ವಯಸ್ಸಾದ ಪುರುಷರಿಗೆ ಹೆಣ್ಮಕ್ಕಳು ಅಟ್ರಾಕ್ಟ್ ಆಗೋದೇಕೆ? ಇದು ಸಮಸ್ಯೆಯೇ?
ಡ್ಯಾಡಿ ಇಶ್ಯೂ ಎಂಬುದು ತಂದೆಯೊಂದಿಗೆ ಸಂಕೀರ್ಣ ಸಂಬಂಧ ಹೊಂದಿರುವ ಟೀನೇಜ್ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳು. ಇದನ್ನು ಸೂಕ್ತ ರೀತಿಯಲ್ಲಿ ನಿವಾರಿಸಿಕೊಳ್ಳದಿದ್ದರೆ ಜೀವನಪೂರ್ತಿ ಕಾಡುತ್ತದೆ.
ಡ್ಯಾಡಿ ಇಶ್ಯೂ (Daddy issue) ಎಂಬುದು ಮೆಡಿಕಲ್ (Medical) ಪದವೇನಲ್ಲ. ಇದೊಂದು ಮನೋವೈಜ್ಞಾನಿಕ ಕಾಯಿಲೆಯ ಹೆಸರಲ್ಲ. ಆದರೂ ಇದನ್ನು ಸಾಮಾಜಿಕವಾಗಿ, ಸಾಂಸಾರಿಕವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಇದನ್ನು ತಮಗಿಂತ ಅಧಿಕ ವಯಸ್ಸಾದ ಪುರುಷರೊಂದಿಗೆ ಡೇಟ್ (Dating) ಮಾಡುವ ಮಹಿಳೆಯರಿಗೆ ಬಳಸಲಾಗುತ್ತದೆ. ಹೆಚ್ಚಿನ ಬಾರಿ ಪುರುಷರೊಂದಿಗೆ ಬಾಂಧವ್ಯದ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರಿಗೂ ಬಳಸಲಾಗುತ್ತದೆ.
ತಂದೆಯೊಂದಿಗೆ ಸಂಕೀರ್ಣ ಬಗೆಯ ಸಂಬಂಧ ಹೊಂದಿದ ಮಗಳು ಅಥವಾ ಮಗ ಅನುಭವಿಸುವ ಮಾನಸಿಕ ಸಮಸ್ಯೆಗಳನ್ನು ಡ್ಯಾಡಿ ಇಶ್ಯೂ ಎಂಬ ಪದದಿಂದ ಕರೆಯಲಾಗುತ್ತದೆ. ತಂದೆಯ ಉಪಸ್ಥಿತಿ ಅಥವಾ ಅನುಪಸ್ಥಿತಿಯ ಪ್ರಭಾವ ಪ್ರೌಢಾವಸ್ಥೆಗೆ (Teenage) ಬರುವ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಇಶ್ಯೂಗಳು ಮಕ್ಕಳ ನಡವಳಿಕೆಯಲ್ಲಿ ಪ್ರತಿಫಲಿಸಿದಾಗ ಡ್ಯಾಡಿ ಸಮಸ್ಯೆಗಳನ್ನು ಕಾಣಬಹುದು.
ತಮ್ಮ ತಂದೆಯೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಿರದ ಅಥವಾ ರೋಲ್ ಮಾಡೆಲ್ ಆಗಿ ಕಾಣುವ ತಂದೆಯಿಲ್ಲದ ಜನರು ಸಾಮಾನ್ಯವಾಗಿ ಸಂಬಂಧಗಳಲ್ಲಿ ದಾರಿ ತಪ್ಪುತ್ತಾರೆ. ತಂದೆಯ ಪ್ರೀತಿಯ ಕೊರತೆಯು ಈ ಮಕ್ಕಳನ್ನು ಭಾವನಾತ್ಮಕವಾಗಿ ಖಾಲಿ ವ್ಯಕ್ತಿಗಳಾಗಿ ಬೆಳೆಯುವಂತೆ ಮಾಡುತ್ತದೆ. ಕೆಲವೊಮ್ಮೆ ಈ ವ್ಯಕ್ತಿಗಳು ತಮ್ಮ ಪ್ರತಿಯೊಂದು ಸಂಬಂಧದಲ್ಲೂ ಸೆಕ್ಯುರಿಟಿ ಹುಡುಕುತ್ತಾರೆ. ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಮಕ್ಕಳು ಅದನ್ನು ತಮ್ಮ ಸಂಗಾತಿಗಳಲ್ಲಿ ಹೆಚ್ಚಾಗಿ ಹುಡುಕುತ್ತಾರೆ. ಕೆಲವರು ವಯಸ್ಸಾದ ಪುರುಷರತ್ತ ಆಕರ್ಷಿತರಾಗುತ್ತಾರೆ. ಕೆಲವೊಮ್ಮೆ ತಂದೆಯ ವಯಸ್ಸಿನವರೊಂದಿಗೆ ಸಹ ಡೇಟಿಂಗ್ ಮಾಡಬಹುದು.
ವ್ಯಕ್ತಿಯು ಬಾಲ್ಯದಲ್ಲಿ ಅನುಭವಿಸಿದ್ದನ್ನು ಅವಲಂಬಿಸಿ ಡ್ಯಾಡಿ ಸಮಸ್ಯೆಗಳ ಹಲವಾರು ಚಿಹ್ನೆಗಳು ಇರುತ್ತವೆ.
Love Tips: ನಿಮಗೊಪ್ಪುವ ಸಂಗಾತಿ ಆಯ್ಕೆ ಹೇಗೆ?
ಮಗ ಅಥವಾ ಮಗಳು ತಂದೆಯೊಂದಿಗೆ ಹಗೆತನದ ಸಂಬಂಧವನ್ನು ಹೊಂದಿದ್ದರೆ, ಕಾಣಿಸಿಕೊಳ್ಳುವ ಪ್ರಧಾನ ಚಿಹ್ನೆ ಎಂದರೆ ಪುರುಷರಲ್ಲಿ ನಂಬಿಕೆಯ ಕೊರತೆ. ತಂದೆಯ ಪ್ರೀತಿಯನ್ನು ನೋಡದ ಈ ವ್ಯಕ್ತಿಗಳು ಪುರುಷರೊಂದಿಗೆ ಬಾಂಧವ್ಯವನ್ನು ಹೊಂದಲು ತುಂಬಾ ಕಷ್ಟಪಡುತ್ತಾರೆ. ಸಂಬಂಧದ ಕಡೆಗೆ ಸಾಗುವ ನಂಬಿಕೆ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹೇಗಾದರೂ, ಒಬ್ಬನು ತಂದೆಯಿಂದ ಸಂಪೂರ್ಣವಾಗಿ ಹಾಳಾಗಿದ್ದರೆ ಅದು ವಯಸ್ಸಾದ ಪುರುಷರಿಗೆ ಅತಿಯಾದ ಆಹ್ಲಾದಕರ ಪ್ರವೃತ್ತಿಯನ್ನು ಹೊಂದಿರಬಹುದು, ಇದು ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡುವ ಮಹಿಳೆಯರಿಗೆ ಡ್ಯಾಡಿ ಸಮಸ್ಯೆಯನ್ನು ಏಕೆ ಹೇಳಲಾಗುತ್ತದೆ ಎಂಬುದನ್ನು ವಿವರಿಸಬಹುದು.
ಡ್ಯಾಡಿ ಸಮಸ್ಯೆಗಳೊಂದಿಗೆ ಇರುವುದು ನಿಮ್ಮ ಸಂಬಂಧಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ನಿಮ್ಮ ಸಂಗಾತಿಗಳ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ.
ಶುಗರ್ ಡ್ಯಾಡಿಯಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದು?
ಉದಾಹರಣೆಗೆ, ನಿಮ್ಮ ತಂದೆ ನಿಮ್ಮನ್ನು ನೋಯಿಸುತ್ತಿದ್ದವರಾಗಿದ್ದರೆ, ಸಂಗಾತಿ ನಿಮ್ಮನ್ನು ನೋಯಿಸುತ್ತಾನೆ ಎಂಬ ಭಯದಿಂದಲೇ ನೀವು ಬದುಕುತ್ತಿರುತ್ತೀರಿ. ನಿಮ್ಮ ತಂದೆ ಚಿಕ್ಕ ವಯಸ್ಸಿನಲ್ಲಿಯೇ ನಿಮ್ಮನ್ನು ತೊರೆದಿದ್ದರೆ, ನಿಮ್ಮ ಸಂಗಾತಿಯೂ ಹಾಗೆ ಮಾಡಬಹುದು ಎಂಬ ಆತಂಕ ನಿಮ್ಮಲ್ಲಿ ಇರಬಹುದು.
ನೀವು ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸಂಗಾತಿಯೊಂದಿಗೆ ಶಾಂತಿಯುತ ಜೀವನ ನಡೆಸಲು ನಿಮಗೆ ಸಾಧ್ಯವಾಗದಿರಬಹುದು. ನೀವು ಬಾಲ್ಯದಲ್ಲಿ ಬೆಳೆದ ರೀತಿ ನಿಮ್ಮ ಭವಿಷ್ಯವನ್ನು ಪ್ರಭಾವಿಸಬಹುದು. ಆದ್ದರಿಂದ ಡ್ಯಾಡಿ ಸಮಸ್ಯೆಗಳನ್ನು ಗುರುತಿಸುವುದು ಮತ್ತು ತಿದ್ದುವುದು ಅಗತ್ಯ.
ಇಶ್ಯೂ ಚಿಹ್ನೆಗಳನ್ನು ಗುರುತಿಸಿ ಮತ್ತು ನೀವು ಈ ಸಮಸ್ಯೆಯನ್ನು ಏಕೆ ಎದುರಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮಾನಸಿಕ ತಜ್ಞರಿಂದ ಸಹಾಯ ಪಡೆಯಿರಿ. ಸ್ವಯಂ ನಿರ್ಧಾರದಿಂದ ನಿಮ್ಮ ವರ್ತನೆಗಳಲ್ಲಿ ಕೆಲವು ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಿ. ನೀವು ಸುಧಾರಿಸಬೇಕಾದ ವಿಚಾರಗಳನ್ನು ಪ್ರಯತ್ನಿಸಿ.
ಒಳ್ಳೆಯ ಹವ್ಯಾಸವನ್ನು ಆರಿಸಿಕೊಳ್ಳಿ ಮತ್ತು ಪ್ರೊಡಕ್ಟಿವ್ ಆಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಡೈರಿ ಬರೆಯುವುದು ಉತ್ತಮ. ನಿಮ್ಮ ಸಮಸ್ಯಾತ್ಮಕವೆನಿಸುವ ನಡವಳಿಕೆಗಳನ್ನು ಅದರಲ್ಲಿ ಬರೆಯಿರಿ. ಅವುಗಳನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.
ಅನುಶ್ರಿ ವಿಚಾರದಲ್ಲಿ ಕೇಳಿ ಬಂದ ಶುಗರ್ ಡ್ಯಾಡಿ ಇವರೇನಾ?