ಹುಬ್ಬಳ್ಳಿಯಲ್ಲಿ 11 ವರ್ಷಗಳ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿದೆ. ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಬಾರ್ಷನ್ ಮಾತ್ರೆ ನೀಡಿದ್ದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹುಬ್ಬಳ್ಳಿ (ಜು.31): ಹುಬ್ಬಳ್ಳಿಯಲ್ಲಿ 11 ವರ್ಷಗಳ ಪ್ರೀತಿಗೆ ದುರಂತ ಅಂತ್ಯ ಸಂಭವಿಸಿದ್ದು, ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮನೆಯವರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಕೆಯ ಮಗುವಿನ ಸಹಿತ ಸಾವಿಗೀಡಾಗಿರುವ ಘಟನೆಯು ಮಂಟೂರು ರಸ್ತೆಯ ಶೀಲಾ ಕಾಲೋನಿಯಲ್ಲಿ ನಡೆದಿದೆ.
11 ವರ್ಷಗಳ ಪ್ರೇಮ ಸಂಬಂಧ – ಮದುವೆಗೆ ಮುನ್ನ ಗರ್ಭಧಾರಣೆ
ದಿವ್ಯಾ ಸಲವಾದಿ ಮತ್ತು ಚರಣ್ ಅನಂತಪುರ ಎಂಬ ಯುವಕನ ನಡುವೆ ಕಳೆದ 11 ವರ್ಷಗಳಿಂದ ಪ್ರೇಮ ಸಂಬಂಧ ಇತ್ತು. ಈ ಸಂಬಂಧದ ಫಲವಾಗಿ ದಿವ್ಯಾ ಗರ್ಭಿಣಿಯಾಗಿದ್ದರು. ಇದರಿಂದಾಗಿ ನೀನು ಮದುವೆ ಮಾಡಿಕೊಳ್ಳುವಂತೆ ಬಿಗಿಪಟ್ಟು ಹಿಡಿದ ಹಿನ್ನೆಲೆಯಲ್ಲಿ ದಿವ್ಯಾಳ ಕುತ್ತಿಗೆಗೆ ಚರಣ್ ಇತ್ತೀಚೆಗೆ (7 ದಿನಗಳ ಹಿಂದೆ) ತಾಳಿ (ಅರಿಶಿಣ ಕೊಂಬು) ಕಟ್ಟುವ ಮೂಲಕ ಮದುವೆಯಾಗಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ, ಮದುವೆಯಾಗಿ ಒಂದೇ ವಾರಕ್ಕೆ ದಿವ್ಯಾ ಗರ್ಭಿಣಿಯಾಗಿದ್ದರೂ ಸಾವನ್ನಪ್ಪಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಬಾರ್ಷನ್ ಟ್ಯಾಬ್ಲೆಟ್ ನೀಡಿದ ಪರಿಣಾಮ:
ಇನ್ನಯ ದಿವ್ಯಾಳ ಕುಟುಂಬದವರ ಮಾಹಿತಿ ಪ್ರಕಾರ, ಚರಣ್ ಯುವತಿಗೆ ಅತಿಯಾದ ಅಬಾರ್ಷನ್ ಟ್ಯಾಬ್ಲೆಟ್ ನೀಡಿದ್ದಾನೆ ಎಂದು ಆಕೆಯ ಪಷಕರು ದೂರಿದ್ದಾರೆ. ಅತಿಯಾದ ಗರ್ಭ ನಿರೋಧಕ ಮಾತ್ರೆಗಳನ್ನು ನೀಡಿದ್ದರಿಂದ ದಿವ್ಯಾಳಿಗೆ ತೀವ್ರ ರಕ್ತಸ್ರಾವವಾಗಿದ್ದು, ಕೂಡಲೇ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ದಿವ್ಯಾ ಮೃತಪಟ್ಟಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಚಿಕ್ಕ ಮಗುವೂ ಸಾವಿಗೀಡಾಗಿದೆ.
ಪ್ರಿಯಕರ ಚರಣ್ ವಿರುದ್ಧ ಆಕ್ರೋಶ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ಕುಟುಂಬ
ದಿವ್ಯಾಳ ಸಾವಿಗೆ ಚರಣ್ ನೇರ ಕಾರಣ ಎಂದು ದಿವ್ಯಾಳ ಸಂಬಂಧಿಕರು ಆರೋಪ ಮಾಡಿದ್ದಾರೆ. ಅವರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಚರಣ್ ವಿಚಾರಣೆ ಕೈಗೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯಿಂದ ಹುಬ್ಬಳ್ಳಿ ನಗರದ ಶೀಲಾ ಕಾಲೋನಿಯಲ್ಲಿ ಆತಂಕ ವಾತಾವಾರಣ ನಿರ್ಮಾಣವಾಗಿದೆ. ಪ್ರೇಮ ಸಂಬಂಧದ ದುಷ್ಪರಿಣಾಮ ಯಾವ ಮಟ್ಟಕ್ಕೆ ತಲುಪಬಹುದು ಎಂಬುದರ ಭಿತಿಯು ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
- ಪ್ರಕರಣ ಸ್ಥಳ: ಶೀಲಾ ಕಾಲೋನಿ, ಮಂಟೂರು ರಸ್ತೆ, ಹುಬ್ಬಳ್ಳಿ
- ಪೊಲೀಸ್ ಠಾಣೆ ವ್ಯಾಪ್ತಿ: ಬೆಂಡಿಗೇರಿ ಪೊಲೀಸ್ ಠಾಣೆ
- ಪ್ರಮುಖ ಆರೋಪ: ಅಬಾರ್ಷನ್ ಔಷಧದಿಂದ ಗರ್ಭಿಣಿ ದಿವ್ಯಾ ಮತ್ತು ಮಗುವಿನ ಸಾವು
