ಟ್ರಾಫಿಕ್‌ನಲ್ಲೂ ಆಟೋಗ್ರಾಫ್ ನೀಡಿದ ಮೆಸ್ಸಿ ಸರಳ ವರ್ತನೆಗೆ ಜಗತ್ತು ಫಿದಾ
ಲಿಯೋನೆಲ್ ಮೆಸ್ಸಿ ಆಲ್ ಟೈಮ್ ಗ್ರೇಟೆಸ್ಟ್ ಫುಲ್ ಬಾಲ್ ಪ್ಲೇಯರ್. ಬರೀ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಬಾಹ್ಯ ಜಗತ್ತಿನಲ್ಲೂ ಮೆಸ್ಸಿ ಅದ್ಭುತ ಮನುಷ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ಶೇರ್ ಆಗಿದೆ. ವಿಶ್ವಾದ್ಯಂತದ ಮೆಸ್ಸಿ ಅಭಿಮಾನಿಗಳಲ್ಲಿ ಇದು ಪುಳಕ ಮೂಡಿಸಿದೆ.
ತಮ್ಮ ನೆಚ್ಚಿನ ಹೀರೋನಿಂದ ಆಟೋಗ್ರಾಫ್ ಪಡೆದುಕೊಳ್ಳುವುದು ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ. ಅಂಥವರನ್ನು ಭೇಟಿಯಾಗಿದ್ದೆ, ಅವರ ಹಸ್ತಾಕ್ಷರ ತಮ್ಮ ಬಳಿಯಿದೆ ಎನ್ನುವುದು ಅವರಿಗೆ ಭಾರೀ ಮುದಗೊಳಿಸುವ ವಿಚಾರ. ಹೀಗಾಗಿ, ಸೆಲೆಬ್ರಿಟಿಗಳು ಎಲ್ಲೇ ಹೋದರೂ ಅವರನ್ನು ಅಭಿಮಾನಿಗಳು ಮುತ್ತುತ್ತಾರೆ. ಕೆಲವೊಮ್ಮೆ ಇಂತಹ ಅಭಿಮಾನ ಅತಿರೇಕಕ್ಕೆ ಹೋಗುವುದೂ ಇದೆ. ಆದರೆ, ತಮ್ಮ ನೆಚ್ಚಿನ ಸ್ಟಾರ್ ಬಳಿ ಸಾಗಲು, ಅವರ ಆಟೋಗ್ರಾಫ್ ಪಡೆದುಕೊಳ್ಳಲು ಮುಗಿಬೀಳುವ ಅಭಿಮಾನಿಗಳು ಸಾಮಾನ್ಯ. ಸಿನಿಮಾ, ಕ್ರೀಡೆ, ಟಿವಿ, ಉದ್ಯಮ, ರಾಜಕೀಯ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿರುವ ಸ್ಟಾರ್ ಗಳ ಹಸ್ತಾಕ್ಷರ ಪಡೆದುಕೊಳ್ಳುವುದು ಅಭಿಮಾನಿಗಳಿಗೆ ಖುಷಿ. ಅಂತಹ ಅಭಿಮಾನಿಗಳು ಎಲ್ಲೆಲ್ಲೂ ಅವರಿಗೆ ಇರುತ್ತಾರೆ. ನಮ್ಮ ದೇಶದ ಸಿನಿಮಾ ತಾರೆಯರಿಗೆ ವಿದೇಶಗಳಲ್ಲೂ ತಮ್ಮ ಪಾಡಿಗೆ ತಾವು ಓಡಾಡಲು ಸಾಧ್ಯವಾಗುವುದಿಲ್ಲ. ಜನರು ಅವರನ್ನು ಗುರುತಿಸಿ ಬಳಿಗೆ ಬರುತ್ತಾರೆ. ಅಂಥ ಸನ್ನಿವೇಶದಲ್ಲಿ ಅವರು ಅಭಿಮಾನಿಗಳೊಂದಿಗೆ ಹೇಗೆ ವರ್ತಿಸುತ್ತಾರೆ, ಅವರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಏಕೆಂದರೆ, ಅವರ ಆ ಸಮಯದ ವರ್ತನೆ ಅವರ ಮೇಲೆ ಮತ್ತಷ್ಟು ಗೌರವದ ಭಾವನೆ ಮೂಡುವಂತೆ ಮಾಡುತ್ತದೆ. ಅದರಿಂದಾಗಿ, ಅವರು ಅಭಿಮಾನಿಗಳ ಎದೆಯಲ್ಲಿ ಮತ್ತಷ್ಟು ಮೆಚ್ಚುಗೆ ಗಳಿಸುತ್ತಾರೆ.
ಅಂಥದ್ದೇ ಒಂದು ಸನ್ನಿವೇಶದಲ್ಲಿ ಖ್ಯಾತ ಫುಟ್ ಬಾಲ್ ತಾರೆ (Football Star) ಲಿಯೋನೆಲ್ ಮೆಸ್ಸಿ (Lionel Messy) ಅಭಿಮಾನಿಯೋರ್ವನಿಗೆ (Fan) ಆಟೋಗ್ರಾಫ್ (Autograph) ನೀಡಿದ ಸನ್ನಿವೇಶ ಈ ವೈರಲ್ ಆಗಿದೆ. ಈ ವೀಡಿಯೋ ಲಿಯೋನೆಲ್ ಮೆಸ್ಸಿಯ ಬಗ್ಗೆ ಮತ್ತಷ್ಟು ಅಭಿಮಾನ ಪಡುವಂತಾಗಿದೆ. ದೊಡ್ಡ ಮನುಷ್ಯರು (Great People) ಸುಮ್ಮಸುಮ್ಮನೆ ದೊಡ್ಡವರಾಗುವುದಿಲ್ಲ, ದೊಡ್ಡ ಗುಣವೂ ಇರಬೇಕಾಗುತ್ತದೆ ಎನ್ನುವುದಕ್ಕೆ ಲಿಯೋನೆಲ್ ಮೆಸ್ಸಿ ಸಾಕ್ಷಿಯಾಗಿದ್ದಾರೆ.
ಮದ್ಯಕ್ಕಾಗಿ ಶಿಷ್ಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಗಾಯಕ; ವಿಡಿಯೋ ವೈರಲ್
ಟ್ರಾಫಿಕ್ (Traffic) ನಲ್ಲೂ ಅಭಿಮಾನಿಯೊಬ್ಬರಿಗೆ ಹಸ್ತಾಕ್ಷರ ನೀಡುವ ಮೆಸ್ಸಿಯ ತಾಳ್ಮೆಗೆ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ಮೆಚ್ಚುಗೆ ಮೂಡಿದೆ.
ಮಾರ್ಕರ್ ಪೆನ್ ನಿಂದ ಸಹಿ
ಟ್ರಾಫಿಕ್ ನಲ್ಲಿ ಕಾರೊಳಗೆ (Car) ಕುಳಿತಿರುವ ಮೆಸ್ಸಿಯ ಬಳಿಗೆ ಮತ್ತೊಂದು ಪಕ್ಕದ ಕಾರಿನ ಕಿಟಕಿಯ (Window) ಮೂಲಕ ಜೆರ್ಸಿ (Jersy) ತೆಗೆದು ಎಸೆಯುವ ಸನ್ನಿವೇಶದಿಂದ ಈ ವೀಡಿಯೋ (Video) ಆರಂಭವಾಗುತ್ತದೆ. ಆಗ ಟ್ರಾಫಿಕ್ ಚಲನೆ ಆರಂಭವಾಗಿದ್ದು, ಅದರಿಂದಾಗಿ ಇಬ್ಬರಿಗೂ ಒಂದು ರೀತಿಯ ಗಡಿಬಿಡಿಯ ಸನ್ನಿವೇಶ. ಸುಮ್ಮನೆ ಕ್ಷಣಕಾಲ ನಿಂತಿದ್ದರೂ ಅದು ಅಲ್ಲಿನ ಟ್ರಾಫಿಕ್ ರೂಲ್ಸಿಗೆ ವಿರುದ್ಧ. ಆದರೂ ಮೆಸ್ಸಿ ನಗುಮುಖದಿಂದ ಆ ಜೆರ್ಸಿಯನ್ನು ತೆಗೆದುಕೊಳ್ಳುತ್ತಾರೆ, ಗಡಿಬಿಡಿಯಲ್ಲೇ ತಮ್ಮ ಮಾರ್ಕರ್ ಪೆನ್ ತೆಗೆದು, ಅದರ ಮೇಲೆ ತಮ್ಮ ಆಟೋಗ್ರಾಫ್ ಹಾಕುತ್ತಾರೆ. ಮತ್ತು ಜೆರ್ಸಿಯನ್ನು ಹಾಗೆಯೇ ಮರಳಿ ಕಾರಿನವರಿಗೆ ನೀಡುತ್ತಾರೆ. ಮತ್ತು ತಮ್ಮ ಕಾರನ್ನು ಮುಂದಕ್ಕೆ ಚಲಿಸುತ್ತಾರೆ. ಮತ್ತೊಂದು ಕಾರಿನಲ್ಲಿ ಕುಳಿತವರು ತೆಗೆದ ವೀಡಿಯೋ ಇದಾಗಿದ್ದು, ಮೆಸ್ಸಿ ತಮ್ಮ ಸಹಿ ಹಾಕಿದ ಬಳಿಕ ಎಲ್ಲರೂ ಖುಷಿಯಿಂದ (Happy) ಹೋ ಎನ್ನುತ್ತಾರೆ.
الأسطورة مع المُعجبين ✍🏻 pic.twitter.com/siZfXEiIRE
— Messi World (@M10GOAT) January 24, 2024
ಸರಳ ಮೆಸ್ಸಿ
ಅಲ್ಲಿನ ಜನ ಆಡುವ ಭಾಷೆ ಯಾವುದೆಂದು ಅರ್ಥವಾಗದು. ಆದರೆ, ಅಲ್ಲಿನ ಸನ್ನಿವೇಶ ಮಾತ್ರ ಮನಸೂರೆಗೊಳಿಸುವಂಥದ್ದು.
Viral Video: ಅಯ್ಯಪ್ಪ...ಇಂಥಾ ಜಾಗದಲ್ಲೂ ಲೇಡೀಸ್ ಕ್ರಿಕೆಟ್ ಆಡ್ತಾರೆ ನೋಡಿ!
ಫುಟ್ ಬಾಗ್ ದಿಗ್ಗಜ ಮೆಸ್ಸಿಯ ಸರಳ (Simple) ವರ್ತನೆ ಇಡೀ ವಿಶ್ವದ ಅಭಿಮಾನಿಗಳಲ್ಲಿ ಪುಳಕ ಮೂಡಿಸಿದೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಶೇರ್ (Share) ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಈ ವೀಡಿಯೋದಿಂದಾಗಿ ಲಿಯೋನೆಲ್ ಮೆಸ್ಸಿಯ ಜಾಗತಿಕ ಅಭಿಮಾನಿ ಬಳಗ ಇನ್ನಷ್ಟು ವಿಸ್ತಾರಗೊಂಡಿದೆ. ಅರ್ಜೆಂಟೀನಾ ರಾಷ್ಟ್ರೀಯ ತಂಡದ ಫುಟ್ ಬಾಲ್ ಕ್ಯಾಪ್ಟನ್ ಆಗಿರುವ ಮೆಸ್ಸಿ ಕ್ರೀಡಾಂಗಣದಿಂದ (Ground) ಆಚೆಗೂ ಗ್ರೇಟ್ ಎನ್ನುವುದನ್ನು ವೀಡಿಯೋ ವ್ಯಕ್ತಪಡಿಸಿದೆ.