ವರ್ಷವಾದರೂ ಹೆಂಡ್ತಿ ಮುಖ ನೋಡಿಲ್ಲ ಎಂತಿದ್ದಾನೆ ಪತಿರಾಯ, ಅಂದರೇನರ್ಥ?

ಮೇಕಪ್ ಅಂದ್ರೆ ಮಹಿಳೆಯರು, ಮಹಿಳೆಯರೆಂದ್ರೆ ಮೇಕಪ್. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಕೆಲವರು ಅತಿಯಾಗಿ ಮೇಕಪ್ ಮಾಡ್ತಾರೆ. ಮನೆ ಹೊರಗೆ ಮಾತ್ರವಲ್ಲ ಒಳಗೂ ಬಣ್ಣ ಮೆತ್ತಿಕೊಳ್ತಾರೆ. ಇದ್ರಿಂದ ಅವರ ಅಸಲಿ ಮುಖ ನೋಡೋದೇ ಕಷ್ಟ. ಇಲ್ಲೊಬ್ಬ ಪತಿ ಸ್ಥಿತಿಯೂ ಅದೇ ಆಗಿದೆ.
 

Husband not seen wifes face without make even after year of wedding

ನಾವು ಮನುಷ್ಯ (Human) ರೇ ಹೀಗೆ, ಸಣ್ಣಪುಟ್ಟ ವಿಷ್ಯಗಳನ್ನು ತಲೆ ಮೇಲೆ ಹಾಕಿಕೊಂಡು, ಅದನ್ನೇ ದೊಡ್ಡದು ಮಾಡಿ, ಇಡೀ ದಿನ ಚಿಂತೆ ಮಾಡ್ತಿರುತ್ತೇವೆ. ನಮ್ಮ ಜೀವನ (Life) ದ ಸುಖ, ಸಂತೋಷ (Happy)ಗಳೆಲ್ಲ ಕ್ಷುಲ್ಲಕ ಕಾರಣಕ್ಕೆ ಹಾಳಾಗುತ್ತವೆ. ಇದು ಅನೇಕರಿಗೆ ತಿಳಿದಿದೆ. ಆದ್ರೂ ಆ ಚಿಂತೆಗಳಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ದಾಂಪತ್ಯದಲ್ಲಿ ಕೂಡ ಚಿಲ್ಲರೆ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೇ ಹೊರತು ಕಡ್ಡಿಯನ್ನು ಉದ್ದ ಮಾಡಿ, ಗಲಾಟೆ ಮಾಡ್ಬಾರದು. ಇದು ಸಂಬಂಧವನ್ನು ಹಾಳು ಮಾಡುತ್ತದೆ. ದಾಂಪತ್ಯದಲ್ಲಿ ಪರಸ್ಪರ ಪ್ರೀತಿ, ಗೌರವದ ಜೊತೆಗೆ ಅವರನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬಾರದು. ಈ ವ್ಯಕ್ತಿ ಕೂಡ ಸಣ್ಣ ವಿಷ್ಯವನ್ನು ದೊಡ್ಡದು ಮಾಡಿ, ಪತ್ನಿ ಪ್ರೀತಿ ಮಾಡೋದನ್ನೇ ಬಿಡ್ತಿದ್ದಾನೆ. ಹೆಂಡತಿ ಮೇಕಪ್ ಈತನಿಗೆ ಸಮಸ್ಯೆಯಾಗಿದೆ. ಮೇಕಪ್ ಹೆಸರಿನಲ್ಲಿ ಪತ್ನಿ ಪ್ರೀತಿಯನ್ನು ಈತ ದೂರ ಮಾಡ್ತಿದ್ದಾನೆ. ಇಂದು ಆತನ ಕಥೆ ಏನು ಅನ್ನೋದನ್ನು ನಾವು ಹೇಳ್ತೇವೆ.

ಆತನಿಗೆ 34 ವರ್ಷ. ಮದುವೆಯಾಗಿ ಒಂದು ವರ್ಷವಾಗ್ತಿದೆ ಅಷ್ಟೆ. ಆಗ್ಲೇ ಪತ್ನಿ ಮೇಲಿನ ಪ್ರೀತಿ ಕಡಿಮೆಯಾಗಿದೆ. ಇದಕ್ಕೆ ಆತ ಎರಡು ಕಾರಣ ಹೇಳ್ತಾನೆ. ಒಂದು ಪತ್ನಿ ತನಗಿಂತ 7 ವರ್ಷ ಚಿಕ್ಕವಳು ಎನ್ನುವುದು. ಇದ್ರಿಂದ ಆಕೆ ಹಾಗೂ ನನ್ನ ಮಧ್ಯೆ ಸಾಕಷ್ಟು ಅಂತರವಿದೆ. ಆಕೆಯ ಆಸೆ, ಆಲೋಚನೆಗಳು ನನಗೆ ಹೊಂದಾಣಿಕೆಯಾಗ್ತಿಲ್ಲ. ಇನ್ನೊಂದು ಆಕೆಯ ಮೇಕಪ್. ಯಸ್. ಪತ್ನಿಯ ಅತಿಯಾದ ಮೇಕಪ್ ಚಟ ಪತಿಗೆ ಹಿಂಸೆಯಾಗ್ತಿದೆ.

ಅಮ್ಮನ ಸೆರಗನ್ನೇ ಸದಾ ಹಿಡಿಯೋ ಗಂಡನನ್ನು ಸಂಭಾಳಿಸೋದು ಕಷ್ಟವೇನಲ್ಲ!

ರಾತ್ರಿಯೂ ಮೇಕಪ್ ಮಾಡ್ತಾಳೆ ಪತ್ನಿ: ಮೇಕಪ್ ಇಷ್ಟ ಪಡದ ಮಹಿಳೆಯರು ಬಹಳ ಅಪರೂಪ. ಮನೆಯಿಂದ ಹೊರಗೆ ಹೋಗುವಾಗ ಅನೇಕ ಮಹಿಳೆಯರು ಕಂಪಲ್ಸರಿ ಮೇಕಪ್ ಮಾಡ್ತಾರೆ. ಮಹಿಳೆಯರ ಬ್ಯಾಗ್ ನಲ್ಲಿ ಮೇಕಪ್ ಸೆಟ್ ಇದ್ದೇ ಇರುತ್ತದೆ. ಈತನ ಹೆಂಡತಿ ಸ್ವಲ್ಪ ಅತಿಯಾಗಿ ಮೇಕಪ್ ಮಾಡ್ತಾಳೆ. ಮನೆಯಿಂದ ಹೊರಗೆ ಹೋಗುವಾಗ ಮೇಕಪ್ ಮಾಡಲು ಗಂಟೆ ಟೈಂ ತೆಗೆದುಕೊಳ್ಳುವ ಆಕೆ, ತಿಂಗಳು ತಿಂಗಳು ಒಂದಿಷ್ಟು ಮೇಕಪ್ ಸೆಟ್ ಖರೀದಿ ಮಾಡ್ತಾಳೆ. ಇಷ್ಟೇ ಅಲ್ಲ ಮನೆಯಲ್ಲಿದ್ದಾಗಲೂ ಆಕೆ ಮೇಕಪ್ ಮಾಡಿಕೊಳ್ಳಲು ಇಷ್ಟಪಡ್ತಾಳಂತೆ. ಇದೆಲ್ಲ ಇರಲಿ, ರಾತ್ರಿ ಕೂಡ ಮೇಕಪ್ ಮಾಡ್ತಾಳಂತೆ ಮಹಾತಾಯಿ.

ಇನ್ನೂ ಆಕೆ ಅಸಲಿ ಮುಖ ನೋಡಿಲ್ಲ ಪತಿ..! : ಮೇಕಪ್ ಹುಚ್ಚು ಎಷ್ಟಿದೆ ಅಂದ್ರೆ ಇಡೀ ದಿನ ಮುಖಕ್ಕೆ ಬಣ್ಣ ಮೆತ್ತಿಕೊಳ್ಳುವ ಪತ್ನಿಯ ಅಸಲಿ ಮುಖವನ್ನೇ ಪತಿ ನೋಡಿಲ್ಲವಂತೆ. ಒಂದು ದಿನ ರಾತ್ರಿ ಕೂಡ ಪತ್ನಿ ಮೇಕಪ್ ಮಾಡೋದನ್ನು ನೋಡಿದ್ದೆ. ಮದುವೆಯಾಗಿ ವರ್ಷವಾಗ್ತಾ ಬಂತು, ಇನ್ನೂ ಆಕೆ ಮುಖ ಹೇಗಿದೆ ಎನ್ನುವುದು ನನಗೆ ಸರಿಯಾಗಿ ತಿಳಿದಿಲ್ಲ ಎನ್ನುತ್ತಾನೆ ಪತಿ.

ಮೇಕಪ್ ಮಾಡ್ಬೇಡ ಎಂದಿದ್ದಕ್ಕೆ ಕೋಪ : ಪತ್ನಿ ಈ ಚಟ ನೋಡಿ ಬೇಸತ್ತಿದ್ದ ವ್ಯಕ್ತಿಯ ತಾಳ್ಮೆ ಒಮ್ಮೆ ಹಾಳಾಗಿತ್ತಂತೆ. ಪತ್ನಿಗೆ ಇಷ್ಟೊಂದು ಮೇಕಪ್ ಮಾಡ್ಬೇಡ ಎಂದು ಸಲಹೆ ಕೂಡ ನೀಡಿದ್ದನಂತೆ. ಆದ್ರೆ ನೀನು ನನಗೆ ಹಿಂಸೆ ನೀಡ್ತಿದ್ದೀಯಾ ಎಂದು ಪತ್ನಿ ಕಿರುಚಾಡಿದ್ದಳಂತೆ. ಅಲ್ಲಿಂದ ಸಹವಾಸ ಬಿಟ್ಟೆ ಎನ್ನುವ ಪತಿ, ಮುಂದೇನ್ಮಾಡ್ಬೇಕು ಅಂತಾ ತಜ್ಞರ ಸಲಹೆ ಕೇಳಿದ್ದಾನೆ.

ಬೇರೆ ಹುಡ್ಗಿ ಜೊತೆ ಸುತ್ತಾಡುವಾಗಲೇ ಹೆಂಡ್ತಿ ಶಕಿರಾಗೆ ಸಿಕ್ಕಿಬಿದ್ದ ಜೆರಾರ್ಡ್ ಪಿಕ್, ಬ್ರೇಕ್ ಅಪ್ ಗೆ ಸಿದ್ಧತೆ!

ತಜ್ಞರ ಸಲಹೆ : ಪ್ರತಿಯೊಬ್ಬರ ವ್ಯಕ್ತಿತ್ವ ಭಿನ್ನವಾಗಿರುತ್ತದೆ. ಕೆಲವರಿಗೆ ಮೇಕಪ್ ಇಷ್ಟವಾದರೆ ಮತ್ತೆ ಕೆಲವರು ಅದನ್ನು ಇಷ್ಟಪಡೋದಿಲ್ಲ. ನಿಮ್ಮ ಹೆಂಡತಿ  ನಿಮ್ಮ ಗಮನವನ್ನು ತನ್ನತ್ತ ಸೆಳೆಯಲು ಹೀಗೆ ಮಾಡ್ಬಹುದು. ಕೆಲವರು, ಅಸಲಿ ಮುಖ ತೋರಿಸಲು ಭಯಪಡ್ತಾರೆ. ಎಲ್ಲಿ ನಿಮ್ಮ ಪ್ರೀತಿ ಕಡಿಮೆಯಾದ್ರೆ ಎನ್ನುವ ಭಯಕ್ಕೆ ಪತ್ನಿ ರಾತ್ರಿ ಕೂಡ ಮೇಕಪ್ ಮಾಡ್ಬಹುದು. ಈ ಬಗ್ಗೆ ನೀವು ತಾಳ್ಮೆಯಿಂದಿರಬೇಕು. ದಿನ ಕಳೆದಂತೆ ಆಕೆ ನಿಮ್ಮನ್ನು ಇನ್ನಷ್ಟು ಅರ್ಥ ಮಾಡಿಕೊಳ್ತಾಳೆ. ಆಗ ಮೇಕಪ್ ಇಲ್ಲದ ಮುಖವನ್ನು ನಿಮಗೆ ತೋರಿಸ್ಬಹುದು. ಅಲ್ಲಿಯವರೆಗೆ ಆತುರಪಡುವ ಅಗತ್ಯವಿಲ್ಲ. ಹಾಗೆ ಮೇಕಪ್ ಕಾರಣಕ್ಕೆ ಪತ್ನಿ ಪ್ರೀತಿ ಕಳೆದುಕೊಳ್ಬೇಡಿ ಎನ್ನುತ್ತಾರೆ ತಜ್ಞರು. 

Husband not seen wifes face without make even after year of wedding

 

Latest Videos
Follow Us:
Download App:
  • android
  • ios