರ ವರ್ತನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಳು. ಪ್ರಕರಣ ಕೌಟುಂಬಿಕ ಕಾನೂನು ಕೇಂದ್ರ ತಲುಪಿತ್ತು.
ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್
ಈ ಸಮಯದಲ್ಲಿ ವೈದ್ಯೆ ತನ್ನ ಗಂಡ ಪ್ರೀತಿ ಮಾಡುವ ರೀತಿ ಸರಿಯಿಲ್ಲ ಎಂದು ದೂರಿದ್ದಳು. ಆತನ ಪ್ರೀತಿ ಹಿಂಸೆ ನೀಡುತ್ತದೆ. ಉಸಿರುಗಟ್ಟಿಸಿದ ಅನುಭವ ನೀಡುತ್ತದೆ. ನನಗೆ ಇದ್ರಿಂದ ಮುಜುಗರವಾಗುತ್ತದೆ ಎಂದಿದ್ದಳು. ಕೌನ್ಸಿಲರ್ ಪ್ರಕಾರ, ವೈದ್ಯ ತನ್ನ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದನಂತೆ. ಅದನ್ನು ಪತ್ನಿ ನೋಡಬೇಕಿತ್ತು. ವಿಡಿಯೋ (video)ದಲ್ಲಿ ಮಾಡಿದ್ದನ್ನು ವಾಸ್ತವಕ್ಕೆ ತರುವ ಪ್ರಯತ್ನ ಮಾಡ್ತಿದ್ದ ವೈದ್ಯ, ಇದನ್ನೇ ಪ್ರೀತಿ ಎಂದು ಭಾವಿಸಿದ್ದ. ವಿಡಿಯೋದಲ್ಲಿದ್ದಂತೆ ಪತ್ನಿ ಮಾಡದೆ ಹೋದ್ರೆ ಗಲಾಟೆ ಮಾಡ್ತಿದ್ದ. ಅಲ್ಲದೆ ಅಶ್ಲೀಲ ವಿಡಿಯೋ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದ. ಇದಕ್ಕೆ ವೈದ್ಯೆ ವಿರೋಧ ಮಾಡಿದ್ದಳು. ಇದ್ರಿಂದ ಗಲಾಟೆ ಜೋರಾಗಿತ್ತು. ಕೋಪದಲ್ಲಿ ವೈದ್ಯೆ ಗಂಡನ ಮನೆ ತೊರೆದಿದ್ದಳು. ಈ ವಿಷ್ಯ ಕೇಳಿದ ಕುಟುಂಬಸ್ಥರು ಅಚ್ಚರಿಗೊಳಗಾಗಿದ್ದರು.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ (divorce) ಪ್ರಕರಣಗಳು ಹೆಚ್ಚಾಗ್ತಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ಬೇರೆಯಾಗ್ತಿದ್ದಾರೆ. ವೈದ್ಯೆ ಜೀವನ ಸರಿಪಡಿಸಬೇಕು, ವಿಚ್ಛೇದನ ತಡೆಯಬೇಕು ಎಂಬ ನಿರ್ಧಾರಕ್ಕೆ ಬಂದ ಪೊಲೀಸರು, ಪ್ರಕರಣವನ್ನು ತಜ್ಞರ ಮುಂದಿಟ್ಟಿದ್ದರು. ಕೌನ್ಸಿಲಿಂಗ್ ಗೆ ಸೂಚಿಸಿದ್ದರು. ತಜ್ಞರು, ಎರಡೂ ಕಡೆಯ ವಾದ, ವಿವಾದ ಆಲಿಸಿ, ಪತಿ – ಪತ್ನಿಯನ್ನು ಒಂದು ಮಾಡಿದ್ದಾರೆ. ಇಬ್ಬರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಹೊಂದಿ ಬಾಳುವ ನಿರ್ಧಾರಕ್ಕೆ ಬಂದಿದ್ದಾರೆಂದು ತಜ್ಞರು ತಿಳಿಸಿದ್ದಾರೆ.
ನಿಶ್ಚಿತಾರ್ಥದ ಬೆನ್ನಲ್ಲೇ ವಧುವಿನೊಂದಿಗೆ ಮೊದಲರಾತ್ರಿ ಮಿಲನ ಆಚರಿಸಿದ ವರ; ಈಗ
ಇತ್ತ ಫಿರೋಜಾಬಾದ್ ಜಿಲ್ಲೆಯಲ್ಲಿ ರಾಮಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹೆಣ್ಣು ಮಗು ಜನಿಸಿದೆ ಎನ್ನುವ ಕಾರಣಕ್ಕೆ ಜೀಶಾನ್ ಎಂಬಾತ ಪತ್ನಿಗೆ ತಲಾಕ್ ನೀಡಿ ಮನೆಯಿಂದ ಹೊರ ಹಾಕಿದ್ದಾನೆ. ಮದುವೆಯಾಗಿ ಎರಡು ವರ್ಷವಾಗಿದ್ದು, ಹಿಂದಿನ ವರ್ಷ ಪೀಡಿತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದ್ರಿಂದ ಕೋಪಗೊಂಡ ಜೀಶಾನ್, ಆಕೆಯನ್ನು ತವರಿನಲ್ಲೇ ಬಿಟ್ಟಿದ್ದ. ಕೆಲ ದಿನಗಳ ಹಿಂದೆ ಪೀಡಿತೆ ಬಳಿ ಬಂದು ಮೂರು ಬಾರಿ ತಲಾಕ್ ಹೇಳಿ ಹೋಗಿದ್ದಾನೆ. ಇದ್ರಿಂದ ನೊಂದಿರುವ ಮಹಿಳೆ, ತ್ರಿವಳಿ ತಲಾಕ್ ವಿರೋಧಿಸಿದ್ದಲ್ಲದೆ, ಪತಿ ಜೊತೆ ವಾಸಿಸಲು ಅವಕಾಶ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.