Asianet Suvarna News Asianet Suvarna News

ಒಂದು ಘಟನೆ ನಂತ್ರ ಸಂಬಂಧವೇ ಬದಲಾಯ್ತು, ಸಹೋದರನಾದ ಪತಿ!

ಕೆಲವೊಂದು ಘಟನೆಗಳು ನಮ್ಮ ಜೀವನಕ್ಕೊಂದು ಪಾಠವಾಗುತ್ತದೆ. ಯಾರು ಆಪ್ತರು, ಯಾರು ದೂರದವರು ಎಂಬುದನ್ನು ತಿಳಿಸುತ್ತದೆ. ಆದ್ರೆ ಈ ದಂಪತಿ ಮಧ್ಯೆ ವಿಚಿತ್ರವೇ ನಡೆದಿದೆ. ಅವರ ಜೀವನ ಸಂಪೂರ್ಣ ಬದಲಾಗಿದೆ. 
 

Husband Became Brother Woman Shares Story On Social Media roo
Author
First Published Jan 29, 2024, 2:31 PM IST

ಮದುವೆ ಆದ್ಮೇಲೆ, ಅವರಿಬ್ಬರು ದಂಪತಿ. ಪತಿ – ಪತ್ನಿಯಾಗಿ ಸಂಸಾರ ನಡೆಸಬೇಕು. ಒಂದ್ವೇಳೆ ಇಬ್ಬರ ಮಧ್ಯೆ ಸಂಬಂಧ ಸರಿ ಬಂದಿಲ್ಲ ಎನ್ನುವ ಸಮಯದಲ್ಲಿ ವಿಚ್ಛೇದನ ಪಡೆದು ಇಬ್ಬರು ಬೇರೆಯಾಗ್ತಾರೆ. ಒಪ್ಪಂದದ ಮೇಲೆ ಬೇರೆಯಾಗುವ ಕೆಲವರು, ವಿಚ್ಛೇದನದ ನಂತ್ರವೂ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿರುತ್ತಾರೆ. ಆದ್ರೆ ಈ ದಂಪತಿ ವಿಚಿತ್ರವಾಗಿದ್ದಾರೆ. ಮದುವೆಯಾಗಿ ಎರಡು ವರ್ಷಗಳ ನಂತ್ರ ಸಂಬಂಧವನ್ನೇ ಸಂಪೂರ್ಣ ಬದಲಿಸಿಕೊಂಡಿದ್ದಾರೆ. ಅದೂ ಸ್ನೇಹಿತರಾಗಿ ಅಲ್ಲ. ಸಹೋದರ – ಸಹೋದರಿಯಾಗಿ. ಹೌದು. ಈ ಘಟನೆಯನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿದ ಮೇಲೆ ತಮ್ಮ ಸಂಬಂಧ ಬದಲಾಗಿದ್ದು ಹೇಗೆ, ಈಗ ಹೇಗಿದ್ದೇವೆ ಎಂಬುದನ್ನೆಲ್ಲ ಹೇಳಿದ್ದಾಳೆ.

ಮಹಿಳೆ ಹೆಸರು ಕ್ರಿಸ್. ಅವಳು ತನ್ನ 16 ನೇ ವಯಸ್ಸಿನಲ್ಲಿ ತನ್ನ ಪತಿ ಬ್ರ್ಯಾಂಡನ್‌ನನ್ನು ಪ್ರೀತಿ (Love)ಸಲು ಶುರು ಮಾಡಿದ್ದಳು. ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿ ಹುಟ್ಟಿದ್ದರೂ ಇಬ್ಬರ ಮನಸ್ಸು ಚಂಚಲವಾಗಿರಲಿಲ್ಲ. ಇಬ್ಬರು ಎಷ್ಟೋ ವರ್ಷಗಳಿಂದ ಜೊತೆಗಿದ್ದೇವೆ ಎನ್ನುವ ಭಾವನೆಯಲ್ಲಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗ್ತಿರಲಿಲ್ಲ. ಇಬ್ಬರು ಪ್ರೇಮ ಪತ್ರ (Letter) ಬರೆದುಕೊಳ್ತಿದ್ದರು. ಆಡಿಯೋ ಸಿಡಿಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದರು. ಬೀಚ್ (Beach)ನಲ್ಲಿ ಇಬ್ಬರು ಜೊತೆಯಲ್ಲಿ ಕುಳಿತು ಗಂಟೆಗಟ್ಟಲೆ ಮಾತನಾಡ್ತಿದ್ದರು. ಎಂಟು ವರ್ಷಗಳ ನಂತ್ರ ಇಬ್ಬರೂ ಸಂಬಂಧವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದ ಮೇಲೆ ಕ್ರಿಸ್ ಆಗಸ್ಟ್ 2006 ರಲ್ಲಿ ಬ್ರ್ಯಾಂಡನ್ ನನ್ನು ಮದುವೆ ಆದಳು. 

ವ್ಯಾಲೆಂಟೈನ್ಸ್ ಡೇ ಗೆ ಯಾವ ರಾಶಿಯವರು ಯಾವ ಗಿಫ್ಟ್‌ ನೀಡಬೇಕು..? ನಿಮ್ಮ ಲವರ್‌ಗೆ ಇದನ್ನೇ ನೀಡಿ..!

ಮದುವೆಯಾದ ಎರಡು ವರ್ಷಗಳ ನಂತ್ರ ಅವರ ಜೀವನದಲ್ಲಿ ದೊಡ್ಡ ಘಟನೆಯೊಂದು ನಡೆಯಿತು. ಅದು ಅವರ ಇಡೀ ಜೀವನವನ್ನು ಬದಲಿಸಿತು. ಬ್ರ್ಯಾಂಡನ್ ಗೆ ಅಪಘಾತವಾಗಿತ್ತು. ಆತನ ಜೀವ ಉಳಿದಿತ್ತು, ಆದರೆ ಅವನು ಎರಡು ತಿಂಗಳ ಕಾಲ ಕೋಮಾದಲ್ಲಿದ್ದ. ಬ್ರ್ಯಾಂಡನ್ ಮೆದುಳಿನಲ್ಲಿ ಗಾಯವಾಗಿತ್ತು. ಹಾಗಾಗಿ ಅನೇಕ ತಿಂಗಳು ಆಸ್ಪತ್ರೆಯಲ್ಲಿದ್ದ ಅವನಿಗೆ ಚಿಕಿತ್ಸೆ ನಡೆಯುತ್ತಿತ್ತು. ಗಾಲಿಕುರ್ಚಿಗೆ ಬರುವ ಸ್ಥಿತಿ ಬ್ರ್ಯಾಂಡನ್ ಗೆ ನಿರ್ಮಾಣವಾಗಿತ್ತು. ಅವನಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳಲು ಸಾಧ್ಯವಾಗ್ತಿರಲಿಲ್ಲ. ಆತನಿಗೆ ಸರಿಯಾಗಿ ಮಾತನಾಡೋಕೆ ಬರ್ತಾ ಇರಲಿಲ್ಲ. ಜ್ಞಾಪಕ ಶಕ್ತಿ ದುರ್ಬಲವಾಗಿತ್ತು. ಒಬ್ಬರಲ್ಲ ಒಬ್ಬರ ಆರೈಕೆ ಬ್ರ್ಯಾಂಡನ್ ಗೆ ಅಗತ್ಯವಿತ್ತು. ಈಗ್ಲೂ ಬ್ರ್ಯಾಂಡನ್ ಸ್ಥಿತಿ ಸುಧಾರಿಸಿಲ್ಲ. ಇದೇ ದಂಪತಿ ಸಂಬಂಧದಲ್ಲಿ ಬದಲಾವಣೆ ತರಲು ಕಾರಣವಾಯಿತು.

ಬ್ರ್ಯಾಂಡನ್ ತನ್ನ ಹೆಂಡತಿ ಕ್ರಿಸ್‌ಳನ್ನು ಕಿರಿಯ ಸಹೋದರಿ ಅಂತಾ ಕರೆಯೋಕೆ ಶುರು ಮಾಡಿದ್ದ. ಕ್ರಿಸ್ ತನ್ನ ಗಂಡನನ್ನು ತನ್ನ ಸಹೋದರ ಎಂದು ಪರಿಗಣಿಸಲು ಪ್ರಾರಂಭಿಸಿದ್ದಳು. ಸಹೋದರ ಎಂಬ ಪದವು ನಮ್ಮ ಸಂಬಂಧವನ್ನು ಉತ್ತಮವಾಗಿ ವ್ಯಾಖ್ಯಾನಿಸುತ್ತದೆ ಎಂದು  ಎಂದು ಕ್ರಿಸ್ ಬರೆದಿದ್ದಾಳೆ. ಸಂಬಂಧ ಬದಲಾದ್ರೂ ನಾನು ಬ್ರ್ಯಾಂಡನ್ ಆರೈಕೆ ಮಾಡುತ್ತ ಬಂದಿದ್ದೇನೆ ಎಂದು ಕ್ರಿಸ್ ಹೇಳಿದ್ದಾಳೆ. 

ಟ್ರಾಫಿಕ್‌ನಲ್ಲೂ ಆಟೋಗ್ರಾಫ್ ನೀಡಿದ ಮೆಸ್ಸಿ ಸರಳ ವರ್ತನೆಗೆ ಜಗತ್ತು ಫಿದಾ

ಬ್ರ್ಯಾಂಡನ್ ಗೆ ಅಪಘಾತವಾಗಿ ಎರಡು ವರ್ಷಗಳ ನಂತ್ರ ಹೊಸ ಜೀವನ ನಡೆಸುವ ನಿರ್ಧಾರಕ್ಕೆ ಕ್ರಿಸ್ ಬಂದಿದ್ದಳು. ಹಾಗಾಗಿ ಆಕೆ 2014 ರಲ್ಲಿ ಎರಡನೇ ಮದುವೆ ಆದ್ಲು. ಕ್ರಿಸ್, ಜೇಮ್ಸ್ ನನ್ನು ಆನ್ಲೈನ್ ಮೂಲಕ ಭೇಟಿಯಾಗಿ, ಆತನನ್ನು ಮದುವೆ ಆದ್ಲು. ಜೇಮ್ಸ್ ಕೂಡ ಬ್ರ್ಯಾಂಡನ್ ನನ್ನು ಸ್ವೀಕರಿಸಿದ್ದಾನೆ. ಮೂವರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಜೇಮ್ಸ್ ಕೂಡ ಕ್ರಿಸ್ ಗೆ ಬ್ರ್ಯಾಂಡನ್ ಆರೈಕೆಯಲ್ಲಿ ನೆರವಾಗ್ತಾನೆ. ಬ್ರ್ಯಾಂಡನ್ ನಿಂದ ವಿಚ್ಛೇದನ ಪಡೆದ ಬಗ್ಗೆ ಕ್ರಿಸ್ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ನನ್ನ ಹೊಸ ಸಂಬಂಧವನ್ನು ಬ್ರ್ಯಾಂಡನ್ ಒಪ್ಪಿದ್ದಾನೆ ಎಂದು ಕ್ರಿಸ್ ಹೇಳಿದ್ದಾಳೆ.   

Follow Us:
Download App:
  • android
  • ios