ಬೇರೆ ಹುಡ್ಗಿ ಜೊತೆ ಸುತ್ತಾಡುವಾಗಲೇ ಹೆಂಡ್ತಿ ಶಕಿರಾಗೆ ಸಿಕ್ಕಿಬಿದ್ದ ಜೆರಾರ್ಡ್ ಪಿಕ್, ಬ್ರೇಕ್ ಅಪ್ ಗೆ ಸಿದ್ಧತೆ!
ಬಾರ್ಸಿಲೋನಾ ಡಿಫೆಂಡರ್ ಜೆರಾರ್ಡ್ ಪಿಕ್ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನುವುದನ್ನು ಕಣ್ಣಾರೆ ಕಂಡ ಬಳಿಕ ಖ್ಯಾತ ಪಾಪ್ ಗಾಯಕಿ ಶಕಿರಾ, ಜೆರಾರ್ಡ್ ಪಿಕ್ ಅವರಿಂದ ಬೇರ್ಪಡಲು ಸಿದ್ಧತೆ ಆರಂಭಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಇವರಿಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎಂದೂ ವರದಿಯಾಗಿದೆ.
ನವದೆಹಲಿ (ಜೂನ್ 2): ಫುಟ್ ಬಾಲ್ ತಾರೆ ಜೆರಾರ್ಡ್ ಪಿಕ್ (Gerard Pique) ಹಾಗೂ ಸುಪ್ರಸಿದ್ಧ ಗಾಯಕಿ ಶಕಿರಾ (Shakira) ನಡುವಿನ ದಾಂಪತ್ಯದಲ್ಲಿ ವಿರಸ ಮೂಡಿದೆ. ಜೆರಾರ್ಡ್ ಪಿಕ್ ಪತ್ನಿ ಶಕಿರಾಳ ಕಣ್ಣು ತಪ್ಪಿಸಿ ಬೇರೆ ಹುಡುಗಿಯರ ಜೊತ್ತೆ ಸುತ್ತಾಟ ಹಾಗೂ ಸಂಬಂಧ ಹೊಂದಿರುವುದನ್ನು ಶಕಿರಾ ಕಣ್ಣಾರೆ ಕಂಡಿದ್ದಾರೆ. ಅದರೊಂದಿಗೆ ಜೆರಾರ್ಡ್ ಪಿಕ್ ಜೊತೆ ಬೇರ್ಪಡುವುದಕ್ಕೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಪೇನ್ ನ ಪತ್ರಿಕೆಯೊಂದು ವರದಿ ಮಾಡಿದೆ.
"ಹಿಪ್ಸ್ ಡೋಂಟ್ ಲೈ" ಖ್ಯಾತಿಯ ಗಾಯಕಿ ಶಕಿರಾ, ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ಫಿಫಾ ವಿಶ್ವಕಪ್ ಟೂರ್ನಿಯ ಧ್ಯೇಯಗೀತೆ "ವಾಕಾ ವಾಕಾ" ಸಂಯೋಜನೆ ಮಾಡಿದ್ದಲ್ಲದೆ, ಇದಕ್ಕೆ ನೃತ್ಯ ಮಾಡಿ ಜಾಗತಿಕ ಮಟ್ಟದಲ್ಲಿ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ಏರಿಸಿದ್ದರು. ಈ ವಿಡಿಯೋ ಗೀತೆಯಲ್ಲಿ ಜೆರಾರ್ಡ್ ಪಿಕ್ ಅವರೊಂದಿಗೆ ಹಲವಾರು ಫುಟ್ ಬಾಲ್ ತಾರೆಯರು ಭಾಗವಹಿಸಿದ್ದರು. ಈ ವೇಳೆ ಶಕಿರಾ ಹಾಗೂ ಜೆರಾರ್ಡ್ ಪಿಕ್ ನಡುವೆ ಪ್ರೀತಿ ಮೂಡಿತ್ತು.
ಇಬ್ಬರ ನಡುವೆ ಸಂಬಂಧ ಸರಿಯಾಗಿಲ್ಲ ಎನ್ನುವುದು ಈಗ ಎಲ್ಲೆಡೆ ಗೋಚರವಾಗುತ್ತಿದೆ. ಬಾರ್ಸಿಲೋನಾದ ಮುನಾಟ್ನೇರ್ ಬ್ಯಾಚುಲರ್ ಹೌಸ್ ಗೆ ಜೆರಾರ್ಡ್ ಪಿಕ್ ಮತ್ತೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ ಎಂದು ಹೇಳಲಾಗಿದೆ. ಈ ಕಟ್ಟಡದ ಒಳಗೆ, ಹೊರಗೆ ಹೋಗುತ್ತಿರುವ ಸಾಕಷ್ಟು ಚಿತ್ರಗಳು ಈಗಾಗಲೇ ಪ್ರಕಟವಾಗಿದೆ. ಅವರು ಸ್ನೇಹಿತ ರಿಕಿ ಪುಯಿಗ್ ಮತ್ತು ಅವರ ಸ್ನೇಹಿತರ ಗುಂಪಿನೊಂದಿಗೆ ಬಾರ್ಸಿಲೋನಾ ನೈಟ್ ಲೈಫ್ ಅನ್ನು ಆನಂದಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಶಕಿರಾ ಹಾಗೂ ಜೆರಾರ್ಡ್ ಪಿಕ್ ಸಂಬಂಧ ಅಧಿಕೃತಗೊಳಿಸಿದ ಬಳಿಕ ಹೊಸ ಮನೆಯಲ್ಲಿ ವಾಸವಾಗಿದ್ದರು. ಅದರೆ, ಇದೇ ಮನೆಯಲ್ಲಿ ಬೇರೆ ಹುಡುಗಿಯೊಂದಿಗೆ ಜೆರಾರ್ಡ್ ಪಿಕ್ ಅವರನ್ನು ಕಂಡಿರುವ ಕಾರಣ, ಪಿಕ್ ಈ ಮನೆಯನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕಾಗಿ ಇವರಿಬ್ಬರೂ, ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ, ಅತಿಯಾದ ಪಾರ್ಟಿ, ಕುಡಿತದಿಂದ ಯಾವಾಗಲೂ ಜೆರಾರ್ಡ್ ಪಿಕ್ ಮತ್ತಿನಲ್ಲೇ ಇರುತ್ತಾರೆ ಇದೂ ಕೂಡ ಇವರಿಬ್ಬರೂ ಬೇರೆ ಬೇರೆ ವಾಸಿಸಲು ಕಾರಣ ಎನ್ನಲಾಗಿದೆ.
ಇತ್ತೀಚೆಗೆ ಜೆರಾರ್ಡ್ ಪಿಕ್ ಹಾಗೂ ಆತನ ಫ್ರೆಂಡ್ ನಡೆಸಿದ ಪಾರ್ಟಿಯಲ್ಲಿ ಅನಾಮಧೇಯ ಹುಡುಗಿ ಕೂಡ ಪ್ರತ್ಯಕ್ಷಳಾಗಿದ್ದನ್ನು ಶಕೀರಾ ಕಂಡಿದ್ದಾರೆ. ಆಕೆ ರಾತ್ರಿ 2-3 ಗಂಟೆಯವರೆಗೂ ಗಂಡನ ಜೊತೆಯಲ್ಲಿ ಕಾಲ ಕಳೆದಿದ್ದು ಶಕಿರಾ ಆಕ್ರೋಶಕ್ಕೆ ಕಾರಣವಾಗಿದೆ. ಅದಲ್ಲದೆ, ಶಕಿರಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲೂ ಜೆರಾರ್ಡ್ ಪಿಕ್ ನಾಪತ್ತೆಯಾಗಿದ್ದಾರೆ. ಇದಕ್ಕೂ ಮುನ್ನ ಸಾಮಾನ್ಯವಾಗು ಶಕಿರಾ ಪೋಸ್ಟ್ ಮಾಡುತ್ತಿದ್ದ ಚಿತ್ರಗಳಲ್ಲಿ ಜೆರಾರ್ಡ್ ಪಿಕ್ ಕೂಡ ಇರುತ್ತಿದ್ದರು. ಮಾರ್ಚ್ ನಲ್ಲಿ ಕೊನೆಯ ಬಾರಿಗೆ ಶಕಿರಾ, ಪಿಕ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
35 ವರ್ಷದ ಫುಟ್ ಬಾಲ್ ತಾರೆಯೊಂದಿಗೆ ಬ್ರೇಕಪ್ ಮಾಡಿಕೊಂಡಿರುವ ವಿಷಯವನ್ನೇ ರಾವ್ ಅಲೆಜಾಂಡ್ರೊ ಅವರೊಂದಿಗೆ ಹಾಡಿದ ಇತ್ತೀಚಿನ ಹಿಟ್ 'ಟೆ ಫೆಲಿಸಿಟೊ' ದ ಸಾಹಿತ್ಯವೂ ಆಗಿದೆ ಎಂದು ಕೆಲವರು ವಿಮರ್ಶೆ ಮಾಡಿದ್ದಾರೆ.
REASON FOR DIVORCE: ಜೊತೆಯಾಗಿ ಹಿತವಾಗಿ ನಡೆವ ಆಸೆಯಿದ್ರೂ ದಂಪತಿ ದೂರವಾಗೋದ್ಯಾಕೆ?
“ನಿನ್ನನ್ನು ಪೂರ್ಣ ಮಾಡಿದ್ದಕ್ಕಾಗಿ ನಾನು ತುಂಡುಗಳಾಗಿ ಮುರಿದುಬಿಟ್ಟೆ; ಎಲ್ಲರೂ ನನಗೆ ಎಚ್ಚರಿಕೆ ನೀಡಿದ್ದರು, ಆದರೆ ನಾನು ಗಮನ ಹರಿಸಲಿಲ್ಲ. ನಿನ್ನದೆಲ್ಲ ಸುಳ್ಳೆಂದು ನಾನು ಅರಿತುಕೊಂಡೆ; ಅದು ಗಾಜಿನಿಂದ ತುಂಬಿದ ಹನಿ; ನೀವು ಕ್ಷಮಿಸಿ ಎಂದು ನನಗೆ ಹೇಳಬೇಡಿ, ಅದು ಪ್ರಾಮಾಣಿಕವಾಗಿ ತೋರುತ್ತದೆ, ಆದರೆ ನಾನು ನಿಮ್ಮನ್ನು ಚೆನ್ನಾಗಿ ತಿಳಿದಿದ್ದೇನೆ ಮತ್ತು ನೀವು ಸುಳ್ಳು ಹೇಳುತ್ತೀರಿ ಎಂದು ನನಗೆ ತಿಳಿದಿದೆ' (For completing you I broke into pieces; they warned me, but I did not pay attention. I realized that yours is false; it was the drop that overflowed the glass; do not tell me you’re sorry, that seems sincere, but I know you well and I know you lie) ಎನ್ನುವ ಸಾಹಿತ್ಯವನ್ನು ಶಕಿರಾ ಹಾಡಿದ್ದಾರೆ.
Extra Marital Affair: ಬಾಡಿಗೆದಾರನ ಜೊತೆ ಸೊಸೆ ಸರಸಕ್ಕೆ ಸಾಕ್ಷಿಯಾದ ಅತ್ತೆ
ಅದಲ್ಲದೆ, ಶಕೀರಾ ಮತ್ತು ಪಿಕ್ ಇಬ್ಬರೂ ಇತ್ತೀಚಿನ ದಿನಗಳಲ್ಲಿ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಯಾವುದನ್ನೂ ಅಪ್ ಲೋಡ್ ಮಾಡುತ್ತಿಲ್ಲ. ಇದೂ ಕೂಡ ಅಚ್ಚರಿಗೆ ಕಾರಣವಾಗಿದೆ. ಇವರ 12 ವರ್ಷಗಳ ಸಂಬಂಧದಲ್ಲಿ ಮಿಲನ್ ಮತ್ತು ಸಾಶಾ ಎಂಬ ಇಬ್ಬರು ಮಕ್ಕಳಿಗೆ ಪಾಲಕರಾಗಿದ್ದಾರೆ. ಆದರೆ, ಅಧಿಕೃತವಾಗಿ ವಿವಾಹವಾಗಿರಲಿಲ್ಲ.