Asianet Suvarna News Asianet Suvarna News

Zen Stories: ಜೆನ್ ಕತೆಗಳ ಜಗತ್ತು- ಎಮ್ಮೆ ಒಳ ಹೋದರೂ ಬಾಲ ಹೊರಗೆ!

ಜೆನ್‌ ಕತೆಗಳ ತಾತ್ವಿಕತೆ ದೊಡ್ಡದು. ಒಗಟಿನಂತಿರುವ ಈ ಕತೆಗಳು ನಮ್ಮ ಬದುಕಿನ ಸಣ್ಣ ಸಣ್ಣ ಗಂಟುಗಳನ್ನೂ ಬಿಡಿಸಲು ಸಹಾಯ ಮಾಡುತ್ತವೆ. ಇಲ್ಲಿ ಅಂಥಾ ಮೂರು ಕಥೆಗಳಿವೆ. ಇವುಗಳನ್ನು ಮನರಂಜನೆಯ ಬದಲಿಗೆ ಚಿಂತನೆಗಾಗಿ ಓದಿ.

How Zen stories reveal essence of life and relatinship
Author
Bengaluru, First Published Dec 4, 2021, 5:56 PM IST

ಜೆಕಾವೋ ಒಬ್ಬ ಜೆನ್‌ (Zen Master) ಗುರು. ಅವನಿಗೆ ಹತ್ತಾರು ಮಂದಿ ಶಿಷ್ಯರು (Disciples). ಆ ಶಿಷ್ಯರಲ್ಲಿ ಹಲವರು ಹಲವು ಸಾಧನೆಗಳಲ್ಲಿ ತೊಡಗಿದ್ದರು. ಆದರೆ ಕೆಲವೊಂದು ಸಣ್ಣ ಪುಟ್ಟ ಮಿತಿಗಳು ಅವರನ್ನು ಜ್ಞಾನದ (Knowledge) ಅರಿವು ಪಡೆಯದಂತೆ ಮಾಡಿದ್ದವು. ಗುರುವಿಗೆ ತನ್ನ ಶಿಷ್ಯರ ಅರಿವು ಹೆಚ್ಚಿಸಬೇಕೆಂಬ ಮನಸ್ಸಾಯಿತು. ಆತ ತನ್ನ ಶಿಷ್ಯರನ್ನೆಲ್ಲ ಕೂರಿಸಿಕೊಂಡು ಒಂದು ಕತೆ ಹೇಳಲು ಉಪಕ್ರಮಿಸಿದ. 'ನಾನೀಗ ನಿಮಗೆಲ್ಲ ಒಂದು ಕತೆ ಹೇಳುತ್ತೇನೆ. ಆದರೆ ಕೊನೆಯಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ. ಆ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡು ನೀವೇ ಉತ್ತರ ಕಂಡುಕೊಳ್ಳಬೇಕು' ಎಂದರು. ಶಿಷ್ಯರು ಗುರುವಿನ ಮಾತಿಗೆ ಒಪ್ಪಿದರು. ಗುರುಗಳ ಕಥೆ ಶುರುವಾಯ್ತು. 'ಒಂದು ಹಳ್ಳಿಯಲ್ಲಿ ದೊಡ್ಡದೊಂದು ಎಮ್ಮೆ (Buffalo). ಅದಕ್ಕೆ ಬಹಳಷ್ಟು ಹುಲ್ಲೂ ಬೇಕಿತ್ತು. ಅದನ್ನು ಬಯಲಲ್ಲಿ ಮೇಯಲು ಬಿಡುತ್ತಿದ್ದರು. ಆ ಎಮ್ಮೆ ಬಯಲಿಗೆ ಮೇಯಲು ಹೋಗುವ ದಾರಿಯಲ್ಲಿ ಒಂದು ಮನೆ ಇತ್ತು. ಮನೆಯ ಒಳಭಾಗ ತಂಪಾಗಿರಲಿ ಎಂದು ಮೇಲ್ಛಾವಣಿ ಮೇಲೆ ಸಾಕಷ್ಟು ಹುಲ್ಲಿನ ಕಂತೆಗಳನ್ನು ಜೋಡಿಸಿಟ್ಟಿದ್ದರು. ಈ ಎಮ್ಮೆಗೆ ಹುಲ್ಲಿನ ಕಂತೆಗಳ ಮೇಲೆ ಕಣ್ಣು. ಅದು ಆ ಹುಲ್ಲಿನ ಕಂತೆಗೆ ಬಾಯಿ ಹಾಕಿ ತನಗೆ ಎಟುಕಿದಷ್ಟನ್ನು ತಿನ್ನುತ್ತಿತ್ತು. ಆದರೆ ದಿನಾ ತಿಂದು ತಿಂದು ಅದಕ್ಕೆ ಎಟುಕುವಂತಿದ್ದ ಜಾಗದಲ್ಲಿದ್ದ ಹುಲ್ಲು ಖಾಲಿಯಾಯ್ತು. ಎಮ್ಮೆಗೆ ರೂಢಿ ಬಿಡಲಾಗಲಿಲ್ಲ. ಆದರೆ ಹುಲ್ಲು ಮಾತ್ರ ಸಿಗಲಿಲ್ಲ. ಆಗ ಎಮ್ಮೆಗೆ ಯೋಚನೆ ಬಂತು. ಈ ಮನೆಯ ಮೇಲ್ಛಾವಣಿಯಲ್ಲಿ ಇಷ್ಟು ಹುಲ್ಲು (Grass) ಇದೆ ಅಂದರೆ ಒಳಗೂ ಮನೆಯ ಒಳಗೂ ಹುಲ್ಲು ಇದ್ದೇ ಇರಬಹುದು. ಒಳಗೆ ಅದೆಷ್ಟು ಹುಲ್ಲಿದೆಯೋ ಅಂತ ನೋಡಲು ಪ್ರಯತ್ನಿಸಿತು. ಆದರೆ ಕಿಟಕಿ ಮುಚ್ಚಿತ್ತು. ನಿರಾಸೆಯಿಂದ ಎಮ್ಮೆ ಹೊರಟಿತು.

Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ

ಮರುದಿನವೂ ಎಮ್ಮೆ ಅದೇ ದಾರಿಯಲ್ಲಿ ಬಂತು. ರೂಢಿಯಂತೆ ಕಿಟಕಿಯತ್ತ ನೋಡಿತು. ಏನಾಶ್ಚರ್ಯ, ಕಿಟಕಿಯ ಬಾಗಿಲು ತೆರೆದಿದೆ. ಎಮ್ಮೆ ಖುಷಿಯಿಂದ ಕಿಟಕಿಯ ಬಳಿ ಹೋಯಿತು. ವಿಶಾಲವಾದ ಆ ಕಿಟಕಿಯ ಒಳಗೆ ತಲೆ ಹಾಕಿ ಹಣಕಿತು. ಆ ಮನೆಯಲ್ಲಿ ಮೂಲೆಯಲ್ಲಿ ಹುಲ್ಲಿನ ದೊಡ್ಡ ರಾಶಿ ಇತ್ತು. ಆದರೆ ಆ ಹುಲ್ಲಿನ ಕಂತೆ ಎಮ್ಮೆಗೆ ಎಟುಕುವಂತಿರಲಿಲ್ಲ. ಎಮ್ಮೆಯ ಆಸೆ ಅದು ಮುಖವನ್ನು ಇನ್ನಷ್ಟು ಮುಂಚಾಚುವಂತೆ ಮಾಡಿತು. ಎಷ್ಟು ಕೊರಳುದ್ದ ಮಾಡಿದರೂ ಎಮ್ಮೆಗೆ ಆ ಹುಲ್ಲು ಎಟುಕಲಿಲ್ಲ. ಆದರೆ ಹುಲ್ಲಿನ ಆಸೆಗೆ ಆ ಎಮ್ಮೆಯನ್ನು ಸುಮ್ಮನಿರಗೊಡಲಿಲ್ಲ. ಕೋಡು, ಮುಖ, ಕುತ್ತಿಗೆ ಎಲ್ಲವನ್ನೂ ಒಳತೂರಿಸಿತು. ಊಹೂಂ, ಹುಲ್ಲು ಸಿಗಲಿಲ್ಲ. ಮೆಲ್ಲ ಅದು ತನ್ನ ಮುಂಗಾಲುಗಳನ್ನು ಕಿಟಕಿಯ ಒಳಗೆ ಹಾಕಿತು. ಆಮೇಲೆ ತನ್ನ ಇಡೀ ದೇಹವನ್ನು ಕಿಟಕಿಯಿಂದ ಒಳ ತೂರಿಸಲು ಪ್ರಯತ್ನಿಸಿತು.ದೈತ್ಯವಾದ ಆ ದೇಹ ಕಿಟಕಿಯನ್ನು ಮುರಿತು ಒಳ ನುಸುಳತೊಡಗಿತು. ಅದರ ದೇಹದ ಅತೀ ದೊಡ್ಡ ಭಾಗಗಳಾದ ಬೆನ್ನು ಹೊಟ್ಟೆ ಒಳಹೋದವು. ಆ ಬಳಿಕ ಹಿಂಗಾಲು ನಿಧಾಣಕ್ಕೆ ಒಂದರ ಹಿಂದೆ ಒಂದು ಒಳ ಹೋಯ್ತು. ಎಮ್ಮೆ ಮನೆಯ ಒಳಭಾಗದಲ್ಲಿ ಗಟ್ಟಿಯಾಗಿ ಮೂಂಗಾಲು, ಹಿಂಗಾಲೂರಿ ನಿಂತಿತು. 

First Night Anxiety : ಮಧುರ ಸಮಯವನ್ನು ನಿಭಾಯಿಸಲು ಇಲ್ಲಿವೆ ಟಿಪ್ಸ್

ಮ್ಮೆಗೀಗ ತಾನು ಒಳ ಬಂದಿದ್ದೇನೆಂದು ಭಾರೀ ಸಡಗರ. ಅದಕ್ಕೆ ತನ್ನ ಬಗ್ಗೆಯೇ ಹೆಮ್ಮೆ ಅನಿಸಿ ಜೋರಾಗಿ ಕೂಗಿತು. ಹಾಗೇ ಅರಚುತ್ತಾ ಹುಲ್ಲು ತಿನ್ನಲು ಕುತ್ತಿಗೆ ಚಾಚಿತು. ಆದರೆ ಅದು ಅದಕ್ಕೆ ಸಾಧ್ಯವಾಗಲೇ ಇಲ್ಲ. ಏಕೆಂದರೆ ಬಾಲ ಇನ್ನೂ ಕಿಟಕಿಯಲ್ಲೇ ಸಿಕ್ಕಿ ಹಾಕಿಕೊಂಡಿತು. ಗುರು ಹೇಳಿದರು, 'ಈಗ ಹೇಳಿ, ಈ ಕಥೆ ನಡೆಯಲು ಸಾಧ್ಯವಿದೆಯೋ ಇಲ್ಲವೋ?'
'ಖಂಡಿತಾ ಹಾಗಾಗಲು ಸಾಧ್ಯವೇ ಇಲ್ಲ' ಶಿಷ್ಯರು ಒಕ್ಕೊರಲಿನಿಂದ ಹೇಳಿದರು. 
'ಏಕೆ?' ಗುರುಗಳ ಪ್ರಶ್ನೆ.
'ಎಮ್ಮೆಯ ದೇಹದ ಬಹಳ ಸಣ್ಣ ಅಂಗ ಅದರ ಬಾಲ. ಅದು ತನ್ನ ತಲೆ ಮತ್ತು ಹೊಟ್ಟೆಯನ್ನು ಒಳತೂರಿಸಲು ಸಾಧ್ಯವಿದೆ ಎಂದಾದರೆ ಅದು ಬಾಲವನ್ನೇಕೆ ಒಳತೂರಿಸಲು ಸಾಧ್ಯವಿಲ್ಲ?' ಎಂದರು ಶಿಷ್ಯರು.
ಆಗ ಗುರುಗಳು ಹೇಳಿದರು, 'ನಿಮ್ಮಲ್ಲಿ ಬಹಳಷ್ಟು ಎಮ್ಮೆಗಳಿವೆ!'

attractive traits: ಹುಡುಗಿ ಹೀಗಿದ್ರೆ ಹೆಚ್ಚು ಆಕರ್ಷಕವಂತೆ!

Follow Us:
Download App:
  • android
  • ios