Asianet Suvarna News Asianet Suvarna News

ದಿನ ಸ್ನಾನ ಮಾಡದೇ ಗಂಗಾಜಲ ಸಿಂಪಡಿಸಿಕೊಂಡು ಕೂರುವ ಗಂಡ: ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಹೆಂಡತಿ

ಗಂಗಾ ಜಲ ಪವಿತ್ರ ಎಂದು ಹೇಳಿ ತಿಂಗಳಿಗೊಮ್ಮೆ ಮಾತ್ರ ಕಷ್ಟದಲ್ಲಿ ಸ್ನಾನ ಮಾಡಿ ದಿನಕ್ಕೊಮ್ಮೆ ಮೈಗೆ ಗಂಗಾಜಲ ಸಿಂಪಡಿಸಿಕೊಂಡು ಕೂತರೆ ಅಂತವರ ಜೊತೆ ಸಂಸಾರ ಮಾಡೋದು ಹೇಗೆ. ಇಂತಹ ಸಂದಿಗ್ಧ ಸ್ಥಿತಿಗೆ ಒಳಗಾದ ಮಹಿಳೆಯೊಬ್ಬರು ಈಗ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

husband doesnt bath daily sprinkles Ganga water wife files divorce case akb
Author
First Published Sep 16, 2024, 5:20 PM IST | Last Updated Sep 16, 2024, 5:28 PM IST

ಆಗ್ರಾ: ಗಂಗಾಜಲಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವಿದ್ದು, ವ್ಯಕ್ತಿ ಸಾಯುವ ಹಂತದಲ್ಲಿದ್ದಾಗ ಆತನ ಬಾಯಿಗೆ ಗಂಗಾಜಲ ಬಿಡಲಾಗುತ್ತದೆ. ಪೂಜೆಗಳಲ್ಲೂ ಗಂಗಾಜಲದ ಪ್ರೋಕ್ಷಣೆ ಮಾಡಲಾಗುತ್ತದೆ. ಗಂಗಾಜಲ ಪವಿತ್ರವಾದುದು ಎಂಬ ನಂಬಿಕೆ ಅದಕ್ಕೆ ಕಾರಣ. ಆದರೆ ಗಂಗಾ ಜಲ ಪವಿತ್ರ ಎಂದು ಹೇಳಿ ತಿಂಗಳಿಗೊಮ್ಮೆ ಮಾತ್ರ ಕಷ್ಟದಲ್ಲಿ ಸ್ನಾನ ಮಾಡಿ ದಿನಕ್ಕೊಮ್ಮೆ ಮೈಗೆ ಗಂಗಾಜಲ ಸಿಂಪಡಿಸಿಕೊಂಡು ಕೂತರೆ ಅಂತವರ ಜೊತೆ ಸಂಸಾರ ಮಾಡೋದು ಹೇಗೆ. ಇಂತಹ ಸಂದಿಗ್ಧ ಸ್ಥಿತಿಗೆ ಒಳಗಾದ ಮಹಿಳೆಯೊಬ್ಬರು ಈಗ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಮದುವೆಯಾದ ಒಂದೇ ತಿಂಗಳಿಗೆ ಗಂಡನ ಈ ವಿಚಿತ್ರ ಕೊಳಕು ಬುದ್ಧಿಯನ್ನು ಸಹಿಸಲಾಗದ ಮಹಿಳೆ ಈಗ ಕೋರ್ಟ್ ಮುಂದೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ ಎಂದು ವರದಿ ಆಗಿದೆ. ಗಂಡ ದಿನವೂ ಸ್ನಾನ ಮಾಡುವುದಿಲ್ಲ, ತಿಂಗಳಿಗೊಮ್ಮೆಯೋ ಎರಡು ಬಾರಿಯೋ ಸ್ನಾನ ಮಾಡುತ್ತಾನೆ. ಆದರಿಂದ ಆತನ ದೇಹದ ವಾಸನೆಯನ್ನು ನನಗೆ ಸಹಿಸಲಾಗುತ್ತಿಲ್ಲ ಎಂದು ಮಹಿಳೆ ದೂರಿದ್ದಾಳೆ. ಹೀಗಾಗಿ ಮದುವೆಯಾದ ನಾಲ್ವತ್ತೇ ದಿನಕ್ಕೆ ಮಹಿಳೆ ಮದುವೆ ಮುರಿದುಕೊಳ್ಳಲು ಮುಂದಾಗಿದ್ದಾಳೆ ಎಂದು ಆಂಗ್ಲ ಮಾಧ್ಯಮವೊಂದುವ ವರದಿ ಮಾಡಿದೆ. 

ಪವಿತ್ರ ನೀರು ಎಂದು ನಂಬಿಕೆ ಇರುವ ಗಂಗಾಜಲವನ್ನು ವಾರಕ್ಕೊಮ್ಮೆ ಮೈ ಮೇಲೆ ಸಿಂಪಡಿಸಿಕೊಳ್ಳುವ ಗಂಡ ರಾಜೇಶ್ ಸ್ನಾನವನ್ನೇ ಮಾಡುವುದಿಲ್ಲವಂತೆ ಆದರೂ ಮದುವೆಯ ನಂತರ ಆತ ಒತ್ತಾಯಪೂರ್ವಕವಾಗಿ ಒಟ್ಟು 40 ದಿನದಲ್ಲಿ ಕೇವಲ ಆರು ಬಾರಿ ಸ್ನಾನ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ದಿನವೂ ಸ್ನಾನ ಮಾಡದ ಈತನ ವರ್ತನೆಯಿಂದ ಮಹಿಳೆ ಬೇಸತ್ತಿದ್ದು, ತವರು ಮನೆ ಸೇರಿಕೊಂಡಿದ್ದಾಳೆ. ಅಲ್ಲದೇ ಈಗ ಗಂಡನ ಮನೆಯವರ ಮೇಲೆ ವರದಕ್ಷಿಣೆ ಕೇಸ್ ದಾಖಲಿಸಿರುವ ಆಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ.

ಇತ್ತ ಪತ್ನಿಯ ದೂರಿನ ನಂತರ ಪತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆದರೆ ಪತ್ನಿ ಮಾತ್ರ ಆತನ ಜೊತೆ ಬಾಳಲು ಸಾಧ್ಯವಿಲ್ಲ ಎಂಬ ನಿರ್ಧಾರ ಮಾಡಿದ್ದಾಳೆ. ಇತ್ತ ಫ್ಯಾಮಿಲಿ ಕೋರ್ಟ್‌ನ ಸಂಧಾನ ಕೇಂದ್ರದಲ್ಲಿ ಈ ಜೋಡಿಗೆ ಮುಂದಿನ ವಾರ ಬರುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮೊದಲು ಇಂತಹದ್ದೇ ಒಂದು ವಿಚ್ಚೇದನ ಪ್ರಕರಣವೊಂದು ಆಗ್ರಾದಲ್ಲಿ ವರದಿಯಾಗಿತ್ತು. ಗಂಡ ಕುರಕುರೆ ಪ್ಯಾಕೆಟ್‌  ತಂದು ಕೊಟ್ಟಿಲ್ಲ ಎಂದು ಪತ್ನಿ ಗಂಡನಿಗೆ ವಿಚ್ಚೇದನ ನೀಡಲು ಮುಂದಾದ ಪ್ರಕರಣವೊಂದು ದಾಖಲಾಗಿತ್ತು.

Latest Videos
Follow Us:
Download App:
  • android
  • ios