ಸಂಗಾತಿಗೆ ಹಾಸಿಗೆಯಲ್ಲಿ ತೃಪ್ತಿ: ಮಾತು ಕತೆ ಇರಲಿ, ಏಕತಾನತೆ ದೂರವಾಗಲಿ
ಸಂಭೋಗ ಎನ್ನುವುದು ಬರೀ ದೈಹಿಕ ಬಯಕೆಯಾಗಿರಬಾರದು. ಅದು ಇಬ್ಬರನ್ನು ಬೆಸೆಯಬೇಕು. ಇಬ್ಬರು ಪರಸ್ಪರ ಒಂದಾಗಬೇಕು. ಇಬ್ಬರ ಆಸೆ,ಆಕಾಂಕ್ಷೆಗೆ ಮಹತ್ವ ಸಿಕ್ಕಾಗ ಮಾತ್ರ ಸಂಭೋಗದ ವೇಳೆ ಸಂತೃಪ್ತಿ ಸಾಧ್ಯ.
ಲೈಂಗಿಕ ವಿಷ್ಯ ಬಂದಾಗ ದಂಪತಿ ಅನೇಕ ವಿಷ್ಯಗಳನ್ನು ನಿರ್ಲಕ್ಷ್ಯಿಸ್ತಾರೆ. ಅದ್ರಲ್ಲಿ ಸಂತುಷ್ಟಿ ಕೂಡ ಒಂದು. ಸಾಮಾನ್ಯವಾಗಿ ಇಂಟರ್ಕೋರ್ಸ್ ನಂತ್ರ ಸಂಗಾತಿಗಳು ಬ್ಯುಸಿಯಾಗ್ತಾರೆ. ಸಂಗಾತಿಗೆ ಈ ಮಿಲನದಿಂದ ತೃಪ್ತಿಯಾಗಿದ್ಯಾ? ಸೆಟಿಸ್ಪೆಕ್ಷನ್ ಸಿಕ್ಕಿದ್ಯಾ ಎಂಬುದನ್ನು ಬಹುತೇಕರು ಕೇಳೋದಿಲ್ಲ. ಈ ಪ್ರಶ್ನೆಯನ್ನು ಸಂಗಾತಿ ಮುಂದಿಡದೆ ಹೋದ್ರೆ ಅವರ ಭಾವನೆ ತಿಳಿಯೋದು ಕಷ್ಟ. ಆಗ್ಲೆ ಸಂಭೋಗ ಯಾಂತ್ರಿಕವಾಗುತ್ತದೆ. ಇಬ್ಬರ ಮಧ್ಯೆ ಭಾವನೆಗಳಿಗೆ ಬೆಲೆ ಇರೋದಿಲ್ಲ. ಸಂಗಾತಿ ಸಂಭೋಗದಿಂದ ಸಂತೃಪ್ತಿಗೊಂಡಾಗ ಮಾತ್ರ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಸಾಧ್ಯ. ಅನೇಕ ಕಾರಣಕ್ಕೆ ಸಂಗಾತಿ, ಸಂಭೋಗದಿಂದ ಸೆಟಿಸ್ಪೆಕ್ಷನ್ ಹೊಂದಿರೋದಿಲ್ಲ. ಒಂದ್ವೇಳೆ ನಿಮ್ಮ ಸಂಗಾತಿ ಕೂಡ ಸಂಭೋಗದ ನಂತ್ರ ತೃಪ್ತಿ ಹೊಂದಿಲ್ಲವೆಂದಾದ್ರೆ ಕೆಲವೊಂದು ಸರಳ ಟಿಪ್ಸ್ ಮೂಲಕ ಆಕೆಗೆ ತೃಪ್ತಿ ಸಿಗುವಂತೆ ಮಾಡ್ಬಹುದು.
ಆಕೆಯ ಇಷ್ಟ ತಿಳಿದುಕೊಳ್ಳಿ: ಪುರುಷ (Male ) ಸಂಗಾತಿ ಬರೀ ತನ್ನ ಆಸೆ, ಆಕಾಂಕ್ಷೆ ಬಗ್ಗೆ ಮಾತ್ರ ಆಲೋಚನೆ ಮಾಡ್ಬಾರದು. ಮಹಿಳಾ ಸಂಗಾತಿ ಬಗ್ಗೆಯೂ ತಿಳಿದಿರಬೇಕು. ಆಕೆ ಜೊತೆ ಮಾತನಾಡುವ ಮೂಲಕ ಆಕೆಗೆ ಯಾವುದು ಇಷ್ಟ ಎಂಬುದನ್ನು ಅರಿತಿರಬೇಕು. ಆಕೆಯ ಇಷ್ಟದ ಭಂಗಿ (pose) ಯಾವ್ದು ಅಥವಾ ಆಕೆ ಯಾವ ಫ್ಯಾಂಟಸಿ ಇಷ್ಟಪಡ್ತಾಳೆ ಎಂಬುದನ್ನು ತಿಳಿಯಬೇಕು. ಸೆಕ್ಸ್ ವೇಳೆ ಆಕೆ ಏನನ್ನು ಆನಂದಿಸ್ತಾಳೆ ಎಂಬುದನ್ನು ಗಮನಿಸಿ.
ಹಾಟ್ ಬಟನ್ (Hot Button) ತಿಳಿದಿರಲಿ: ದೇಹದ ಯಾವ ಅಂಗವನ್ನು ಸ್ಪರ್ಶಿಸಿದ್ರೆ ಮಹಿಳಾ ಸಂಗಾತಿ ಉತ್ತೇಜನಗೊಳ್ತಾಳೆ ಎಂಬುದನ್ನು ತಿಳಿದಿರಬೇಕು. ಬಹುತೇಕ ಪುರುಷರು, ಮಹಿಳೆ ಬ್ರೆಸ್ಟ್ ಸ್ಪರ್ಶಿಸಿದಾಗ ಉತ್ತೇಜನಗೊಳ್ಳುತ್ತಾಳೆ ಎಂದ್ಕೊಳಡಿದ್ದಾರೆ. ಆದ್ರೆ ಎಲ್ಲರ ಹಾಟ್ ಬಟನ್ ಅಲ್ಲಿರೋದಿಲ್ಲ. ಕೆಲವರು ಕಾಲು ಸ್ಪರ್ಶಿಸಿದಾಗ, ಕೆಲವರು ಕತ್ತು ಸ್ಪರ್ಶಿಸಿದಾಗ ಉತ್ತೇಜನಕ್ಕೊಳಗಾಗ್ತಾರೆ.
ಮುಟ್ಟಿನ ಸಮಯದಲ್ಲಿ ಸಂಗಾತಿ ಆರೈಕೆ ಹೀಗಿರಲಿ, ಬಂಧ ಗಟ್ಟಿಯಾಗಲಿ
ಡರ್ಟಿ ಟಾಕ್ (Dirty Talk) : ಸಂಭೋಗ ತೃಪ್ತಿಗೂ ಡರ್ಟಿ ಟಾಕ್ ಗೂ ಏನು ಸಂಬಂಧವೆಂದು ಪ್ರಶ್ನೆ ಮಾಡ್ಬೇಡಿ. ಸಂಬಂಧವಿದೆ. ಆರಂಭ ಚೆನ್ನಾಗಿದ್ರೆ ಅಂತ್ಯ ಸಂತೋಷದಿಂದ ಕೂಡಿರುತ್ತದೆ. ಡರ್ಟಿ ಟಾಕ್ಸ್ ಮಹಿಳೆಯರನ್ನು ಉತ್ತೇಜಿಸಲು ನೆರವಾಗುತ್ತದೆ.
ಹೊಸ ಭಂಗಿ ಜೊತೆ ಪ್ರಯೋಗ : ಪ್ರತಿ ದಿನ ಒಂದೇ ಭಂಗಿ, ಒಂದೇ ಜಾಗ ಅನೇಕ ಬಾರಿ ಮೂಡ್ ಹಾಳು ಮಾಡುತ್ತದೆ. ಹಾಗಾಗಿ ಹೊಸ ಹೊಸ ಭಂಗಿಗಳನ್ನು ನೀವು ಟ್ರೈ ಮಾಡ್ಬಹುದು. ಇದು ಕೂಡ ಮಹಿಳೆಗೆ ತೃಪ್ತಿ ನೀಡಲು ಸಹಕಾರಿ.
ಸಂಭೋಗದಲ್ಲಿ ಕ್ರಿಯಾಶೀಲತೆ : ಇಂಟರ್ಕೋರ್ಸ್ ವೇಳೆ ನೀವು ಹೊಸದನ್ನು ಪ್ರಯೋಗಿಸಬಹುದು. ಅದ್ರಲ್ಲಿ ಒರಲ್ ಸೆಕ್ಸ್ ಕೂಡ ಒಂದು. ಸಂಗಾತಿಗೆ ಯಾವುದು ಇಷ್ಟ ಎಂಬುದನ್ನು ತಿಳಿದು ನೀವು ಪ್ರಯತ್ನಿಸಬಹುದು.
ಫೋರ್ ಪ್ಲೇ ಬಗ್ಗೆ ನಿರ್ಲಕ್ಷ್ಯ ಬೇಡ : ಸೆಕ್ಸ್ ಮೊದಲು ಸ್ವಲ್ಪ ವಾರ್ಮ್ ಅಪ್ ಬೇಕು. ಬಹುತೇಕ ಮಹಿಳೆಯರಿಗೆ ಫೋರ್ ಪ್ಲೇ ಇಲ್ಲದೆ ಇಂಟರ್ಕೋರ್ಸ್ ಸುಖ ಅನುಭವಿಸಲು ಸಾಧ್ಯವಾಗುವುದಿಲ್ಲ. ಮಹಿಳಾ ಸಂಗಾತಿ ಸಂಭೋಗ ಸುಖ ಪಡೆಯಬೇಕೆಂದ್ರೆ ಫೋರ್ ಪ್ಲೇ ಸೇರಿಸಿ. ಇದಕ್ಕೆ ತುಂಬಾ ಸಮಯದ ಅಗತ್ಯವಿಲ್ಲ.
ಹಾಸಿಗೆ ಮೇಲೆ ಆಟಿಕೆ : ಸೆಕ್ಸ್ ಸುಖ ದುಪ್ಪಟಾಗ್ಬೇಕೆಂದ್ರೆ ನೀವು ಸೆಕ್ಸ್ ಟಾಯ್ಸ್ ಬಳಸಬಹುದು. ಡಿಲ್ಡೋಸ್, ವೈಬ್ರೇಟರ್‌ಗಳು ಅಥವಾ ಬೇರೆ ಆಟಿಕೆಗಳನ್ನು ಬಳಸಬಹುದು. ಅವುಗಳ ಬಳಕೆ ವೇಳೆ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಬಳಸಿದ ನಂತ್ರ ಸೋಪ್ ಹಾಗೂ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸುವುದು ಮುಖ್ಯವಾಗುತ್ತದೆ.
ಸೆಕ್ಸ್ ವೇಳೆ ಗಂಡಸರು ಮಾಡೋ ತಪ್ಪಿವು, ಅವೈಡ್ ಮಾಡಿದರೆ ಲೇಫೈ ಬಿಂದಾಸ್!
ಸೆಕ್ಸ್ ನಂತ್ರ ಸಮಯ ನೀಡಿ : ಇಂಟರ್ಕೋರ್ಸ್ ಮುಗಿಯುತ್ತಿದ್ದಂತೆ ಎದ್ದು ಹೋಗುವುದು ಒಳ್ಳೆಯದಲ್ಲ. ಇಂಟರ್ಕೋರ್ಸ್ ನಂತ್ರ ಮಹಿಳೆ ಭಾವನಾತ್ಮಕವಾಗಿ ಹತ್ತಿರವಾಗಲು ಬಯಸ್ತಾಳೆ. ಆಕೆಗೆ ಸಂಗಾತಿ ಸನಿಹದ ಅಗತ್ಯವಿರುತ್ತದೆ. ಇದನ್ನು ಪುರುಷ ಸಂಗಾತಿ ತಿಳಿದಿರಬೇಕು.