Asianet Suvarna News Asianet Suvarna News

ಸೆಕ್ಸ್‌ ವೇಳೆ ಗಂಡಸರು ಮಾಡೋ ತಪ್ಪಿವು, ಅವೈಡ್ ಮಾಡಿದರೆ ಲೇಫೈ ಬಿಂದಾಸ್!

ಲೈಂಗಿಕ ಕ್ರಿಯೆ ಸಂಗಾತಿಗಳಿಬ್ಬರಿಗೂ ಆನಂದ ತರುವ ಕ್ರಿಯೆಯಾಗಿರಬೇಕು. ಆದರೆ ಮಂಚದಲ್ಲಿ ಪುರುಷರು ನಡೆದುಕೊಳ್ಳುವ ಕೆಲವು ರೀತಿಗಳು ಸ್ತ್ರೀಯರಿಗೆ ಇಷ್ಟವಾಗುವುದಿಲ್ಲ ಹಾಗೂ ಅದರಿಂದ ಮಿಲನಕ್ರಿಯೆಯಲ್ಲಿ ಅವರ ಆಸಕ್ತಿ ಕುಂಠಿತವಾಗುತ್ತದೆ. ಹಾಗಾಗದೆ ಇರಬೇಕಿದ್ದರೆ ನೀವು ಮಾಡಬಾರದ ತಪ್ಪುಗಳು ಯಾವುದು? ಇಲ್ಲಿವೆ ನೋಡಿ.

Common mistakes usually med do during intimacy tips to avoid
Author
First Published Aug 26, 2022, 12:32 PM IST

ಲೈಂಗಿಕತೆಯು ದ್ವಿಮುಖ ಕ್ರಿಯೆ. ಇಬ್ಬರಿಂದಲೂ ಆಗಬೇಕಾದ, ಇಬ್ಬರಿಗೂ ಆನಂದ ನೀಡಬೇಕಾದ ಕ್ರಿಯೆ. ಇದರಲ್ಲಿ ಇಬ್ಬರೂ ಭಾಗಿಯಾಗಬೇಕು. ಆದರೆ, ತುಂಬ ಬೇಗನೆ ಸುಖದ ಪರಾಕಾಷ್ಠೆ ತಲುಪೋಣ ಎಂದುಕೊಳ್ಳುವ ಕೆಲವು ಪುರುಷರು ತಪ್ಪು ಮಾಡುತ್ತಾರೆ. ಇದರಿಂದ ಅವರ ಸಂಗಾತಿ ಸ್ತ್ರೀಗೆ ಹತಾಶೆಯಾಗುತ್ತದೆ. ಪುರುಷರು ಪದೇ ಪದೇ ಮಾಡುವ ಅಂಥ ಕೆಲವು ತಪ್ಪುಗಳು ಇಲ್ಲಿವೆ. ಇದರಿಂದ ಅವರ ದಾಂಪತ್ಯ ಬದುಕಿನ ಮೇಲೂ ಪರಿಣಾಮಗಳಾಗುತ್ತವೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೆ ವಿರಸ ಉಂಟಾಗಬಹುದು. ಆದರೆ ಮೂಲ ಕಾರಣ ಇದೇ ಇರುತ್ತದೆ. ಒಮ್ಮೆ ಅವುಗಳನ್ನು ಅರ್ಥ ಮಾಡಿಕೊಂಡರೆ ಸರಿಪಡಿಸಬಹುದು. ಒಮ್ಮೆ ಈ ಸಮಸ್ಯೆ ಸರಿಹೋದರೆ ಎಷ್ಟೋ ದಾಂಪತ್ಯದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ನೀವು ಲೈಂಗಿಕವಾಗಿ ಅತೃಪ್ತ ಸಂಗಾತಿಯನ್ನು ಹೊಂದಿದ್ದರೆ, ನೀವು ಈ ತಪ್ಪುಗಳನ್ನು ಮಾಡುತ್ತಿರುವ ಸಾಧ್ಯತೆಯಿದೆ.

ಭಾವನಾತ್ಮಕ ಅನ್ಯೋನ್ಯತೆ
ಮಿಲನ ಕ್ರಿಯೆಗೆ ಮುನ್ನ ಭಾವನಾತ್ಮಕ ಅನ್ಯೋನ್ಯತೆ (Emotional Bonding) ಇರಬೇಕು. ಮದುವೆಯಾದ ಮಹಿಳೆಯರಲ್ಲಿ ಲೈಂಗಿಕ ಅಸಮಾಧಾನ ಸಾಮಾನ್ಯ ಸಮಸ್ಯೆ. ಇದಕ್ಕೆ ಕಾರಣ ಗಂಡ ತನ್ನ ಹೆಂಡತಿಯ ಮಾತು- ಕ್ರಿಯೆಗಳಿಗೆ ತಕ್ಕ ಸ್ಪಂದನ ನೀಡದಿರುವುದು, ಆಕೆಯ ಸ್ಪಂದನಗಳನ್ನು ಅರ್ಥ ಮಾಡಿಕೊಳ್ಳದಿರುವುದು. ಲೈಂಗಿಕತೆ ಎಂದರೆ ಕೇವಲ ದೈಹಿಕ ಎಂದು ಭಾವಿಸುವುದು. ನಿಜ ಹೇಳಬೇಕೆಂದರೆ ಭಾವನಾತ್ಮಕ ಅನ್ಯೋನ್ಯತೆಯ ಕೊರತೆಯೇ ಮಹಿಳೆಯರನ್ನು ಪುರುಷರಿಂದ ದೂರವಿಡುತ್ತದೆ.

ಯಪ್ಪಾ..ಸೆಕ್ಸ್ ಬಳಿಕ ಹುಡುಗರು ಯಾಕೆ ಹೀಗೆಲ್ಲಾ ಮಾತನಾಡ್ತಾರೆ !

ಅವಳ ಅಗತ್ಯಗಳು
ಲೈಂಗಿಕತೆಯ ಬಗ್ಗೆ ಬೇರೆ ಬೇರೆಯವರು ವಿಭಿನ್ನ ಅಗತ್ಯಗಳನ್ನು ಹೊಂದಿರಬಹುದು. ಯಾರೋ ಒಬ್ಬಳಂತೆ ಇನ್ನೊಬ್ಬಳು ಇರಲಿಕ್ಕಿಲ್ಲ. ವಿಭಿನ್ನ ನಿರೀಕ್ಷೆಗಳು, ಲೈಂಗಿಕ ಬಯಕೆ (Sex desire) ಯ ಮಟ್ಟವೂ ಹಾಗೇ ಭಿನ್ನವಾಗಿರುತ್ತದೆ. ಒಬ್ಬಳಿಗೆ ಹೆಚ್ಚು ತೀವ್ರವಾದ ಘರ್ಷಣೆ ಬೇಕಿರಬಹುದು, ಇನ್ನೊಬ್ಬಳಿಗೆ ಮೃದುವಾಗಿ ಸಾಕಾಗಬಹುದು. ಪುರುಷ ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಸಂಗಾತಿ ಅತೃಪ್ತಳಾಗಿದ್ದರೆ, ಆಕೆಗೆ ನಿಜವಾಗಿಯೂ ಏನು ಬೇಕು ಎಂಬುದರ ಬಗ್ಗೆ ನೀವು ಗಮನ ಹರಿಸುತ್ತಿಲ್ಲ ಎಂದರ್ಥ. ಅವಳ ಇಷ್ಟಾನಿಷ್ಟಗಳನ್ನು ಅರಿತು ಮುಂದುವರಿದರೆ ಇಬ್ಬರಿಗೂ ಆ ಆನಂದ ಸಿಕ್ಕ ಹಾಗಾಗುತ್ತದೆ.

ಏಕತಾನತೆಯನ್ನು ಮೀರಿ
ಲೈಂಗಿಕತೆಯ ವಿಷಯದಲ್ಲಿ ಯಾರೂ ಏಕತಾನತೆಯನ್ನು ಇಷ್ಟಪಡುವುದಿಲ್ಲ. ಲೈಂಗಿಕತೆಯು ವಾಸ್ತವವಾಗಿ ಒಂದು ಕಲೆ(Art). ವಿಭಿನ್ನ ಆಸನಗಳು, ಬೇರೆ ಬೇರೆ ಜಾಗಗಳಲ್ಲಿ, ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುವುದು ಮುಖ್ಯ. ನಿಮ್ಮ ಲೈಂಗಿಕ ಜೀವನವನ್ನು ಮಸಾಲೆ ಭರಿತವಾಗಿಸಿ ಮತ್ತು ರಿಫ್ರೆಶ್(Refresh) ಮಾಡಿ. ಇಲ್ಲವಾದರೆ ನಿಮ್ಮ ಸಂಗಾತಿ ದೈಹಿಕವಾಗಿ ಮತ್ತು ಅಂತಿಮವಾಗಿ ಭಾವನಾತ್ಮಕವಾಗಿ ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳಬಹುದು. ಅದೊಂದು ಜಸ್ಟ್ ಎಕ್ಸರ್‌ಸೈಸ್ ಆಗಷ್ಟೇ ಉಳಿಯಬಹುದು. ಆ ಬಗೆಗಿನ ರೋಮಾಂಚನ ಮರೆಯಾಗಿಬಿಡುವ ಸಾಧ್ಯತೆ ಇದೆ.

ಪೋರ್ನ್ ನೋಡೋ ಚಟನಾ ? ಬಿಡಲು ಹೀಗ್ ಮಾಡ್ಬಹುದು ಟ್ರೈ ಮಾಡಿ

ಅಂತಿಮ ಕ್ಷಣಗಳ ಉತ್ಕರ್ಷ
ಪುರುಷರು, ಸರಾಸರಿಯಾಗಿ, ಸೆಕ್ಸ್‌ ಆರಂಭಿಸಿದ 5-6 ನಿಮಿಷಗಳಲ್ಲಿ ಸ್ಖಲನ ಹೊಂದುತ್ತಾರೆ. ಮಹಿಳೆಯರು ತೀವ್ರತೆ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಕೆಲವರು 15 ನಿಮಿಷಗಳ ಕಾಲವೂ ತೆಗೆದುಕೊಳ್ಳಬಹುದು! ಮಹಿಳೆಯರಿಗೆ ಮಿಂಚಿನ ಓಟದ ಮ್ಯಾರಥಾನ್ ಅಗತ್ಯವಿಲ್ಲ. ಅವರು ನಿಧಾನವಾದ ಜಾಗಿಂಗ್‌ ಇಷ್ಟಪಡುತ್ತಾರೆ. ನೀವು ಹದವಾದ ಒಂದು ಲಯದಲ್ಲಿ ಅವರ ಜೊತೆ ಸಾಗಿರಿ. ನಡು ನಡುವೆ ಗ್ಯಾಪ್‌ (gap) ತೆಗೆದುಕೊಂಡು ಮುಂದುವರಿಸಿದರೆ ಈ ಅವಧಿಯನ್ನು ವಿಸ್ತರಿಸಬಹುದು.

ಅವಳು ಮಾಡದಿದ್ದರೆ, ನೀವು ಮುಗಿಸಿಲ್ಲ
ನೀವು ಸ್ಖಲನ ಮಾಡಿದ ನಂತರವೂ ನಿಮ್ಮ ಸಂಗಾತಿ ನಿಮ್ಮಿಂದ ಹೆಚ್ಚಿನ ಸುಖವನ್ನು ಬಯಸಬಹುದು. ನೀವು ಮುಗಿಸಿದ ನಂತರ ತಕ್ಷಣವೇ ಎದ್ದೇಳುವುದು ಸೂಕ್ತವಲ್ಲ. ಇದರಿಂದ ನಿಮ್ಮ ಸಂಗಾತಿ ಅತೃಪ್ತಳಾಗಬಹುದು. ನೀವು ಅವಳ ಪರಾಕಾಷ್ಠೆಗೆ ಸೆಕ್ಸ್ ಆಟಿಕೆಗಳು ಸೇರಿದಂತೆ ಇತರ ಮಾರ್ಗಗಳನ್ನು ಅಳವಡಿಸಬಹುದು. ಆ ಕಡೆ ನೀವು ಒಲವು ತೋರದಿದ್ದರೆ, ಖಂಡಿತವಾಗಿಯೂ ಸಂಗಾತಿಯನ್ನು ನಿರಾಶೆಗೊಳಿಸುತ್ತೀರಿ.

ಮುನ್ನಲಿವಿನ ಕೊರತೆ
ಮಹಿಳೆಯ ದೇಹದಲ್ಲಿ ಹಲವಾರು ಅಂಗಗಳಿವೆ, ಸುಖ ನೀಡುವ ಲೈಂಗಿಕ ಭಾಗಗಳಿವೆ ಎಂಬುದು ನಿಮಗೆ ಗೊತ್ತಿರಲಿ. ಅಲ್ಲಿ ನೀವು ಹೆಚ್ಚಿನ ಸಮಯ ಕಳೆಯಬಹುದು. ಅದು ಬಿಟ್ಟು ನೇರವಾಗಿ ಅಂತಿಮ ಸುತ್ತಿಗೇ ಪ್ರವೇಶಿಸುವುದು ಬಲಾತ್ಕಾರ ಮಾಡಿದಂತೆ. ಅವಳೂ ದ್ರವಿಸಬೇಕು, ನಿಮ್ಮ ಪ್ರವೇಶಕ್ಕೆ ರಂಗ ಸಜ್ಜಾಗಬೇಕು, ರೋಮಾಂಚನವಾಗಬೇಕು. ಅವಳು ನಿಮ್ಮನ್ನು ಹೆಚ್ಚೆಚ್ಚು ಬಯಸುವಂತೆ ಆಗಬೇಕು. ಇದಕ್ಕೆ ಫೋರ್‌ಪ್ಲೇ ಅಥವಾ ಮುನ್ನಲಿವು(Foreplay) ಅತ್ಯಂತ ಅಗತ್ಯ.

ಇಷ್ಟವಿಲ್ಲದ್ದನ್ನು ಮಾಡಿಸುವುದು
ನಿಮ್ಮ ಸಂಗಾತಿಗೆ ಕೆಲವು ಕ್ರಿಯೆಗಳು ಇಷ್ಟವಿರಲಿಕ್ಕಿಲ್ಲ. ಉದಾಹರಣೆಗೆ ನೀವು ಆಕೆಯ ಹಿಂದಿನಿಂದ ಪ್ರವೇಶಿಸುವುದು. ಸರಿಯಾದ ಲ್ಯೂಬ್ರಿಕೆಂಟ್‌ ಇಲ್ಲದಿದ್ದರೆ ಇದು ನೋವು ಕೊಡುತ್ತದೆ. ಹೀಗಾಗಿ ಹಲವರಿಗೆ ಇಷ್ಟವಾಗಲಿಕ್ಕಿಲ್ಲ. ಹಾಗೇ ಮುಟ್ಟಿನ ವೇಳೆಯಲ್ಲಿ ಸಂಭೋಗ ಆಕೆಗೆ ಬೇಡವೆನಿಸಬಹುದು. ಇಂಥ ಸನ್ನಿವೇಶಗಳಲ್ಲಿ ನಿಮ್ಮ ಸುಖಕ್ಕಾಗಿ ಆಕೆಗೆ ಒತ್ತಡ ಉಂಟುಮಾಡಿದರೆ ನಿಮ್ಮ ಮೇಲೆ ಜಿಗುಪ್ಸೆ ಮೂಡಬಹುದು.

Follow Us:
Download App:
  • android
  • ios