ಲಿಪ್‌ಸ್ಟಿಕ್‌ ಹಚ್ಚಿ ಹೆಣ್ಣಿನಂತೆ ಸಿಂಗರಿಸಿಕೊಳ್ಳುವ ಗಂಡ : ಠಾಣೆ ಮೆಟ್ಟಿಲೇರಿದ ಪತ್ನಿ

ಇಂದೋರ್: ವಿಚಿತ್ರ ಪ್ರಕರಣವೊಂದರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯವು 32 ವರ್ಷದ ವ್ಯಕ್ತಿಗೆ ಮಾಜಿ ಪತ್ನಿಗೆ  4,50,000 ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. 

husband do makeup like girl women complaint to police in Indore akb

ಇಂದೋರ್: ವಿಚಿತ್ರ ಪ್ರಕರಣವೊಂದರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯವು 32 ವರ್ಷದ ವ್ಯಕ್ತಿಗೆ ಮಾಜಿ ಪತ್ನಿಗೆ  4,50,000 ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. 

2018ರ ಏಪ್ರಿಲ್ 29 ರಂದು ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವಿವಾಹಕ್ಕೂ ಎರಡು ವರ್ಷ ಮೊದಲೇ ಇವರಿಬ್ಬರು ಪರಸ್ಪರ ಪ್ರೀತಿಸಿ ನಂತರ ವಿವಾಹವಾಗಿದ್ದಾರೆ ಎನ್ನಲಾಗಿದೆ. ಆದರೆ ವಿವಾಹದ ನಂತರ ಪತಿಯ ವರ್ತನೆ ಕಂಡು ಯುವತಿ ಆಘಾತಕ್ಕೀಡಾಗಿದ್ದಾಳೆ. ಮದುವೆಯಾಗಿ ಎರಡು ವರ್ಷವಾದರೂ ಪತಿ ದಾಂಪತ್ಯ ನಡೆಸಲು ಸಿದ್ದನಿಲ್ಲ. ರಾತ್ರಿ ವೇಳೆ ಬೇರೆಯೇ ಕೋಣೆಯಲ್ಲಿ ಹೋಗಿ ಮಲಗುತ್ತಾನೆ. ಅಲ್ಲದೇ ಆತ ರಾತ್ರಿ ವೇಳೆ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ ಕಿವಿಗಳಿಗೆ ಓಲೆಗಳನ್ನು ಇಟ್ಟು ಬಿಂದಿ ಧರಿಸಿ ಹೆಣ್ಣಿನಂತೆ ಶೃಂಗಾರಗೊಳ್ಳುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 

26 ವರ್ಷದ ಮಹಿಳೆ ಇಂದೋರ್‌ನ ಮಹಾಲಕ್ಷ್ಮಿ ನಗರದಲ್ಲಿ ವಾಸಿಸುವ 32 ವರ್ಷದ ಇಂಜಿನಿಯರ್ ಅವರನ್ನು ವಿವಾಹವಾಗಿದ್ದರು. ಆರಂಭದಲ್ಲಿ ಈಕೆಯನ್ನು ಅತ್ತೆ ಮಾವಂದಿರು ತುಂಬಾ ಚೆನ್ನಾಗಿಯೇ ನೋಡಿಕೊಂಡಿದ್ದರು. ಆದರೆ ಕೆಲ ದಿನಗಳಲ್ಲಿ ಅವರ ನಡವಳಿಕೆಯಲ್ಲಿ ತೀವ್ರ ಬದಲಾವಣೆ ಆಗಿತ್ತು. ವೈವಾಹಿಕ ಸಂಬಂಧ ಹೊಂದಲು ಪತಿಯನ್ನು ಸಂಪರ್ಕಿಸಿದಾಗಲೆಲ್ಲಾ ಆತ ಅದಕ್ಕೆ ನಿರಾಕರಿಸಿ ಇನ್ನೊಂದು ಕೋಣೆಗೆ ಹೋಗಿ ಪ್ರತ್ಯೇಕವಾಗಿ ಮಲಗುತ್ತಿದ್ದನು ಎಂದು ಮಹಿಳೆ ದೂರಿದ್ದಾರೆ. ಇದಾದ ಬಳಿಕ ಅತ್ತೆ ಮನೆಯವರು ಆಕೆಗೆ ಹಿಂಸೆ ನೀಡಲು ಶುರು ಮಾಡಿದರು.  

ಸಲಿಂಗಿ ದಾಂಪತ್ಯಕ್ಕೆ ಕಾಲಿಟ್ಟ ಇಂಗ್ಲೆಂಡ್‌ ಕ್ರಿಕೆಟ್ ಆಟಗಾರ್ತಿ ನಥಾಲಿ ಶೀವರ್‌-ಕ್ಯಾಥರೀನ್ ಬ್ರಂಟ್‌

ಹೀಗಾಗಿ ಮಹಿಳೆ ತನ್ನ ಪತಿ ಮತ್ತು ಅತ್ತೆ ಮತ್ತು ಅತ್ತಿಗೆಯ ವಿರುದ್ಧ ಮಾರ್ಚ್ 5, 2021 ರಂದು ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಮದುವೆಯಾಗಿ 2 ವರ್ಷ ಕಳೆದರೂ ತನ್ನೊಂದಿಗೆ ಪ್ರೀತಿಯಿಂದ ಇರಲು ಗಂಡ ಬಯಸುತ್ತಿಲ್ಲ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ 32 ವರ್ಷದ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 

ಇದನ್ನು ಅನುಸರಿಸಿ, ಅತ್ತೆ ಮನೆಯವರು ಅವಳನ್ನು ನಿಂದಿಸಲು ಪ್ರಾರಂಭಿಸಿದರು. ಪ್ರತಿ ದಿನ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳಗಳಾದ ನಂತರ ಪತಿ ತನ್ನ ಹೆಂಡತಿಯನ್ನು ಪುಣೆಗೆ ಕರೆದೊಯ್ದನು. ಪುಣೆಗೆ ಸ್ಥಳಾಂತರಗೊಂಡ ನಂತರ ಆಕೆಗೆ ಚಿತ್ರಹಿಂಸೆ ನೀಡಲಾರಂಭಿಸಿದ. ಪತಿ ತನ್ನಿಂದ ದೂರ ಉಳಿಯಲು ಆರಂಭಿಸಿದ ಬಳಿಕ ಪತ್ನಿಗೆ ಅನುಮಾನ ಬಂದಿದ್ದು, ನಿಕಟ ಮೇಲ್ವಿಚಾರಣೆಯಲ್ಲಿ ಅವನು ರಾತ್ರಿಯಲ್ಲಿ ಮಹಿಳೆಯಂತೆ ವೇಷ ಧರಿಸುತ್ತಾನೆ ಎಂಬುದನ್ನು ಆಕೆ ಕಂಡುಕೊಂಡಿದ್ದಳು.

ತನ್ನ ಗಂಡನ ವರ್ತನೆ ಬಗ್ಗೆ ಪ್ರತಿಭಟಿಸಿದ ನಂತರ ಆಕೆಯನ್ನು ಥಳಿಸಲಾಯಿತು ಇದಾದ ಬಳಿಕ ಆಕೆಯ ಪತಿ ಅವಳನ್ನು ಮತ್ತೆ ಇಂದೋರ್‌ಗೆ ಕರೆದುಕೊಂಡು ಬಂದ. ಇಂದೋರ್ ಗೆ ಬಂದ ನಂತರ ಮಹಿಳೆ ಇಂದೋರ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಪತಿ, ಅತ್ತೆ, ಅತ್ತಿಗೆಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು

5 ನಿಮಿಷದ ವಿಚಾರಣೆ: ಪೋಷಕರು ಬೇರ್ಪಡಿಸಿದ ಸಲಿಂಗಿ ಜೋಡಿಯ ಒಂದು ಮಾಡಿದ ಕೇರಳ ಹೈಕೋರ್ಟ್‌
 

ಇದಾದ ಬಳಿಕ ಸಂತ್ರಸ್ತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದ್ದು, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಕೆಯ ಆರೋಪಗಳಂತೆ ಆಕೆ ನ್ಯಾಯಾಲಯದಲ್ಲಿ ಹೆಣ್ಣಿನ ವೇಷದಲ್ಲಿರುವ ತನ್ನ ಗಂಡನ ಫೋಟೋಗಳನ್ನು ಸಾಕ್ಷ್ಯವಾಗಿ ನೀಡಿದ್ದಳು. ಇದಾದ ಬಳಿಕ ಮಾರ್ಚ್ 5, 2021 ರಂದು ಜಿಲ್ಲಾ ನ್ಯಾಯಾಲಯವು ಸಂತ್ರಸ್ತೆಗೆ ಮಾಸಿಕ ರೂ. 30,000 ಭತ್ಯೆ ನೀಡುವಂತೆ ಪತಿಗೆ ಆದೇಶ ನೀಡಿತು. ಆದರೆ ಇದನ್ನು ಆತ ಪಾವತಿಸಿರಲಿಲ್ಲ. ಹೀಗಾಗಿ ಮಹಿಳೆ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ಬಾಕಿ ಉಳಿದಿರುವ 4,50,000 ರೂ.ವನ್ನು ಮತ್ತೆ ಪಾವತಿ ಮಾಡುವಂತೆ ಆದೇಶಿಸಿದೆ.  
 

Latest Videos
Follow Us:
Download App:
  • android
  • ios