ಸೀಮಾ ರಾಹುಲ್‌

- ಯಾರೋ ಒಬ್ಬರಿಗೆ ಯಾವುದೋ ಹೊತ್ತಲ್ಲಿ ಮೀಟಿಂಗ್‌ ಇರುತ್ತದೆ. ಆ ಟೈಮಲ್ಲಿ ನಾನು ಮಿಕ್ಸರ್‌ ಆನ್‌ ಮಾಡಿ ಗಿರ್ರನ್‌ ತಿರುಗಿಸಿದರೆ ನಾನು ಬೇಡವೆಂದರೂ ಜಗಳ ಆಗುತ್ತದೆ. ಹಾಗಾಗಿ ಈ ಟೈಮ್‌ಗಳನ್ನೆಲ್ಲಾ ಮನಸ್ಸಲ್ಲಿಟ್ಟುಕೊಂಡು ಪರಸ್ಪರರಿಗಾಗಿ ಆ ಟೈಮ್‌ ಬಿಟ್ಟುಕೊಡುವುದನ್ನು ಮೊದಲು ಕಲಿತೆವು. ಅವನ ಕೆಲಸದ ಸಮಯದಲ್ಲಿ ನಾನು ಏನೂ ತರ್ಲೆ ಮಾಡದೆ ನನ್ನ ಸಮಯದಲ್ಲಿ ಅವನೂ ಕಾಟ ಕೊಡದೆ ಇದ್ದಿದ್ದರಿಂದ ಕೆಲಸಗಳು ಆರಾಮಾಗಿ ನಡೆಯಿತು.

ಇನ್ನು ಸಂದರ್ಶನದಲ್ಲಿ ಕೇಳೋ ಪ್ರಶ್ನೆ, ವರ್ಕ್‌ ಫ್ರಮ್‌ ಹೋಮ್‌ ಹೇಗ್ ಮಾಡ್ತೀರಾ?

- ಕೆಲಸದ ಮಧ್ಯೆ ಬ್ರೇಕ್‌ ತೆಗೆದುಕೊಳ್ಳುವುದು ಕೂಡ ಅನಿವಾರ್ಯ. ಆಫೀಸಿಗೆ ಹೋಗುವಾಗ ಹೇಗೆ ನಾವು ಸಹೋದ್ಯೋಗಿಗಳ ಜತೆ ಕಾಫಿ ಕುಡಿಯುತ್ತಾ ಸಣ್ಣ ಮಾತುಕತೆ ನಡೆಸುತ್ತಿದ್ದೆವೋ ಹಾಗೆಯೇ ಮನೆಯಲ್ಲಿ ಕುಳಿತೇ ಚಾಟ್‌ ಮಾಡುವುದೋ ಫೋನ್‌ ಮಾಡುವುದೋ ಮಾಡಿ ಹಗುರಾದೆವು. ನಾವು ಹಗುರಾದಾಗ ಇನ್ನೊಬ್ಬರನ್ನು ಹಗುರ ಮಾಡುವುದು ಸುಲಭ. ಹಾಗೆಯೇ ಇಬ್ಬರೂ ಜತೆಗೇ ಬ್ರೇಕ್‌ ತೆಗೆದುಕೊಳ್ಳುವುದನ್ನು ಹೇಳಬೇಕಾಗಿಲ್ಲವಲ್ಲ.

- ಜತೆಗೇ ಕೂತು ಕೆಲಸ ಮಾಡುವುದು ಕಷ್ಟ. ಅದೂ ಬೆಡ್‌ ಮೇಲೆ ಕುಳಿತು ಕೆಲಸ ಮಾಡುವ ಸಾಹಸ ಮಾಡಲೇಬಾರದು. ಇದನ್ನೆಲ್ಲಾ ಮನಸ್ಸಲ್ಲಿಟ್ಟುಕೊಂಡು ಬೇರೆ ಬೇರೆ ಕೆಲಸದ ಜಾಗವನ್ನು ಫಿಕ್ಸ್‌ ಮಾಡಿದೆವು. ಅವನೊಂದು ಕಡೆ ಕುಳಿತರೆ ನಾನು ಮತ್ತೊಂದೆಡೆ ಚೇರ್‌ ಹಾಕಿ ಕೂರುತ್ತಿದ್ದೆ. ಆಗಾಗ ಕಣ್‌ಕಣ್ಣ ಸಲಿಗೆ ನಡೆಯುತ್ತಿರುವುದು ಇಬ್ಬರಿಗೂ ಒಳ್ಳೆಯದು.

Work from Home:ಬೆನ್ನುನೋವು ಬರದಿರಲು ಪಾಲಿಸಲೇ ಬೇಕಾದ ಅಷ್ಟಸೂತ್ರಗಳು

- ಎಲ್ಲಕ್ಕಿಂತ ಹೆಚ್ಚು ದಿನ ಆರಂಭಿಸುವಾಗಲೇ ಒಂದು ಟೈಮ್‌ ಟೇಬಲ್‌ ಹಾಕಿಕೊಳ್ಳುವುದು ಮುಖ್ಯ. ಎಷ್ಟುಗಂಟೆಗೆ ಊಟ, ಎಷ್ಟುಗಂಟೆಗೆ ಕೆಲಸ ಮುಗಿಸಬೇಕು ಇತ್ಯಾದಿ. ಆಗ ಇಬ್ಬರಿಗೂ ಮುಂದಿನ ಕ್ಷಣಗಳ ಬಗ್ಗೆ ಗೊತ್ತಿರುತ್ತದೆ. ಇಲ್ಲದಿದ್ದರೆ ಅವನು ಕರೆಯುವುದು, ನಾನು ಹೋಗದಿರುವುದು ಇತ್ಯಾದಿ ರಂಪ ನಡೆದು ಮುನಿಸು ಆರಂಭವಾಗುವ ಸಾಧ್ಯತೆ ಹೆಚ್ಚಿರುತ್ತದೆ.